Ration Card Correction-ರಾಜ್ಯದ್ಯಂತ ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!

May 13, 2026 | Siddesh
Ration Card Correction-ರಾಜ್ಯದ್ಯಂತ ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!
Share Now:

ಬೆಂಗಳೂರು: ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿ (Ration Card) ಹೊಂದಿರುವ ರಾಜ್ಯದ ಜನತೆಗೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಕಳೆದ ಹಲವು ದಿನಗಳಿಂದ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಪಡಿತರ ಚೀಟಿಯ ತಿದ್ದುಪಡಿ ಪ್ರಕ್ರಿಯೆಗೆ ಇದೀಗ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ತಮ್ಮ ಪಡಿತರ ಚೀಟಿಯಲ್ಲಿ ದೋಷಗಳಿದ್ದು, ಅವುಗಳನ್ನು ಸರಿಪಡಿಸಿಕೊಳ್ಳಲು ಕಾಯುತ್ತಿದ್ದ ಜನರಿಗೆ ಸರ್ಕಾರವು ಸುದೀರ್ಘ ಕಾಲಾವಕಾಶವನ್ನು ಕಲ್ಪಿಸಿಕೊಟ್ಟಿದೆ.

ಈ ಪ್ರಕ್ರಿಯೆಯು ಪ್ರಮುಖವಾಗಿ ಚಾಲ್ತಿಯಲ್ಲಿರುವ ರೇಶನ್ ಕಾರ್ಡ್‌ಗಳ ಅಪ್‌ಡೇಟ್‌ಗೆ(Ration Card Correction) ಸಂಬಂಧಿಸಿದ್ದಾಗಿದೆ. ರಾಜ್ಯದ ವಿವಿಧ ಸೇವಾ ಕೇಂದ್ರಗಳ ಮೂಲಕ ಅಥವಾ ಅಧಿಕೃತ ಪೋರ್ಟಲ್ ಮೂಲಕ ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಆದರೆ, ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಈ ಹಂತದಲ್ಲಿ ಕೇವಲ ತಿದ್ದುಪಡಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಹೊಸ ರೇಶನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಇಲಾಖೆಯು ಇನ್ನೂ ಅನುಮತಿ ನೀಡಿಲ್ಲ.

ಇದನ್ನೂ ಓದಿ: Gruhalakshmi Amount-ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬಾಕಿ ಹಣ ಶೀಘ್ರವೇ ಬಿಡುಗಡೆ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್!

ಪಡಿತರ ಚೀಟಿದಾರರು ತಮ್ಮ ಕುಟುಂಬದ ಸದಸ್ಯರ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ ಅಥವಾ ಮರಣ ಹೊಂದಿದ ಸದಸ್ಯರ ಹೆಸರು ತೆಗೆದುಹಾಕುವಂತಹ ಅಗತ್ಯ ಕೆಲಸಗಳನ್ನು ನಿಗದಿತ ಅವಧಿಯೊಳಗೆ(Ration card correction karnataka) ಮಾಡಿಸಿಕೊಳ್ಳುವಂತೆ ಇಲಾಖೆ ಸೂಚಿಸಿದೆ. ಈ ಅಂಕಣದಲ್ಲಿ ತಿದ್ದುಪಡಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳು ಮತ್ತು ಅವಶ್ಯಕ ದಾಖಲೆಗಳ ಮಾಹಿತಿ ಇಲ್ಲಿದೆ.

Ration Card Correction Duration-ಎಷ್ಟು ದಿನ ಅವಕಾಶ ನೀಡಲಾಗಿದೆ?

ಸರ್ಕಾರವು ಈ ಬಾರಿ ತಿದ್ದುಪಡಿ ಪ್ರಕ್ರಿಯೆಗೆ ದೀರ್ಘಾವಧಿಯ ಕಾಲಾವಕಾಶವನ್ನು ನೀಡಿದೆ.

  • ಪ್ರಾರಂಭದ ದಿನಾಂಕ: 08/05/2026 ರಿಂದ
  • ಕೊನೆಯ ದಿನಾಂಕ: 31/03/2027 ರ ವರೆಗೆ

ಸೂಚನೆ: ಹೊಸ ರೇಶನ್ ಕಾರ್ಡ್ ಅರ್ಜಿ ಸಲ್ಲಿಸಲು ಇನ್ನೂ ಅವಕಾಶ ನೀಡಿರುವುದಿಲ್ಲ. ಕೇವಲ ಚಾಲ್ತಿಯಲ್ಲಿರುವ ಕಾರ್ಡ್‌ಗಳ ತಿದ್ದುಪಡಿಗೆ ಮಾತ್ರ ಈ ಕಾಲಮಿತಿ ಅನ್ವಯಿಸುತ್ತದೆ.

ಇದನ್ನೂ ಓದಿ: Today Rain Forecast-ರಾಜ್ಯದ ಮಳೆ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!

Ration Card Correction-ಯಾವೆಲ್ಲ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು?

ನಿಮ್ಮ ಪಡಿತರ ಚೀಟಿಯಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶವಿದೆ:

  1. ಹೆಸರು ಬದಲಾವಣೆ: ಹೆಸರಿನಲ್ಲಿರುವ ಕಾಗುಣಿತ ದೋಷ ಅಥವಾ ಹೆಸರು ಬದಲಾವಣೆ.
  2. ವಿಳಾಸ ಬದಲಾವಣೆ: ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಾಸ್ತವ್ಯ ಬದಲಿಸಿದರೆ ವಿಳಾಸ ಅಪ್‌ಡೇಟ್ ಮಾಡುವುದು.
  3. ಸದಸ್ಯರ ಸೇರ್ಪಡೆ: ಕುಟುಂಬಕ್ಕೆ ಹೊಸದಾಗಿ ಸೇರಿದ ಸದಸ್ಯರ (ಉದಾ: ಮದುವೆಯಾದ ಸೊಸೆ ಅಥವಾ ಮಕ್ಕಳು) ಹೆಸರು ಸೇರಿಸುವುದು.
  4. ಸದಸ್ಯರ ತೆಗೆದುಹಾಕುವುದು: ಮರಣ ಹೊಂದಿದ ಅಥವಾ ಬೇರೆಡೆಗೆ ವಲಸೆ ಹೋದ ಸದಸ್ಯರ ಹೆಸರುಗಳನ್ನು ರದ್ದುಪಡಿಸುವುದು.

ಇದನ್ನೂ ಓದಿ: Ration Card News-ರೇಶನ್ ಕಾರ್ಡ್‌ದಾರರಿಗೆ ಸಿಹಿ ಸುದ್ದಿ: ಅಕ್ಕಿಯೊಂದಿಗೆ ಈಗ ರಾಗಿ ಮತ್ತು ಜೋಳ ವಿತರಣೆ!

Ration Card Correction Online Application-ಅರ್ಜಿ ಸಲ್ಲಿಸುವುದು ಹೇಗೆ?

ಸಾರ್ವಜನಿಕರು ರೇಶನ್ ಕಾರ್ಡ ತಿದ್ದುಪಡಿಗೆ ಅವಶ್ಯವಿರುವ ದಾಖಲೆಗಳನ್ನು ತೆಗೆದುಕೊಂಡು ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ತಿದ್ದುಪಡಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ನಿಮ್ಮ ತಾಲೂಕಿನ ಆಹಾರ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ.

ರಾಜ್ಯದ ಸಮಸ್ತ ಪಡಿತರ ಚೀಟಿದಾರರಿಗೆ ಈ ಮೂಲಕ ತಿಳಿಸುವುದೇನೆಂದರೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ಬಾಕಿ ಉಳಿದಿರುವ ರೇಶನ್ ಕಾರ್ಡ್ ತಿದ್ದುಪಡಿ (Correction) ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಂಡು ಅರ್ಜಿಯನ್ನು ಸಲ್ಲಿಸಿ ತಮ್ಮ ರೇಶನ್ ಕಾರ್ಡ ತಿದ್ದುಪಡಿಯನ್ನು ಮಾಡಿಸಿಕೊಳ್ಳಬಹುದು. -ಜಿಲ್ಲಾ ಯೋಜನಾ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.

ಇದನ್ನೂ ಓದಿ: Male Munsuchane-ರಾಜ್ಯಾದ್ಯಂತ ವರುಣನ ಅಬ್ಬರ: ಮೇ 11ರವರೆಗೆ ಹಲವೆಡೆ ಭಾರೀ ಮಳೆ ಮುನ್ಸೂಚನೆ!

Documents For Ration Card Correction-ತಿದ್ದುಪಡಿವಾರು ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳು:

ತಿದ್ದುಪಡಿಗಾಗಿ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

  • ಹೆಸರು/ವಿಳಾಸ ಬದಲಾವಣೆಗೆ: ಆಧಾರ ಕಾರ್ಡ್ (ಕಡ್ಡಾಯವಾಗಿ ಅಪ್‌ಡೇಟ್ ಆಗಿರಬೇಕು) ಮತ್ತು ಹಳೆಯ ರೇಶನ್ ಕಾರ್ಡ್ ಪ್ರತಿ.
  • ಸದಸ್ಯರ ಸೇರ್ಪಡೆಗೆ: * ಮಕ್ಕಳಾಗಿದ್ದರೆ: ಜನನ ಪ್ರಮಾಣ ಪತ್ರ ಮತ್ತು ಪೋಷಕರ ಆಧಾರ್ ಕಾರ್ಡ್.
    • ದೊಡ್ಡವರಾಗಿದ್ದರೆ: ಅವರ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ (ಅಗತ್ಯವಿದ್ದರೆ).
  • ಹೆಸರು ತೆಗೆದುಹಾಕಲು: ಮರಣ ಪ್ರಮಾಣ ಪತ್ರ ಅಥವಾ ವಿವಾಹದ ನಂತರ ಸ್ಥಳಾಂತರವಾಗಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆ.
Ration Card Correction Documents

ಇದನ್ನೂ ಓದಿ: Lidkar Competition-ರಾಜ್ಯಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ-2026! ಪ್ರಥಮ ಬಹುಮಾನ ₹50,000!

Ration Card Correction Application Status-ಆನ್ಲೈನ್ ನಲ್ಲಿ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?

ಸಾರ್ವಜನಿಕರು ಒಮ್ಮೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ರೇಶನ್ ಕಾರ್ಡ ತಿದ್ದುಪಡಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ಬಳಿಕ ಈ ಕೆಳಗಿನ ವಿಧಾನವನ್ನು ಅನುಸರಿಸಿ ಅಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ನಿಮ್ಮ ಮೊಬೈಲ್ ಮೂಲಕವೇ ಕೇಲವ ಒಂದೆರಡು ಕ್ಲಿಕ್ ನಲ್ಲಿ ನಿಮ್ಮ ಅರ್ಜಿ ಯಾವ ಹಂತದಲ್ಲಿ ಎನ್ನುವ ಮಾಹಿತಿಯನ್ನು ತಿಳಿಯಬಹುದು.

Step-1: ಮೊದಲ ಹಂತದಲ್ಲಿ ಅರ್ಜಿದಾರರು ಈ Ration Card Application Status Check ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ ahara.kar.nic.in ಗೆ ಭೇಟಿ ನೀಡಿ.

Step-2: ನಂತರ 'ಇ-ಸೇವೆಗಳು' (E-Services) ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ಭೇಟಿ ಮಾಡಿ.

Step-3: ಬಳಿಕ 'ಇ-ಪಡಿತರ ಚೀಟಿ' (E-Ration Card) ವಿಭಾಗದಲ್ಲಿ 'ಅರ್ಜಿಯ ಸ್ಥಿತಿ' (Status of Application) ಆಯ್ಕೆಯನ್ನು ಆರಿಸಿ.

ಇದನ್ನೂ ಓದಿ: Bhagyalakshmi Scheme-ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

Step-4: ಇದಾದ ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ, ಅಕ್ನಾಲೆಡ್ಜ್‌ಮೆಂಟ್ ಸಂಖ್ಯೆ (Acknowledgement Number) ನಮೂದಿಸಿ ನಿಮ್ಮ ಅರ್ಜಿಯ ಯಾವ ಹಂತದಲ್ಲಿದೆ ಅನುಮೋದನೆ ಅಗಿದಿಯಾ ಎಂದು ಖಚಿತಪಡಿಸಿಕೊಳ್ಳಬಹುದು.

ಸಾರ್ವಜನಿಕರು ಕೊನೆಯ ದಿನಾಂಕದವರೆಗೂ ಕಾಯದೆ, ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ತಿದ್ದುಪಡಿ ಮಾಡಿಸಿಕೊಳ್ಳಲು ಕೋರಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: