Land Records-ರಾಜ್ಯ ಸರಕಾರದಿಂದ ರೈತರ ಜಮೀನಿನ ದಾಖಲೆಗಳನ್ನು ಸುರಕ್ಷಿತವಾಗಿಡಲು “ಭೂ ಸುರಕ್ಷಾ” ಯೋಜನೆ!

March 4, 2025 | Siddesh
Land Records-ರಾಜ್ಯ ಸರಕಾರದಿಂದ ರೈತರ ಜಮೀನಿನ ದಾಖಲೆಗಳನ್ನು ಸುರಕ್ಷಿತವಾಗಿಡಲು “ಭೂ ಸುರಕ್ಷಾ” ಯೋಜನೆ!
Share Now:

ರಾಜ್ಯ ಸರಕಾರದಿಂದ ಬಜೆಟ್ ಮಂಡನೆಗೂ ಮುನ್ನ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ನಮ್ಮ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯ ಸರಕಾರದಿಂದ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿಯನ್ನು ಭಾಷಣದ ವೇಳೆಯಲ್ಲಿ ಉಲ್ಲೇಖಿಸಿದ್ದು ಇದರಲ್ಲಿ ಕಂದಾಯ ಇಲಾಖೆಯ ನೂತನ ಯೋಜನೆ "ಭೂ ಸುರಕ್ಷಾ"(Bhu Suraksha) ಕುರಿತು ಹಂಚಿಕೊಂಡಿರುವ ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.

ಕಂದಾಯ ಇಲಾಖೆಯಿಂದ(Karnataka Revenue Department) ರೈತರಿಗೆ ಮತ್ತು ಸಾರ್ವಜನಿಕರಿಗೆ ತಮ್ಮ ಜಮೀನಿನ/ಜಾಗದ ಮೂಲ ದಾಖಲೆಗಳನ್ನು ಸುರಕ್ಷಿತವಾಗಿ ಒಂದು ಕಡೆ ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲು ಈ "ಭೂ ಸುರಕ್ಷಾ" ಯೋಜನೆಯನ್ನು ಜಾರಿಗೆ ತರಲಾಗಿದ್ದು, "ಭೂ ಸುರಕ್ಷಾ"(Land Records) ಯೋಜನೆಯಿಂದ ರೈತರಿಗೆ ಯಾವೆಲ್ಲ ಪ್ರಯೋಜನಳು ಸಿಗಲಿದೆ? "ಭೂ ಸುರಕ್ಷಾ" ಯೋಜನೆಯನ್ನು ಹೇಗೆ ಅನುಷ್ಥಾನ ಮಾಡಲಾಗುತ್ತದೆ ಇತ್ಯಾದಿ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: E-Swathu Download-ಉಚಿತವಾಗಿ ನಿಮ್ಮ ಆಸ್ತಿಯ ಇ-ಸ್ವತ್ತಿನ ವಿವರ ಪಡೆಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

"ಸುರಕ್ಷಿತ ಭೂ ಮಾಲೀಕತ್ವಕ್ಕಾಗಿ ಡಿಜಿಟಲ್ ಪರಿಹಾರಗಳು"(Digital Land Records) ಎನ್ನುವ ಉದ್ದೇಶದಡಿ ಕಂದಾಯ ಇಲಾಖೆಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯ ಮೂಲಕ ರೈತರ ಜಮೀನಿನ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಅಧಿಕೃತ ಇಲಾಖೆಯ ತಂತ್ರಾಂಶದಲ್ಲಿ ಸಂಗ್ರಹಣೆ ಮಾಡಲಾಗುತ್ತದೆ.

Bhu Suraksha Scheme Benefits-"ಭೂ ಸುರಕ್ಷಾ" ಯೋಜನೆಯಿಂದ ರೈತರಿಗೆ ಅಗುವ ಪ್ರಯೋಜನಗಳು:

ಈಗಾಗಲೇ ಜಮೀನಿಗೆ ಸಂಬಂಧಪಟ್ಟ ಅನೇಕ ದಾಖಲಾತಿಗಳನ್ನು ಡಿಜಿಟಲ್ ಮಾದರಿಯಲ್ಲೇ ಕಂದಾಯ ಇಲಾಕೆಯಿಂದ ನಿರ್ವಹಣೆ ಮಾಡಲಾಗುತ್ತಿದ್ದು ಇದರೊಂದಿಗೆ ಇನ್ನು ಉನ್ನತ ಮಟ್ಟದ ತಾಂತ್ರಿಕತೆಯನ್ನು ಬಳಕೆ ಮಾಡಿಕೊಂಡು ರೈತರ ಜಮೀನಿನ ಮೂಲ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡಲಾಗುತ್ತದೆ.

ಇದರಿಂದ ರೈತರ ಜಮೀನಿನ ಮೂಲ ದಾಖಲೆಗಳು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡುವುದರಿಂದ ಯಾವುದೇ ಸಮಯದಲ್ಲಿ ಅದರು ತ್ವರಿತವಾಗಿ ಪಡೆಯಬಹುದು.

ಇದನ್ನೂ ಓದಿ: Annabhagya status- ಫೆಬ್ರವರಿ-2025 ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ!

Bhu Suraksha Scheme

ಜಮೀನಿನ ಮೂಲ ದಾಖಲೆಗಳು ಕಳೆದುಕೊಳ್ಳುವ ಸನ್ನಿವೇಶಕ್ಕೆ ಬ್ರೇಕ್ ಬಿಳಲಿದ್ದು ಯಾವುದೇ ಬಗ್ಗೆಯ ಜಮೀನಿನ ಮಾಲೀಕತ್ವ ಬದಲಾವಣೆ ಸಮಯದಲ್ಲಿ ಮೂಲ ದಾಖಲೆಗಳನ್ನು ಶೀಘ್ರದಲ್ಲಿ ಪತ್ತೆ ಮಾಡಲು ಸಾಧ್ಯವಾಗುತ್ತದೆ.

ರೈತರು ತಮ್ಮ ಜಮೀನಿನ ದಾಖಲೆಗಳನ್ನು ಸುಲಭವಾಗಿ ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು ಇದಕ್ಕಾಗಿ ಸರಕಾರಿ ಕಚೇರಿಯನ್ನು ಅಲೆದಾಡುವ ಪರಿಸ್ಥಿತಿ ಇರುವುದಿಲ್ಲ.

ಖಾಸಗಿ ಮತ್ತು ಸರಕಾರಿ ಜಮೀನನ್ನು ಸುರಕ್ಷಿತವಾಗಿಡಬಹು ಅಂದರೆ ನಕಲಿ ಮಾಲೀಕತ್ವದ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡುವವರಿಗೆ ಬ್ರೇಕ್ ಹಾಕಬಹುದು.

ಇದನ್ನೂ ಓದಿ: Waqf Bill-2025: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಕ್ಫ್ ತಿದ್ದುಪಡಿಗೆ ಒಪ್ಪಿಗೆ!

Land Details SMS Alert-ಜಮೀನ ದಾಖಲೆಯ ವಿವರ ಮೇಸೆಜ್ ಮೂಲಕ ಪಡೆಯಬಹುದು:

"ಭೂ ಸುರಕ್ಷಾ" ಯೋಜನೆಯಡಿ ಈಗಾಗಲೇ ರಾಜ್ಯದ ಬಹುತೇಕ ರೈತರ ತಮ್ಮ ಜಮೀನಿನ ಪಹಣಿ/ಉತಾರ್/RTC ಗಳಿಗೆ ಆಧಾರ್ ಕಾರ್ಡ ಅನ್ನು ಲಿಂಕ್ ಮಾಡಲಾಗಿದ್ದು ಕಾಲ ಕಾಲಕ್ಕೆ SMS ಮೂಲಕ ತಮ್ಮ ಜಮೀನಿನ ಪಹಣಿಯಲ್ಲಿ ಅಗುವಂತಹ ವ್ಯತ್ಯಾಸಗಳು ಕಂಡು ಬಂದ ತಕ್ಷಣ ಆಧಾರ್ ಕಾರ್ಡ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ SMS ಬರುತ್ತದೆ.

ಇದ್ದರಿಂದ ರೈತರು ಜಾಗ್ರತರಾಗಿ ಯಾವುದೇ ಬಗ್ಗೆಯ ಅಕ್ರಮ ಚಟುವಟಿಕೆಗಳು ಮಾಲೀಕತ್ವ ಬದಲಾವಣೆಯಲ್ಲಿ ಕಂಡುಬಂದರೆ ಕೂಡಲೇ ನಿಮ್ಮ ಹತ್ತಿರದ ಕಂದಾಯ ಇಲಾಖೆಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಇದರ ಕುರಿತು ವಿಚಾರಿಸಬಹುದು.

ಇದನ್ನೂ ಓದಿ: Microfinance Helpline-ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ದೂರು ಸಲ್ಲಿಸಲು ಸಹಾಯವಾಣಿ!

karnataka

Bele Parihara-ಬೆಳೆ ಹಾನಿ ಪರಿಹಾರ ಪಡೆಯಲು ಸಹಕಾರಿ:

ರೈತರ ದಾಖಲೆಗಳನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಣೆ ಮಾಡುವುದರಿಂದ ಅಧಿಕ ಮಳೆ ಇನ್ನಿತರೆ ಕಾರಣಗಳಿಂದ ರೈತರ ಬೆಳೆ ಹಾನಿಯಾದ ಸಮಯದಲ್ಲಿ ಅರ್ಹ ರೈತರನ್ನು ಗುರುತಿಸಿ ಬೆಳೆ ಹಾನಿ ಪರಿಹಾರವನ್ನು ನೇರ ನಗದು ವರ್ಗಾವಣೆಯ ಮೂಲಕ ಜಮಾ ಮಾಡಲು ಸಹ ಈ ಕ್ರಮ ನೆರವು ನೀಡಲಿದೆ ಎಂದು ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಉಲ್ಲೇಖಿಸಲಾಗಿದೆ.

Bhu Suraksha Scheme Work Workflow-"ಭೂ ಸುರಕ್ಷಾ" ಯೋಜನೆಯನ್ನು ಹೇಗೆ ಅನುಷ್ಥಾನ ಮಾಡಲಾಗುತ್ತದೆ?

ರೈತರ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿಡಲು ಕಂದಾಯ ಇಲಾಖೆಯು ‘ಭೂ ಸುರಕ್ಷಾ’ ಎಂಬ ಗ್ಯಾರಂಟಿಯನ್ನು ನೀಡುತ್ತಿದೆ. ಕಂದಾಯ ಇಲಾಖೆಯಲ್ಲಿನ ಧೀರ್ಘಾವಧಿ ಮತ್ತು ಮುಖ್ಯ ದಾಖಲೆಗಳನ್ನು ಸ್ಕ್ಯಾನಿಂಗ್, ಡಿಜಿಟಲೀಕರಣ, ಇಂಡೆಕ್ಸಿಂಗ್ ಮತ್ತು ಕೆಟಲಾಗಿಂಗ್ ಮಾಡಿ ಜನರಿಗೆ ಸುಲಭವಾಗಿ ಸಿಗುವಂತೆ ಮಾಡಲಾಗುತ್ತದೆ. ಈಗಾಗಲೇ 9 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಲಾಗಿದೆ.

ಮೊದಲ ಹಂತದಲ್ಲಿ ರೈತರಿಗೆ ಸಂಬಂಧಪಟ್ಟ ಜಮೀನಿನ ಮುಖ್ಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿ ಡಿಜಿಟಲ್ ತಂತ್ರಾಂಶದಲ್ಲಿ ಸಂಗ್ರಹಣೆ ಮಾಡಿ ನಂತರ ಈ ದಾಖಲೆಗಳನ್ನು ಇಂಡೆಕ್ಸಿಂಗ್ ಮತ್ತು ಕೆಟಲಾಗಿಂಗ್ ಮಾಡಿ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಇದನ್ನೂ ಓದಿ: MSP Price List-ಬೆಂಬಲ ಬೆಲೆಯಲ್ಲಿ ಕುಸುಬೆ ಖರೀದಿ!ದರ ಎಷ್ಟು?

Revenue Department Scheme-ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು:

ಭೂ ಸುರಕ್ಷಾ ಯೋಜನೆಯ ಕುರಿತು ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ನಾಗರಿಕರು ಈ Revenue Department Scheme Details ಲಿಂಕ್ ಮೇಲೆ ಕ್ಲಿಕ್ ಮಾಡಿ ಕರ್ನಾಟಕ ಸರಕಾರದಡಿ ಬರುವ ಕಂದಾಯ ಆಯುಕ್ತಾಲಯದ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಇನ್ನು ಹೆಚ್ಚಿನ ಮಾಹಿತಿಯನ್ನು ಈ ಯೋಜನೆಯ ಕುರಿತು ಪಡೆಯಬಹುದು.

https://revenuecommissionerate.karnataka.gov.in/blog/bhu-suraksha-project/

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: