Akrama-Sakrama-ಅಕ್ರಮ ಕೃಷಿ ಪಂಪ್ ಸೆಟ್ ಗಳಿಗೆ ಸಬ್ಸಿಡಿಯಲ್ಲಿ ವಿದ್ಯುತ್ ಸಂಪರ್ಕ!

January 22, 2026 | Siddesh
Akrama-Sakrama-ಅಕ್ರಮ ಕೃಷಿ ಪಂಪ್ ಸೆಟ್ ಗಳಿಗೆ ಸಬ್ಸಿಡಿಯಲ್ಲಿ ವಿದ್ಯುತ್ ಸಂಪರ್ಕ!
Share Now:

ರೈತರು ತಮ್ಮ ಕೃಷಿ ಜಮೀನಿನಲ್ಲಿ ಬೆಳೆಗಳಿಗೆ ನೀರನ್ನು ಒದಗಿಸಲು ಅಳವಡಿಸಿಕೊಂಡಿರುವ ಪಂಪ್ ಸೆಟ್ ಗೆ(Pumpset) ಅನಿವಾರ್ಯ ಕಾರಣಗಳಿಂದ ಅಧಿಕೃತ ವಿದ್ಯುತ್ ಸಂಪರ್ಕವನ್ನು ಪಡೆಯಲು ಸಾಧ್ಯವಾಗದೇ ಇದಾಗ ಇಂತಹ ಸನ್ನಿವೇಶದಲ್ಲಿ ಎಸ್ಕಾಂ ಕಚೇರಿಯಿಂದ ಸಹಾಯಧನದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶವಿದ್ದು ಇಂದಿನ ಅಂಕಣದಲ್ಲಿ ಈ ಬಗ್ಗೆ ಒಂದಿಷ್ಟು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಈ ಹಿಂದೆ ಅಕ್ರಮ-ಸಕ್ರಮ ಯೋಜನೆಯಡಿ ಉಚಿತವಾಗಿ ಪಂಪ್ ಸೆಟ್ ಗೆ ಅವಶ್ಯವಿರುವ ಟ್ರಾನ್ಸ್‌ಫಾರ್ಮರ್‌(TC) ಸೇರಿದಂತೆ ಇನ್ನಿತರೆ ಅಗತ್ಯ ಉಪಕರಣಗಳನ್ನು ರೈತರಿಗೆ ಒದಗಿಸಲಾಗುತಿತ್ತು ಅದರೆ ದಿನ ಕಳೆದಂತೆ ತೀರ್ವಗತಿಯಲ್ಲಿ ಏರಿಕೆಯಾಗುತ್ತಿರುವ ಪಂಪ್ ಸೆಟ್ ಸಂಖ್ಯೆಗೆ ಅನುಗುಣವಾಗು ಈ ಯೋಜನೆಯ ಅನುಷ್ಥಾನವು ವಿಳಂಬವಾಗಿದ್ದು ರೈತರು ಅರ್ಜಿ ಸಲ್ಲಿಸಿ(KEB) ವರ್ಷಗಟ್ಟಲೆ ಕಾಯಬೇಕಾಗಿದೆ.

ಇದನ್ನೂ ಓದಿ: BGM Foundation-ಬಿಜಿಎಂ ಫೌಂಡೇಶನ್ ವತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನ!

ಪ್ರಸ್ತುತ ರೈತರು ಅಕ್ರಮ ಕೃಷಿ ಪಂಪ್ ಸೆಟ್(Agriculture Pumpset) ಗಳಿಗೆ ಸಬ್ಸಿಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯುವುದು ಹೇಗೆ? ಕೃಷಿ ಪಂಪ್ ಸೆಟ್ ಗೆ ವಿದ್ಯುತ್ ಸಂಪರ್ಕವನ್ನು ಪಡೆಯಲು ಇಲಾಖೆಯಿಂದ ರೂಪಿಸಿರುವ ನಿಯಮಗಳು ಯಾವುವು? ವಿದ್ಯುತ್ ಸಂಪರ್ಕ ಪಡೆಯಲು ರೈತರು ಅನುಸರಿಸಬೇಕಾದ ಕ್ರಮಗಳು ಯಾವುವು? ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆ ಸೇರಿದಂತೆ ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Akrama-Sakrama-ಅಕ್ರಮ-ಸಕ್ರಮ ಯೋಜನೆ:

ಕೃಷಿಕರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ನೀರಿನ ಅಭಾವ ಇರುವ ಸಮಯದಲ್ಲಿ ಅಗತ್ಯವಿರುವ ನೀರನ್ನು ಒದಗಿಸಲು ಪಂಪ್ ಸೆಟ್ ಅನ್ನು ಅಳವಡಿಕೆ ಮಾಡಿಕೊಂಡಿರುತ್ತಾರೆ ನೂತನವಾಗಿ ಬೋರ್ವೆಲ್ ಕೊರೆಸಿದಾಗ ತ್ವರಿತವಾಗಿ ಅಧಿಕೃತ ವಿದ್ಯುತ್ ಸಂಪರ್ಕ ಪಡೆಯಲು ಅಗದೇ ಕಾನೂನು ಬಾಹಿರವಾಗಿ ಯಾವುದೇ RR ಸಂಖ್ಯೆ ಪಡೆಯದೇ ಅಕ್ರಮ ವಿದ್ಯುತ್ ಸಂಪರ್ಕಕ್ಕೆ ಪಂಪ್ ಸೆಟ್ ನಿಂದ ನೀರನ್ನು ಜಮೀನಿನ ಹಾಯಿಸುತ್ತಾರೆ ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಒದಗಿಸಲು ರಾಜ್ಯ ಸರಕಾರದಿಂದ ಎಲ್ಲಾ ಎಸ್ಕಾ ಕಚೇರಿಗಳ ಮೂಲಕ ಅಕ್ರಮ-ಸಕ್ರಮ ಯೋಜನೆಯನ್ನು ಅನುಷ್ಥಾನ ಮಾಡಲಾಗುತ್ತಿದೆ.

ಈ ಯೋಜನೆಯ ಮೂಲಕ ಅನಧಿಕೃತವಾಗಿ ವಿದ್ಯುತ್ ಬಳಸುತ್ತಿದ್ದ ಲಕ್ಷಾಂತರ ರೈತರಿಗೆ ಕಾನೂನುಬದ್ಧ ಸಂಪರ್ಕ ಕಲ್ಪಿಸಿ, ಸುಸ್ಥಿರ ಕೃಷಿಗೆ ದಾರಿಯ ಮಾಡಿಕೊಡಲಾಗುತ್ತಿದೆ. ಜೊತೆಗೆ ಸಹಾಯಧನದಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ.

ಇದನ್ನೂ ಓದಿ: Best Savings Plan-ಸುಕನ್ಯಾ ಸಮೃದ್ಧಿ ಯೋಜನೆ: ₹1.5 ಲಕ್ಷ ಹೂಡಿಕೆಗೆ ₹69 ಲಕ್ಷ ರಿಟರ್ನ್ಸ್!

Akrama-Sakrama Yojane Details-ಅಕ್ರಮ-ಸಕ್ರಮ ಯೋಜನೆ ಉದ್ದೇಶ:

ರೈತರಿಗೆ ಅಧಿಕೃತ ವಿದ್ಯುತ್ ಸಂಪರ್ಕ ಒದಗಿಸಲಿ ಅಕ್ರಮ ಪಂಪ್ ಸೆಟ್ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಿ ಅಧಿಕೃತ RR ಸಂಖ್ಯೆ ನೀಡುವುದು.

ಅಕ್ರಮ ಸಂಪರ್ಕದಿಂದ ರೈತರಿಗೆ ವಿಧಿಸುವ ದಂಡದಿಂದ ಮುಕ್ತಿ ನೀಡುವುದು.

ಇದಲ್ಲದೇ 500 ಮೀಟರ್‌ಗಿಂತ ದೂರವಿರುವ ಪಂಪ್‌ಸೆಟ್‌ಗಳಿಗೆ ಕುಸುಮ್-ಬಿ ಯೋಜನೆಯಡಿ ಶೇ. 80ರಷ್ಟು ಸರ್ಕಾರಿ ಸಹಾಯಧನದೊಂದಿಗೆ ಸೌರಶಕ್ತಿ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಲು ಉತ್ತೇಜಿಸಲಾಗುತ್ತದೆ. ಈ ಮೂಲಕ ರೈತರಿಗೆ ಹಗಲು ವೇಳೆ ನಿರಂತರ 7 ಗಂಟೆಗಳ ಕಾಲ ಉಚಿತ ವಿದ್ಯುತ್ ಒದಗಿಸುವುದು.

ಇದನ್ನೂ ಓದಿ: Prize Money-2025-26ನೇ ಸಾಲಿನ ಮೆಟ್ರಿಕ್ ನಂತರದ ಮತ್ತು SSLC ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ!

Akrama-Sakrama Scheme-ಅಕ್ರಮ-ಸಕ್ರಮ ಯೋಜನೆ ಇಲಾಖಾ ನಿಯಮಗಳು:

ಈಗಾಗಲೇ ಅನಧಿಕೃತವಾಗಿ ಕೃಷಿಕರು ತಮ್ಮ ಪಂಪ್ ಸೆಟ್ ಗಳಿಗೆ ವಿದ್ಯುತ್ ಅನ್ನು ಪಡೆದಿರುವವರು ಅಕ್ರಮ-ಸಕ್ರಮ ಯೋಜನೆ ಮೂಲಕ ಅರ್ಜಿ ಸಲ್ಲಿಸಿ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಲು ಇಲಾಖೆಯಿಂದ ನಿಗದಿಪಡಿಸಿರುವ ಮಾರ್ಗಸೂಚಿ ವಿವರ ಈ ಕೆಳಗಿನಂತಿದೆ.

ಒಂದು ವೇಳೆ ರೈತರ ಪಂಪ್‌ಸೆಟ್ ಹತ್ತಿರದ ಟ್ರಾನ್ಸ್‌ಫಾರ್ಮರ್‌(TC) ಇಂದ 500 ಮೀಟರ್ ಒಳಗಿದ್ದರೆ, ಅಸ್ತಿತ್ವದಲ್ಲಿರುವ ವಿದ್ಯುತ್ ಜಾಲದ ಮೂಲಕವೇ ನೇರವಾಗಿ ಸಂಪರ್ಕವನ್ನು ಒದಗಿಸಿ ಅಧಿಕೃತ RR ಸಂಖ್ಯೆಯನ್ನು ನೀಡಿ ಸಕ್ರಮಗೊಳಿಸಲಾಗುತ್ತದೆ.

ಒಂದೊಮ್ಮೆ ಪಂಪ್ ಸೆಟ್ ಟ್ರಾನ್ಸ್‌ಫಾರ್ಮರ್‌ನಿಂದ 500 ಮೀಟರ್‌ಗಿಂತ ಹೆಚ್ಚಿನ ದೂರದಲ್ಲಿ ಇದ್ದರೆ ಇಂಹತ ಪಂಪ್‌ಸೆಟ್‌ಗಳಿಗೆ ಸಾಂಪ್ರದಾಯಿಕ ವಿದ್ಯುತ್ ಕಂಬಗಳ ಮೂಲಕ ಸಂಪರ್ಕ ನೀಡುವುದು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಕಷ್ಟಸಾಧ್ಯವಾಗಿರುತ್ತದೆ.

ಇಂತಹ ಸನ್ನಿವೇಶದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಸೌರಶಕ್ತಿ ಚಾಲಿತ ಪಂಪ್‌ಸೆಟ್‌ಗಳಿಗೆ ಕುಸುಮ-ಸಿ ಯೋಜನೆಯಡಿ ಶೇ 80% ಸಹಾಯಧನದಲ್ಲಿ ವಿದ್ಯುತ್ ಅನ್ನು ಅಳವಡಿಸಿಕೊಳ್ಳಲು ನೆರವು ನೀಡುತ್ತದೆ.

ಇದನ್ನೂ ಓದಿ: Bhoo Odetana Yojana-ಭೂ ಒಡೆತನ ಯೋಜನೆಯಡಿ ಸ್ವಂತ ಜಮೀನು ಖರೀದಿಗೆ 12.5 ಲಕ್ಷ ಸಹಾಯಧನ!

Akrama-Sakrama Yojane

ಇದನ್ನೂ ಓದಿ: Re-Marriage Assistance-ವಿಧವಾ ಮರು ವಿವಾಹ ಪ್ರೋತ್ಸಾಹಧನ ಯೋಜನೆಯಡಿ ₹3.0 ಲಕ್ಷ ಆರ್ಥಿಕ ನೆರವು!

How To Apply-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅಕ್ರಮ-ಸಕ್ರಮ ಯೋಜನೆ ಮತ್ತು ಶೇ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್ ಸೆಟ್ ಗೆ ವಿದ್ಯುತ್ ಸಂಪರ್ಕವನ್ನು ಪಡೆಯಲು ಅರ್ಹ ರೈತರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಎಸ್ಕಾಂ ಕಚೇರಿಯನ್ನು(KEB Office) ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Documents For Application-ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳು:

ಈ ಯೋಜನೆಯಡಿ ರೈತರು ಅರ್ಜಿ ಸಲ್ಲಿಸಿ ಆರ್ಥಿಕ ನೆರವಿನೊಂದಿಗೆ ವಿದ್ಯುತ್ ಸಂಪರ್ಕವನ್ನು ಪಡೆಯಲು ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ:

ಆಧಾರ್ ಕಾರ್ಡ್/Aadhar
ಜಮೀನಿನ ಪಹಣಿ/RTC/ಉತಾರ್
ಬ್ಯಾಂಕ್ ಪಾಸ್ ಬುಕ್/Bank Pass Book
ಪೋಟೋ/Photo

ಇದನ್ನೂ ಓದಿ: Anabe Krishi Subsidy-ಅಣಬೆ ಕೃಷಿಯನ್ನು ಪ್ರಾರಂಭಿಸಲು ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

Escom Notification For Akrama-Sakrama Yojana-ಎಸ್ಕಾಂ ಗಳಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಅಧಿಕೃತ ವಿದ್ಯುತ್‌ ಬಳಸುವ ಬಗ್ಗೆ ಹೊರಡಿಸಿರುವ ಪ್ರಕಟಣೆ ವಿವರ ಹೀಗಿದೆ:

ನಿಮ್ಮ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಅವಶ್ಯಕತೆಯಿದ್ದಲ್ಲಿ, ಹೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗ ಕಚೇರಿಗೆ ಭೇಟಿ ನೀಡಿ ಅಧೀಕೃತವಾಗಿ ಹೊಸ ಸಂಪರ್ಕ ಪಡೆಯಿರಿ.

ರೈತರು ಕಡ್ಡಾಯವಾಗಿ ಆಧಾರ ಸಂಖ್ಯೆ ಜೋಡಿಸಿದ್ದಲ್ಲಿ ಮಾತ್ರ 10 ಹೆಚ್‌ಪಿ ವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಮಾತ್ರ ಸಬ್ಸಿಡಿ ಪಡೆಯಲು ಅವಕಾಶವಿರುತ್ತದೆ.

ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಜಾಲದ ಹೊರತಾಗಿ ಕುಸುಮ್ ಬಿ ಯೋಜನೆಯಡಿ ಸೋಲಾ‌ರ್ ವಿದ್ಯುತ್ ಬಳಸಿ. ಈ ಯೋಜನೆಯಡಿ ರಾಜ್ಯ ಸರ್ಕಾರದಿಂದ ಶೇ.50, ಕೇಂದ್ರ ಸರ್ಕಾರದಿಂದ ಶೇ.30 ಸಬ್ಸಿಡಿ ಲಭ್ಯ.ಕೇವಲ ಶೇ.20 ರಷ್ಟು ಹಣ ಮಾತ್ರ ರೈತರು ಭರಿಸಬೇಕು.

ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಜಾಲದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುವುದು ಅಥವಾ ವಿದ್ಯುತ್ ಕಳ್ಳತನ ಮಾಡುವುದು ಕಾನೂನುಬಾಹಿರ ಹಾಗೂ ಅದರಿಂದ ವಿದ್ಯುತ್ ಅವಘಡಗಳು ಸ೦ಭವಿಸಬಹುದು.

ವಿದ್ಯುತ್ ಕಳ್ಳತನ ಪ್ರಯತ್ನದ ನಡುವೆ ವಿದ್ಯುತ್ ಅಪಘಾತ ಸಂಭವಿಸಿ ಪ್ರಾಣಹಾನಿಯಾಗುತ್ತಿವೆ.

ವಿದ್ಯುತ್ ಜಾಲಕ್ಕೆ ಅಕ್ರಮ ಕೃಷಿ ಪಂಪ್‌ಸೆಟ್‌ಗಳು ಜೋಡಣೆಗೊಂಡಲ್ಲಿ ವಿದ್ಯುಚ್ಛಕ್ತಿ ಕಾಯ್ದೆ 2003ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಸೌರ ವಿದ್ಯುತ್ ಬಳಕೆ ಮೂಲಕ ಪರಿಸರ ಸ್ನೇಹಿ ವಿದ್ಯುತ್ ವ್ಯವಸ್ಥಗೆ ಕೈಜೋಡಿಸಿ ಎಂದು ಪ್ರಕಟಣೆ ಹೊರಡಿಸಲಾಗಿದೆ.

Helpline Number-ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ- 1912

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: