KEB-ಒಸಿ ಇಲ್ಲದೇ ವಿದ್ಯುತ್ ಸಂಪರ್ಕ ಪಡೆಯಲು ಅಧಿಕೃತ ಮಾರ್ಗಸೂಚಿ ಪ್ರಕಟ!

June 24, 2026 | Siddesh
KEB-ಒಸಿ ಇಲ್ಲದೇ ವಿದ್ಯುತ್ ಸಂಪರ್ಕ ಪಡೆಯಲು ಅಧಿಕೃತ ಮಾರ್ಗಸೂಚಿ ಪ್ರಕಟ!
Share Now:

ಬೆಂಗಳೂರು: ಸ್ವಂತ ಮನೆ ಕಟ್ಟಿ, ವಿದ್ಯುತ್ ಸಂಪರ್ಕಕ್ಕಾಗಿ ನಿರಪೇಕ್ಷಿತ ಪತ್ರ (OC - Occupancy Certificate) ಸಿಗದೆ ಕಚೇರಿಗಳಿಗೆ ಅಲೆಯುತ್ತಿದ್ದ ರಾಜ್ಯದ ಜನತೆಗೆ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ನಿಯಮಗಳ ಸರಳೀಕರಣಕ್ಕೆ ಮುಂದಾಗಿರುವ ಇಂಧನ ಇಲಾಖೆಯು, ಇನ್ಮುಂದೆ ಒಸಿ ಇಲ್ಲದೆಯೇ ರಾಜ್ಯಾದ್ಯಂತ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಮಹತ್ವದ ನಿರ್ಧಾರದಿಂದಾಗಿ ಲಕ್ಷಾಂತರ ಸಾರ್ವಜನಿಕರು ಹಾಗೂ ಗ್ರಾಮೀಣ ಭಾಗದ ಜನರಿಗೆ ದೊಡ್ಡ ನೆಮ್ಮದಿ ಸಿಕ್ಕಂತಾಗಿದೆ.

ಈ ಹಿಂದೆ ಕಟ್ಟುನಿಟ್ಟಿನ ಒಸಿ ನಿಯಮಗಳಿಂದಾಗಿ ನಗರ ಹಾಗೂ ಅರೆನಗರ ಪ್ರದೇಶಗಳಲ್ಲಿ ಹೊಸದಾಗಿ ನಿರ್ಮಿಸಿದ ಮನೆಗಳಿಗೆ ಶಾಶ್ವತ ಕರೆಂಟ್ ಕನೆಕ್ಷನ್ ಪಡೆಯುವುದು ದೊಡ್ಡ ಸವಾಲಾಗಿತ್ತು. ತಾಂತ್ರಿಕ ಕಾರಣಗಳಿಂದಾಗಿ ಒಸಿ ಸಿಗುವುದು ತಡವಾದರೆ, ನಾಗರಿಕರು ತಾತ್ಕಾಲಿಕ ವಿದ್ಯುತ್ ಸಂಪರ್ಕ ನೆಚ್ಚಿಕೊಳ್ಳಬೇಕಿತ್ತು ಅಥವಾ ಕತ್ತಲಲ್ಲಿ ಕಾಲ ಕಳೆಯಬೇಕಿತ್ತು. ಜನಸಾಮಾನ್ಯರ ಈ ಪ್ರಮುಖ ಸಮಸ್ಯೆಯನ್ನು ಮನಗಂಡು ಸರ್ಕಾರವು ಒಸಿ ನಿಯಮದಿಂದ "ಒಂದು ಬಾರಿಯ ವಿನಾಯಿತಿ" (One-time relaxation) ಘೋಷಿಸುವ ಮೂಲಕ ಇಡೀ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ.

ಇದನ್ನೂ ಓದಿ: Traffic Fines-ವಾಹನ ಸವಾರರಿಗೆ ಸುವರ್ಣಾವಕಾಶ: ಸಂಚಾರ ನಿಯಮ ಉಲ್ಲಂಘನೆ ಬಾಕಿ ದಂಡಕ್ಕೆ ಶೇ. 50 ರಿಯಾಯಿತಿ ಘೋಷಣೆ!

ವಿಶೇಷವಾಗಿ ಗ್ರಾಮೀಣ ಭಾಗದ ಆರ್ಥಿಕತೆಗೆ ಬೆನ್ನೆಲುಬಾಗಿರುವ ರೈತರು, ಕೃಷಿ ಅವಲಂಬಿತರು ಮತ್ತು ಶ್ರಮಿಕ ವರ್ಗದವರಿಗೆ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ. ಕೇವಲ ಪ್ರಮುಖ ವಸತಿ ಸಮುಚ್ಚಯಗಳಷ್ಟೇ ಅಲ್ಲದೆ, ತೋಟದ ಮನೆಗಳು ಹಾಗೂ ಹೈನುಗಾರಿಕೆ ನಡೆಸುವ ಕೊಟ್ಟಿಗೆಗಳಿಗೂ ಈ ವಿನಾಯಿತಿಯಡಿ ನೇರ ವಿದ್ಯುತ್ ಸಂಪರ್ಕ ಕಲ್ಪಿಸಲು ಇಲಾಖೆಗೆ ಸ್ಪಷ್ಟ ಆದೇಶ ನೀಡಲಾಗಿದೆ. ಈ ಸೌಲಭ್ಯವನ್ನು ಪಡೆಯಲು ಅರ್ಹ ಫಲಾನುಭವಿಗಳು ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಯಾವೆಲ್ಲಾ ದಾಖಲೆಗಳು ಬೇಕು ಎಂಬ ಸಂಪೂರ್ಣ ವಿವರ ಇಲ್ಲಿದೆ.

ರೈತರು ವಾಸಿಸುವ ಮನೆಗಳು ಹಾಗೂ ತೋಟದ ಮನೆಗಳು:

ಗ್ರಾಮೀಣ ಭಾಗದ ಅಥವಾ ಜಮೀನುಗಳ ಮಧ್ಯೆ ತೋಟದ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ರೈತರಿಗೆ ಒಸಿ ನಿಯಮದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಅವರು ಯಾವುದೇ ಕಟ್ಟುನಿಟ್ಟಿನ ನಗರ ಸಭೆ/ಪುರಸಭೆಯ ಒಸಿ ದಾಖಲೆ ಇಲ್ಲದೆ ನೇರವಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: KEB-ಒ.ಸಿ ಇಲ್ಲದೆ ವಿದ್ಯುತ್ ಸಂಪರ್ಕ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ, ಸಾರ್ವಜನಿಕರಿಗೆ ನಿರಾಳ!

ಯಾರಿಗೆಲ್ಲ ಈ ನಿಯಮ ಅನ್ವಯ?

ಕೃಷಿ ಉಪಕರಣಗಳನ್ನಿಡುವ ಮನೆಗಳು:

ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಯಂತ್ರೋಪಕರಣಗಳು, ಟ್ರ್ಯಾಕ್ಟರ್, ಪಂಪ್‌ಸೆಟ್ ಬಿಡಿಭಾಗಗಳು ಹಾಗೂ ರಸಗೊಬ್ಬರಗಳನ್ನು ಸುರಕ್ಷಿತವಾಗಿಡಲು ನಿರ್ಮಿಸಿಕೊಂಡಿರುವ ಶೆಡ್ ಅಥವಾ ದಾಸ್ತಾನು ಮನೆಗಳಿಗೆ (Farmhouses/Store rooms) ಇನ್ಮುಂದೆ ಈ ನಿಯಮದಡಿ ಸುಲಭವಾಗಿ ಕರೆಂಟ್ ಪಡೆಯಬಹುದು.

ದನದ ಕೊಟ್ಟಿಗೆಗಳು:

ಹೈನುಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಾನುವಾರುಗಳನ್ನು ಸಾಕುವ ದನದ ಕೊಟ್ಟಿಗೆಗಳಿಗೆ ಪ್ರತ್ಯೇಕ ಹಾಗೂ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಹಸಿರು ನಿಶಾನೆ ತೋರಿದೆ. ಇದರಿಂದ ಕೊಟ್ಟಿಗೆಗಳಲ್ಲಿ ಬೆಳಕಿನ ವ್ಯವಸ್ಥೆ ಹಾಗೂ ಹಾಲಿನ ಯಂತ್ರಗಳ ಬಳಕೆಗೆ ಅನುಕೂಲವಾಗಲಿದೆ.

ರೇಷ್ಮೆ ಗೂಡಿನ ಮನೆಗಳು:

ರೇಷ್ಮೆ ಬೆಳೆಗಾರರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲಾಗಿದ್ದು, ರೇಷ್ಮೆ ಹುಳು ಸಾಕಾಣಿಕೆ ಮತ್ತು ರೇಷ್ಮೆ ಗೂಡುಗಳನ್ನು ಸಂರಕ್ಷಿಸಿಡುವ ವಿಶೇಷ ಮನೆಗಳಿಗೂ ಈ "ಒಂದು ಬಾರಿಯ ವಿನಾಯಿತಿ" ನಿಯಮದಡಿ ಶಾಶ್ವತ ವಿದ್ಯುತ್ ಸಂಪರ್ಕ ದೊರೆಯಲಿದೆ.

ಇದನ್ನೂ ಓದಿ: Horticulture Crop Insurance-ಅಡಿಕೆ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆಗೆ ಅರ್ಜಿ ಆಹ್ವಾನ!

ರಾಜ್ಯಾದ್ಯಂತ ಇರುವ ಸಾಮಾನ್ಯ ವಸತಿ ಕಟ್ಟಡಗಳು:

ಕೇವಲ ಗ್ರಾಮೀಣ ಪ್ರದೇಶ ಮಾತ್ರವಲ್ಲದೆ, ರಾಜ್ಯದಾದ್ಯಂತ ಒಸಿ ಸಮಸ್ಯೆಯಿಂದಾಗಿ ನನೆಗುದಿಗೆ ಬಿದ್ದಿರುವ ಎಲ್ಲಾ ವರ್ಗದ ಅರ್ಹ ವಸತಿ ಕಟ್ಟಡಗಳ ಮಾಲೀಕರು ಈ ವಿಶೇಷ ಸೌಲಭ್ಯವನ್ನು ಬಳಸಿಕೊಂಡು ವಿದ್ಯುತ್‌ ಸಂಪರ್ಕವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ನಾಗರಿಕರು ತಮ್ಮ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಗಳ (Bescom, Mescom, Hescom, Gescom) ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಭಾಗದ ಲೈನ್ ಮ್ಯಾನ್ ಅನ್ನು ಸಂಪರ್ಕಿಸಿ.

ಇದನ್ನೂ ಓದಿ: PM Kisan 23th Installment-ಪಿಎಂ ಕಿಸಾನ್ 23ನೇ ಕಂತಿನ ಹಣ ರೈತರ ಖಾತೆಗೆ!

ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು?

  • ಅರ್ಜಿದಾರರ ಆಧಾರ್ ಕಾರ್ಡ.
  • ಕಟ್ಟಡದ ಮುಂದೆ ನಿಂತು ಜಿಪಿಎಸ್ ಪೋಟೋ.
  • ಜಾಗಕ್ಕೆ ಸಂಬಂದಪಟ್ಟ ದಾಖಲೆಗಳು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: