Annabhagya Payment- ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲು ನೀಡುವ ಅರ್ಥಿಕ ಸಹಾಯಧನದ ಹಣವನ್ನು(Annabhagya Payment) ಪಡಿತರ ಚೀಟಿ ಗ್ರಾಹಕರ ಖಾತೆಗೆ ಬಿಡುಗಡೆ ಮಾಡಲಾಗಿದ್ದು ನಿಮ್ಮ ಖಾತೆಗೆ ಜಮಾ ಅಗಿರುವ ವಿವರವನ್ನು ಪಡೆಯುವ ವಿಧಾನವನ್ನು ಈ ಕೆಳಗೆ ತಿಳಿಸಲಾಗಿದೆ.

Annabhagya Payment- ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.
Annabhagya Payment status-2024

ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲು ನೀಡುವ ಅರ್ಥಿಕ ಸಹಾಯಧನದ ಹಣವನ್ನು(Annabhagya Payment) ಪಡಿತರ ಚೀಟಿ ಗ್ರಾಹಕರ ಖಾತೆಗೆ ಬಿಡುಗಡೆ ಮಾಡಲಾಗಿದ್ದು ನಿಮ್ಮ ಖಾತೆಗೆ ಜಮಾ ಅಗಿರುವ ವಿವರವನ್ನು ಪಡೆಯುವ ವಿಧಾನವನ್ನು ಈ ಕೆಳಗೆ ತಿಳಿಸಲಾಗಿದೆ.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ಪ್ರತಿ ಕೆಜಿ ಅಕ್ಕಿಗೆ ಲೆಕ್ಕ ಹಾಕಿ ಇಂತಿಷ್ಟು ಹಣ ಎಂದು ಪ್ರತಿ ತಿಂಗಳು ಪಡಿತರ ಚೀಟಿ ಗ್ರಾಹಕರಿಗೆ ಅರ್ಥಿಕ ಸಹಾಯಧನವನ್ನು ನೇರ ನಗದು ವರ್ಗಾವಣೆ(DBT) ಮೂಲಕ ಫಲಾನುಭವಿಗಳ ಖಾತೆಗೆ ಹಾಕಲಾಗುತ್ತದೆ.

ಇದರಂತೆ ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆಯ  ಅಕ್ಕಿ ವಿತರಣೆಯ ಬದಲಿನ ಅರ್ಥಿಕ ನೆರವಿನ ಹಣವನ್ನು ಅರ್ಹ ರೇಶನ್ ಕಾರ್ಡ ಗ್ರಾಹಕರಿಗೆ ಜಮಾ ಮಾಡಲಾಗಿದ್ದು ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ನಿಮಗೆ ಹಣ ಜಮಾ ಅಗಿದಿಯೋ ಇಲ್ಲವೋ ಎಂದು ಹೇಗೆ ಚೆಕ್ ಮಾಡಿಕೊಳ್ಳಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Gruhalakshmi Payment- ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಇಲ್ಲ ಗೃಹಲಕ್ಷ್ಮಿ ಯೋಜನೆ ರೂ 2,000 ಹಣ!

Annabhagya Payment-2024: ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ವಿವರವನ್ನು ತಿಳಿಯುವ ವಿಧಾನ:

ಇ-ಆಡಳಿತ ಇಲಾಖೆಯಿಂದ ಸಿದ್ದಪಡಿಸಿರುವ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಈ ಕೆಳಗಿನ ವಿಧಾನ ಅನುಸರಿಸಿ ಡೌನ್ಲೋಡ್ ಮಾಡಿಕೊಂಡು ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ವಿವರವನ್ನು ಪಡೆಯಬಹುದು.

Step-1: ರೇಶನ್ ಕಾರ್ಡ ಹೊಂದಿರುವ ಗ್ರಾಹಕರು ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ> DBT karnataka application ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ಬಳಿಕ ಗ್ರಾಹಕರ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಆಧಾರ್ ಕಾರ್ಡ ನಲ್ಲಿ ನಮೂದಿಸಿರುವ ಮೊಬೈಲ್ ನಂಬರ್ ಗೆ ಬರುವ 6 ಅಂಕಿಯ OTP ಅನ್ನು ನಮೂದಿಸಬೇಕು.(ವಿಶೇಷ ಸೂಚನೆ: ಮೊದಲ ಬಾರಿಗೆ OTP ಬರದೇ ಇದ್ದ ಪಕ್ಷದಲ್ಲಿ resend otp ಬಟನ್ ಮೇಲೆ ಕ್ಲಿಕ್ ಮಾಡಿ ಪುನಃ ಪ್ರಯತ್ನಿಸಿ)

Step-2: ಮೇಲೆ ವಿವರಿಸಿರುವ ಹಂತವನ್ನು ಅನುಸರಿಸಿ OTP ಪಡೆದು ಅದನ್ನು ನಮೂದಿಸಿದ ನಂತರ ನಿಮ್ಮ ತಲೆಯಲ್ಲಿ ನೆನಪಿನಲ್ಲಿ ಉಳಿಯುವ ನಾಲ್ಕು ಸಂಖ್ಯೆಯ ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಬೇಕು. ತದನಂತರ ಫಲಾನುಭವಿಯ ವೈಯಕ್ತಿಕ ವಿವರ ತೋರಿಸುತ್ತದೆ ಕೊನೆಯಲ್ಲಿ ಮೊಬೈಲ್ ನಂಬರ್ ಹಾಕಿ "ಸಲ್ಲಿಸಿ" ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Company wise bele vime details- ಇಲ್ಲಿಯವರೆಗೆ ಕಂಪನಿವಾರು ಎಷ್ಟು? ಬೆಳೆ ವಿಮೆ ಪಾವತಿ ಮಾಡಲಾಗಿದೆ ಎಂದು ಹೇಗೆ ತಿಳಿಯುವುದು?

Step-3: ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡ ನಂತರ karnataka DBT ಮೊಬೈಲ್ ಅಪ್ಲಿಕೇಶನ್ ಮುಖಪುಟ ಭೇಟಿ ಮಾಡಿ ಈಗಾಗಲೇ ನೀವು ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಕಾಣುವ "ಪಾವತಿ ಸ್ಥಿತಿ/Payment Status" ಬಟನ್ ಮೇಲೆ ಕ್ಲಿಕ್ ಮಾಡಿ ನಂತರ "ಅನ್ನಭಾಗ್ಯ ಯೋಜನೆ" ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ವಿವರವನ್ನು ಪಡೆಯಬಹುದು.

DBT Karnataka application- ಇತರೆ ಆಯ್ಕೆಗಳ ಮಾಹಿತಿ ಹೀಗಿದೆ:

ಈ DBT Karnataka ಮೊಬೈಲ್ ಅಪ್ಲಿಕೇಶನ್ ಅಲ್ಲಿ ವಿವಿಧ ನೇರ ನಗದು ವರ್ಗಾವಣೆಯ ಅಂದರೆ DBT ಹಣ ಪಾವತಿಯ ವಿವರವನ್ನು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಆಧಾರ್ ಕಾರ್ಡ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಅಗಿದೆ ಎನ್ನುವ ಮಾಹಿತಿಯನ್ನು ಸಹ ತಿಳಿದುಕೊಳ್ಳಬಹುದಾಗಿದೆ. ಇದರ ವಿವರ ಈ ಕೆಳಗಿನಂತಿದೆ.

ಇದನ್ನೂ ಓದಿ: Bele vime-2024: ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿ ಚೆಕ್ ಮಾಡಲು ಲಿಂಕ್ ಬಿಡುಗಡೆ!

1)ಕನ್ನಡ/English ಭಾಷೆ ಆಯ್ಕೆ ಲಭ್ಯ: ಈ ಮೊಬೈಲ್ ಅಪ್ಲಿಕೇಶನ್ ಅಲ್ಲಿ ಮುಖ ಪುಟದಲ್ಲಿ ಒಟ್ಟು ನಾಲ್ಕು ಆಯ್ಕೆಗಳು ಕಾಣುತ್ತವೆ ಬಲಬದಿಯ ಮೇಲೆ ಕೊನೆಯಲ್ಲಿ "ಕನ್ನಡ/English" ಆಯ್ಕೆಯು ಲಭ್ಯವಿದ್ದು ಗ್ರಾಹಕರು ಈ ಆಯ್ಕೆಯನ್ನು ಸಹ ಬಳಕೆ ಮಾಡಿಕೊಳ್ಳಬವುದು, 

2)ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಯೋಜನೆ-Adhar card linking status: ಈ ಆಯ್ಕೆಯ ಮೇಲೆ ಕ್ಲಿಕ್ ಫಲಾನುಭವಿಗಳು ನಿಮ್ಮ ಆಧಾರ್ ಯಾವ ಬ್ಯಾಂಕ್ ಗೆ ಲಿಂಖ್ ಅಗಿದೆ ಎನ್ನುವ ಮಾಹಿತಿಯನ್ನು ನೋಡಬವುದು. 

3)ಪ್ರೊಪೈಲ್/ Profile: ಈ ಬಟನ್ ಮೇಲೆ ಕ್ಲಿಕ್ ಮಾಡಿ ಫಲಾನುಭವಿಯ ಸ್ವ-ವಿವರವನ್ನು ತಿದ್ದುಪಡಿ ಮಾಡಿ ಅಪ್ಲೋಡ್ ಮಾಡಬವುದು ಉದಾಹರಣೆಗೆ: ಮೊಬೈಲ್ ನಂಬರ್ ಇತ್ಯಾದಿ.

DBT Karnataka application Download link: Download Now