Sheep Farming Training-ಬೆಂಗಳೂರು ಕೃಷಿ ವಿವಿಯಿಂದ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!

August 20, 2026 | Siddesh
Sheep Farming Training-ಬೆಂಗಳೂರು ಕೃಷಿ ವಿವಿಯಿಂದ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!
Share Now:

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ (GKVK) ವತಿಯಿಂದ ರೈತರು, ಯುವಕರು ಮತ್ತು ಸ್ವಯಂ ಉದ್ಯೋಗ ಆಕಾಂಕ್ಷಿಗಳಿಗಾಗಿ ‘ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ’ ಕುರಿತು 4 ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಉಪಕಸುಬಾಗಿ ಅಥವಾ ಪ್ರಮುಖ ಉದ್ಯೋಗವಾಗಿ ಕುರಿ-ಮೇಕೆ ಸಾಕಾಣಿಕೆ ಆರಂಭಿಸಲು ಬಯಸುವವರಿಗೆ ಈ ತರಬೇತಿಯು ಅತ್ಯಂತ ಉಪಯುಕ್ತವಾಗಿದ್ದು, ಆಧುನಿಕ ತಂತ್ರಜ್ಞಾನ ಹಾಗೂ ನಿರ್ವಹಣಾ ವಿಧಾನಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುತ್ತದೆ.

ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ತರಬೇತಿಯಲ್ಲಿ ಕುರಿ ಮತ್ತು ಮೇಕೆ ತಳಿಗಳ ಆಯ್ಕೆ, ಕೊಟ್ಟಿಗೆ ನಿರ್ಮಾಣ, ಪಶು ಆಹಾರ ತಯಾರಿಕೆ, ರೋಗ ನಿಯಂತ್ರಣ, ಸರ್ಕಾರಿ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳ ಕುರಿತು ವಿಷಯ ತಜ್ಞರಿಂದ ನೇರ ಮಾರ್ಗದರ್ಶನ ಸಿಗಲಿದೆ. ಜೊತೆಗೆ ಕಾರ್ಯಕ್ರಮದ ಭಾಗವಾಗಿ ಕ್ಷೇತ್ರ ಭೇಟಿಯನ್ನು ಕೂಡ ಆಯೋಜಿಸಲಾಗಿದೆ.

ಇದನ್ನೂ ಓದಿ: Parivartan Programme-ಪರಿವರ್ತನ್ ECSS ಕಾರ್ಯಕ್ರಮ ವತಿಯಿಂದ ₹18,000 ವಿದ್ಯಾರ್ಥಿವೇತನ!ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!

ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿರುವ ‘ರೈತ ತರಬೇತಿ ಸಂಸ್ಥೆ’ಯಲ್ಲಿ ಈ ತರಬೇತಿ ನಡೆಯಲಿದ್ದು, ಮೊದಲ 20 ಅಭ್ಯರ್ಥಿಗಳಿಗೆ ಮಾತ್ರ ಆದ್ಯತೆಯ ಮೇಲೆ ಅವಕಾಶ ನೀಡಲಾಗುತ್ತದೆ. ಆಸಕ್ತರು ಆಗಸ್ಟ್ 26, 2026ರ ಒಳಗಾಗಿ ನಿಗದಿತ ಶುಲ್ಕ ಪಾವತಿಸಿ ತಮ್ಮ ಹೆಸರನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಈ ತರಬೇತಿಯ ಕುರಿತಾದ ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ:

Sheep Farming Training Details-ತರಬೇತಿ ವಿವರ:

  • ತರಬೇತಿ ವಿಷಯ: ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ (4 ದಿನಗಳ ತರಬೇತಿ)
  • ತರಬೇತಿ ನಡೆಯುವ ದಿನಾಂಕ: 01 ಸೆಪ್ಟೆಂಬರ್ 2026 ರಿಂದ 04 ಸೆಪ್ಟೆಂಬರ್ 2026
  • ತರಬೇತಿ ಸಮಯ: ಬೆಳಿಗ್ಗೆ 9:30 ರಿಂದ ಸಾಯಂಕಾಲ 4:30 ರವರೆಗೆ
  • ತರಬೇತಿ ಕೇಂದ್ರ / ವಿಳಾಸ: ರೈತ ತರಬೇತಿ ಸಂಸ್ಥೆ, ವಿಸ್ತರಣಾ ನಿರ್ದೇಶನಾಲಯ, ಜಿಕೆವಿಕೆ, ಬೆಂಗಳೂರು.

ಇದನ್ನೂ ಓದಿ: Reliance Foundation Scholarship-ಪದವಿ ವಿದ್ಯಾರ್ಥಿಗಳಿಗೆ ₹2 ಲಕ್ಷದವರೆಗೆ ವಿದ್ಯಾರ್ಥಿವೇತನ ಪಡೆಯಲು ಅವಕಾಶ!

Who Can Apply-ಯಾರೆಲ್ಲ ತರಬೇತಿಯಲ್ಲಿ ಭಾಗವಹಿಸಬಹುದು?

ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ತರಬೇತಿಯನ್ನು ಪಡೆಯಲು ನೋಂದಣಿಯನ್ನು ಮಾಡಿಕೊಳ್ಳಬಹುದು.

Sheep Farming Training Details

ತರಬೇತಿಯಲ್ಲಿ ಯಾವೆಲ್ಲ ವಿಷಯದ ಬಗ್ಗೆ ತಿಳಿಸಿಕೊಡಲಾಗುತ್ತದೆ?

1) ತಳಿಗಳು ಮತ್ತು ಸಂವರ್ಧನೆ: ವಿವಿಧ ತಳಿಯ ಕುರಿ ಮತ್ತು ಮೇಕೆಗಳು ಹಾಗೂ ಅವುಗಳ ತಳಿ ಸಂವರ್ಧನೆ ವಿಧಾನಗಳು.

2) ಕೊಟ್ಟಿಗೆ ನಿರ್ಮಾಣ: ಆಧುನಿಕ ಮಾದರಿಯ ಕೊಟ್ಟಿಗೆ ನಿರ್ಮಾಣ ಮತ್ತು ವೈಜ್ಞಾನಿಕ ನಿರ್ವಹಣಾ ಪದ್ಧತಿಗಳು.

3) ಪಶು ಆಹಾರ ಮತ್ತು ಪೋಷಣೆ: ಪೌಷ್ಟಿಕ ಪಶು ಆಹಾರ ತಯಾರಿಕೆ ಹಾಗೂ ಪೋಷಣಾ ನಿರ್ವಹಣೆ.

4) ರೋಗಗಳ ನಿಯಂತ್ರಣ: ಕುರಿ-ಮೇಕೆಗಳಿಗೆ ಬರುವ ಪ್ರಮುಖ ರೋಗಗಳು, ಲಸಿಕೆಗಳು ಹಾಗೂ ಹತೋಟಿ ಕ್ರಮಗಳು.

5) ಮೇವಿನ ಬೆಳೆಗಳು: ಮೇವಿನ ಮರಗಳ ಪ್ರಾಮುಖ್ಯತೆ ಮತ್ತು ಮರಗಳ ಉತ್ಪಾದನಾ ತಂತ್ರಜ್ಞಾನ.

6) ಯೋಜನೆಗಳು ಮತ್ತು ಬ್ಯಾಂಕ್ ಸಾಲ: ಸರ್ಕಾರಿ ಯೋಜನೆ ಮಾಹಿತಿ ಡಿಪಿಆರ್ (ಯೋಜನಾ ವರದಿ) ತಯಾರಿಕೆ.

7) ಕ್ಷೇತ್ರ ಭೇಟಿ: ಪ್ರಾಯೋಗಿಕ ಜ್ಞಾನಕ್ಕಾಗಿ ಯಶಸ್ವಿ ಕುರಿ-ಮೇಕೆ ಫಾರ್ಮ್‌ಗಳಿಗೆ ಕ್ಷೇತ್ರ ಭೇಟಿ (Field Visit).

Last Date-ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ- 26 ಆಗಸ್ಟ್ 2026

ಇದನ್ನೂ ಓದಿ: Farmer Award Application-ಮುಂಗಾರು ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನ!ರೂ 50,000/- ದ ವರೆಗೆ ಬಹುಮಾನ ನಿಗದಿ!

Sheep Farming Training Fee-ತರಬೇತಿ ಶುಲ್ಕ:

ತರಬೇತಿ ಶುಲ್ಕ: ರೂ. 4,130/- (ರೂ. 4,130 ಮಾತ್ರ)

ತರಬೇತಿಯಲ್ಲಿ ಭಾಗವಹಿಸಲು ಪ್ರಮುಖ ಸೂಚನೆಗಳು:

  • ಶುಲ್ಕವನ್ನು ಬ್ಯಾಂಕ್‌ಗೆ ಪಾವತಿಸುವ ಮೊದಲು ನೀಡಲಾದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಖಚಿತಪಡಿಸಿಕೊಳ್ಳಬೇಕು.
  • ಶುಲ್ಕ ಪಾವತಿಸಿದ ನಂತರ ಬ್ಯಾಂಕ್ ಸ್ಕ್ರೀನ್‌ಶಾಟ್/ರಶೀದಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ನೀಡಲಾದ ವಾಟ್ಸಾಪ್/ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು.
  • ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿಸಲಾಗುವುದಿಲ್ಲ (Non-refundable).

ತರಬೇತಿ ಅವಧಿಯಲ್ಲಿ ವಸತಿ ವ್ಯವಸ್ಥೆ ಬೇಕಿದ್ದಲ್ಲಿ ಹೆಚ್ಚುವರಿ ಶುಲ್ಕ ಭರಿಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತರಬೇತಿಯಲ್ಲಿ ಭಾಗವಹಿಸಲು ಮತ್ತು ಈ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕಚೇರಿ ಸಂಖ್ಯೆ- 080-23626455 ಅಥವಾ ತರಬೇತಿ ಸಂಯೋಜಕರಾದ ಡಾ. ಶಿವಶಂಕರ್. ಎಂ 9964283501 ಗೆ ಸಂಪರ್ಕಿಸುವಂತ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: