VAO Last Date-ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

August 1, 2026 | Siddesh
VAO Last Date-ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!
Share Now:

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ‘ಗ್ರೂಪ್-ಸಿ’ ವೃಂದದ ಗ್ರಾಮ ಆಡಳಿತ ಅಧಿಕಾರಿ (Village Administrative Officer - VAO) ನೇರ ನೇಮಕಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬಿಗ್ ರಿಲೀಫ್ ನೀಡಿದೆ. ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಇದುವರೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಂದು ಉತ್ತಮ ಅವಕಾಶ ಸಿಕ್ಕಂತಾಗಿದೆ.

ಈ ಮೊದಲು ಕೆಇಎ (KEA) ಬಿಡುಗಡೆ ಮಾಡಿದ್ದ ವೇಳಾಪಟ್ಟಿಯಂತೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 30, 2026 ಹಾಗೂ ಅರ್ಜಿ ಶುಲ್ಕ ಪಾವತಿಸಲು ಜುಲೈ 31, 2026 ಕೊನೆಯ ದಿನಾಂಕವಾಗಿತ್ತು. ಆದರೆ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಮತ್ತು ತಾಂತ್ರಿಕ ಕಾರಣಗಳನ್ನು ಪರಿಗಣಿಸಿ ಪ್ರಾಧಿಕಾರವು ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಯ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಇದರಿಂದಾಗಿ ಲಕ್ಷಾಂತರ ಯುವಜನತೆಗೆ ಅನುಕೂಲವಾಗಲಿದೆ.

ಇದನ್ನೂ ಓದಿ: Ration Distribution-ಪಡಿತರದಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ನ್ಯಾಯಬೆಲೆ ಅಂಗಡಿಗಳು ಓಪನ್!

ಈ ನೇಮಕಾತಿಯಲ್ಲಿ Non-HK ಹಾಗೂ ಕಲ್ಯಾಣ-ಕರ್ನಾಟಕ (HK) ವೃಂದಗಳೆರಡರಲ್ಲೂ ಒಟ್ಟು ನೂರಾರು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕೊನೆಯ ಹಂತದ ತಾಂತ್ರಿಕ ತೊಡಕುಗಳು ಅಥವಾ ರಶ್ ತಪ್ಪಿಸಲು ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ತಕ್ಷಣವೇ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು ಸೂಕ್ತ.

VAO Application Last Date-ವಿಸ್ತರಿಸಲಾದ ಹೊಸ ದಿನಾಂಕಗಳು:

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 07.08.2026 ರವರೆಗೆ ಮತ್ತು ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕವನ್ನು 10.08.2026 ರವರೆಗೆ ವಿಸ್ತರಿಸಲಾಗಿದೆ.

Education Qualification-ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ PUC / ತತ್ಸಮಾನ / ಡಿಪ್ಲೋಮಾ (ITI + NIOS ಪರೀಕ್ಷೆ ಉತ್ತೀರ್ಣರಾದವರಿಗೂ ಅವಕಾಶ) ಹೊಂದಿರಬೇಕು.

ಇದನ್ನೂ ಓದಿ: Scholarship Application-ಕಾರ್ಮಿಕರ ಮಕ್ಕಳಿಗೆ 25,000/- ವಿದ್ಯಾರ್ಥಿವೇತನ! ಆನ್‍ಲೈನ್ ಅರ್ಜಿ ಆಹ್ವಾನ!

Age Limit-ವಯೋಮಿತಿ ವಿವರ:

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ 43 ವರ್ಷ ಹಾಗೂ SC / ST / ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

Application Fee-ಅರ್ಜಿ ಶುಲ್ಕ:

ಸಾಮಾನ್ಯ ಹಾಗೂ ಇತರೆ ಪ್ರವರ್ಗಗಳ (2A/2B/3A/3B) ಅಭ್ಯರ್ಥಿಗಳಿಗೆ ₹750, SC/ST/ಪ್ರವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ₹500 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ₹250 ಶುಲ್ಕ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Coconut Farm-ತೆಂಗು ಬೆಳೆಗಾರರ ಗಮನಕ್ಕೆ: ಹೊಸ ತೋಟ ಸ್ಥಾಪನೆಗೆ ₹56,000 ವರೆಗೆ ಸಹಾಯಧನ!

Required Documents-ಅಗತ್ಯವಿರುವ ದಾಖಲೆಗಳು:

ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, 10th/PUC ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಫೋಟೋ & ಸಹಿ ಹಾಗೂ ಕನ್ನಡ ಮಾಧ್ಯಮ/371(J) ಪ್ರಮಾಣಪತ್ರ (ಅನ್ವಯಿಸಿದಲ್ಲಿ) ಅಗತ್ಯವಿದೆ.

VAO Application

ಇದನ್ನೂ ಓದಿ: Kotak Kanya Scholarship-ಪದವೀದರ ವಿದ್ಯಾರ್ಥಿಗಳಿಗೆ 1.5 ಲಕ್ಷ ವಿದ್ಯಾರ್ಥಿವೇತನ!ಇಲ್ಲಿದೆ ಸಂಪೂರ್ಣ ಮಾಹಿತಿ!

VAO District Wise Vacancy-ಜಿಲ್ಲಾವಾರು ಖಾಲಿಯಿರುವ ಹುದ್ದೆಗಳ ಪಟ್ಟಿ ಹೀಗಿದೆ:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಿಸಿರುವ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿಯ ಜಿಲ್ಲಾವಾರು ಖಾಲಿ ಹುದ್ದೆಗಳ ಸಂಪೂರ್ಣ ವಿವರ ಇಲ್ಲಿದೆ:

ಉಳಿಕೆ ಮೂಲ ವೃಂದ (Non-HK / RPC) – ಒಟ್ಟು 505 ಹುದ್ದೆಗಳು

ಕ್ರ.ಸಂ.ಜಿಲ್ಲೆಯ ಹೆಸರುಖಾಲಿ ಹುದ್ದೆಗಳು
1ಬೆಂಗಳೂರು ನಗರ20
2ಬೆಂಗಳೂರು ಗ್ರಾಮಾಂತರ29
3ಚಿತ್ರದುರ್ಗ15
4ಚಿಕ್ಕಬಳ್ಳಾಪುರ21
5ತುಮಕೂರು50
6ಶಿವಮೊಗ್ಗ18
7ಕೋಲಾರ22
8ಬೆಂಗಳೂರು ದಕ್ಷಿಣ30
9ಮೈಸೂರು45
10ಮಂಡ್ಯ50
11ಹಾಸನ35
12ಉಡುಪಿ10
13ದಕ್ಷಿಣ ಕನ್ನಡ20
14ಚಾಮರಾಜನಗರ31
15ಚಿಕ್ಕಮಗಳೂರು10
16ಬೆಳಗಾವಿ48
17ಬಾಗಲಕೋಟೆ16
18ಗದಗ14
19ಹಾವೇರಿ15
20ಬೀದರ್04
21ರಾಯಚೂರು02
ಒಟ್ಟುRPC ಹುದ್ದೆಗಳು505

ಕಲ್ಯಾಣ-ಕರ್ನಾಟಕ ವೃಂದ (HK) – ಒಟ್ಟು 67 ಹುದ್ದೆಗಳು

ಕ್ರ.ಸಂ.ಜಿಲ್ಲೆಯ ಹೆಸರುಖಾಲಿ ಹುದ್ದೆಗಳು
1ಕಲಬುರಗಿ40
2ಬೀದರ್17
3ರಾಯಚೂರು10
ಒಟ್ಟುHK ಹುದ್ದೆಗಳು67

Online Application-ಅರ್ಜಿ ಸಲ್ಲಿಕೆ ಮತ್ತು ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಪ್ರಾಧಿಕಾರದ ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: