Fertilizer Price-ರಸಗೊಬ್ಬರ ಪರಿಷ್ಕೃತ ದರಪಟ್ಟಿ ಬಿಡುಗಡೆ! ಪೋಟ್ಯಾಶ್ ಸೇರಿ ಇನ್ನಿತರೆ ಗೊಬ್ಬರ ದರ ಏರಿಕೆ!

May 3, 2026 | Siddesh
Fertilizer Price-ರಸಗೊಬ್ಬರ ಪರಿಷ್ಕೃತ ದರಪಟ್ಟಿ ಬಿಡುಗಡೆ! ಪೋಟ್ಯಾಶ್ ಸೇರಿ ಇನ್ನಿತರೆ ಗೊಬ್ಬರ ದರ ಏರಿಕೆ!
Share Now:

ಬೆಂಗಳೂರು: ರಾಜ್ಯದ ರೈತ ಬಾಂಧವರಿಗೆ ಕೃಷಿ ಹಂಗಾಮಿನ ಆರಂಭದಲ್ಲೇ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪ್ರಮುಖ ರಸಗೊಬ್ಬರ ತಯಾರಿಕಾ ಕಂಪನಿಗಳು (PPL/MCFL) ತಮ್ಮ ಉತ್ಪನ್ನಗಳ ಪರಿಷ್ಕೃತ ದರಪಟ್ಟಿಯನ್ನು(Fertilizer Price) ಬಿಡುಗಡೆ ಮಾಡಿದ್ದು, ಪೋಟ್ಯಾಶ್ ಸೇರಿದಂತೆ ವಿವಿಧ ಕಾಂಪ್ಲೆಕ್ಸ್ ಗೊಬ್ಬರಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳವಾಗಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ವಿಶ್ಲೇಷಿಸಲಾಗಿದೆ.

ಬಿಡುಗಡೆಯಾದ ಹೊಸ ದರಪಟ್ಟಿಯ ಅನ್ವಯ, ಪೋಟ್ಯಾಶ್ (MOP) ಮತ್ತು 10-26-26 ದರದಂತಹ ಪ್ರಮುಖ ಗೊಬ್ಬರಗಳ ಬೆಲೆ ಪ್ರತಿ ಚೀಲಕ್ಕೆ ಸರಾಸರಿ 125 ರಿಂದ 250 ರೂಪಾಯಿಗಳಷ್ಟು ಹೆಚ್ಚಾಗಿದೆ. ಈ ಮೊದಲು ಕಡಿಮೆ ದರದಲ್ಲಿದ್ದ ಗೊಬ್ಬರಗಳು(Fertilizer) ಈಗ ರೈತರಿಗೆ ಆರ್ಥಿಕ ಹೊರೆಯಾಗಲಿವೆ. ಹಳೆಯ ಸ್ಟಾಕ್ ಮುಗಿದ ನಂತರ ಮಾರುಕಟ್ಟೆಗೆ ಬರುವ ಹೊಸ ಗೊಬ್ಬರದ ಚೀಲಗಳು ಈ ಪರಿಷ್ಕೃತ ಬೆಲೆಯಲ್ಲಿ ಮಾರಾಟವಾಗಲಿವೆ ಎಂದು ಕಂಪನಿಗಳು ಸ್ಪಷ್ಟಪಡಿಸಿವೆ.

ಇದನ್ನೂ ಓದಿ: Labour Department-ಸಚಿವ ಸಂಪುಟದಲ್ಲಿ ಮಹ್ವತದ ನಿರ್ಣಯ 115.8 ಕೋಟಿ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ವಿತರಣೆಗೆ ತೀರ್ಮಾನ!

ಸರ್ಕಾರವು ಗೊಬ್ಬರದ ಮೇಲೆ ಸಬ್ಸಿಡಿ(Fertilizer Subsidy) ನೀಡುತ್ತಿದ್ದರೂ ಸಹ, ಮಾರುಕಟ್ಟೆಯ ಏರಿಳಿತಗಳಿಂದಾಗಿ ಈ ಬೆಲೆ ಏರಿಕೆ ಅನಿವಾರ್ಯವಾಗಿದೆ. ರೈತರು ಬಿತ್ತನೆ ಮತ್ತು ಗೊಬ್ಬರ ಹಾಕುವ ಕಾರ್ಯಕ್ಕೆ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ ದರ ಏರಿಕೆಯಾಗಿರುವುದು ಕೃಷಿ ವೆಚ್ಚವನ್ನು ಹೆಚ್ಚಿಸಲಿದೆ. ಆದ್ದರಿಂದ ರೈತರು ಜಾಗರೂಕರಾಗಿ, ಮಣ್ಣಿನ ಪರೀಕ್ಷೆಯ ವರದಿಯ ಆಧಾರದ ಮೇಲೆ ಅಗತ್ಯವಿರುವಷ್ಟು ಮಾತ್ರ ರಸಗೊಬ್ಬರವನ್ನು ಬಳಸುವ ಮೂಲಕ ತಮ್ಮ ವೆಚ್ಚವನ್ನು ನಿಯಂತ್ರಿಸಿಕೊಳ್ಳಲು ಸಲಹೆ ನೀಡಲಾಗಿದೆ.

Fertilizer Price List-ಗೊಬ್ಬರವಾರು ಪರಿಷ್ಕೃತ ದರಪಟ್ಟಿ (PPL/MCFL):

ಉತ್ಪನ್ನದ ಹೆಸರುಹಳೆಯ ದರ (Old MRP)ಹೊಸ ದರ (New MRP)ವ್ಯತ್ಯಾಸ
14-35-1421752400+ 225
10-26-261900/20252250+ 225/350
12-32-161900/20252250+ 225/350
19-19-191950/20752300+ 225/350
20-20-0-131450/15001800+ 300
MOP (ಪೋಟ್ಯಾಶ್)1800/18501975+ 125/175
DAP / I DAP13501350ಬದಲಾವಣೆ ಇಲ್ಲ
Urea (ಯೂರಿಯಾ)266266ಬದಲಾವಣೆ ಇಲ್ಲ
SSP 535 / 575535 / 575ಬದಲಾವಣೆ ಇಲ್ಲ

ಇದನ್ನೂ ಓದಿ: LPG Price Hike-ವಾಣಿಜ್ಯ ಸಿಲಿಂಡರ್ ಬೆಲೆ 993 ರೂ. ದಿಢೀರ್ ಏರಿಕೆ: ಹೋಟೆಲ್ ಉದ್ಯಮಕ್ಕೆ ಬೆಲೆ ಏರಿಕೆಯ ಬಿಸಿ!

"ರೈತರು ಕೃಷಿಯಲ್ಲಿ ಅಧಿಕ ಲಾಭ ಗಳಿಸಲು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಮಣ್ಣು ಪರೀಕ್ಷೆಯು ನಿಮ್ಮ ಜಮೀನಿಗೆ ಯಾವ ಗೊಬ್ಬರ ಎಷ್ಟು ಬೇಕು ಎಂಬುದನ್ನು ನಿಖರವಾಗಿ ತಿಳಿಸುತ್ತದೆ. ಇದರಿಂದ ಅನಗತ್ಯ ಗೊಬ್ಬರದ ವೆಚ್ಚ ತಪ್ಪುತ್ತದೆ. ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಣ್ಣು ಪರೀಕ್ಷೆ ಹಾಗೂ ರಸಗೊಬ್ಬರಗಳ ಸಮರ್ಪಕ ಬಳಕೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು."-ಜಂಟಿ ಕೃಷಿ ನಿರ್ದೇಶಕರು,ಹಾವೇರಿ

ಇದನ್ನೂ ಓದಿ: LIC Policy-ಮಕ್ಕಳ ಶಿಕ್ಷಣಕ್ಕೆ LIC ಯಿಂದ ಮೂರು ಯೋಜನೆಗಳು: ನಿಮ್ಮ ಮಗುವಿನ ಭವಿಷ್ಯಕ್ಕೆ ಯಾವುದು ಬೆಸ್ಟ್?

Fertilizer Price

Important Tips For Farmers-ರೈತರಿಗೆ ಪ್ರಮುಖ ಸಲಹೆಗಳು:

ಮಣ್ಣಿನ ಪರೀಕ್ಷೆ:

ಗೊಬ್ಬರ ಹಾಕುವ ಮೊದಲು ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ, ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆಗೆ ಅನುಗುಣವಾಗಿ ಮಾತ್ರ ಗೊಬ್ಬರ ಬಳಸಿ.

ಸಮಗ್ರ ಪೋಷಕಾಂಶ ನಿರ್ವಹಣೆ:

ಕೇವಲ ರಾಸಾಯನಿಕ ಗೊಬ್ಬರವನ್ನೇ ಅವಲಂಬಿಸದೆ, ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ ಮತ್ತು ಹಸಿರೆಲೆ ಗೊಬ್ಬರವನ್ನು ಅಧಿಕವಾಗಿ ಬಳಸಿ.

ಇದನ್ನೂ ಓದಿ: Fast Food Training-ಉಚಿತ ಫಾಸ್ಟ್ ಫುಡ್ ಉದ್ಯಮಿ ತರಬೇತಿಗೆ ಅರ್ಜಿ ಆಹ್ವಾನ!

ನ್ಯಾನೋ ಯೂರಿಯಾ ಬಳಕೆ:

ಸಾಂಪ್ರದಾಯಿಕ ಯೂರಿಯಾ ಚೀಲಗಳ ಬದಲು ದ್ರವ ರೂಪದ ನ್ಯಾನೋ ಯೂರಿಯಾ ಬಳಸುವುದರಿಂದ ಹಣ ಉಳಿತಾಯವಾಗುವುದಲ್ಲದೆ ಮಣ್ಣಿನ ಆರೋಗ್ಯವೂ ವೃದ್ಧಿಸುತ್ತದೆ.

ಸರಿಯಾದ ಸಮಯ:

ಗೊಬ್ಬರವನ್ನು ಬೆಳೆಗಳಿಗೆ ಅಗತ್ಯವಿರುವ ಹಂತದಲ್ಲಿ ಮಾತ್ರ ನೀಡಿ, ಮಳೆಯ ಮುನ್ಸೂಚನೆ ಗಮನಿಸಿ ಬಳಕೆ ಮಾಡಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: