DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

ಸಾರ್ವಜನಿಕರು ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಆಧಾರ್ ಕಾರ್ಡ ನಂಬರ್ ಹಾಕಿ(DBT Payment status) ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ಹೇಗೆ ತಿಳಿದುಕೊಳ್ಳಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!
DBT Payment status-2024

ಸಾರ್ವಜನಿಕರು ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಆಧಾರ್ ಕಾರ್ಡ ನಂಬರ್ ಹಾಕಿ(DBT Payment status) ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ಹೇಗೆ ತಿಳಿದುಕೊಳ್ಳಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಇ-ಆಡಳಿತ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಡಿಬಿಟಿ ಕರ್ನಾಟಕ(DBT karanataka mobile app)ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಆಧಾರ್ ಕಾರ್ಡ ನಂಬರ್ ಹಾಕಿ ಲಾಗಿನ್ ಅಗುವುದರ ಮೂಲಕ ಯಾವೆಲ್ಲ ಯೋಜನೆಯಡಿ ಎಷ್ಟು ಹಣ ನಿಮ್ಮ ಖಾತೆಗ್ ಜಮಾ ಅಗಿದೆ ಎಂದು ವಿವರವಾದ ಮಾಹಿತಿಯನ್ನು ಬೆರಳ ತುದಿಯಲ್ಲಿ ತಿಳಿದುಕೊಳ್ಳಬಹುದು.

ಈ ಡಿಬಿಟಿ ಕರ್ನಾಟಕ(DBT karanataka mobile app)ಮೊಬೈಲ್ ಅಪ್ಲಿಕೇಶನ್ ನಲ್ಲಿ ಎಲ್ಲಾ ರಾಜ್ಯ ಸರಕಾರದ ಯೋಜನೆಗಳ ನೇರ ನಗದು ವರ್ಗಾವಣೆಯ(DBT) ಪಾವತಿ ಸ್ಥಿತಿಯ ಸಂಪೂರ್ಣ ವಿವರವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Weather- ಮುಂದಿನ 3 ದಿನ ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!

DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯುವ ವಿಧಾನ:

ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ ಇ-ಆಡಳಿತ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ "ಡಿಬಿಟಿ ಕರ್ನಾಟಕ-DBT karanataka mobile app" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-1: ಮೊದಲ ಹಂತದಲ್ಲಿ DBT karanataka mobile app Download link ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ "ಡಿಬಿಟಿ ಕರ್ನಾಟಕ-DBT karanataka mobile app" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಎರಡನೇ ಹಂತದಲ್ಲಿ ಅರ್ಥಿಕ ನೆರವು ಪಡೆಯುತ್ತಿರುವ/ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಆಧಾರ್ ಕಾರ್ಡ ನಲ್ಲಿ ನಮೂದಿಸಿರುವ ಮೊಬೈಲ್ ನಂಬರ್ ಗೆ ಬರುವ 6 ಅಂಕಿಯ OTP/ಒಟಿಪಿ ಅನ್ನು ನಮೂದಿಸಬೇಕು.
(ಗಮನಿಸಿ: ಮೊದಲ ಸಲ ಪ್ರಯತ್ನಿಸಿದಾದ OTP ನಿಮ್ಮ ಮೊಬೈಲ್ ಗೆ ಬಂದಿಲ್ಲವಾದಲ್ಲಿ resend otp ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತೊಮ್ಮೆ ಪ್ರಯತ್ನಿಸಿ)

Step-3: ಎರಡನೇ ಹಂತದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ OTP/ಒಟಿಪಿ ಪಡೆದು ಅದನ್ನು ನಮೂದಿಸಿದ ಬಳಿಕ ನಿಮಗೆ ನೆನಪಿನಲ್ಲಿ ಉಳಿಯುವ ನಾಲ್ಕು(4) ನಂಬರಿನ ಪಾಸ್ವರ್ಡ/Password ಅನ್ನು ರಚನೆ ಮಾಡಿಕೊಳ್ಳಬೇಕು. ನಂತರ ಅರ್ಜಿದಾರ ಫಲಾನುಭವಿಯ ಹೆಸರು, ವಿಳಾಸ, ಪೋಟೋ ವೈಯಕ್ತಿಕ ವಿವರ ಗೋಚರಿಸುತ್ತದೆ ಕೊನೆಯಲ್ಲಿ ಮೊಬೈಲ್ ನಂಬರ್ ಹಾಕಿ "ಸರಿ" ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯ ಬೇಕು.

ಇದನ್ನೂ ಓದಿ: Gruhalakshmi Payment- ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಇಲ್ಲ ಗೃಹಲಕ್ಷ್ಮಿ ಯೋಜನೆ ರೂ 2,000 ಹಣ!

Step-4: ಈ ರೀತಿ ವಿಧಾನಗಳನ್ನು ಅನುಸರಿಸಿದ ಬಳಿಕ karnataka DBT ಮೊಬೈಲ್ ಅಪ್ಲಿಕೇಶನ್ ಮುಖಪುಟ ಭೇಟಿ ಮಾಡಿ ನೀವು ಈಗಾಗಲೇ ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ/Password ಅನ್ನು ನಮೂದಿಸಿ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಆಗಬೇಕು. ಇಲ್ಲಿ ಮುಖಪುಟದಲ್ಲಿ ನಾಲ್ಕು ಆಯ್ಕೆಗಳು ಕಾಣಿಸುತ್ತವೆ 1) ಪಾವತಿ ಸ್ಥಿತಿ/Payment Status, 2) ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಯೋಜನೆ/Adhar card link status, 3) ಪ್ರೋಪೈಲ್/Profile, 4)ಕನ್ನಡ/English ಭಾಷೆ ಆಯ್ಕೆ.

1)ಪಾವತಿ ಸ್ಥಿತಿ/Payment Status: ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಎಲ್ಲಾ ಯೋಜನೆಯ ಹೆಸರು ತೋರಿಸುತ್ತದೆ ಪ್ರತಿಯೊಂದು ಯೋಜನೆ ಮೇಲೆ ಕಿಕ್ ಮಾಡಿ ಹಣ ಪಾವತಿ ವಿವರ/Payment Status ಚೆಕ್ ಮಾಡಿಕೊಳ್ಳಬಹುದು.

2)ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಯೋಜನೆ/Adhar card link status: ಈ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಅಗಿದೆ ಎನ್ನುವ ವಿವರ ಪಡೆಯಬಹುದು. 

ಇದನ್ನೂ ಓದಿ: Annabhagya Payment- ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

3)ಪ್ರೋಪೈಲ್/Profile: ಇಲ್ಲಿ ನಿಮ್ಮ ಹೆಸರು, ಪೋಟೋ, ವೈಯಕ್ತಿಕ ವಿವರ ಇತ್ಯಾದಿ ಮಾಹಿತಿ ಇರುತ್ತದೆ.

4)ಕನ್ನಡ/English: ಕನ್ನಡ ಮತ್ತು English ಎರಡು ಭಾಷೆಯಲ್ಲಿಯೂ ಈ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆದಾರರು ಉಪಯೋಗಿಸಬಹುದು.