Bhagyalakshmi Scheme-ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

May 7, 2026 | Siddesh
Bhagyalakshmi Scheme-ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?
Share Now:

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ 'ಭಾಗ್ಯಲಕ್ಷ್ಮಿ' ಯೋಜನೆಯು(Bhagyalakshmi Scheme) ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸುವ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಶಿಕ್ಷಣ ಮತ್ತು ಉತ್ತಮ ಜೀವನ ರೂಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅರ್ಹ ಫಲಾನುಭವಿಗಳು ಮಗುವಿಗೆ 18 ವರ್ಷ ತುಂಬಿದ ನಂತರ ಬಾಂಡ್ ಮೆಚ್ಯೂರಿಟಿ ಮೊತ್ತವಾಗಿ ಸುಮಾರು 1 ಲಕ್ಷ ರೂಪಾಯಿಗಳವರೆಗೆ ಹಣವನ್ನು ಪಡೆಯಲು ಅವಕಾಶವಿದೆ.

ಈ ಯೋಜನೆಯು ಕೇವಲ ಆರ್ಥಿಕ ಸಹಾಯವನ್ನಷ್ಟೇ ಅಲ್ಲದೆ, ಸಮಾಜದಲ್ಲಿ ಹೆಣ್ಣು ಮಕ್ಕಳ ಸ್ಥಾನಮಾನವನ್ನು ಹೆಚ್ಚಿಸುವಲ್ಲಿ ಮತ್ತು ಬಾಲ್ಯ ವಿವಾಹದಂತಹ ಪಿಡುಗುಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮಗುವು ಕನಿಷ್ಠ 8ನೇ ತರಗತಿಯವರೆಗೆ ಶಿಕ್ಷಣ(Bhagyalakshmi Yojane) ಪಡೆಯುವುದು ಮತ್ತು 18 ವರ್ಷದವರೆಗೆ ವಿವಾಹವಾಗದಿರುವುದು ಈ ಯೋಜನೆಯ ಲಾಭ ಪಡೆಯಲು ಕಡ್ಡಾಯವಾಗಿದೆ. ಇದು ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಸರ್ಕಾರದ ಒಂದು ದೃಢ ಹೆಜ್ಜೆಯಾಗಿದೆ.

ಇದನ್ನೂ ಓದಿ: Labour Card Benefits- ಕಾರ್ಮಿಕ ಕಾರ್ಡ ಇದ್ದರೆ ಯಾವೆಲ್ಲ ಯೋಜನೆಯ ಲಾಭ ಪಡೆಯಬಹುದು?

ಪ್ರಸ್ತುತ ಯೋಜನೆಯ ಪ್ರಯೋಜನ ಪಡೆಯಲು ಇಚ್ಛಿಸುವ ಪೋಷಕರು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಅವಧಿಯೊಳಗೆ ಅರ್ಜಿ(Bhagyalakshmi Scheme Application) ಸಲ್ಲಿಸಬಹುದಾಗಿದೆ. ಮಗುವಿನ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುವ ವ್ಯವಸ್ಥೆ ಇರುವುದರಿಂದ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವುದು ಪ್ರತಿಯೊಬ್ಬ ಅರ್ಹ ಪೋಷಕರ ಜವಾಬ್ದಾರಿಯಾಗಿದೆ.

Bhagyalakshmi Scheme Eligibility-ಅರ್ಜಿ ಸಲ್ಲಿಸಲು ಪ್ರಮುಖ ಷರತ್ತುಗಳು:

ಮಗುವಿಗೆ ಕಡ್ಡಾಯವಾಗಿ 18 ವರ್ಷ ಪೂರ್ಣಗೊಂಡಿರಬೇಕು.

ಮಗು ಕನಿಷ್ಠ 8ನೇ ತರಗತಿಯವರೆಗೆ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.

18 ವರ್ಷಕ್ಕೆ ಮುನ್ನ ಮಗುವಿಗೆ ಮದುವೆಯಾಗಿರಬಾರದು.

ಮಗು ಯಾವುದೇ ಬಾಲಕಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬಾರದು.

ಇದನ್ನೂ ಓದಿ: e-Swathu New Changes-ಇ-ಸ್ವತ್ತು 2.0 ತಂತ್ರಾಂಶದಲ್ಲಿ ಮಹತ್ವದ ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ!

Bhagyalakshmi Scheme in karnataka

ಇದನ್ನೂ ಓದಿ: LIC Policy-ಮಕ್ಕಳ ಶಿಕ್ಷಣಕ್ಕೆ LIC ಯಿಂದ ಮೂರು ಯೋಜನೆಗಳು: ನಿಮ್ಮ ಮಗುವಿನ ಭವಿಷ್ಯಕ್ಕೆ ಯಾವುದು ಬೆಸ್ಟ್?

Documents For Bhagyalakshmi Scheme-ಅಗತ್ಯವಿರುವ ದಾಖಲೆಗಳು:

ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

  • ಮಗು ಮತ್ತು ಪೋಷಕರ ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಪೋಟೋ
  • ವ್ಯಾಸಾಂಗ ಪ್ರಮಾಣಪತ್ರ
  • ಜನನ ಪ್ರಮಾಣಪತ್ರ
  • ಸ್ವಯಂ ಘೋಷಣಾ ಪತ್ರ

Bhagyalakshmi Scheme Application-ಅರ್ಜಿ ಸಲ್ಲಿಸುವ ವಿಧಾನ:

ನಿಮ್ಮ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನೇರವಾಗಿ ತಾಲೂಕು ಮಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (CDPO) ಕಚೇರಿಗೆ ಭೇಟಿ ನೀಡಿ 'ಮೆಚ್ಯೂರಿಟಿ ಕ್ಲೇಮ್ ಫಾರ್ಮ್' ಪಡೆದು ಭರ್ತಿ ಮಾಡಿ ಸಲ್ಲಿಸಬಹುದು.

ಇದನ್ನೂ ಓದಿ: Farmers Helpline-ಬಿತ್ತನೆ ಬೀಜ, ರಸಗೊಬ್ಬರ ಖರೀದಿಯಲ್ಲಿ ವಂಚನೆಯಾದರೆ ತಕ್ಷಣ ಇಲ್ಲಿ ದೂರು ನೀಡಿ!

Bhagyalakshmi Bonad Maturity-ಹಣ ಯಾವಾಗ ಜಮೆಯಾಗುತ್ತದೆ?

ಫಲಾನುಭವಿ ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಬಳಿಕ ಅರ್ಜಿ ಸಲ್ಲಿಸಿ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ, ಅಧಿಕಾರಿಗಳ ಅನುಮೋದನೆಯ ನಂತರ ಅಂದಾಜು 1 ರಿಂದ 2 ತಿಂಗಳ ಒಳಗಾಗಿ ಹಣವು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

Bhagyalakshmi Yojane-ಪ್ರಮುಖ ಸೂಚನೆಗಳು:

ಮಗು 18 ವರ್ಷ ತುಂಬುವ ಮುನ್ನವೇ ಮರಣ ಹೊಂದಿದರೆ ಈ ಹಣ ಲಭ್ಯವಿರುವುದಿಲ್ಲ.

ಒಂದು ವೇಳೆ 18 ವರ್ಷ ತುಂಬಿದ ನಂತರ ಮರಣ ಹೊಂದಿದರೆ ಪೋಷಕರಿಗೆ ಈ ಸೌಲಭ್ಯ ಸಿಗುತ್ತದೆ.

2006ರಲ್ಲಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಪ್ರಾರಂಭಿಸಲಾಯಿತು. 2020-21ರಿಂದ ಈ ಯೋಜನೆಯನ್ನು ಸುಕನ್ಯಾ ಸಮೃದ್ಧಿ ಯೋಜನೆಯಡಿ ಭಾಗ್ಯಲಕ್ಷ್ಮಿ ಯೋಜನೆಯನ್ನೂ ತರಲಾಗಿದ್ದು ನಿಮ್ಮ ಹತ್ತಿರ ಅಂಚೆ ಕಚೇರಿ/ಪೋಸ್ಟ್ ಆಫೀಸ್ ಅನ್ನು ನೇರವಾಗಿ ಭೇಟಿ ಮಾಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯ ಕುರಿತು ಅರ್ಜಿ ಸಲ್ಲಿಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೂಡಲೇ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ CDPO ಕಚೇರಿಯನ್ನು,ಅಂಚೆ ಕಚೇರಿ/ಪೋಸ್ಟ್ ಆಫೀಸ್ ಅನ್ನು ಸಂಪರ್ಕಿಸಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: