Property Registration-ಬಿ ಖಾತಾದಾರರಿಗೆ ಎ ಖಾತಾ ವಿತರಣೆಗೆ ರಾಜ್ಯ ಸರ್ಕಾರದಿಂದ ಅಭಿಯಾನ!

May 16, 2026 | Siddesh
Property Registration-ಬಿ ಖಾತಾದಾರರಿಗೆ ಎ ಖಾತಾ ವಿತರಣೆಗೆ ರಾಜ್ಯ ಸರ್ಕಾರದಿಂದ ಅಭಿಯಾನ!
Share Now:

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಆಸ್ತಿ ಮಾಲೀಕರ ದಶಕಗಳ ಕನಸನ್ನು ನನಸು ಮಾಡಲು ರಾಜ್ಯ ಸರ್ಕಾರವು ಮಹತ್ವಾಕಾಂಕ್ಷೆಯ ಹೆಜ್ಜೆಯನ್ನಿಟ್ಟಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಲಕ್ಷಾಂತರ 'ಬಿ' ಖಾತಾ ಆಸ್ತಿಗಳನ್ನು ಕಾನೂನುಬದ್ಧ 'ಎ' ಖಾತಾವನ್ನಾಗಿ(A Khata Abhiyana Bengaluru) ಪರಿವರ್ತಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು ಮೇ 16, 2026 ರಿಂದ ಅಧಿಕೃತವಾಗಿ ಬೃಹತ್ ಅಭಿಯಾನವನ್ನು ಆರಂಭಿಸಿದೆ. ಇದನ್ನು ಸರ್ಕಾರದ 6ನೇ ಗ್ಯಾರಂಟಿ ಆಯಾಮದ "ಭೂ ಗ್ಯಾರಂಟಿ" ಯೋಜನೆ ಎಂದು ಘೋಷಿಸಲಾಗಿದ್ದು, ಇಂದಿನಿಂದ "ನನ್ನ ಇ-ಖಾತಾ ನನ್ನ ಹಕ್ಕು" ಎಂಬ ಪ್ರಮುಖ ಆಂದೋಲನ ಚಾಲನೆ ಪಡೆದುಕೊಂಡಿದೆ.

ಈ ಐತಿಹಾಸಿಕ ಯೋಜನೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿರುವ ಸುಮಾರು 7 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ನೇರವಾದ ಮತ್ತು ಅತ್ಯಂತ ದೊಡ್ಡ(A Khata) ಸೌಲಭ್ಯವನ್ನು ಕಲ್ಪಿಸಲಿದೆ. ಇದುವರೆಗೆ ತಾಂತ್ರಿಕ ಮತ್ತು ಕಾನೂನು ಕಾರಣಗಳಿಂದಾಗಿ ಕೇವಲ 'ಬಿ' ರಿಜಿಸ್ಟರ್‌ನಲ್ಲಿ ದಾಖಲಾಗಿದ್ದ ಆಸ್ತಿಗಳಿಗೆ ಈಗ ಪೂರ್ಣ ಪ್ರಮಾಣದ ಮಾನ್ಯತೆ ಸಿಗಲಿದ್ದು, ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರ ಹಾಗೂ ನಾಗರಿಕರ ಆರ್ಥಿಕ ಭದ್ರತೆಗೆ ಹೊಸ ದಿಕ್ಸೂಚಿ ಸಿಕ್ಕಂತಾಗಿದೆ. ಆಸ್ತಿಗಳ ಸುರಕ್ಷತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಈ ಅಭಿಯಾನವು(B Khata to A Khata conversion) ಅತ್ಯಂತ ಮಹತ್ವದ ಮೈಲಿಗಲ್ಲು ಎನಿಸಿಕೊಂಡಿದೆ.

ಇದನ್ನೂ ಓದಿ: Free Sheep Farming Training-ಉಚಿತ ಕುರಿ ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ: ನಿರುದ್ಯೋಗಿ ಯುವಜನತೆಗೆ ಸುವರ್ಣಾವಕಾಶ!

ನಾಗರಿಕರಿಗೆ ಆರ್ಥಿಕ ಹೊರೆಯಾಗದಂತೆ ತಡೆಯಲು ಸರ್ಕಾರವು ಈ ಯೋಜನೆಯಲ್ಲಿ ಅತ್ಯಂತ ಆಕರ್ಷಕ ರಿಯಾಯಿತಿಯನ್ನು ಪ್ರಕಟಿಸಿದೆ. ಸಾಮಾನ್ಯವಾಗಿ 'ಬಿ' ಖಾತಾದಿಂದ 'ಎ' ಖಾತಾಗೆ ಪರಿವರ್ತಿಸಲು ಆಸ್ತಿಯ ಮಾರ್ಗಸೂಚಿ (Guideline Value) ಮೌಲ್ಯದ ಶೇಕಡಾ 5 ರಷ್ಟು ಶುಲ್ಕವನ್ನು ಪಾವತಿಸಬೇಕಾಗಿತ್ತು. ಆದರೆ, ಈಗ ಆರಂಭವಾಗಿರುವ ಈ ವಿಶೇಷ ಅಭಿಯಾನದ ಅವಧಿಯಲ್ಲಿ ನಾಗರಿಕರು ಕೇವಲ ಶೇ. 2 ರಷ್ಟು ಮಾತ್ರ ಶುಲ್ಕ ಪಾವತಿಸಿ ತಮ್ಮ ಆಸ್ತಿಯನ್ನು ಪರಿವರ್ತಿಸಿಕೊಳ್ಳಬಹುದಾಗಿದೆ. ಈ ಮೂಲಕ ನೇರವಾಗಿ ಶೇಕಡಾ 60 ರಷ್ಟು ಶುಲ್ಕ ವಿನಾಯಿತಿ ನೀಡಲಾಗಿದ್ದು, ಮಧ್ಯಮ ವರ್ಗದ ಜನರಿಗೆ ಸರ್ಕಾರ ಭಾರಿ ಕೊಡುಗೆ ನೀಡಿದೆ.

Property Registration Fee-ಈ ರಿಯಾಯಿತಿಯು ಕೇವಲ 100 ದಿನಗಳವರೆಗೆ ಮಾತ್ರ:

ಸರ್ಕಾರ ಜಾರಿಗೆ ತಂದಿರುವ ಈ ರಿಯಾಯಿತಿ ದರದ ಖಾತಾ ಪರಿವರ್ತನಾ ಯೋಜನೆಯು ಸದಾಕಾಲ ಲಭ್ಯವಿರುವುದಿಲ್ಲ. ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ನಿರ್ದಿಷ್ಟ ಕಾಲಮಿತಿಯನ್ನು ವಿಧಿಸಲಾಗಿದೆ:

ಈ ವಿಶೇಷ ರಿಯಾಯಿತಿ ದರದ ಸೌಲಭ್ಯವು ಕೇವಲ 100 ದಿನಗಳ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ಸಾರ್ವಜನಿಕರು ನಿಗದಿತ 100 ದಿನಗಳ ಒಳಗಾಗಿ ಆನ್‌ಲೈನ್ ಅಥವಾ ನಿಗದಿಪಡಿಸಿದ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.

ನಾಗರಿಕರ ಅನುಕೂಲಕ್ಕಾಗಿ ಬಿಬಿಎಂಪಿ ವ್ಯಾಪ್ತಿಯ 50 ಪ್ರಮುಖ ಸ್ಥಳಗಳಲ್ಲಿ ಪ್ರತಿ ಶನಿವಾರ ವಿಶೇಷ ಇ-ಖಾತಾ ವಿತರಣಾ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಪ್ರತಿ ವಲಯದಲ್ಲಿ ತಲಾ 10 ರಂತೆ ಒಟ್ಟು 50 ಆಯಕಟ್ಟಿನ ಸ್ಥಳಗಳಲ್ಲಿ ಈ ಶಿಬಿರಗಳು ನಡೆಯಲಿವೆ.

ನಕಲಿ ದಾಖಲೆಗಳ ಸೃಷ್ಟಿ ಹಾಗೂ ವಂಚನೆ ತಡೆಯಲು ಆಧಾರ್ ಕಾರ್ಡ್ ಬಯೋಮೆಟ್ರಿಕ್ ಲಿಂಕಿಂಗ್ ಮತ್ತು ಕ್ಯೂಆರ್ ಕೋಡ್ (QR Code) ಆಧರಿತ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: Vasati Yojane-ವಸತಿ ಯೋಜನೆ-2026: ಸ್ವಂತ ಮನೆ ಕನಸು ನನಸು ಮಾಡಿಕೊಳ್ಳಲು ಸುವರ್ಣಾವಕಾಶ; ಇಂದೇ ಅರ್ಜಿ ಸಲ್ಲಿಸಿ!

"ಬೆಂಗಳೂರು ನಗರದಲ್ಲಿರುವ 'ಬಿ' ಖಾತಾ ಆಸ್ತಿಗಳನ್ನು 'ಎ' ಖಾತಾವನ್ನಾಗಿ ಮಾಡಿಸಿಕೊಳ್ಳುವವರಿಗೆ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ.5ರ ಬದಲಿಗೆ ಶೇ.2ರಷ್ಟು ಹಣ ಪಾವತಿಸುವ ವಿಶೇಷ ರಿಯಾಯಿತಿ ದೊರೆಯಲಿದೆ. ಇದು ಸರ್ಕಾರದ 6ನೇ ಗ್ಯಾರಂಟಿ ಭೂ ಗ್ಯಾರಂಟಿ."

ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿಗಳು

A Khata Benefits-'ಎ' ಖಾತಾ ಪಡೆಯುವುದರಿಂದ ಆಗುವ ಪ್ರಮುಖ ಲಾಭಗಳು:

  • ಆಸ್ತಿಯ ಮಾಲೀಕರು ಸಂಬಂಧಪಟ್ಟ ಇಲಾಖೆಯಿಂದ 'ಎ' ಖಾತಾ ಪಡೆಯುವುದರಿಂದ ಯಾವೆಲ್ಲ ಪ್ರಯೋಜನಗಳಿವೆ ಎನ್ನುವ ವಿವರ ಈ ಕೆಳಗಿನಂತಿವೆ:
  • 'ಎ' ಖಾತಾ ಹೊಂದಿರುವ ಆಸ್ತಿಗಳಿಗೆ ಬಿಬಿಎಂಪಿಯಿಂದ ಕಟ್ಟಡ ನಿರ್ಮಾಣ ನಕ್ಷೆ (Building Plan Approval) ಪಡೆಯುವುದು ಅತ್ಯಂತ ಸುಲಭ ಮತ್ತು ವೇಗವಾಗಿ ಸಾಧ್ಯವಾಗುತ್ತದೆ.
  • ರಾಷ್ಟ್ರೀಕೃತ ಮತ್ತು ಪ್ರಮುಖ ಖಾಸಗಿ ಬ್ಯಾಂಕುಗಳಿಂದ ಆಸ್ತಿಯ ಮೇಲೆ ಸುಲಭವಾಗಿ ಗೃಹ ಸಾಲ (Home Loan) ಅಥವಾ ಆಸ್ತಿ ಸಾಲ ಪಡೆಯಲು 'ಎ' ಖಾತಾ ಕಡ್ಡಾಯವಾಗಿದ್ದು, ಇನ್ಮುಂದೆ ಸಾಲ ಸೌಲಭ್ಯ ಸುಲಭವಾಗಿ ದೊರೆಯಲಿದೆ.
  • ಕಾನೂನುಬದ್ಧ ದಾಖಲೆಗಳು ಸಮರ್ಪಕವಾಗಿರುವುದರಿಂದ ಆಸ್ತಿಯ ಮಾರುಕಟ್ಟೆ ಮೌಲ್ಯವು ಗಣನೀಯವಾಗಿ ಹೆಚ್ಚಳವಾಗುತ್ತದೆ ಹಾಗೂ ಮಾರಾಟ ಪ್ರಕ್ರಿಯೆ ಸುಗಮವಾಗುತ್ತದೆ.
  • ಸರ್ಕಾರದ ಅಧಿಕೃತ ಡಿಜಿಟಲ್ ಇ-ಖಾತಾ ಹೊಂದುವುದರಿಂದ ಆಸ್ತಿಯು ಕಾನೂನುಬಾಹಿರ ಆಕ್ರಮಣ ಅಥವಾ ವಂಚನೆಗಳಿಂದ ಸಂಪೂರ್ಣವಾಗಿ ಮುಕ್ತಗೊಂಡು ಸುರಕ್ಷಿತವಾಗಿರುತ್ತದೆ.

ಇದನ್ನೂ ಓದಿ: Ration Card Correction-ರಾಜ್ಯದ್ಯಂತ ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!

B Khata to A Khata conversion

A Khata Abhiyana Details-ನನ್ನ ಇ-ಖಾತಾ ನನ್ನ ಹಕ್ಕು" ಅಭಿಯಾನದ ವೈಶಿಷ್ಟ್ಯಗಳು:

ಬೆಂಗಳೂರು ನಗರವು ವಿಶ್ವಮಟ್ಟದಲ್ಲಿ ತಂತ್ರಜ್ಞಾನ ನಗರಿಯಾಗಿ ಗುರುತಿಸಿಕೊಂಡಿದ್ದರೂ, ಆಸ್ತಿ ದಾಖಲೆಗಳ ನಿರ್ವಹಣೆ ಮಾತ್ರ ಇದುವರೆಗೆ ಹಳೆಯ ಕಾಗದ ಪತ್ರಗಳ ಮೂಲಕವೇ ನಡೆಯುತ್ತಿತ್ತು. ಇದರಿಂದಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆಯಬೇಕಾಗಿತ್ತು ಹಾಗೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು. ಇದನ್ನು ಸಂಪೂರ್ಣವಾಗಿ ತೊಡೆದುಹಾಕಲು ಸರ್ಕಾರವು ಡಿಜಿಟಲೀಕರಣ ಪ್ರಕ್ರಿಯೆಗೆ ವೇಗ ನೀಡಿದೆ.

ಬೆಂಗಳೂರಿನಲ್ಲಿರುವ ಸುಮಾರು 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಈಗಾಗಲೇ ಸಂಪೂರ್ಣವಾಗಿ ಸ್ಕ್ಯಾನ್ ಮಾಡಿ, ಡಿಜಿಟಲೀಕರಣ ಮಾಡಲಾಗಿದೆ. ಇವುಗಳ ಇ-ಖಾತಾಗಳನ್ನು ಸಿದ್ಧಪಡಿಸಿ ನಾಗರಿಕರಿಗೆ ವಿತರಿಸಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಅಥವಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯರು ನೇರವಾಗಿ ಸಾರ್ವಜನಿಕರ ಮನೆ ಬಾಗಿಲಿಗೆ ಬಂದು ಇ-ಖಾತಾಗಳನ್ನು ಸಂಪೂರ್ಣ ಉಚಿತವಾಗಿ ವಿತರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇದರಿಂದಾಗಿ ನಾಗರಿಕರು ಕಚೇರಿಗಳಿಗೆ ಅಲೆಯುವ ಶ್ರಮ ತಪ್ಪಲಿದೆ.

ಇದನ್ನೂ ಓದಿ: Ration Card News-ರೇಶನ್ ಕಾರ್ಡ್‌ದಾರರಿಗೆ ಸಿಹಿ ಸುದ್ದಿ: ಅಕ್ಕಿಯೊಂದಿಗೆ ಈಗ ರಾಗಿ ಮತ್ತು ಜೋಳ ವಿತರಣೆ!

Helpline Number-ಸಾರ್ವಜನಿಕರ ಸಹಾಯಕ್ಕಾಗಿ ಸಹಾಯವಾಣಿ ಆರಂಭ:

ಖಾತಾ ಪರಿವರ್ತನೆ ಮತ್ತು ಇ-ಖಾತಾ ಪಡೆಯುವ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಗೊಂದಲಗಳಿದ್ದರೆ ಅಥವಾ ತಾಂತ್ರಿಕ ತೊಂದರೆಗಳು ಎದುರಾದರೆ ತಕ್ಷಣ ನೆರವು ನೀಡಲು ಬಿಬಿಎಂಪಿ ವತಿಯಿಂದ ವಿಶೇಷ ಇ-ಖಾತಾ ಸಹಾಯವಾಣಿಯನ್ನು ತೆರೆಯಲಾಗಿದೆ. ಸಾರ್ವಜನಿಕರು 94806 83695 ಸಂಖ್ಯೆಗೆ ಕರೆ ಮಾಡಿ ತಮ್ಮ ದೂರುಗಳನ್ನು ಅಥವಾ ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳಬಹುದು.

B Khata to A Khata conversion Website-ಇನ್ನು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: