Annabhagya DBT Status-ಇಲ್ಲಿಯವರೆಗೆ ಅನ್ನಭಾಗ್ಯ ಯೋಜನೆಯಡಿ ಎಷ್ಟು ಹಣ ಜಮಾ ಆಗಿದೆ? ಎಂದು ಹೇಗೆ ತಿಳಿಯುವುದು?

December 30, 2024 | Siddesh
Annabhagya DBT Status-ಇಲ್ಲಿಯವರೆಗೆ ಅನ್ನಭಾಗ್ಯ ಯೋಜನೆಯಡಿ ಎಷ್ಟು ಹಣ ಜಮಾ ಆಗಿದೆ? ಎಂದು ಹೇಗೆ ತಿಳಿಯುವುದು?
Share Now:

ಕರ್ನಾಟಕ ರಾಜ್ಯ ಸರಕಾರದಿಂದ ಪಡಿತರ ಚೀಟಿ ಹೊಂದಿರುವ ಅರ್ಹ ಗ್ರಾಹಕರಿಗೆ ಪ್ರತಿ ತಿಂಗಳು ಅನ್ನಭಾಗ್ಯ(Annabhagya DBT Status) ಯೋಜನೆಯಡಿ ಇಲ್ಲಿಯವರೆಗೆ ಎಷ್ಟು ಕಂತು? ಹಾಗೂ ಎಷ್ಟು ಹಣ ಜಮಾ ಅಗಿದೆ ಎಂದು ಯಾವ ವಿಧಾನ ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ತಿಳಿದುಕೊಳ್ಳಬಹುದು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಜನರಿಗೆ ಆಹಾರ ಇಲಾಖೆಯಿಂದ ಪ್ರತಿ ತಿಂಗಳು ಆಹಾರ ಧಾನ್ಯವನ್ನು(Annabhagya amount) ವಿತರಣೆ ಮಾಡಲಾಗುತ್ತದೆ ಇದರಂತೆ ಹೆಚ್ಚುವರಿಯಾಗಿ ನೀಡಬೇಕಾದ ಅಕ್ಕಿಗೆ ಬದಲಾಗಿ ಪ್ರತಿ ಕೆಜಿ ಅಕ್ಕಿಗೆ ರೂ 170 ಅನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತದೆ.

ರೇಷನ್ ಕಾರ್ಡ ಹೊಂದಿರುವ ಗ್ರಾಹಕರಿಗೆ ನೇರ ನಗದು ವರ್ಗಾವಣೆಯ(DBT status) ಮೂಲಕ ಜಮಾ ಮಾಡುವ ಹಣ ಇಲ್ಲಿಯವರೆಗೆ ಎಷ್ಟು ಜಮಾ ಮಾಡಲಾಗಿದೆ? ಯಾವ ಯಾವ ತಿಂಗಳು ಎಷ್ಟು ಹಣ? ದಿನಾಂಕ, UTR ನಂಬರ್ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಗ್ರಾಹಕರು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಪಡೆಯಲು ಇನ್ನು 2 ದಿನ ಮಾತ್ರ ಅವಕಾಶ! 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ!

Annabhagya DBT Status-ಇಲ್ಲಿಯವರೆಗೆ ಅನ್ನಭಾಗ್ಯ ಯೋಜನೆಯಡಿ ಎಷ್ಟು ಹಣ ಜಮಾ ಆಗಿದೆ? ಈ ಕೆಳಗಿನ ವಿಧಾನ ಅನುಸರಿಸಿ ಚೆಕ್ ಮಾಡಿ:

ರಾಜ್ಯ ಸರಕಾರದಿಂದ ಪ್ರತಿ ತಿಂಗಳು ನೇರ ನಗದು ವರ್ಗಾವಣೆ ಮೂಲಕ ಅರ್ಹ ಪಡಿತರ ಚೀಟಿದಾರರಿಗೆ(Ration Card) ಜಮಾ ಮಾಡುವ ಅಕ್ಕಿ ಹಣದ ಜಮಾ ವಿವರವನ್ನು ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ಡಿಬಿಟಿ ಕರ್ನಾಟಕ ಮೊಬೈಕ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣ ಮಾಹಿತಿಯನ್ನು ಕೇವಲ ಒಂದೆರಡು ಕ್ಲಿಕ್ ನಲ್ಲಿ ಪಡೆಯಬಹುದು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ Download DBT Karnataka Mobile Application ಮಾಡಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ ರಾಜ್ಯ ಸರಕಾರದ ಅಧಿಕೃತ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಇದಾದ ಬಳಿಕ ನಿಮ್ಮ 12 ಅಂಕಿಯ ಅಧಾರ್ ಕಾರ್ಡ ನಂಬರ್ ಅನ್ನು ಹಾಕಿ "OTP ಪಡೆಯಿರಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಒಟಿಪಿಯನ್ನು ಪಡೆದು ನಾಲ್ಕು ಅಂಕಿಯ ಒಟಿಪಿಯನ್ನು ನಮೂದಿಸಿ ಮುಂದುವರೆಯಬೇಕು.

ಇದನ್ನೂ ಓದಿ: Ration Card News-ರೇಶನ್ ಕಾರ್ಡ ಹೊಂದಿರುವವರು ಈ ಕೆಲಸ ಮಾಡಲು ಇನ್ನು 3 ದಿನ ಮಾತ್ರ ಬಾಕಿ!

Step-3: OTP ಅನ್ನು ಹಾಕಿದ ನಂತರ ನಿಮ್ಮ ಹೆಸರು, ವಿಳಾಸ ಇತರೆ ವೈಯಕ್ತಿಕ ವಿವರ ಗೋಚರಿಸುತ್ತದೆ ಇದೇ ಪೇಜ್ ನಲ್ಲಿ ಕೊನೆಯಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಕೊನೆಯಲ್ಲಿ ಕಾಣುವ "ಸರಿ" ಬಟನ್ ಮೇಲೆ ಕ್ಲಿಕ್ ಮಾಡಿ ಈ ಅಪ್ಲಿಕೇಶನ್ ಅನ್ನು ಲಾಗಿನ್ ಮಾಡುವುದಕ್ಕೆ ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳಬೇಕು.

Step-4: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ಹಾಕಿ ಈ ಅಪ್ಲಿಕೇಶನ್ ಅನ್ನು ಲಾಗಿನ್ ಅಗಬೇಕು.

Annabhagya amount status

Step-5: ಈ ಅಪ್ಲಿಕೇಶನ್ ಗೆ ಲಾಗಿನ್ ಅದ ಬಳಿಕ ಇಲ್ಲಿ ನಾಲ್ಕು ಆಯ್ಕೆಗಳು ಗೋಚರಿಸುತ್ತವೆ ಮುಖಪುಟದ ಎಡಬದಿಯಲ್ಲಿ ಕಾಣುವ "ಪಾವತಿ ಸ್ಥಿತಿ" ಬಟನ್ ಮೇಲೆ ಕ್ಲಿಕ್ ಮಾಡಿ "ಅನ್ನಭಾಗ್ಯ ಯೋಜನೆ" ಆಯ್ಕೆಯ ಮೇಲೆ ಒತ್ತಿ ಈ ಯೋಜನೆಯಡಿ ಇಲ್ಲಿಯವರೆಗೆ ಎಷ್ಟು ಹಣ ಜಮಾ ಅಗಿದೆ? ಪ್ರತಿ ತಿಂಗಳುವಾರು ಎಷ್ಟು ಎಷ್ಟು ಹಣ? ಜಮಾ ಅದ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆ ಸೇರಿದಂತೆ ಸಂಪೂರ್ಣ ವಿವರವನ್ನು ಪಡೆಯಬಹುದು.

Annabhagya amount DBT Status

ಇದನ್ನೂ ಓದಿ: Village Map-ನಿಮ್ಮ ಜಮೀನಿಗೆ ಹೋಗಲು ದಾರಿ ಸಮಸ್ಯೆಯೇ? ಇಲ್ಲಿದೆ ಅಧಿಕೃತ ದಾರಿ ನಕ್ಷೆ!

Adhar card bank link status-ಈ ಅಪ್ಲಿಕೇಶನ್ ನಲ್ಲಿ ಆಧಾರ್ ಲಿಂಕ್ ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದು:

ಸಾರ್ವಜನಿಕರು ಡಿಬಿಡಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ನಲ್ಲಿ ವಿವಿಧ ಯೋಜನೆಯ ಹಣ ಜಮಾ ವಿವರ ಪಡೆಯುವುದರ ಜೊತೆಯಲ್ಲಿ ಯಾವ ಬ್ಯಾಂಕ್ ಗೆ ಆಧಾರ್ ಕಾರ್ಡ ಲಿಂಕ್ ಅಗಿದೆ ಎಂದು ಸಹ ಆಧಾರ್ ಕಾರ್ಡ ಲಿಂಕ್ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಮೇಲೆ ತಿಳಿಸಿರುವ ಹಂತವನ್ನು ಅನುಸರಿಸಿ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಅದ ಬಳಿಕ ಈ ಅಪ್ಲಿಕೇಶನ್ ನಲ್ಲಿ "Seeding Status of aadhar in bank account" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ ಬ್ಯಾಂಕ್ ಖಾತೆಗೆ ಲಿಂಕ್ ಅಗಿರುವ ವಿವರ ತೋರಿಸುತ್ತದೆ.

Step-2: ಇಲ್ಲಿ Seeding Status: ನಲ್ಲಿ "Active" ಎಂದು ತೋರಿಸುತ್ತದೆ ಆಧಾರ್ ಲಿಂಕ್ ಅಗದಿದ್ದರೆ "Inactive" ಎಂದು ತೋರಿಸುತ್ತದೆ. ಇದಲ್ಲದೇ ಯಾವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿದೆ ಎನ್ನುವ ಮಾಹಿತಿಯನ್ನು ಸಹ ತೋರಿಸುತ್ತದೆ.

WhatsApp Group Join Now
Telegram Group Join Now
Share Now: