aadhar card address change-ಆಧಾರ್ ಕಾರ್ಡನಲ್ಲಿ ವಿಳಾಸ ತಿದ್ದುಪಡಿಗೆ ನೂತನ ವ್ಯವಸ್ಥೆ!

August 11, 2024 | Siddesh

ಪ್ರತಿಯೊಬ್ಬ ನಾಗರಿಕರಿಗೆ ಆಧಾರ್ ಕಾರ್ಡ್ ಒಂದು ಅತೀ ಮುಖ್ಯ ದಾಖಲೆಯಾಗಿದೆ. ಸರಕಾರದ ಯಾವುದೇ ಯೋಜನೆಯ ಸೌಲಭ್ಯ ಪಡೆಯಲು ಪ್ರಮುಖವಾಗಿ ಆಧಾರ್ ಕಾರ್ಡ್(Aadhar card address change) ವಿವರ ಒದಗಿಸುವುದು ಕಡ್ಡಾಯ ಎಂದರು ತಪ್ಪಾಗಲಾರದು. ಅದ ಕಾರಣ ಆಧಾರ್ ಕಾರ್ಡ್ ನಲ್ಲಿ ತಮ್ಮ ಹೆಸರು,ಮೊಬೈಲ್ ಸಂಖ್ಯೆ, ವಿಳಾಸದ ವಿವರಗಳು ಸಹ ಸರಿಯಾಗಿರುವುದು ಅಷ್ಟೇ ಮುಖ್ಯ.

ಆಧಾರ್ ಕಾರ್ಡ ನಲ್ಲಿ ತಪ್ಪಾದ ವಿವರವನ್ನು ಅಥವಾ ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರವಾದಗ ನಿಮ್ಮ ವಿಳಾಸದ ವಿವರವನ್ನು ಬದಲಾವಣೆ ಮಾಡಲು ಸರಕಾರಿ ಕಚೇರಿ ಅಲೆದಾಡುವ ಅಗತ್ಯವಿಲ್ಲ ಈ ಸಮಸ್ಯೆಗೆ ಕೇಂದ್ರದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI)ಯು ನೂತನ ವಿಧಾನ ಪರಿಚಯಿಸಿದೆ.

ಅಧಾರ್ ಕಾರ್ಡ್ ಬಳಕೆದಾರರು ತಮ್ಮ ಗುರುತಿನ ಚೀಟಿಗಳಲ್ಲಿನ ವಿಳಾಸ ಬದಲಾವಣೆ ಅಥವಾ ಪರಿಷ್ಕರಣೆಗೆ ಈಗ ಹೆಚ್ಚು ಕಷ್ಟಪಡುವ ಅಗತ್ಯವಿಲ್ಲ. ಕುಟುಂಬದ ಮುಖ್ಯಸ್ಥರ ಸಮ್ಮತಿ ಇದ್ದರೆ ಅವರು ಸುಲಭವಾಗಿ ವಿಳಾಸ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: RTC ಅಲ್ಲಿ ಹೆಸರು ತಿದ್ದುಪಡಿ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಅನ್ಲೈನ್ ನಲ್ಲಿ RTC ವಿವರ ತಿಳಿಯಲು ವೆಬ್ಸೈಟ್ ಲಿಂಕ್!

ಆಸಕ್ತಿಕರ ಸಂಗತಿಯೆಂದರೆ, ಆಧಾರ್ ಬಳಕೆದಾರರು ಯಾವುದೇ ಬಗ್ಗೆಯ ದಾಖಲೆಗಳನ್ನು ತೋರಿಸದೆಯೇ ವಿಳಾಸವನ್ನು ಸುಲಭವಾಗಿ ಪರಿಷ್ಕರಣೆ ಅಥವಾ ಬದಲಾಯಿಸಲು ಅವಕಾಶ ನೀಡಿದೆ. ಈವರೆಗೂ ವಿಳಾಸ ಬದಲಾವಣೆ ಪ್ರಕ್ರಿಯೆಗಾಗಿ ಯುಐಡಿಎಐಗೆ ಹೊಸ ವಿಳಾಸಕ್ಕೆ ಸಂಬಂಧಪಟ್ಟ ದಾಖಲೆಯನ್ನು ಅಪ್ಲೋಡ್ ಮಾಡಬೇಕಿತ್ತು.

Aadhar address change- ಪ್ರಮುಖ ಅಂಶಗಳು:

ನಿಮ್ಮ ಆಧಾರ್ ಕಾರ್ಡ್‌ಗಳಲ್ಲಿ ವಿಳಾಸದ ವಿವರ ಬದಲಿಸಿಕೊಳ್ಳಲು ಯುಐಡಿಎಐ(UIDAI)ನಿಂದ ನೂತನ ವಿಧಾನ ಪರಿಚಯಿಸಿದೆ.

ನಿಮ್ಮ ಕುಟುಂಬದ ಮುಖ್ಯಸ್ಥರ ಸಮ್ಮತಿಯೊಂದಿಗೆ ಆನ್‌ಲೈನ್‌ನಲ್ಲಿ ವಿಳಾಸ ಬದಲಾವಣೆ ಮಾಡಿಕೊಳ್ಳಬಹುದುದಾಗಿದೆ.

ನಿಮ್ಮ ಹೊಸ ವಿಳಾಸದ ವಿವರ ಸೇರಿಸಲು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸದೆಯೇ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ.

ಇದನ್ನೂ ಓದಿ: lingayat nigama yojanegalu-2024:  ವೀರಶೈವ ಲಿಂಗಾಯತ ನಿಗಮದಿಂದ 8 ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

Adhar card- ಏನಿದು ನೂತನ ವ್ಯವಸ್ಥೆ?

ನೂತನ ವ್ಯವಸ್ಥೆ ಅಡಿಯಲ್ಲಿ ವಿಳಾಸ ಬದಲಾವಣೆ ಮಾಡುವ  ಇಚ್ಚೆ ಹೊಂದಿರುವವರು ಮೊದಲು ಕುಟುಂಬದೊಂದಿಗಿನ ಸಂಬಂಧ (ಪತ್ನಿ, ಮಗ, ಸೊಸೆ, ಮಗಳು , ಇತರ) ಕುರಿತು ಸೂಕ್ತ ದಾಖಲೆಗಳ ಪ್ರತಿಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬೇಕು. ಬಳಿಕ ಕುಟುಂಬ ಮುಖ್ಯಸ್ಥರ (Head of family) ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಬರುವ 'ಒಟಿಪಿ' ಬಳಸಿ ಸದಸ್ಯರು ತಮ್ಮ ಕಾರ್ಡ್‌ನಲ್ಲಿ ವಿಳಾಸವನ್ನು ಮಾರ್ಪಡಿಸಬಹುದಾಗಿದೆ. ಸಂಬಂಧ ದೃಢೀಕರಣಕ್ಕಾಗಿ ರೇಷನ್‌ ಕಾರ್ಡ್‌, ಮ್ಯಾರೇಜ್‌ ಸರ್ಟಿಫಿಕೇಟ್‌, ಪಾಸ್‌ಪೋರ್ಟ್‌ ಇತರ ದಾಖಲೆಗಳನ್ನು ಹೊದಗಿಸಬೇಕಾಗುತ್ತದೆ.

ಒಂದು ವೇಳೆ ಕುಟುಂಬ ಮುಖ್ಯಸ್ಥರ ಜತೆಗೆ ಸಂಬಂಧ ಸಾಬೀತಿಗೆ ಅಧಿಕೃತ ದಾಖಲೆಗಳು ಇಲ್ಲದಿದ್ದಲ್ಲಿ, ಅಂಥವರು ಕುಟುಂಬ ಮುಖ್ಯಸ್ಥರಿಂದ 'ಸ್ವಯಂ ದೃಢೀಕರಣ ಪತ್ರ' ವನ್ನು (ಯುಐಡಿಎಐ(UIDAI)ವೆಬ್‌ಸೈಟ್‌ನಲ್ಲಿ ನಮೂದಿಸಿರುವ ಮಾದರಿಯಲ್ಲಿ) ಪಡೆದು ಸಲ್ಲಿಸಿದರೆ ಸೂಕ್ತ ದಾಖಲೆಯಾಗಿ ಪರಿಗಣಿಸಲಾಗುವುದು ಎಂದು ಆಧಾರ್‌ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:  AIIMS Nursing Officer job- 4,000 ನರ್ಸಿಂಗ್ ಅಧಿಕಾರಿ ಹುದ್ದೆಗಳ ನೇಮಕಾತಿ ಅರ್ಜಿ!

ಈ ರೀತಿ ನಿಮ್ಮ ಎಲ್ಲಾ ವಿವರವನ್ನು ಯುಐಡಿಎಐ(UIDAI)ವೆಬ್‌ಸೈಟ್‌ನಲ್ಲಿ ಸಲ್ಲಿಸಿದ ನಂತರ ಈ ವಿಧಾನ ಪೂರ್ಣಗೊಳಿಸಲು ಯುಐಡಿಎಐಗೆ 30 ದಿನಗಳ ಕಾಲಾವಕಾಶವಿರುತ್ತದೆ. 

UIDAI website-ಹೆಚ್ಚಿನ ಮಾಹಿತಿಗಾಗಿ ಯುಐಡಿಎಐ ವೆಬ್‌ಸೈಟ್‌: Click here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: