Lidkar Competition-ರಾಜ್ಯಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ-2026! ಪ್ರಥಮ ಬಹುಮಾನ ₹50,000!

May 8, 2026 | Siddesh
Lidkar Competition-ರಾಜ್ಯಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ-2026! ಪ್ರಥಮ ಬಹುಮಾನ ₹50,000!
Share Now:

ಬೆಂಗಳೂರು: ರಾಜ್ಯದ ಚರ್ಮ ಕುಶಲಕರ್ಮಿಗಳ ಪ್ರತಿಭೆಯನ್ನು ಗುರುತಿಸಲು ಮತ್ತು ಅವರಿಗೆ ಪ್ರೋತ್ಸಾಹ ನೀಡಲು ಡಾ|| ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು (ಲಿಡ್ಕರ್/Lidkar) ವಿಶೇಷವಾದ 'ರಾಜ್ಯಮಟ್ಟದ ಚರ್ಮ ಪಾದರಕ್ಷೆ ತಯಾರಿಕಾ ಸ್ಪರ್ಧೆ - 2026' ಅನ್ನು ಆಯೋಜಿಸಿದೆ. ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಮತ್ತು ಚರ್ಮೋದ್ಯಮದಲ್ಲಿ ಹೊಸ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಅರ್ಹ ಕುಶಲಕರ್ಮಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನವಾಗಿ 50,000 ರೂ., ದ್ವಿತೀಯ ಬಹುಮಾನವಾಗಿ 30,000 ರೂ. ಹಾಗೂ ತೃತೀಯ ಬಹುಮಾನವಾಗಿ 20,000 ರೂ.ಗಳನ್ನು ನೀಡಲಾಗುವುದು. ಇದರೊಂದಿಗೆ ತಲಾ 10,000 ರೂ.ಗಳಂತೆ ಇಬ್ಬರಿಗೆ ಸಮಾಧಾನಕರ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು. ಕೇವಲ ಬಹುಮಾನ ಮಾತ್ರವಲ್ಲದೆ, ರಾಜ್ಯಮಟ್ಟದ ಈ ವೇದಿಕೆಯು ಕುಶಲಕರ್ಮಿಗಳಿಗೆ ತಮ್ಮ ಕಲಾತ್ಮಕತೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಕಲ್ಪಿಸಲಿದೆ.

ಇದನ್ನೂ ಓದಿ: Bhagyalakshmi Scheme-ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?

ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು 18 ರಿಂದ 55 ವರ್ಷ ವಯೋಮಿತಿಯೊಳಗಿರಬೇಕು. ಬೆಂಗಳೂರಿನ ಕೆಂಗೇರಿಯ ಉಲ್ಲಾಳ ಉಪನಗರದಲ್ಲಿರುವ 'ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಲೆದರ್ & ಫ್ಯಾಷನ್ ಟೆಕ್ನಾಲಜಿ (KILT)' ಕೇಂದ್ರದಲ್ಲಿ ಸ್ಪರ್ಧೆಯು ನಡೆಯಲಿದೆ. ಆಸಕ್ತರು ಅರ್ಜಿ ಸಲ್ಲಿಸಲು ಮೇ 30, 2026 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿಗಮದ ಅಧಿಕೃತ ವೆಬ್‌ಸೈಟ್ www.lidkar.com ಅಥವಾ ಸಹಾಯವಾಣಿ ಸಂಖ್ಯೆ 94823 00400 ಅನ್ನು ಸಂಪರ್ಕಿಸಬಹುದಾಗಿದೆ.

Leather Footwear Making Competition-ಬಹುಮಾನದ ಮೊತ್ತದ ವಿವರ:

1) ಪ್ರಥಮ ಬಹುಮಾನ: ರೂ. 50,000/-
2) ದ್ವಿತೀಯ ಬಹುಮಾನ: ರೂ. 30,000/-
3) ತೃತೀಯ ಬಹುಮಾನ: ರೂ. 20,000/-
4) ಸಮಾಧಾನಕರ ಬಹುಮಾನ: ತಲಾ ರೂ. 10,000/- (ಇಬ್ಬರಿಗೆ)

ಇದನ್ನೂ ಓದಿ: Labour Card Benefits- ಕಾರ್ಮಿಕ ಕಾರ್ಡ ಇದ್ದರೆ ಯಾವೆಲ್ಲ ಯೋಜನೆಯ ಲಾಭ ಪಡೆಯಬಹುದು?

Footwear Making Competitionn

ಇದನ್ನೂ ಓದಿ: LIC Policy-ಮಕ್ಕಳ ಶಿಕ್ಷಣಕ್ಕೆ LIC ಯಿಂದ ಮೂರು ಯೋಜನೆಗಳು: ನಿಮ್ಮ ಮಗುವಿನ ಭವಿಷ್ಯಕ್ಕೆ ಯಾವುದು ಬೆಸ್ಟ್?

Competition Eligibility-ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆಗಳು:

ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದ ಒಳಗಿರಬೇಕು.
ಅರ್ಜಿದಾರರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಚರ್ಮ ಪಾದರಕ್ಷೆ ತಯಾರಿಕಾ ಕೌಶಲ್ಯವನ್ನು ಹೊಂದಿರಬೇಕು.

Footwear Making Competition-ಸ್ಪರ್ಧೆ ನಡೆಯುವ ಯ ಸ್ಥಳ:

ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಲೆದರ್ & ಫ್ಯಾಷನ್ ಟೆಕ್ನಾಲಜಿ (KILT), ಉಲ್ಲಾಳ ಉಪನಗರ, ಕೆಂಗೇರಿ, ಬೆಂಗಳೂರು - 560110.

ಇದನ್ನೂ ಓದಿ: e-Swathu New Changes-ಇ-ಸ್ವತ್ತು 2.0 ತಂತ್ರಾಂಶದಲ್ಲಿ ಮಹತ್ವದ ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ!

Application Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಮೇ 2026

Footwear Making Competition Application-ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಈ Download Application ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ನಿಗಮದ ಜಾಲತಾಣದಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿಯನ್ನು ಭರ್ತಿ ಮಾಡಿ:30.05.2026 ರ ಒಳಗೆ ಕೇಂದ್ರ ಕಚೇರಿ ಡಾ ಬಾಬು ಜಗಜೀವನ ರಾಂ ಲಿಡಕರ್ ಭವನ ಮಿಲ್ಲಸ್ರ್ ಟ್ಯಾಂಕ್ ಬಂಡ್ ಏರಿಯಾ ವಸಂತನಗರ,ಬೆಂಗಳೂರು-560052 ದೂ: 08022288894 ಇಮೇಲ್ ವಿಳಾಸ [email protected] ಇಲ್ಲಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ: https://lidkar.com ವೆಬ್‌ಸೈಟ್ ಗೆ ಭೇಟಿ ನೀಡಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: