Innovation Scheme-ಅವಿಷ್ಕಾರ ಯೋಜನೆಯಡಿ ₹4.0 ಲಕ್ಷ ನೆರವು ಪಡೆಯಲು ಅರ್ಜಿ ಆಹ್ವಾನ!

July 15, 2025 | Siddesh
Innovation Scheme-ಅವಿಷ್ಕಾರ ಯೋಜನೆಯಡಿ ₹4.0 ಲಕ್ಷ ನೆರವು ಪಡೆಯಲು ಅರ್ಜಿ ಆಹ್ವಾನ!
Share Now:

ಕರ್ನಾಟಕ ಸರ್ಕಾರದ ವಿದ್ಯುನ್ಮಾನ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ "ತಳಹಂತದ ಆವಿಷ್ಕಾರ-2025" (Grassroot Innovation-2025) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಈ ಯೋಜನೆಯಡಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

"ತಳಹಂತದ ಆವಿಷ್ಕಾರ-2025" ಯೋಜನೆಯಡಿ(Innovation Karnataka) ಅನುದಾನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Farmer Award-ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ! ಪ್ರಥಮ ಬಹುಮಾನ ರೂ ₹50,000!

ಕರ್ನಾಟಕ ಸರ್ಕಾರದ ವಿದ್ಯುನ್ಮಾನ. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಿಂದ(Innovation Scheme Amount)ಪ್ರತಿ ವರ್ಷದಂತೆ 2025-26 ನೇ ಸಾಲಿನಲ್ಲಿಯು ಸಹ "ತಳಹಂತದ ಆವಿಷ್ಕಾರ-2025" ಯೋಜನೆಯ ಮೂಲಕ ಗ್ರಾಮೀಣ ಕುಟುಂಬಗಳು ಎದುರಿಸುತ್ತಿರುವ ತಳಹಂತದ ಸವಾಲುಗಳಿಗೆ ಪರಿಹಾರ ಕಂಡುಹಿಡಿಯಲು, ಹೊಸ ಅವಿಷ್ಕಾರಗಳನ್ನು ಗುರುತಿಸಿ, ಬೆಂಬಲಿಸಿ ಹಾಗೂ ಉತ್ತೇಜಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

Grassroot Innovation Scheme Amount-ಎಷ್ಟು ಸಹಾಯಧನ ನೀಡಲಾಗುತ್ತದೆ?

ತಳಹಂತದ ಆವಿಷ್ಕಾರ-2025 ಯೋಜನೆಯಡಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಗರಿಷ್ಠ ₹ 4.0 ಲಕ್ಷಗಳವರೆಗೆ ಆರ್ಥಿಕ ಅನುದಾನ ಒದಗಿಸಲಾಗುತ್ತದೆ.

ಇದನ್ನೂ ಓದಿ: Awas Yojana-ಆವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಜಿ ಆಹ್ವಾನ!

Who Can Apply-ಅರ್ಜಿ ಸಲ್ಲಿಸಲು ಅರ್ಹತೆಗಳು:

1) ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು.
2) ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು.
3) ನಾವೀನ್ಯತೆಯು ಯಾವುದೇ ಸರ್ಕಾರಿ ಉಪಕ್ರಮ/ ಅನುದಾನಿತ ಪಾಲುದಾರ ಅಥವಾ ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಕಂಪನಿ/ಸಂಸ್ಥೆಯ ಭಾಗವಾಗಿರಬಾರದು.
4) ಫಲಾನುಭವಿ ಅಥವಾ ನಾವೀನ್ಯತೆಗೆ ಕರ್ನಾಟಕ ಸರ್ಕಾರ ಅಥವಾ ಭಾರತ ಸರ್ಕಾರದಿಂದ ಯಾವುದೇ ಹಣವನ್ನು ಪಡೆದಿರಬಾರದು.
5) ಗುರುತಿನ ಚೀಟಿ/ ಪಡಿತರ ಚೀಟಿಯನ್ನು ಹೊಂದಿರುವುದು ಕಡ್ಡಾಯ.
ವೃತ್ತಿಯ ಪುರಾವೆ (ವೃತ್ತಿಪರ ಅರ್ಹತಾ ಪ್ರಮಾಣಪತ್ರ, ವೃತ್ತಿಪರ ಗುರುತಿನ ಚೀಟಿ, ಸರ್ಕಾರಿ ದಾಖಲೆಗಳು) ಅಥವಾ ಕಾರ್ಮಿಕ ಇಲಾಖೆಯಿಂದ ನೀಡಲಾದ ಗುರುತಿನ ಚೀಟಿ)
6) ಅರ್ಜಿದಾರರು ಗ್ರಾಸ್‌ರೂಟ್ ವಿಜೇತರಾಗಿ ಆಯ್ಕೆಯಾದ ನಂತರ ಅಧಿಕೃತ ಕಂಪನಿಯನ್ನು ರಚಿಸಲು ಸಿದ್ದವಿರಬೇಕು.

ಇದನ್ನೂ ಓದಿ: Free Computer Training-ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿಗೆ ಅರ್ಜಿ ಆಹ್ವಾನ!

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಆಗಸ್ಟ್ 2025

Required Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು.

  • ಆಧಾರ್ ಕಾರ್ಡ ಪ್ರತಿ/Aadhar
  • ಪೋಟೋ/Photo
  • ಬ್ಯಾಂಕ್ ಪಾಸ್ ಬುಕ್ ಪ್ರತಿ/Bank Pass Book
  • ಪಡಿತರ ಚೀಟಿ/ಮತದಾರ ಗುರುತಿನ ಚೀಟಿ/Voter Id
  • ಮೊಬೈಲ್ ನಂಬರ್/Mobile Number
  • ನಾವೀನ್ಯತೆಯ ಫೋಟೋ/ವಿಡಿಯೋ / Photo/Video of the innovation

ಇದನ್ನೂ ಓದಿ: PM Kisan Updates-ಪಿಎಂ ಕಿಸಾನ್ 20ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

Online Apply Method-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Apply Now ಮಾಡಿ ಅಧಿಕೃತ ಗೂಗಲ್ ಪಾರ್ಮ ಅನ್ನು ಒಪನ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: RTC Crop Name-ಇನ್ನು ಮುಂದೆ ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಿಸುವುದು ಬಾರಿ ಸುಲಭ!

Grassroot Innovation

Step-2: ಇದಾದ ಬಳಿಕ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಮತ್ತು ದಾಖಲಾತಿಗಳನ್ನು ಹಾಗೂ ನಾವೀನ್ಯತೆಯ ಫೋಟೋ/ವಿಡಿಯೋ / Photo/Video of the innovation ಪೈನ್ ಅನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

For Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಗತ್ಯ ಮಾಹಿತಿ ಹೀಗಿದೆ:

ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ ಸಹಾಯವಾಣಿ ಸಂಖ್ಯೆ-080 22231006
ಇಮೇಲ್ ವಿಳಾಸ- eventsec.kits@gmail.com

WhatsApp Group Join Now
Telegram Group Join Now
Share Now: