HomeNew postsYashaswini card- ಯಶಸ್ವಿನಿ ಕಾರ್ಡ ಮಾಡಿಸಿಕೊಳ್ಳುವವರಿಗೆ ಇದು ಕೊನೆಯ ಅವಕಾಶ! 5 ಲಕ್ಷ ಉಚಿತ ನಗದು...

Yashaswini card- ಯಶಸ್ವಿನಿ ಕಾರ್ಡ ಮಾಡಿಸಿಕೊಳ್ಳುವವರಿಗೆ ಇದು ಕೊನೆಯ ಅವಕಾಶ! 5 ಲಕ್ಷ ಉಚಿತ ನಗದು ರಹಿತ ಚಿಕಿತ್ಸೆ.

ಅತೀ ಕಡಿಮೆ ವೆಚ್ಚದಲ್ಲಿ ಆರೋಗ್ಯ ವಿಮೆ ಸೌಲಭ್ಯ ಪಡೆಯಲು ಸಹಕಾರಿ ಸಂಘಗಳ ಮೂಲಕ ಯಶಸ್ವಿನಿ ಕಾರ್ಡ(Yashaswini card) ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಲು ಇದು ಕೊನೆಯ ಅವಕಾಶವಾಗಿದೆ.

2023-24ನೇ ಸಾಲಿಗೆ ಯಶಸ್ವಿನಿ ಯೋಜನೆಯಲ್ಲಿ ಸದಸ್ಯರಾಗಲು ಮತ್ತು ಸದಸ್ಯತ್ವ ನವೀಕರಣಗೊಳಿಸಲು ಫೆಬ್ರವರಿ 29 ಕೊನೆ ದಿನಾಂಕ. ಈಗಾಗಲೇ ಯಶಸ್ವಿನಿ ಯೋಜನೆಯಲ್ಲಿ ನೋಂದಣಿಯಾಗಿರುವವರು ಆಯಾ ಸಂಘದಲ್ಲಿಯೇ ಹಣ ಸಂದಾಯ ಮಾಡಿ, ಸದಸ್ಯತ್ವ ನವೀಕರಣ ಮಾಡಿಕೊಳ್ಳಬಹುದು.

ಆಸಕ್ತ ಅರ್ಜಿದಾರರು ಈ ಅಂಕಣದಲ್ಲಿ ವಿವರಿಸಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಕೊನೆಯ ದಿನಾಂಕದ ಒಳಗಾಗಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು? ಈ ಯೋಜನೆಯಡಿ ಯಾವೆಲ್ಲ ಪ್ರಯೋಜನ ಪಡೆದುಕೊಳ್ಳಬಹುದು? ಅರ್ಜಿ ಶುಲ್ಕ ಎಷ್ಟು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: PM kisan 16th installment- ಪಿ ಎಂ ಕಿಸಾನ್ ಯೋಜನೆಯ 16ನೇ ಕಂತಿನ ರೂ 2,000 ಈ ದಿನ ರೈತರ ಖಾತೆಗೆ ಜಮಾ ಅಗಲಿದೆ! ಇಲ್ಲಿದೆ ಅರ್ಹ ರೈತರ ಪಟ್ಟಿ ನೋಡಲು ವೆಬ್ಸೈಟ್ ಲಿಂಕ್.

Yashaswini card benefits- ಈ ಯೋಜನೆಯಡಿ ಯಾವೆಲ್ಲ ಪ್ರಯೋಜನ ಪಡೆದುಕೊಳ್ಳಬಹುದು?

ಈ ಯೋಜನೆಯಡಿ ಅರ್ಜಿ ಸಲ್ಲಿಸಿ ನೋಂದಾವಣೆ ಮಾಡಿಕೊಳ್ಳುವ ಕುಟುಂಬಕ್ಕೆ ಆರೋಗ್ಯ ಸಂಬಂಧಿತ ಸೇವೆಗಳಿಗೆ ನಗದು ರಹಿತ ಅರ್ಥಿಕವಾಗಿ ಸರಕಾರದಿಂದ ನೆರವು ನೀಡಲಾಗುತ್ತದೆ.

1) ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕಿಯ ಚಿಕಿತ್ಸಾ ವೆಚ್ಚದ ಗರಿಷ್ಠ ರೂ. 5.00 ಲಕ್ಷದವರೆಗೆ ನಗದು ರಚಿತ ಅರ್ಥಿಕ ನೆರವು ನೀಡಲಾಗುತ್ತದೆ. ರಾಜ್ಯದ ಯಾವುದೇ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ.

2) ಯಶಸ್ವಿನಿ ಯೋಜನೆಯಡಿಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಖಾಯಿಲೆಗಳು ಹಾಗೂ ಈ ಯೋಜನೆಯಡಿ ಇತರೆ ಅನುಸೂಚಿತ ಸಾಮಾನ್ಯ ರೋಗಿಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಪಡೆಯಬಹುದು.

ಇದನ್ನೂ ಓದಿ: free sewing machine-ಈ ಯೋಜನೆಯಡಿ ಉಚಿತ ಹೊಲಿಗೆ ಯಂತ್ರ ಮತ್ತುಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನ!

3) ಪ್ರಾರಂಭೀಕವಾಗಿ ಆಯುಷ್ಮಾನ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಅಳವಡಿಸಿಕೊಂಡಿರುವ 1650 ಖಾಯಿಲೆಗಳಿಗೆ ಚಿಕಿತ್ಸೆಗಳನ್ನು ಯಶಸ್ವಿನಿ ಯೋಜನೆಯಲ್ಲಿ ಅವಕಾಶವಿರುತ್ತದೆ. 

4) ಯಶಸ್ವಿನಿ ಸದಸ್ಯರು ಜನರಲ್ ವಾರ್ಡಿನಲ್ಲಿ ಸೌಲಭ್ಯ ಪಡೆಯುವಲ್ಲಿ ಅರ್ಹತೆ ಹೊಂದಿರುತ್ತಾರೆ. ಯಶಸ್ವಿನಿ ಯೋಜನೆಯಡಿ ನೆಟ್ ವರ್ಕ್ ಆಸ್ಪತ್ರೆಯಲ್ಲಿ ಒದಗಿಸಿರುವ ಚಿಕಿತ್ಸಾ ಸೌಲಭ್ಯದಲ್ಲಿ ಔಷಧಿ ವೆಚ್ಚ, ಆಸ್ಪತ್ರೆ ವೆಚ್ಚ, ಶಸ್ತ್ರ ಚಿಕಿತ್ಸೆಯ ವೆಚ್ಚ, ಆಪರೇಷನ್ ಥಿಯೇಟರ್ ಬಾಡಿಗೆ, ಅರವಳಿಕೆ ತಾರ ಫೀ, ಕನ್ಸಲ್ಟಂಟ್ ಫೀ, ಬೆಡ್ ಚಾರ್ಜ್. ನರ್ಸ್ ಫೀ ಇತ್ಯಾದಿ ವೆಚ್ಚ ಒಳಗೊಂಡಿರುತ್ತದೆ.

5) ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಯಶಸ್ವಿನಿ ಸದಸ್ಯರಿಗೆ ಹೊರ ರೋಗಿ ಚಿಕಿತ್ಸೆಗೆ (OPD) ಗರಿಷ್ಠ ರೂ. 200/- ಗಳ (ಮೂರು ತಿಂಗಳ ಅವಧಿಗೆ) ಮಿತಿ ನಿಗಧಿಪಡಿಸಿದ್ದು, ನೆಟ್ ವರ್ಕ್ ಆಸ್ಪತ್ರೆಗಳು ಇದಕ್ಕಿಂತ ಹೆಚ್ಚಿನ ಶುಲ್ಕವನ್ನು ಸದಸ್ಯರಿಗೆ ವಿಧಿಸತಕ್ಕದ್ದಲ್ಲ. ಈ ಪೈಕಿ ರೂ. 100/-ಗಳನ್ನು ಯಶಸ್ವಿನಿ ಟ್ರಸ್ಟ್ ನ ವತಿಯಿಂದ ಪಾವತಿಸಲಾಗುತ್ತದೆ.

ಇದನ್ನೂ ಓದಿ: Yuva nidhi yojana-2024: ಯುವನಿಧಿ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

yashaswini card fee- ಅರ್ಜಿ ಶುಲ್ಕದ ವಿವರ:

ಸಾಮನ್ಯ ವರ್ಗ: 1) ನಗರವಾಸಿ-1000 ರೂ 
(ಕುಟುಂಬದ 4 ಸದಸ್ಯರಿಗೆ 1000 ರೂ. ಹೆಚ್ಚುವರಿ ಸದಸ್ಯರಿಗೆ ರೂ 200 ಪಾವತಿ ಮಾಡಬೇಕು)

2) ಗ್ರಾಮಾಂತರ-500 ರೂ , ಪರಿಶಿಷ್ಟ ಜಾತಿ/ಪಂಗಡದ ಸದಸ್ಯರಿಗೆ ಶುಲ್ಕ ಇರುವುದಿಲ್ಲ.
(4 ಸದಸ್ಯರಿಗೆ 500 ರೂ. ಹೆಚ್ಚುವರಿ ಸದಸ್ಯರಿಗೆ 100 ರೂ)

ನವೀಕರಣ ಮಾಡಿಕೊಳ್ಳಲು ಅವಕಾಶ:

ಈಗಾಗಲೇ ಕಳೆದ ವರ್ಷ ಈ ಕಾರ್ಡ ಅನ್ನು ಮಾಡಿಕೊಂಡಿರುವವರು ಮತ್ತೊಮ್ಮೆ ಮೇಲೆ ತಿಳಿಸಿರುವ ಶುಲ್ಕವನ್ನು ಪಾವತಿ ಮಾಡಿ ಮತ್ತೆ ನಿಮ್ಮ ಕಾರ್ಡ ಅನ್ನು ಒಂದು ವರ್ಷಕ್ಕೆ ನವೀಕರಣ ಮಾಡಿಕೊಳ್ಳಬೇಕು.

ಇದನ್ನೂ ಓದಿ: Parihara payment-ಈ ಕೆಲಸ ಮಾಡಿದ ಬಳಿಕ ನನ್ನ ಖಾತೆಗೆ ಬಂತು ರೂ 2,000 ಬೆಳೆ ನಷ್ಟ ಪರಿಹಾರ!

Yashaswini card last date- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಫೆಬ್ರವರಿ 2024

Yashaswini card how to apply- ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಸಕ್ತ ಅರ್ಹ ಅರ್ಜಿದಾರರು ನಿಮ್ಮ ಅಗತ್ಯ ದಾಖಲಾತಿ ಸಮೇತ ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘ(ಸೊಸೈಟಿ) ಶಾಖೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

Required documents for yashaswini card- ಸಲ್ಲಿಸಬೇಕಾದ ದಾಖಲಾತಿಗಳು:

(1) ರೇಷನ್ ಕಾರ್ಡ ಪ್ರತಿ

(2) ಪ್ರತಿ ಸದಸ್ಯರ ಆಧಾರ್ ಕಾರ್ಡ್

(3) ಪ್ರತಿಯೊಬ್ಬರ ಎರಡು ಫೋಟೋ

(4) ಪರಿಶಿಷ್ಟ ಜಾತಿ/ಪಂಗಡದ ಸದಸ್ಯರು ಕುಟುಂಬದ ಪ್ರತಿಯೊಬ್ಬರ ಆರ್ ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: RTC aadhar card link- ನಿಮ್ಮ ಜಮೀನಿನ ಪಹಣಿಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ! ಇಲ್ಲಿದೆ ಲಿಂಕ್ ಮಾಡಲು ಅಧಿಕೃತ ವೆಬ್ಸೈಟ್ ಲಿಂಕ್.

Most Popular

Latest Articles

Related Articles