e-Swathu New Changes-ಇ-ಸ್ವತ್ತು 2.0 ತಂತ್ರಾಂಶದಲ್ಲಿ ಮಹತ್ವದ ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ!

May 5, 2026 | Siddesh
e-Swathu New Changes-ಇ-ಸ್ವತ್ತು 2.0 ತಂತ್ರಾಂಶದಲ್ಲಿ ಮಹತ್ವದ ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ!
Share Now:

ಗ್ರಾಮೀಣ ಭಾಗದ ಜನರಿಗೆ ಆಸ್ತಿ ದಾಖಲೆಗಳನ್ನು ಸುಲಭವಾಗಿ ಮತ್ತು ಪಾರದರ್ಶಕವಾಗಿ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಇ-ಸ್ವತ್ತು 2.0 ತಂತ್ರಾಂಶದಲ್ಲಿ(e-Swathu 2.0) ಮಹತ್ವದ ಸುಧಾರಣೆಗಳನ್ನು ತಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಈ ಹೊಸ ಉಪಕ್ರಮವು ಸಾರ್ವಜನಿಕರಿಗೆ ತಮ್ಮ ಆಸ್ತಿ ಹಕ್ಕುಗಳ ದಾಖಲಾತಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಿದೆ. ಆಸ್ತಿ ನೋಂದಣಿ, ಮಾಲೀಕತ್ವದ ಬದಲಾವಣೆ ಮತ್ತು ದಾಖಲೆಗಳ ವಿತರಣೆಯಲ್ಲಿ ಎದುರಾಗುತ್ತಿದ್ದ ವಿಳಂಬವನ್ನು ತಪ್ಪಿಸಲು ಈ ತಂತ್ರಾಂಶವು ಸಹಕಾರಿಯಾಗಿದೆ.

ಇತ್ತೀಚಿನ ಅಪ್‌ಡೇಟ್‌ನಂತೆ, ಗ್ರಾಮ ಪಂಚಾಯಿತಿ ಹಂತದಲ್ಲಿಯೇ ಅನೇಕ ಸೇವೆಗಳನ್ನು(e-Swathu Application) ಲಭ್ಯವಾಗುವಂತೆ ಮಾಡಲಾಗಿದ್ದು, ನಾಗರಿಕರು ತಾಲ್ಲೂಕು ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ. ಪ್ರಮುಖವಾಗಿ ಹೊಸ ಬಡಾವಣೆಗಳ ಅನುಮೋದನೆ, ನಮೂನೆ-11ಬಿ ಇಂದ ನಮೂನೆ-11ಎ ಗೆ ವರ್ಗಾವಣೆ ಸೇರಿದಂತೆ ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಈ ಹೊಸ ಆವೃತ್ತಿಯಲ್ಲಿ ಪರಿಹರಿಸಲಾಗಿದೆ. ಇದು ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತಕ್ಕೆ ನಾಂದಿ ಹಾಡಿದೆ.

ಇದನ್ನೂ ಓದಿ: Farmers Helpline-ಬಿತ್ತನೆ ಬೀಜ, ರಸಗೊಬ್ಬರ ಖರೀದಿಯಲ್ಲಿ ವಂಚನೆಯಾದರೆ ತಕ್ಷಣ ಇಲ್ಲಿ ದೂರು ನೀಡಿ!

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಇ-ಸ್ವತ್ತು 2.0 ಪ್ರಗತಿಯ ಕುರಿತು ಮಾಹಿತಿ ಹಂಚಿಕೊಂಡಿದ್ದು, "ಇ-ಸ್ವತ್ತು 2.0 ತಂತ್ರಾಂಶದಡಿ ಸ್ವೀಕರಿಸುತ್ತಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ತೀವ್ರಗೊಳಿಸಲಾಗಿದೆ. ಈವರೆಗೆ ಒಟ್ಟು 1,40,719 ಅರ್ಜಿಗಳನ್ನು ಯಶಸ್ವಿಯಾಗಿ ಅನುಮೋದಿಸಿ, ವಿಲೇವಾರಿ ಮಾಡಲಾಗಿದೆ" ಎಂದು ತಿಳಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಲಕ್ಷಾಂತರ ಆಸ್ತಿ ಮಾಲೀಕರಿಗೆ ಪ್ರಯೋಜನವಾಗುತ್ತಿದೆ.

What Is e-Swathu-ಇ-ಸ್ವತ್ತು ದಾಖಲೆ ಎಂದರೇನು?

ಇ-ಸ್ವತ್ತು (e-Swathu) ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆನ್‌ಲೈನ್ ಪೋರ್ಟಲ್ ಆಗಿದ್ದು, ಗ್ರಾಮೀಣ ಪ್ರದೇಶದ ಆಸ್ತಿಗಳ ಮಾಲೀಕತ್ವದ ವಿವರಗಳನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸುತ್ತದೆ. ಇದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ಸಂಬಂಧಿಸಿದ ನಮೂನೆ-9 ಮತ್ತು ನಮೂನೆ-11 ದಾಖಲೆಗಳನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: Fertilizer Price-ರಸಗೊಬ್ಬರ ಪರಿಷ್ಕೃತ ದರಪಟ್ಟಿ ಬಿಡುಗಡೆ! ಪೋಟ್ಯಾಶ್ ಸೇರಿ ಇನ್ನಿತರೆ ಗೊಬ್ಬರ ದರ ಏರಿಕೆ!

