Bele vime-2024: ನಿಮ್ಮ ಸರ್ವೆ ನಂಬರ್ ಹಾಕಿ ಬೆಳೆ ವಿಮೆ ಎಷ್ಟು ಜಮಾ ಅಗಿದೆ ಎಂದು ತಿಳಿಯುವುದು ಹೇಗೆ?

ಕೃಷಿ ಬೆಳೆಗಳಿಗೆ ಕಳೆದ ವಾರ ಬೆಳೆ ವಿಮೆ ಪರಿಹಾರದ ಹಣವನ್ನು ರೈತರ ಖಾತೆಗೆ ಸಂದಾಯ ಮಾಡಲಾಗಿದ್ದು ರೈತರು ತಮ್ಮ ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ ಯಾವ ವಿಧಾನವನ್ನು ಅನುಸರಿಸಿ ಬೆಳೆ ವಿಮೆ ಜಮಾ(Crop insurance status by survey number) ವಿವರವನ್ನು ಪಡೆಯಬಹುದು? ಮತ್ತು ಬೆಳೆ ವಿಮೆ ಪರಿಹಾರ ಜಮಾ ಅಗಿರುವುದು ನಿಜವೇ? ಅಥವಾ ಈ ಮಾಹಿತಿ ಸುಳ್ಳು ಈ ಕುರಿತು ವಿವರಣೆಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

Bele vime-2024: ನಿಮ್ಮ ಸರ್ವೆ ನಂಬರ್ ಹಾಕಿ ಬೆಳೆ ವಿಮೆ ಎಷ್ಟು ಜಮಾ ಅಗಿದೆ ಎಂದು ತಿಳಿಯುವುದು ಹೇಗೆ?
Bele vime status-2024

ಕೃಷಿ ಬೆಳೆಗಳಿಗೆ ಕಳೆದ ವಾರ ಬೆಳೆ ವಿಮೆ ಪರಿಹಾರದ ಹಣವನ್ನು ರೈತರ ಖಾತೆಗೆ ಸಂದಾಯ ಮಾಡಲಾಗಿದ್ದು ರೈತರು ತಮ್ಮ ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ ಯಾವ ವಿಧಾನವನ್ನು ಅನುಸರಿಸಿ ಬೆಳೆ ವಿಮೆ ಜಮಾ(Crop insurance status by survey number) ವಿವರವನ್ನು ಪಡೆಯಬಹುದು? ಮತ್ತು ಬೆಳೆ ವಿಮೆ ಪರಿಹಾರ ಜಮಾ ಅಗಿರುವುದು ನಿಜವೇ? ಅಥವಾ ಈ ಮಾಹಿತಿ ಸುಳ್ಳು ಈ ಕುರಿತು ವಿವರಣೆಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಸಂರಕ್ಷಣೆ ಪೋರ್ಟಲ್ ಅನ್ನು ಭೇಟಿ ಮಾಡಿ ರೈತರು ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ ಬೆಳೆ ವಿಮೆ ಜಮಾ ವಿವರವನ್ನು ಪಡೆಯಬಹುದು. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: adhar update-2024: ಇನ್ನು ಮುಂದೆ ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಹಣ ಪಡೆಯಲು ಈ ಕೆಲಸ ತಪ್ಪದೇ ಮಾಡಿ!

Crop insurance status by survey number- ನಿಮ್ಮ ಸರ್ವೆ ನಂಬರ್ ಹಾಕಿ ಬೆಳೆ ವಿಮೆ ಎಷ್ಟು ಜಮಾ ಅಗಿದೆ ಎಂದು ತಿಳಿಯುವುದು ಹೇಗೆ?

ರೈತರು ತಮ್ಮ ಬೆಳೆ ವಿಮೆ ಯೋಜನೆಯ ಅಧಿಕೃತ ಸಂರಕ್ಷಣೆ ವೆಬ್ಸೈಟ್ ಅನ್ನು ಮೊಬೈಲ್ ನಲ್ಲಿ ಪ್ರವೇಶ ಮಾಡಿ ರೈತರು ಈ ಕೆಳಗಿನ ವಿಧಾನವನ್ನು ಅನುಸರಿಸಿ ಬೆಳೆ ವಿಮೆ ಸಂದಾಯದ ವಿವರವನ್ನು ಪಡೆಯಬಹುದು.

Step-1: ಮೊದಲು ಈ ಲಿಂಕ್ Crop insurance status by survey number ಮೇಲೆ ಕ್ಲಿಕ್ ಮಾಡಿ samrakshane ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ತದನಂತರ "ವರ್ಷ: 2023-24" "ಹಂಗಾಮು/ಋತು: "ಮುಂಗಾರು/Kharif" ಎಂದು ಕ್ಲಿಕ್ ಮಾಡಿ "ಮುಂದೆ/Go" ಎಂದು ಕೆಳಗೆ ತೋರಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಬಳಿಕ ಈ ಪೇಜ್ ನಲ್ಲಿ ಕೆಳಗೆ ಕಾಣುವ "Farmers" ಕಾಲಂ ನಲ್ಲಿ  "Crop Insurance Details On Survey No"  ಬಟನ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: Bele vime amount- 2ನೇ ಹಂತದಲ್ಲಿ ಎಕರೆಗೆ 18,000 ರೂ ಬೆಳೆ ವಿಮೆ ರೈತರ ಖಾತೆಗೆ ಬಿಡುಗಡೆ!

Step-4: ತದನಂತರ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ನಿಮ್ಮ ಜಮೀನಿನ ಸರ್ವೆ ನಂಬರ್ ಹಾಕಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ಆ ಸರ್ವೆ ನಂಬರ್ ನಲ್ಲಿರುವ ಎಲ್ಲ ರೈತರ ವಿವರ ಗೋಚರಿಸುತ್ತದೆ.

ಅಗ ನಿಮ್ಮ ಹೆಸರಿರುವ ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬೆಳೆ ವಿಮೆ ಅರ್ಜಿಯ ಸಂಖ್ಯೆ ತೋರಿಸುತ್ತದೆ ಅದನ್ನು ಒಂದು ಕಡೆ ಬರೆದುಕೊಂಡು ಮುಂದುವರೆಯಬೇಕು.

Step-5: ಇದಾದ ಬಳಿಕ Back ಬಟನ್ ಮೇಲೆ ಕ್ಲಿಕ್ ಮಾಡಿ ಮುಖಪುಟ ಭೇಟಿ ಮಾಡಿ ಇಲ್ಲಿ Farmers ಕಾಲಂ ನಲ್ಲಿ "Check Status" ಬಟನ್ ಮೇಲೆ ಕ್ಲಿಕ್ ಮಾಡಿ ಬೆಳೆ ವಿಮೆ "ಅರ್ಜಿಯ ಸಂಖ್ಯೆಯನ್ನು/Application no" ಅನ್ನು ಹಾಕಿ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ.

ಅಗ ಈ ಕೆಳಗಿನ ಪೋಟೋ ದಲ್ಲಿ ತೋರಿಸಿದ ರೀತಿಯಲ್ಲಿ ನಿಮಗೆ ಬೆಳೆ ವಿಮೆ ಎಷ್ಟು ಜಮಾ? UTR no, ಪಾವತಿ ಮಾಡಿದ ದಿನಾಂಕ, ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆಗಳ ವಿವರ ಗೋಚರಿಸುತ್ತದೆ. 

ಇದನ್ನೂ ಓದಿ: Yashaswini Yojana-2024: ಯಶಸ್ವಿನಿ ಯೋಜನೆ ಕಾರ್ಡದಾರರಿಗೆ ಭರ್ಜರಿ ಸಿಹಿ ಸುದ್ದಿ! 

Crop insurance claim status-ಬೆಳೆ ವಿಮೆ ನಮಗೆ ಜಮಾ ಅಗಿಲ್ಲ ಈ ಮಾಹಿತಿ ಸುಳ್ಳು ಎಂದು ಅನೇಕ ಜನ ರೈತರು ಹೇಳುತ್ತಿದ್ದಾರೆ ಇದಕ್ಕೆ ಉತ್ತರ ಹೀಗಿದೆ:

ಕೃಷಿ ಬೆಳೆಗಳಿಗೆ ಬೆಳೆ ವಿಮೆ ಪರಿಹಾರವನ್ನು ಬೆಳೆ ಅಂದಾಜು ಸಮೀಕ್ಷೆಯಲ್ಲಿ ದಾಖಲಾದ ಮಾಹಿತಿಯನ್ವಯ ಕಡಿಮೆ ಇಳುವರಿ ಬಂದಿರುವ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರಿಗೆ ನೀಡಲಾಗುತ್ತದೆ ಈ ಬಾರಿ ಬಹುತೇಕ ರಾಜ್ಯದ ಎಲ್ಲಾ ಕಡೆ ತೀರ್ವ ಮಳೆ ಕೊರತೆಯಿಂದ ಬೆಳೆ ನಷ್ಟವಾಗಿದ್ದು ಇಳುವರಿ ಸಾಮಾನ್ಯವಾಗಿ ಕಡಿಮೆಯೇ ಬಂದಿರುತ್ತದೆ. ದಾವಣಗೆರೆ,ಚಿತ್ರದುರ್ಗ ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದಿರುವ ರೈತರಿಗೆ ಎಕರೆಗೆ ರೂ 18,000 ವರೆಗೆ ಬೆಳೆ ವಿಮೆ ಜಮಾ ಅಗಿರುತ್ತದೆ ಉಳಿದ ಭಾಗದ ರೈತರು ತಮ್ಮ ಬೆಳೆಗಳಿಗೆ ಬೆಳೆ ವಿಮೆ ಕಟ್ಟಿದ್ದರೆ ಒಮ್ಮೆ ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಭೇಟಿ ಮಾಡಿ ನಿಮ್ಮ ಅರ್ಜಿಯ ಸ್ಥಿತಿ ಮತ್ತು ಬೆಳೆ ವಿಮೆ ಪರಿಹಾರದ ಕುರಿತು ಹಾಗೂ ಬೆಳೆ ಅಂದಾಜು ಸಮೀಕ್ಷೆಯ ಮಾಹಿತಿಯನ್ನು ಪಡೆದುಕೊಂಡು ಪರಿಹಾರದ ಹಣ ಜಮಾ ಮಾಹಿತಿಯನ್ನು ತಿಳಿಯಬಹುದು.

ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ ರೈತರು ಇವರಿಗೆ ಒಂದು ವಿಮಾ ಘಟಕದಲ್ಲಿ ಆ ವರ್ಷ ಬಂದಿರುವ ಮಳೆ ಪ್ರಮಾಣದ ಆಧಾರದ ಮೇಲೆ ವಿಮೆ ಪರಿಹಾರ ನೀಡುವುದೋ? ಬೇಡವೋ? ಎಂದು ನಿರ್ಧಾರ ಮಾಡಲಾಗುತ್ತದೆ ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ ರೈತರು ನಿಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಕೆಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಬೆಳೆ ವಿಮೆ ಅರ್ಜಿ ಸ್ಥಿತಿ ಮತ್ತು ಪರಿಹಾರದ ಹಣ ಜಮಾ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ದಾವಣಗೆರೆ ಜಿಲ್ಲೆಯ ಶಿವಕುಮಾರ್ ಎನ್ನುವ ರೈತರಿಗೆ 1.5 ಎಕರೆ ಮೆಕ್ಕೆಜೋಳ ಬೆಳೆಗೆ ಬೆಳೆ ವಿಮೆ ಪರಿಹಾರ ಜಮಾ ಅಗಿರುವುದರ ಬಗ್ಗೆ ಬ್ಯಾಂಕ್ ನಿಂದ ಬಂದ ಹಣ ಸಂದಾಯದ ಮಾಹಿತಿಯ ಪೋಟೋ:

samrakshane-ಸಂರಕ್ಷಣೆ ವೆಬ್ಸೈಟ್: Click here
PMFBY-ಫಸಲ್ ಭಿಮಾ ಯೋಜನೆಯ ಅಧಿಕೃತ ವೆಬ್ಸೈಟ್: click here