HomeGovt SchemesUchitha koli mari-ಉಚಿತವಾಗಿ ಕೋಳಿಮರಿ ಪಡೆಯಲು ಪಶುಸಂಗೋಪನೆ ಇಲಾಖೆಯಿಂದ ಅರ್ಜಿ ಆಹ್ವಾನ!

Uchitha koli mari-ಉಚಿತವಾಗಿ ಕೋಳಿಮರಿ ಪಡೆಯಲು ಪಶುಸಂಗೋಪನೆ ಇಲಾಖೆಯಿಂದ ಅರ್ಜಿ ಆಹ್ವಾನ!

ಪಶುಸಂಗೋಪನೆ ಇಲಾಖೆಯಿಂಡ ಉಚಿತವಾಗಿ ಕೋಳಿಮರಿಯನ್ನು(Uchitha koli mari vitarane) ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಯಾರೆಲ್ಲ ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಗ್ರಾಮೀಣ ಭಾಗದಲ್ಲಿ ಕೃಷಿಯ ಜೊತೆಯಲ್ಲಿ ಕೃಷಿಗೆ ಪೂರಕವಾದ ಉಪಕಸುಬುಗಳನ್ನು ಸಹ ಕೈಗೊಳ್ಳುವುದರಿಂದ ಅರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿರುತ್ತದೆ ಈ ಕಾರಣದಿಂದ ರೈತಾಪಿ ವರ್ಗದಲ್ಲಿ ಕೋಳಿ ಸಾಕಾಣಿಕೆಗೆ ಉತೇಜನ ನೀಡಲು ಕರ್ನಾಟಕ ರಾಜ್ಯ ಸರಕಾರವು ಪಶುಸಂಗೋಪನೆ ಇಲಾಖೆಯಿಂದ ಯೋಜನೆಯನ್ನು ರೂಪಿಸಲಾಗಿದ್ದು ಈ ಕಾರ್ಯಕ್ರಮದಡಿಯಲ್ಲಿ ಉಚಿತವಾಗಿ ಮಹಿಳೆಯರಿಗೆ ಪ್ರತಿ ವರ್ಷ ಕೋಳಿ ಮರಿಗಳನ್ನು ವಿತರಣೆ ಮಾಡಲಾಗುತ್ತದೆ.

ಇದನ್ನೂ ಓದಿ: Gold Price-ಮತ್ತೆ ಕೊಂಚ ಇಳಿದ ಚಿನ್ನದ ದರ!ಇಲ್ಲಿದೆ ಇಂದಿನ ಚಿನ್ನದ ದರ ವಿವರ!

ಉಚಿತವಾಗಿ ಕೋಳಿ ಮರಿಗಳನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿ ಮಾಹಿತಿ, ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಈ ಕುರಿತು ಅಗತ್ಯ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

koli mari

ಉಚಿತ ಕೋಳಿ ಮರಿ ಪಡೆಯಲು ಅರ್ಹರು:

ಈ ಯೋಜನೆಯಡಿ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಎಲ್ಲಾ ವರ್ಗದ ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದು.

ಕೃಷಿ ಚಟುವಟಿಯಲ್ಲಿ ತೊಡಗಿಕೊಂಡಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು.

ಈಗಾಗಲೇ ಹಿಂದಿನ ವರ್ಷದಲ್ಲಿ ಇಲಾಖೆಯಿಂದ ಕೋಳಿ ಮರಿ ಪಡೆದಿರುವವರು ಈ ವರ್ಷ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಅರ್ಜಿಯಲ್ಲಿ ಎಲ್ಲಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ತಾಲ್ಲೂಕಿನ ಪಶುಸಂಗೋಪನೆ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Solar Pumpset subsidy- ಶೇ 80 ರಷ್ಟು ಸಹಾಯಧನದಲ್ಲಿ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

poultry

ಅರ್ಜಿ ಸಲ್ಲಿಸಲು ದಾಖಲೆಗಳು:

ಅರ್ಜಿದಾರರ ಆಧಾರ ಕಾರ್ಡ ಪ್ರತಿ
ಪೋಟೋ
ಬ್ಯಾಂಕ್ ಪಾಸ್ ಬುಕ್ ಪ್ರತಿ
ಮೊಬೈಲ್ ನಂಬರ್

ಇದನ್ನೂ ಓದಿ: DBT Status- ಎಲ್ಲಾ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

ಯಾವೆಲ್ಲ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ?

ಪ್ರಸ್ತುತ ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಈಗಾಗಲೇ ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದ್ದು ಇದೇ ಮಾದರಿಯಲ್ಲಿ ಇತರ ಜಿಲ್ಲೆಯಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶವಿದ್ದು ಡಿಸೆಂಬರ್ ಕೊನೆಯ ವಾರದ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಪಶುವೈದ್ಯಾಧಿಕಾರಿ 9482943111, ಚಳ್ಳಕೆರೆ 9448816499, ಹೊಳಲ್ಕೆರೆ 9972965479, ಹೊದುರ್ಗ 9945298407, ಹಿರಿಯೂರು 9483451044, ಮೊಳಕಾಲ್ಮೂರು 9900964820 ಗೆ ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Most Popular

Latest Articles

Related Articles