HomeNew postsWeather- ಮುಂದಿನ 3 ದಿನ ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!

Weather- ಮುಂದಿನ 3 ದಿನ ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!

ಕರ್ನಾಟಕ ಮಳೆ ನಕ್ಷೆಯ(rainfall) ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿ ಅತ್ಯಧಿಕ 168.5 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ ಉಳಿದಂತೆ ಉಡುಪಿ, ದಕ್ಷಿಣಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಜಿಲ್ಲೆಗಳಲ್ಲಿ ಉತ್ತಮ ಮಳೆ ದಾಖಲಾಗಿದ್ದು ಕೋಲಾರ ಚಿಕ್ಕಬಳ್ಳಾಪುರ ಚಾಮರಾಜನಗರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಬಂದಿರುತ್ತದೆ.

ನಾಳೆ ಬೆಳಗ್ಗೆವರೆಗಿನ ಮತ್ತು ಮುಂದಿನ 3 ದಿನದ ರಾಜ್ಯದ ಮಳೆ ಮುನ್ಸೂಚನೆ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದ್ದು ಇದೇ ರೀತಿ ನಿರಂತರ ಮಳೆ ಮುನ್ಸೂಚನೆ ಮಾಹಿತಿ ಮತ್ತು ಸರಕಾರಿ ಯೋಜನೆ, ಉದ್ಯೋಗ ಮಾಹಿತಿ ಇತರೆ ಉಪಯುಕ್ತ ಮಾಹಿತಿಯನ್ನು ದಿನನಿತ್ಯ ಪಡೆಯಲು ನಮ್ಮ ವಾಟ್ಸಾಪ್ ಚಾನಲ್ ಸೇರಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ> Join Now

ಇದನ್ನೂ ಓದಿ: Gruhalakshmi Payment- ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಇಲ್ಲ ಗೃಹಲಕ್ಷ್ಮಿ ಯೋಜನೆ ರೂ 2,000 ಹಣ!

Weather- ನಾಳೆ ಬೆಳಗ್ಗೆ (21-04-2024) ಬೆಳಿಗ್ಗೆ 8-00 ಗಂಟೆವರೆಗಿನ ರಾಜ್ಯದ ಮಳೆ  ಮುನ್ಸೂಚನೆ ಮಾಹಿತಿ:

ಈಗಾಗಲೇ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ. 

ಹವಾಮಾನ ಮುನ್ಸೂಚನೆ ತಜ್ಞರ ಮಾಹಿತಿಯ ಪ್ರಕಾರ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇರುತ್ತದೆ. 

ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. 

ಉತ್ತರ ಒಳನಾಡು ಭಾಗಗಳ ಹಲವು ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದ್ದರೆ, 
ದಕ್ಷಿಣ ಒಳನಾಡಿನ ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು,  ಜಿಲ್ಲೆಗಳ ಒಂದೆರಡು ಕಡೆ ಮಳೆಯ ಮುನ್ಸೂಚನೆ ಇದೆ. ದಾವಣಗೆರೆಯ ಹಲವು ಭಾಗಗಳಲ್ಲಿ, ಚಿತ್ರದುರ್ಗ ಒಂದೆರಡು ಕಡೆ ಉತ್ತಮ ಮಳೆಯ ಮುನ್ಸೂಚನೆ ಇದೆ. 

ಇದನ್ನೂ ಓದಿ: Annabhagya Payment- ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

ಈಗಿನಂತೆ ಎಪ್ರಿಲ್ 21ರಿಂದ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ  ಮಾತ್ರ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಮತ್ತೆ ಮುಂದಿನ 2 ಅಥವಾ 3 ದಿನಗಳಲ್ಲಿ ಅದೂ ಕಡಿಮೆಯಾಗವ ಲಕ್ಷಣಗಳಿವೆ.

Next 3 Days karnataka weather forecast- ಮುಂದಿನ 3 ದಿನ ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಳೆ ಮೂನ್ಸೂಚನೆ ನಕ್ಷೆಯ ಪ್ರಕಾರ ರಾಜ್ಯದಲ್ಲಿ ಮುಂದಿನ 3 ದಿನ ಈ ಕೆಳಗಿನ ನಕ್ಷೆಯಲ್ಲಿ ಹಸಿರು ಬಣ್ಣದಿಂದ ಸೂಚಿಸಿರುವ ಜಿಲ್ಲೆಗಳಲ್ಲಿ ಅಂದರೆ ಚಾಮರಾಜನಗರ, ಬೆಂಗಳೂರು ನಗರ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ದಕ್ಷಿಣಕನ್ನಡ, ಹಾವೇರಿ, ಧಾರವಾಡ, ಬೆಳಗಾವಿ, ಚಿತ್ರದುರ್ಗ ಜಿಲ್ಲೆಯ ಅಲ್ಲಲ್ಲಿ 15 ರಿಂದ 60 ಮಿಲಿ ಮೀಟರ್ ಮಳೆ ಸಾಧ್ಯತೆ ಸೂಚಿಸಲಾಗಿದೆ.

ಇದನ್ನೂ ಓದಿ: Bele vime-2024: ಆಧಾರ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿ ಚೆಕ್ ಮಾಡಲು ಲಿಂಕ್ ಬಿಡುಗಡೆ!

ಉಳಿದಂತೆ ದಾವಣಗೆರೆ, ಉಡುಪಿ, ಉತ್ತರಕನ್ನಡ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ಕೊಪ್ಪಳ,ಬಾಗಲಕೋಟೆ, ವಿಜಯಪುರ, ವಿಜಯನಗರ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ಗದಗ, ತುಮಕೂರು, ಹಾಸನ, ಮಂಡ್ಯ ಜಿಲ್ಲೆಯ ಅಲ್ಲಲ್ಲಿ 2.5 ರಿಂದ 15 ಮಿಲಿ ಮೀಟರ್ ಮಳೆ ಮುನ್ಸೂಚನೆ ನೀಡಲಾಗಿದೆ.

ಮಾಹಿತಿ ಕೃಪೆ: ಸಾಯಿಶೇಖರ್ ಬಿ & KSNDMC, Bengalore

Krushikamitra WhatsApp Channel: Join Now

Most Popular

Latest Articles

Related Articles