PM Kisan 23th Installment-ಪಿಎಂ ಕಿಸಾನ್ 23ನೇ ಕಂತಿನ ಹಣ ರೈತರ ಖಾತೆಗೆ!

June 19, 2026 | Siddesh
PM Kisan 23th Installment-ಪಿಎಂ ಕಿಸಾನ್ 23ನೇ ಕಂತಿನ ಹಣ ರೈತರ ಖಾತೆಗೆ!
Share Now:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 23ನೇ ಕಂತಿನ ರೂ. 2,000 ಗಳನ್ನು ನೇರ ನಗದು ವರ್ಗಾವಣೆ ಮೂಲಕ ಪ್ರಧಾನ ಮಂತ್ರಿ(PM-Kisan 23th Installment Date) ನರೇಂದ್ರ ಮೋದಿ ಅವರು ರೈತರ ಖಾತೆಗೆ ಬಿಡುಗಡೆ ಮಾಡುವ ಬಗ್ಗೆ ಕೇಂದ್ರ ಸರಕಾರದ ಅಧಿಕೃತ ಪಿಎಂ ಕಿಸಾನ್ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು ಈ ಕುರಿತು ಅಧಿಕೃತ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ದೇಶದ 9 ಕೋಟಿಗೂ ಅಧಿಕ ರೈತರ ಖಾತೆಗೆ ಪ್ರತಿ ವರ್ಷ ವಾರ್ಷಿಕ ರೂ 6,000/ ಆರ್ಥಿಕ ನೆರವನ್ನು ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ ತಲಾ ರೂ 2,000/- ದಂತೆ ಒದಗಿಸಲಾಗುತ್ತಿದ್ದು ಇದರನ್ವಯ ಈಗಾಗಲೇ 22 ಕಂತಿನ(PM-Kisan 23th Installment) ವರೆಗೆ ರೈತರಿಗೆ ರೂ 2,000/- ಆರ್ಥಿಕ ನೆರವನ್ನು ಒದಗಿಸಲಾಗಿದ್ದು ಪ್ರಸ್ತುತ ಕೇಂದ್ರವು ರೈತರ ಖಾತೆಗೆ 23ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಇದನ್ನೂ ಓದಿ: Free Bike Repair Training-30 ದಿನದ ಉಚಿತ ಬೈಕ್ ರೀಪೇರಿ ತರಬೇತಿಗೆ ನೋಂದಣಿಗಾಗಿ ಅರ್ಜಿ!

ಈ ಲೇಖನದಲ್ಲಿ ರೈತರಿಗೆ ಪಿಎಂ ಕಿಸಾನ್(Kisan Samman Nidhi) ಯೋಜನೆಯ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದು 23ನೇ ಕಂತಿನ ಹಣ ಬಿಡುಗಡೆ ಯಾವ ದಿನ ಆಗಲಿದೆ? ಇದಕ್ಕಾಗಿ ರೈತರು ಕಡ್ಡಾಯವಾಗಿ ಅನುಸರಿಸಬೇಕಾದ ಕ್ರಮಗಳು ಯಾವುವು? ರೈತರು ತಮ್ಮ ಮೊಬೈಲ್ ನಲ್ಲೇ ಪಿಎಂ ಕಿಸಾನ್ ಯೋಜನೆಯ ಹಣ ಜಮಾ ಅಗಿರುವ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು? ಈ ಬಗ್ಗೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

PM Kisan 23th Installment Release Date-23ನೇ ಕಂತಿನ ಪಿಎಂ ಕಿಸಾನ್ ಹಣ ಜೂನ್ 20, 2026 ರಂದು ರೈತರ ಖಾತೆಗೆ ಬಿಡುಗಡೆ:

ಜೂನ್ 20, 2026 ರಂದು 23ನೇ ಕಂತಿನ ರೂ. 2,000 ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20, 2026 ರಂದು ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಸರಕಾರವು ಪಿಎಂ ಕಿಸಾನ್ ವೆಬ್ಸೈಟ್ ನಲ್ಲಿ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಿಂದ ಈ ಹಣವನ್ನು ನೇರವಾಗಿ ದೇಶದ 9 ಕೋಟಿಗೂ ಹೆಚ್ಚು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ(DBT) ಮೂಲಕ ವರ್ಗಾವಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ: Bele Vime-2026: ವಿವಿಧ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನ! ಇಲ್ಲಿದೆ ಅಗತ್ಯ ಮಾಹಿತಿ!

Kisan Samman Nidhi Yojana-ಪಿಎಂ ಕಿಸಾನ್ ಹಣ ಪಡೆಯಲು ತಪ್ಪದೇ ಈ ಕ್ರಮ ಅನುಸರಿಸಿ:

ಇ-ಕೆವೈಸಿ ಮಾಡಿಸುವುದು ಕಡ್ಡಾಯ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೂ 2,000/- ಆರ್ಥಿಕ ನೆರವನ್ನು ಪಡೆಯಲು ಇ-ಕೆವೈಸಿಯನ್ನು ಇಲ್ಲಿಯವರೆಗೆ ಮಾಡಿಸಿಲ್ಲದ ರೈತರು ಕೂಡಲೇ ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆಧಾರ್ ಕಾರ್ಡ ಪ್ರತಿ ಮತ್ತು OTP ಆಧಾರಿತ ಕೆವೈಸಿಯನ್ನು ಮಾಡಿಸಬೇಕು. ತಪ್ಪಿದಲ್ಲಿ ಈ ಯೋಜನೆಯ ಹಣ ಸ್ಥಗಿತವಾಗುತ್ತದೆ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ:

ಪಿಎಂ ಕಿಸಾನ್ ಯೋಜನೆಯ ಹಣವನ್ನು ಕೇಂದ್ರ ಸರಕಾರವು ನೇರ ನಗದು ವರ್ಗಾವಣೆಯ(DBT) ಮೂಲಕ ಬಿಡುಗಡೆ ಮಾಡುವುದರಿಂದ ಇಲ್ಲಿಯವರೆಗೆ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೇ ಇರುವವರು ಕೂಡಲೇ ತಮ್ಮ ಬ್ಯಾಂಕ್ ಶಾಖೆಯನ್ನು ನೇರವಾಗಿ ಭೇಟಿ ಮಾಡಿ ಲಿಂಕ್ ಮಾಡಿಸಿಕೊಳ್ಳಿ.

ಇದನ್ನೂ ಓದಿ: Mobile Repair Training-ಬ್ಯಾಂಕ್ ಆಫ್ ಬರೋಡಾ RSETI ವತಿಯಿಂದ ಉಚಿತ ಮೊಬೈಲ್ ರಿಪೇರಿ ತರಬೇತಿ!

PM-Kisan Status Check-ಪಿಎಂ ಕಿಸಾನ್ ಹಣ ಜಮಾ ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ರೈತರು ಒಂದೆರಡು ಕ್ಲಿಕ್ ನಲ್ಲಿ ತಮ್ಮ ಮೊಬೈಲ್ ನಲ್ಲೇ ಇಲ್ಲಿಯವರೆಗೆ ಈ ಯೋಜನೆಯಡಿ ಎಷ್ತು ಹಣ ಯಾವ ಯಾವ ದಿನಾಂಕದಂದು ಜಮಾ ಅಗಿದೆ ಜೊತೆಗೆ 23ನೇ ಕಂತಿನ ಹಣ ಜಮಾ ವಿವರವನ್ನು ಸಹ ತಿಳಿಯಬಹುದಾಗಿದೆ:

Step-1: ಮೊದಲಿಗೆ ಈ "PM-Kisan Status Check" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಪಿಎಂ ಕಿಸಾನ್ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Education Loan-ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ ಅರ್ಜಿ ಆಹ್ವಾನ!ಯಾರೆಲ್ಲ ಅರ್ಜಿ ಸಲ್ಲಿಸಬಹುದು?

PM Kisan 23th Installment date

Step-2: ಇದಾದ ಬಳಿಕ ಈ ಪೇಜ್ ಬಲಬದಿಯಲ್ಲಿ ಕಾಣಿಸುವ "Know Your Status" ಬಟನ್ ಮೇಲೆ ಕ್ಲಿಕ್ ಮಾಡಿ "Enter Registartion No" ಕಾಲಂ ನಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ಹಾಕಿ ನೋಂದಣಿ ಸಂಖ್ಯೆ ನಿಮಗೆ ಗೊತ್ತಿಲ್ಲದೇ ಇದ್ದಲ್ಲಿ ಮೇಲೆ ಈ ಪೇಜ್ ನಲ್ಲೇ ಕಾಣಿಸುವ "Know Your Registartion No" ಬಟನ್ ಮೇಲೆ ಕ್ಲಿಕ್ ಮಾಡಿ ನೋಂದಣಿ ಸಂಖ್ಯೆಯನ್ನು ಪಡೆಯಿರಿ.

Step-3: "Enter Registartion No" ಕಾಲಂ ನಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ಹಾಕಿ "Get OTP" ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿ ಅನ್ನು ಪಡೆದು ಲಾಗಿನ್ ಅದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಯೋಜನೆಯಡಿ ಜಮಾ ಅಗಿರುವ ಹಣದ ಸಂಪೂರ್ಣ ವಿವರ ಕಾಣಿಸುತ್ತದೆ.

PM Kisan Application-ಹೊಸ ಅರ್ಜಿ ಸಲ್ಲಿಸಲು ಅವಕಾಶ:

ಇಲ್ಲಿಯವರೆಗೆ ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸದೇ ಇರುವವರು ಹಾಗೂ ಹೊಸದಾಗಿ ಪಾಲು ವಿಭಾಗ ಮಾಡಿಕೊಂಡು ತಮ್ಮ ಹೆಸರಿಗೆ ಜಮೀನಿನ್ನು ವರ್ಗಾವಣೆ ಮಾಡಿಕೊಂಡಿರುವ ರೈತರು ಕೂಡಲೇ ತಮ್ಮ ಹೋಬಳಿಯ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: