Krishi Honda subsidy- ಶೇ 90 ರಷ್ಟು ಸಹಾಯಧನದಲ್ಲಿ ಕೃಷಿ ಹೊಂಡವನ್ನು ಹೇಗೆ ಮಾಡಿಕೊಳ್ಳಬಹುದು?

ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ(krishi honda)ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಶೇ 90 ಸಹಾಯಧನದಲ್ಲಿ ಕೃಷಿ ಹೊಂಡ(Farm Pond) ನಿರ್ಮಾಣ, ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Stone Fencing), ಡೀಸೆಲ್ /ಪೆಟ್ರೋಲ್/ಸೋಲಾರ್ ಪಂಪ್ ಸೆಟ್(pump set) ಪಡೆಯಬಹುದಾಗಿದೆ.

Krishi Honda subsidy- ಶೇ 90 ರಷ್ಟು ಸಹಾಯಧನದಲ್ಲಿ ಕೃಷಿ ಹೊಂಡವನ್ನು ಹೇಗೆ ಮಾಡಿಕೊಳ್ಳಬಹುದು?
Krishi Honda yojane-2024

ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ(krishi honda)ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಶೇ 90 ಸಹಾಯಧನದಲ್ಲಿ ಕೃಷಿ ಹೊಂಡ(Farm Pond) ನಿರ್ಮಾಣ, ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Stone Fencing), ಡೀಸೆಲ್ /ಪೆಟ್ರೋಲ್/ಸೋಲಾರ್ ಪಂಪ್ ಸೆಟ್(pump set) ಪಡೆಯಬಹುದಾಗಿದೆ.

ಈ ಯೋಜನೆಯಡಿ ಸಹಾಯಧನ ಪಡೆಯುವುದು ಹೇಗೆ? ಯಾವೆಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳ ರೈತರು ಅರ್ಜಿ ಸಲ್ಲಿಸಬವುದು? ಅಗತ್ಯ ದಾಖಲಾತಿಗಳೇನು? ಯೋಜನೆ ಅನುಷ್ಠಾನ ಪ್ರಕ್ರಿಯೆ ಹೇಗಿರುತ್ತದೆ? ಘಟಕವಾರು ಸಬ್ಸಿಡಿ ಮೊತ್ತ ಎಷ್ಟು? ಈ ಕುರಿತು ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. 

ಕರ್ನಾಟಕ ರಾಜ್ಯದಲ್ಲಿ ಸುಮಾರು ಶೇ.64 ರಷ್ಟು ಸಾಗುವಳಿ ಪ್ರದೇಶವು ಮಳೆ ಆಶ್ರಿತ ಪ್ರದೇಶವಾಗಿರುತ್ತದೆ. ಇದರಲ್ಲಿ ಶೇ.55 ರಷ್ಟು ಆಹಾರ ಧಾನ್ಯಗಳ ಮತ್ತು ಶೇ.75 ರಷ್ಟು ಎಣ್ಣೆಕಾಳುಗಳ ಉತ್ಪಾದನೆಯು ಮಳೆಯಾಶ್ರಿತ ಪ್ರದೇಶದ ಕೊಡುಗೆಯಾಗಿದೆ. ನೀರಾವರಿ ಪ್ರದೇಶದ ರೈತರಿಗೆ ನೀರಿನ ಲಭ್ಯತೆ ಖಚಿತವಾದ ಕಾರಣ ನೀರಾವರಿಯಲ್ಲಿ ನಿರೀಕ್ಷಿತ ಆದಾಯ ಸಿಗುವುದರಿಂದ, ವಿವಿಧ ಯೋಜನೆಗಳ ಅನುಕೂಲಗಳನ್ನು ಪಡೆದು ವ್ಯವಸಾಯದಲ್ಲಿ ಹೂಡುವಳಿ ಮಾಡುತ್ತಾರೆ.

ಇದನ್ನೂ ಓದಿ: Bele vime status-2024: ಇಲ್ಲಿದೆ ಸರ್ವೆ ನಂಬರ್ ಹಾಕಿ ಎಷ್ಟು? ಬೆಳೆ ವಿಮೆ ಬಂದಿದೆ ಎಂದು ಚೆಕ್ ಮಾಡುವ ವಿಧಾನ! 

ಆದರೆ ಒಣ ಭೂಮಿ ರೈತರ ಆದಾಯ ಮಳೆ ಮೇಲೆ ಅವಲಂಬಿತವಾಗಿರುವುದರಿಂದ ಈ ಸವಲತ್ತುಗಳನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಇವರ ಜೀವನೋಪಾಯದ ಮೇಲೆ ಪ್ರಭಾವ ಬೀರಿದೆ. ಕಡಿಮೆ ಮಳೆ ಬೀಳುವ ಬಹುತೇಕ ಪ್ರದೇಶಗಳಲ್ಲಿ, ರೈತರು 1000 ಅಡಿವರೆಗೂ ಕೊಳವೆಬಾವಿ ಕೊರೆಯಲು ರೂ.20 ಲಕ್ಷಗಳನ್ನು ವೆಚ್ಚ ಮಾಡುತ್ತಿದ್ದಾರೆ. 

ಈ ಕೊಳವೆಬಾವಿ ವಿಫಲವಾದರೆ ಅಥವಾ ಕೆಲವು ವರ್ಷಗಳ ನಂತರ ಬತ್ತಿಹೋದ ಸಂದರ್ಭದಲ್ಲಿ ರೈತರು ಸಾಲಭಾಧೆಗೆ ಸಿಲುಕುತ್ತಿದ್ದಾರೆ. ಆದ್ದರಿಂದ, ರೈತರು ಕೊಳವೆಬಾವಿಯ ಬದಲಾಗಿ ಹೂಡಿಕೆಯನ್ನು ಕೃಷಿ ಭಾಗ್ಯ ಯೋಜನೆಯ ಘಟಕಗಳಲ್ಲಿ ಹೂಡಿಕೆ ಮಾಡಿ ಸುಸ್ಥಿರ ಕೃಷಿಗಾಗಿ ಬಳಸಬಹುದಾಗಿದೆ.

Krishi honda subsidy amount- ಕೃಷಿ ಹೊಂಡ ಸಹಾಯಧನ ವಿವರ:

Krishi bhagya application-2024: ಕೃಷಿ ಭಾಗ್ಯ ಯೋಜನೆಯಡಿ ಒದಗಿಸಲಾಗುವ ಸೌಲಭ್ಯಗಳ/ಘಟಕಗಳ ವಿವರಗಳು:

1. ಕ್ಷೇತ್ರ ಬದು ನಿರ್ಮಾಣ

2. ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ)

3. ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ

4. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (GI Wire Stone Fencing)

5. ಹೊಂಡದಿಂದ ನೀರು ಎತ್ತಲು ಡೀಸೆಲ್ /ಪೆಟ್ರೋಲ್/ಸೋಲಾರ್ ಪಂಪ್ ಸೆಟ್

6. ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು/ಹನಿ)ನೀರಾವರಿ

ಇದನ್ನೂ ಓದಿ: Crop insurance amount-2024: ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

Krishi bhagya guideline-ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಸಕ್ತ ರೈತರು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಅಗತ್ಯ ದಾಖಲಾತಿಗಳ ಸಮೇತ ಕಚೇರಿ ಸಮಯದಲ್ಲಿ ಭೇಟಿ ಮಾಡಿ ಅರ್ಜಿ ಸಲ್ಲಿಸಬವುದಾಗಿದೆ.

Required documents for krishi honda-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

  • ಅರ್ಜಿ ನಮೂನೆ(ರೈತ ಸಂಪರ್ಕ ಕೇಂದ್ರದಲ್ಲಿ ಸಿಗುತ್ತದೆ)
  • ಅರ್ಜಿದಾರರ ಅಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ಪಹಣಿ/ಉತಾರ್/RTC
  • ಜಾತಿ ಪ್ರಮಾಣ ಪತ್ರ(ಅನ್ವಯಿಸಿದಲ್ಲಿ ಮಾತ್ರ)
  • ಅರ್ಜಿದಾರರ ಪೋಟೋ
  • ರೇಷನ್ ಕಾರ್ಡ ಪ್ರತಿ

ಇದನ್ನೂ ಓದಿ: Railway Recruitment-2024: ಆಗ್ನೇಯ ಮಧ್ಯ ರೈಲ್ವೆಯಲ್ಲಿ 999+ ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಅಹ್ವಾನ!

Krishi bhagya application process- ಕೃಷಿ ಹೊಂಡ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವ ವಿಧಾನ:

1. ಕ್ಷೇತ್ರ ಬದು ನಿರ್ಮಾಣ ಹಾಗೂ ಕೃಷಿಹೊಂಡ ಪೂರ್ಣಗೊಂಡ ನಂತರ ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸಿಕೊಳ್ಳುವ ಬಗ್ಗೆ ರೈತರಿಂದ ದೃಡೀಕರಣ ಪತ್ರ ಪಡೆದುಕೊಂಡು, ಕ್ಷೇತ್ರ ಬದು ಹಾಗೂ ಕೃಷಿಹೊಂಡ ಘಟಕಗಳಿಗೆ ಸಂಬಂಧಿಸಿದ ಒಟ್ಟು ಸಹಾಯಧನದ ಶೇ. 75 ರಷ್ಟು ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.

2. ಪಾಲಿಥೀನ್ ಹೊದಿಕೆಗೆ ರೈತರ ವಂತಿಕೆ ಪಾವತಿಸಿ, ಕೃಷಿಹೊಂಡದಲ್ಲಿ ಪಾಲಿಥೀನ್ ಹೊದಿಕೆಯ ಅಳವಡಿಕೆಯ ನಂತರ ಸರಬರಾಜು ಸಂಸ್ಥೆಗೆ ಸಹಾಯಧನವನ್ನು ಪಾವತಿ ಮಾಡಲಾಗುತ್ತದೆ.

3. ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸಿದ ನಂತರ ಮಾರ್ಗಸೂಚಿಯನ್ವಯ ಸಹಾಯಧನವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡುವುದು.

4. ಡೀಸಲ್/ ಪೆಟ್ರೋಲ್ಸಂಪ್ ಸೆಟ್ ಮತ್ತು ಲಘು ನೀರಾವರಿ ಘಟಕಗಳಿಗೆ ಸಂಬಂಧಿಸಿದ ಸಹಾಯಧನವನ್ನು ಸರಬರಾಜು ಸಂಸ್ಥೆಗೆ ಪಾವತಿಸಲಾಗುತ್ತದೆ.

5. ಡೀಸಲ್/ ಪೆಟ್ರೋಲ್ ಪಂಪ್ ಸೆಟ್ ಬದಲಾಗಿ, ಸೋಲಾರ್ ಪಂಪ್ ಸೆಟ್ ಅನ್ನು ಇತರೆ ಇಲಾಖೆಗಳ ಚಾಲ್ತಿ ಯೋಜನೆಗಳಿಂದ ಪಡೆದು ಅಳವಡಿಸಿಕೊಂಡಿದ್ದಲ್ಲಿ ಪ್ರೋತ್ಸಾಹಧನವಾಗಿ ರೂ. 30,000/- ಗಳನ್ನು ಪ್ರತಿ ಘಟಕಕ್ಕೆ ಕೃಷಿ ಭಾಗ್ಯ ಯೋಜನೆಯಡಿ ವೆಚ್ಚ ಭರಿಸಲಾಗುತ್ತದೆ.

ಇದನ್ನೂ ಓದಿ: High Court Recruitment- ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪದವೀಧರರಿಗೆ ಉದ್ಯೋಗವಕಾಶ! 

Karnataka agriculture department- ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ:

ಕೃಷಿ ಭಾಗ್ಯ ಯೋಜನೆಯ 2023-24ರ ಮಾರ್ಗಸೂಚಿ: Download Now
ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್: click here
ಕೃಷಿ ಇಲಾಖೆ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳು: click here