E-swathu Document Benefits-ಇ-ಸ್ವತ್ತು ದಾಖಲೆ ಪ್ರಯೋಜನಗಳೇನು?

  • ಆಸ್ತಿಯ ಮಾಲೀಕತ್ವಕ್ಕೆ ಕಾನೂನುಬದ್ಧ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ.
  • ಬ್ಯಾಂಕ್ ಸಾಲ ಪಡೆಯಲು ಮತ್ತು ಆಸ್ತಿ ನೋಂದಣಿ ಸಮಯದಲ್ಲಿ ಅತ್ಯಗತ್ಯ.
  • ಆಸ್ತಿ ವಿವಾದಗಳನ್ನು ತಡೆಯಲು ಮತ್ತು ಪಾರದರ್ಶಕ ವ್ಯವಹಾರಕ್ಕೆ ಸಹಕಾರಿ.
  • ಡಿಜಿಟಲ್ ಸಹಿ ಹೊಂದಿರುವ ಅಧಿಕೃತ ದಾಖಲೆಗಳನ್ನು ಆನ್‌ಲೈನ್ ಮೂಲಕವೇ ಪಡೆಯಬಹುದು.

ಇ-ಸ್ವತ್ತು 2.0 ತಂತ್ರಾಂಶದ ಅಡಿಯಲ್ಲಿ ಸ್ವೀಕರಿಸಲಾದ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಸರ್ಕಾರವು ತೀವ್ರಗೊಳಿಸಿದೆ. ಈವರೆಗೆ ಒಟ್ಟು 1,40,719 ಅರ್ಜಿಗಳನ್ನು ಯಶಸ್ವಿಯಾಗಿ ಅನುಮೋದಿಸಿ ವಿಲೇವಾರಿ ಮಾಡಲಾಗಿದೆ. -ಸಚಿವ ಪ್ರಿಯಾಂಕ್ ಖರ್ಗೆ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

ಇದನ್ನೂ ಓದಿ: LIC Policy-ಮಕ್ಕಳ ಶಿಕ್ಷಣಕ್ಕೆ LIC ಯಿಂದ ಮೂರು ಯೋಜನೆಗಳು: ನಿಮ್ಮ ಮಗುವಿನ ಭವಿಷ್ಯಕ್ಕೆ ಯಾವುದು ಬೆಸ್ಟ್?

e-Swathu Portal

ಇದನ್ನೂ ಓದಿ: Labour Department-ಸಚಿವ ಸಂಪುಟದಲ್ಲಿ ಮಹ್ವತದ ನಿರ್ಣಯ 115.8 ಕೋಟಿ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ವಿತರಣೆಗೆ ತೀರ್ಮಾನ!

How To Apply For e-Swathu-ಎಲ್ಲಿ ಅರ್ಜಿ ಸಲ್ಲಿಸಬೇಕು?

ನಾಗರಿಕರು ಇ-ಸ್ವತ್ತು ಸೇವೆಗಳಿಗಾಗಿ ಈ ಕೆಳಗಿನ ಮೂಲಗಳ ಮೂಲಕ ಅರ್ಜಿ ಸಲ್ಲಿಸಬಹುದು:

  • ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ.
  • ಇ-ಸ್ವತ್ತು 2.0 ತಂತ್ರಾಂಶದ ಸಿಟಿಜನ್ ಇಂಟರ್ ಫೇಸ್ ಮೂಲಕ ಸ್ವತಃ ಅರ್ಜಿ ಸಲ್ಲಿಸಲು ಅವಕಾಶವಿದೆ.

E-Swathu Application Documents-ಅಗತ್ಯ ದಾಖಲೆಗಳು ಯಾವುವು?

ಗ್ರಾಮ ಪಂಚಾಯತಿಯಲ್ಲಿ ನಾಗರಿಕರು ಇ-ಸ್ವತ್ತು ದಾಖಲೆಯನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಶ್ಯವಿರುವ ದಾಖಲೆಗಳ ಪಟ್ಟಿ ಹೀಗಿದೆ:

  • ಅರ್ಜಿದಾರರ ಆಧಾರ್ ಕಾರ್ಡ್.
  • ಬ್ಯಾಂಕ್ ಪಾಸ್ ಬುಕ್.
  • ಜಾಗದಲ್ಲಿ ಅರ್ಜಿದಾರ ನಿಂತು ಪೋಟೋ.
  • ಅರ್ಜಿದಾರರಿಗೆ ಸಂಬಂದಪಟ್ಟ ಕುಟುಂಬದ ವಂಶವೃಕ್ಷ.
  • ಕಂದಾಯ ರಶೀದಿ.

e-Swathu Website-ಅಧಿಕೃತ ಇ-ಸ್ವತ್ತು 2.0 ಜಾಲತಾಣವನ್ನು ಪ್ರವೇಶ ಮಾಡಲು ಇಲ್ಲಿ ಕ್ಲಿಕ್ ಮಾಡಿ: e-Swathu 2.0 Portal

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: