Fertilizer Booking App-ಡಿಸೆಂಬರ್ 1ರಿಂದ ಆ್ಯಪ್ ಮೂಲಕ ಗೊಬ್ಬರ ಖರೀದಿ! ಇಲ್ಲಿದೆ ಸಂಪೂರ್ಣ ವಿವರ!

November 26, 2026 | Siddesh
Fertilizer Booking App-ಡಿಸೆಂಬರ್ 1ರಿಂದ ಆ್ಯಪ್ ಮೂಲಕ ಗೊಬ್ಬರ ಖರೀದಿ! ಇಲ್ಲಿದೆ ಸಂಪೂರ್ಣ ವಿವರ!
Share Now:

ರೈತರು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ರಸಗೊಬ್ಬರವನ್ನು ಖರೀದಿಸಲು ಇನ್ನು ಮುಂದೆ ಅಂಗಡಿಗಳಿಗೆ(Fertilizer Booking App) ಅಲೆದಾಡುವ ಅಗತ್ಯ ಕಡಿಮೆಯಾಗಲಿದೆ. ರೈತರು ತಮ್ಮ ಮೊಬೈಲ್ ಮೂಲಕವೇ ರಸಗೊಬ್ಬರದ ಬೇಡಿಕೆಯನ್ನು ಸಲ್ಲಿಸಿ, ಮುಂಗಡವಾಗಿ ಗೊಬ್ಬರ ಕಾಯ್ದಿರಿಸುವ ಹೊಸ ವ್ಯವಸ್ಥೆಯನ್ನು ಕೃಷಿ ಇಲಾಖೆಯಿಂದ ಜಾರಿಗೆ ತರಲಾಗಿದೆ.

ಕೇಂದ್ರ ಸರ್ಕಾರದ 'ಫಾರ್ಮರ್ಸ್ ಫಾರ್ಮ್ ಫರ್ಟಿಲೈಸರ್ ಸೇಲ್' (FFS) ಮೊಬೈಲ್ ಆ್ಯಪ್ ಮೂಲಕ ರಸಗೊಬ್ಬರ ಕಾಯ್ದಿರಿಸುವಿಕೆ(Fertilizer Shop) ಹಾಗೂ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯು ಈಗ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಅನುಷ್ಠಾನಗೊಳ್ಳಲಿದ್ದು, ಡಿಸೆಂಬರ್ 1ರಿಂದ ರೈತರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಇದನ್ನೂ ಓದಿ: Agriculture Machinery Subsidy-ಪವರ್ ಸ್ಪ್ರ‍ೇಯರ್, ಪಂಪ್ ಸೆಟ್ ಸೇರಿದಂತೆ ವಿವಿಧ ಉಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಲು ಅರ್ಜಿ ಆಹ್ವಾನ!

ಈಗಾಗಲೇ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಪ್ರಸ್ತುತ ರಾಜ್ಯದ ಇತರ ಜಿಲ್ಲೆಗಳಿಗೂ ಹಂತ ಹಂತವಾಗಿ ವಿಸ್ತರಿಸಲಾಗುತ್ತಿದ್ದು, ರೈತರಿಗೆ ರಸಗೊಬ್ಬರ ಖರೀದಿ(Fertilizer Booking App In Kannada) ಪ್ರಕ್ರಿಯೆಯನ್ನು ಸರಳಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಅಪ್ಲಿಕೇಶನ್ ಬಳಸುವುದು ಹೇಗೆ? ರೈತರಿಗೆ ಇದರಿಂದ ಯಾವೆಲ್ಲ ಪ್ರಯೋಜನಗಳಿವೆ? ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

Fertilizer Booking App Benefits-ರೈತರಿಗೆ ಈ ಯೋಜನೆಯಿಂದ ಏನೆಲ್ಲ ಪ್ರಯೋಜನ?

ರೈತರು ತಮಗೆ ಅಗತ್ಯವಿರುವ ರಸಗೊಬ್ಬರವನ್ನು ಸಮಯಕ್ಕೆ ಸರಿಯಾಗಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಈ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ವ್ಯವಸ್ಥೆಯಿಂದ ರೈತರು ತಮ್ಮ ಮೊಬೈಲ್ ಮೂಲಕವೇ ಗೊಬ್ಬರದ ಬೇಡಿಕೆಯನ್ನು ಸಲ್ಲಿಸಬಹುದು.

1) ಮುಂಗಡವಾಗಿ ಗೊಬ್ಬರ ಕಾಯ್ದಿರಿಸುವಿಕೆ ರೈತರು ತಮ್ಮ ಜಮೀನು ಮತ್ತು ಬೆಳೆ ವಿವರಗಳನ್ನು ನಮೂದಿಸಿ, ತಮಗೆ ಅಗತ್ಯವಿರುವ ರಸಗೊಬ್ಬರದ ಪ್ರಮಾಣವನ್ನು ಮುಂಗಡವಾಗಿ ಕಾಯ್ದಿರಿಸಬಹುದು.

2) ಗೊಬ್ಬರ ಖರೀದಿ ಸುಲಭ ಗೊಬ್ಬರ ಖರೀದಿಗಾಗಿ ಅಂಗಡಿಗಳಿಗೆ ಅಲೆದಾಡುವ ಸಮಯ ಮತ್ತು ಶ್ರಮವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: Gold Loan-ಬ್ಯಾಂಕ್ ನಲ್ಲಿ ಗೋಲ್ಡ್ ಲೋನ್ ತೆಗೆದುಕೊಂಡವರು ತಪ್ಪದೇ ಈ ಮಾಹಿತಿ ನೋಡಿ!

3) ಪಾರದರ್ಶಕ ವಹಿವಾಟು ಈ ವ್ಯವಸ್ಥೆಯಡಿ ಪ್ರತಿ ವಹಿವಾಟು ಡಿಜಿಟಲ್ ವೇದಿಕೆಯ ಮೂಲಕ ನಡೆಯುವುದರಿಂದ ಗೊಬ್ಬರ ಮಾರಾಟದ ನಿಖರ ಲೆಕ್ಕಪತ್ರ ಲಭ್ಯವಾಗಲಿದೆ.

4) ಗೊಬ್ಬರದ ಕೊರತೆ ತಪ್ಪಿಸಲು ಸಹಕಾರಿ ರೈತರ ಬೇಡಿಕೆಯ ಮಾಹಿತಿಯ ಆಧಾರದ ಮೇಲೆ ಗೊಬ್ಬರದ ದಾಸ್ತಾನು ನಿರ್ವಹಿಸಲು ಅನುಕೂಲವಾಗಲಿದೆ. ಇದರಿಂದ ಅಗತ್ಯವಿರುವ ಸಮಯದಲ್ಲಿ ಗೊಬ್ಬರ ಪೂರೈಕೆಗೆ ನೆರವಾಗಲಿದೆ.

5) ಅನಗತ್ಯ ಗೊಂದಲಗಳಿಗೆ ಕಡಿವಾಣ ಡಿಜಿಟಲ್ ವ್ಯವಸ್ಥೆಯ ಮೂಲಕ ಗೊಬ್ಬರ ವಿತರಣೆ ನಡೆಯುವುದರಿಂದ ಮಾರಾಟ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ ಮತ್ತು ಅನಗತ್ಯ ವಿವಾದಗಳನ್ನು ತಡೆಯಲು ಸಹಕಾರಿಯಾಗಲಿದೆ.

ಇದನ್ನೂ ಓದಿ: Namma Mane Yojane-ಮುಖ್ಯಮಂತ್ರಿ ನಮ್ಮ ಮನೆ ಯೋಜನೆ: ಅರ್ಹ ಕುಟುಂಬಗಳಿಗೆ ಉಚಿತ ನಿವೇಶನ!

Fertilizer Booking App Deatils

How To Book Fertilizer On Mobile App-ಮೊಬೈಲ್ ಮೂಲಕ ಗೊಬ್ಬರ ಖರೀದಿ ಮಾಡುವುದು ಹೇಗೆ?

ರೈತರು ತಮ್ಮ ಮೊಬೈಲ್ ಮೂಲಕ ಗೊಬ್ಬರವನ್ನು ಬುಕ್ ಮಾಡಲು ತಮ್ಮ ಮೊಬೈಲ್ ಮೂಲಕ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಅಗತ್ಯ ವಿವರವನ್ನು ದಾಖಲಿಸಿ ಮುಂಗಡವಾಗಿ ಮೊಬೈಲ್ ಅಪ್ಲಿಕೇಶನ್ ಮೂಲಕ ಗೊಬ್ಬರವನ್ನು ಖರೀದಿ ಮಾಡಬಹುದು.

Step-1: ಮೊದಲ ಹಂತದಲ್ಲಿ ಈ "Fertilizer Booking App" ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ "Framework for Fertilizer Sale" ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

Step-2: ಇದಾದ ನಂತರ ರಾಜ್ಯ ಆಯ್ಕೆ ಮತ್ತು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ Send OTP ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿ ನಮೂದಿಸಿ ಅಪ್ಲಿಕೇಶನ್ ಲಾಗಿನ್ ಅಗಿ.

ಇದನ್ನೂ ಓದಿ: Beat Forester Job-ಅರಣ್ಯ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 355 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

Step-3: ಲಾಗಿನ್ ಅದ ನಂತರ ನಿಮ್ಮ ಜಮೀನಿನ ಸರ್ವೆ ನಂಬರ್ ಅನ್ನು ನಮೂದಿಸಿ ಜಮೀನಿನ ವಿವರವನ್ನು ಸೇರ್ಪಡೆ ಮಾಡಿ ನಿಮ್ಮ ಹತ್ತಿರದ ಗೊಬ್ಬರ ಅಂಗಡಿಯನ್ನು ಆಯ್ಕೆ ಮಾಡಿ ಲಭ್ಯವಿರುವ ಗೊಬ್ಬರದ ಬಗ್ಗೆ ಮಾಹಿತಿಯನ್ನು ಇಲ್ಲಿ ನೋಡಿ book ಬಟನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಅವಶ್ಯವಿರುವ ಗೊಬ್ಬರವನ್ನು ಬುಕ್ ಮಾಡಬೇಕು.

Fertilizer List-ಯಾವೆಲ್ಲ ರಸಗೊಬ್ಬರಗಳನ್ನು ಖರೀದಿಸಬಹುದು?

ಈ ಮೊಬೈಲ್ ಆ್ಯಪ್ ಮೂಲಕ ರೈತರು ಕೃಷಿಗೆ ಅಗತ್ಯವಿರುವ ವಿವಿಧ ರಸಗೊಬ್ಬರಗಳನ್ನು ಮುಂಗಡವಾಗಿ ಕಾಯ್ದಿರಿಸುವ ಸೌಲಭ್ಯ ಪಡೆಯಲಿದ್ದಾರೆ.

ಪ್ರಮುಖವಾಗಿ, ಯೂರಿಯಾ,ಡಿಎಪಿ (DAP),ಎಂಒಪಿ (MOP),ಎನ್‌ಪಿಕೆ (NPK) ಸೇರಿದಂತೆ ಅಗತ್ಯವಿರುವ ರಸಗೊಬ್ಬರಗಳನ್ನು ಆ್ಯಪ್ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು. ನಂತರ ಆಯ್ಕೆ ಮಾಡಿಕೊಂಡ ಗೊಬ್ಬರ ಮಾರಾಟ ಮಳಿಗೆಯಲ್ಲಿ ಕ್ಯೂಆರ್ ಕೋಡ್ ಹಾಗೂ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಇದನ್ನೂ ಓದಿ: Bsc Nursing Scholarship-ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ!ಈಗಲೇ ಅರ್ಜಿ ಸಲ್ಲಿಸಿ!

ಈ ಮೊಬೈಲ್ ಅಪ್ಲಿಕೇಶನ್ ಬಳಕೆ ಮತ್ತು ಇನ್ನಿತರೆ ತಾಂತ್ರಿಕ ಅಗತ್ಯ ಮಾಹಿತಿಗಾಗಿ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: