PM awas scheme-ಸ್ವಂತ ಮನೆ ಕಟ್ಟುವವರಿಗೆ PM Awas ಯೋಜನೆಯಡಿ1.2 ಲಕ್ಷ ಸಬ್ಸಿಡಿ!

July 13, 2024 | Siddesh
PM awas scheme-ಸ್ವಂತ ಮನೆ ಕಟ್ಟುವವರಿಗೆ PM Awas ಯೋಜನೆಯಡಿ1.2 ಲಕ್ಷ ಸಬ್ಸಿಡಿ!
Share Now:

ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಸ್ವಂತ ಮನೆ ಕಟ್ಟುವ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಅರ್ಥಿಕವಾಗಿ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿ(Pradhan Mantri Awas Yojana) ಎಷ್ಟು ಮನೆ ಕಟ್ಟಲು ಎಷ್ಟು ಸಬ್ಸಿಡಿ ನೀಡಲಾಗುತ್ತದೆ? ಯಾರ‍ೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲೆಗಳೇನು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದ ಮತ್ತು ಬಡ ಕುಟುಂಬಗಳಿಗೆ ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಅವಾಸ್ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಅರ್ಥಿಕ ನೆರವು ಒದಗಿಸಲಾಗುತ್ತದೆ. 

ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎನ್ನುವ ಕನಸು ಪ್ರತಿಯೊಬ್ಬರಿಗೂ ಇದೇ ಇರುತ್ತದೆ ಪ್ರಸ್ತುತ ದಿನ ಮಾನಗಳಲ್ಲಿ ಸ್ವಂತ ಮನೆ ಕಟ್ಟಲು ದೊಡ್ಡ ಮೊತ್ತದ ಅವಶ್ಯಕತೆಯಿದ್ದು ಸರಕಾರದಿಂದ ಜಾರಿಯಲ್ಲಿರುವ ಸಹಾಯಧನ ಯೋಜನೆಗಳ ಪ್ರಯೋಜನವನ್ನು ಸಹ ಮನೆ ಕಟ್ಟಲು ನೆರವು ಪಡೆದುಕೊಳ್ಳುವುದು ಅವಶ್ಯಕ ಈ ಮಾಹಿತಿಯನ್ನು ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: GTTC ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಅವಧಿ ವಿಸ್ತರಣೆ!

ಪ್ರಧಾನ ಮಂತ್ರಿ ಅವಾಸ್ ಯೋಜನೆ(PMAY):

ಪ್ರಧಾನ ಮಂತ್ರಿ ಅವಾಸ್ ಯೋಜನೆಯನ್ನು(PM awas yojana) ಕೇಂದ್ರ ಸರಕಾರದಿಂದ ಜಾರಿಗೆ ತರಲಾಗಿದ್ದು, ದೇಶದ ಎಲ್ಲಾ ನಾಗರಿಕರು ಮನೆಯನ್ನು ಕಟ್ಟಿಗೊಳ್ಳಲು "ಎಲ್ಲರಿಗೂ ವಸತಿ" ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಥಾನ ಮಾಡಿಕೊಂಡು ಬರಲಾಗುತ್ತಿದೆ.

ಈ ಯೋಜನೆಯಡಿ ಎಷ್ಟು ಅರ್ಥಿಕ ನೆರವು ನೀಡಲಾಗುತ್ತದೆ?

1) ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ರೂ 1,20,000/- ಸಹಾಯಧನ ನೀಡಲಾಗುತ್ತದೆ.

2) ಜೊತೆಗೆ ಉಳಿಕೆ ಹಣಕ್ಕೆ ಬ್ಯಾಂಕ್ ಮೂಲಕ ತೆಗೆದುಕೊಳ್ಳುವ ಲೋನ್ ಗೆ(Home loan) ಶೇ6.5 ರ ಬಡ್ಡಿದರದಲ್ಲಿ ಸಾಲವನ್ನು(home loan interest rates) ಪಡೆಯಲು ನೆರವು ನೀಡಲಾಗುತ್ತದೆ.

ಇದನ್ನೂ ಓದಿ: Navodaya admission- 6ನೇ ತರಗತಿಯಿಂದ 12ನೇ ತರಗತಿ ತನಕ ಸಂಪೂರ್ಣ ಉಚಿತ ಶಿಕ್ಷಣ! ನವೋದಯ ಶಾಲೆ ಪ್ರವೇಶಾತಿ ಪರೀಕ್ಷೆಗೆ ಅರ್ಜಿ ಅಹ್ವಾನ!

ಅರ್ಜಿ ಸಲ್ಲಿಸಲು ಅರ್ಹರು:

A) ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
ಅರ್ಜಿದಾರರೌ ಈ ಹಿಂದೆ ಸ್ವಂತ ಮನೆಯನ್ನು ಹೊಂದಿರಬಾರದು ತಾತ್ಕಾಲಿಕ ವಸತಿ ಗೃಹದಲ್ಲಿ ವಾಸಿಸುತ್ತಿರಬೇಕು.

B) ಅರ್ಜಿದಾರರ ವಾರ್ಷಿಕ ಆದಾಯವು ರೂ 3.0 ಲಕ್ಷ ದಿಂದ  6.0 ಲಕ್ಷದ ಒಳಗಿರಬೇಕು.

C) ಮನೆ ಕಟ್ಟಲು ಗುರುತಿಸಿದ ಜಾಗಕ್ಕೆ ಅಗತ್ಯ ದಾಖಲೆಗಳು ಅಧಿಕೃತವಾಗಿದ್ದು, ಎಲ್ಲಾ ದಾಖಲೆಗಳು ಸರಿಯಾಗಿರಬೇಕಾಗುತ್ತದೆ.

Required Documents for awas yojana- ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳು:

1) ಅರ್ಜಿದಾರ ಆದಾರ್ ಕಾರ್ಡ ಪ್ರತಿ.
2) ಬ್ಯಾಂಕ್ ಪಾಸ್ ಬುಕ್ ಪ್ರತಿ.
3) ನಿವಾಸ ಪ್ರಮಾಣ ಪತ್ರ.
4) ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
5) ನರೇಗಾ ಜಾಬ್ ಕಾರ್ಡ್(ಲಭ್ಯವಿದ್ದಲ್ಲಿ)
6) ರೇಶನ್ ಕಾರ್ಡ ಪ್ರತಿ.
7) ಅರ್ಜಿದಾರರ ಪೋಟೋ.

ಇದನ್ನೂ ಓದಿ: Vidhya nidhi-ವಿದ್ಯಾನಿಧಿ ಯೋಜನೆಯಡಿ ಪಿಯುಸಿ ವಿದ್ಯಾರ್ಥಿಗಳಿಗೆ ರೂ 2,500 ವಿದ್ಯಾರ್ಥಿವೇತನಕ್ಕೆ ಅರ್ಜಿ!

How to apply for PM awas yojana- ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಆಸಕ್ತ ಅರ್ಜಿದಾರರು ಗ್ರಾಮೀಣ ಭಾಗದವರು ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು. ನಗರ ಪ್ರದೇಶದವರು ನಿಮ್ಮ ಪಟ್ಟಣ ಪಂಚಾಯತಿ/ನಗರ ಪಾಲಿಕೆ ಕಚೇರಿಯನ್ನು ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

PM-awas yojana Beneficiary wise funds released list- ಪ್ರಧಾನ ಮಂತ್ರಿ ಅವಾಸ್ ಯೋಜನೆಯ ಅರ್ಹ ಫಲಾನುಭವಿ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲಿ ನೋಡುವ ವಿಧಾನ:

ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಪ್ರಯೋಜನ ಪಡೆದಿರುವ ಅರ್ಹ ಫಲಾನುಭವಿಗಳ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ Click here ಲಿಂಕ್ ಮೇಲೆ ಕ್ಲಿಕ್ ಮಾಡಿ ಅವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Canara Bank Recruitment-2024: ಕೆನರಾ ಬ್ಯಾಂಕ್ ನಲ್ಲಿ 3000 ಹುದ್ದೆಗಳ ನೇಮಕಾತಿ!

Step-2: ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಹತ್ತು ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ "Send OTP" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: "Send OTP" ಬಟನ್ ಮೇಲೆ ಕ್ಲಿಕ್ ಮಾಡಿದಾಗ ಈ ಯೋಜನೆಯಡಿ ಹಣಕಾಸಿನ ನೆರವು ಪಡೆದಿದ್ದಲ್ಲಿ ಫಲಾನುಭವಿಯ ವಿವರ ತೋರಿಸುತ್ತದೆ ಇಲ್ಲವಾದಲ್ಲಿ "There is no fund release details available for this beneficiary" ಎಂದು ಗೋಚರಿಸುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: