HomeNew postsApril pension amount-2024: ಪಿಂಚಣಿ ಹಣ ಫಲಾನುಭವಿಗಳ ಖಾತೆಗೆ ಬಿಡುಗಡೆ! ಈ ಪಟ್ಟಿಯಲ್ಲಿರುವವರಿಗೆ ಮಾತ್ರ!

April pension amount-2024: ಪಿಂಚಣಿ ಹಣ ಫಲಾನುಭವಿಗಳ ಖಾತೆಗೆ ಬಿಡುಗಡೆ! ಈ ಪಟ್ಟಿಯಲ್ಲಿರುವವರಿಗೆ ಮಾತ್ರ!

ಪಿಂಚಣಿ ನಿರ್ದೇಶನಾಲಯದಿಂದ ಅರ್ಹ ಪಿಂಚಣಿದಾರ ಫಲಾನುಭವಿಗಳಿಗೆ ಎಪ್ರಿಲ್-2024 ತಿಂಗಳ(April pension amount-2024) ಎಲ್ಲಾ ವಿವಿಧ ಮಾಸಿಕ ಪಿಂಚಣಿಯನ್ನು ಜಮಾ ಮಾಡಲಾಗಿದೆ.

ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ ಪಿಂಚಣಿ ನಿರ್ದೇಶನಾಲಯದಿಂದ ಪ್ರತಿ ತಿಂಗಳು 15ನೇ ತಾರೀಖಿನ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಪಿಂಚಣಿಯನ್ನು ನೇರ ನಗದು ವರ್ಗಾವಣೆ(DBT)ಮೂಲಕ ಜಮಾ ಮಾಡಲಾಗುತ್ತದೆ. ನಿಮ್ಮ ಖಾತೆಗೆ ಪಿಂಚಣಿ ಹಣ ವರ್ಗಾವಣೆ ಅಗಿದಿಯೋ? ಇಲ್ಲವೋ? ಎಂದು ಪ್ರತಿ ತಿಂಗಳು ಬ್ಯಾಂಕ್ ಶಾಖೆ ಭೇಟಿ ಮಾಡದೇ ನಿಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಪಿಂಚಣಿದಾರರು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಪ್ರತಿ ತಿಂಗಳು ಪಿಂಚಣಿ ಹಣ ಜಮಾ ಅಗಿರುವುದನ್ನು ಮನೆಯಲ್ಲೇಕುಳಿತು ಖಚಿತಪಡಿಸಿಕೊಳ್ಳಬಹುದು.

ಇದನ್ನೂ ಓದಿ: land registration- ಜಮೀನಿನ ಮಾಲೀಕ ಮರಣ ಹೊಂದಿದ ನಂತರ ವಾರಸುದಾರ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ?

pension amount status check: ನಿಮ್ಮ ಖಾತೆಗೆ ಪಿಂಚಣಿ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ:

ಸರಕಾರದ ಅಧಿಕೃತ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನಿಮ್ಮ ಖಾತೆಗೆ ಪಿಂಚಣಿ ಹಣ ಜಮಾ ಅಗಿರುವುದನ್ನು ಚೆಕ್ ಮಾಡಬಹುದು.

Step-1: ಮೊದಲು ಈ ಲಿಂಕ್ DBT karanataka app ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ “ಡಿಬಿಟಿ ಕರ್ನಾಟಕ” ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಪಿಂಚಣಿ ಪಡೆಯುತ್ತಿರುವ ಫಲಾನುಭವಿಯ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಆಧಾರ್ ಕಾರ್ಡ ನಲ್ಲಿ ನಮೂದಿಸಿರುವ ಮೊಬೈಲ್ ನಂಬರ್ ಗೆ ಬರುವ 6 ಅಂಕಿಯ OTP/ಒಟಿಪಿ ಅನ್ನು ನಮೂದಿಸಬೇಕು.(ಗಮನಿಸಿ: ಮೊದಲ ಸಲ ಪ್ರಯತ್ನಿಸಿದಾದ OTP ನಿಮ್ಮ ಮೊಬೈಲ್ ಗೆ ಬಂದಿಲ್ಲವಾದಲ್ಲಿ resend otp ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತೊಮ್ಮೆ ಚೆಕ್ ಮಾಡುವುದು)

ಇದನ್ನೂ ಓದಿ: Bele parihara amount- ಈ ತಪ್ಪು ಮಾಡಿದರೆ ನಿಮ್ಮ ಖಾತೆಗೆ ಬರುವುದಿಲ್ಲ ಬರ ಪರಿಹಾರ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

OTP/ಒಟಿಪಿ ಪಡೆದು ಅದನ್ನು ನಮೂದಿಸಿದ ಬಳಿಕ ನಿಮಗೆ ನೆನಪಿನಲ್ಲಿ ಉಳಿಯುವ 4 ನಂಬರಿನ ಪಾಸ್ವರ್ಡ/Password ಅನ್ನು ರಚನೆ ಮಾಡಿಕೊಳ್ಳಬೇಕು. ನಂತರ ಅರ್ಜಿದಾರ ಫಲಾನುಭವಿಯ ಹೆಸರು, ವಿಳಾಸ, ಪೋಟೋ ವೈಯಕ್ತಿಕ ವಿವರ ತೋರಿಸುತ್ತದೆ ಕೊನೆಯಲ್ಲಿ ಮೊಬೈಲ್ ನಂಬರ್ ಹಾಕಿ “ಸರಿ” ಎಂದು ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ನೀವು ಈಗಾಗಲೇ ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ/Password ಅನ್ನು ನಮೂದಿಸಿ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಆಗಬೇಕು ಇಲ್ಲಿ “ಪಾವತಿ ಸ್ಥಿತಿ/Payment Status”  ಬಟನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಪಿಂಚಣಿ ಹಣ ಜಮಾ ಅಗಿರುವ ವಿವರವನ್ನು ಇಲ್ಲಿ ಪಡೆಯಬಹುದು.

Karnataka pension yojana-ಪ್ರಸ್ತುತ ಯಾವೆಲ್ಲ ಪಿಂಚಣಿ ಯೋಜನೆಗಳು ನಮ್ಮ ರಾಜ್ಯದಲ್ಲಿವೆ? ಎಷ್ಟು ಪಿಂಚಣಿ ನೀಡಲಾಗುತ್ತದೆ?

1)ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ/ಸಂಧ್ಯಾ ಸುರಕ್ಷಾ- Rs. 1,200 
2)ವಿಧವಾ ಪಿಂಚಣಿ ಯೋಜನೆ- Rs. 800
3)ಅಂಗವಿಕಲ ಪಿಂಚಣಿ- Rs. 1400 ರಿಂದ Rs. 2000 ರವರೆಗೆ.
4)ಸಂಧ್ಯಾ ಸುರಕ್ಷಾ ಯೋಜನ- Rs. 1200
5)ಮನಸ್ವಿನಿ ಯೋಜನೆ- Rs. 800
6)ಮೈತ್ರಿ ಯೋಜನೆ- Rs. 800
7)ಸಾಲದ ಭಾದೆಯಿಂದ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ – Rs. 800
8)ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ- Rs. 10,000
9)ಎಂಡೋಸಲ್ಫಾನ್‌ ಸಂತ್ರಸ್ಥರಿಗೆ ಮಾಸಿಕ ಪಿಂಚಣಿ- Rs. 2000 ರಿಂದ Rs. 4000 ರವರೆಗೆ.

ಇದನ್ನೂ ಓದಿ: Parihara amount-2024: ಕೇಂದ್ರದಿಂದ 3498 ಕೋಟಿ ಬರ ಪರಿಹಾರ ಬಿಡುಗಡೆ! ಈ ಪಟ್ಟಿಯಲ್ಲಿರುವ ರೈತರಿಗೆ ಸಿಗಲಿದೆ ಪರಿಹಾರದ ಹಣ!

pension beneficiary list- ಈ ಪಟ್ಟಿಯಲ್ಲಿ ಹೆಸರಿರುವವರಿಗೆ ಮಾತ್ರ ಸಿಗಲಿದೆ ಪಿಂಚಣಿ ಹಣ:

ಈ ಲಿಂಕ್ Pension beneficiary list  ಮೇಲೆ ಕ್ಲಿಕ್ ಮಾಡಿ ಅಧಿಕೃತ ಪಿಂಚಣಿ ನಿರ್ದೇಶನಾಲಯದ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮೀಣ/ನಗರ ಆಯ್ಕೆ ಮಾಡಿಕೊಂಡು ಬಳಿಕ ನಿಮ್ಮ ಹೋಬಳಿ, ಗ್ರಾಮ ಆಯ್ಕೆ ಮಾಡಿ ಕೆಳಗೆ ಕಾಣುವ Captcha ಕೋಡ್ ಅನ್ನು ಹಾಕಿ Serach ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಪಿಂಚಣಿ ಪಡೆಯಲು ಅರ್ಹರಿರುವ ಫಲಾನುಭವಿಗಳ ಪಟ್ಟಿ ತೋರಿಸುತ್ತದೆ ಈ ಹೆಸರಿರುವವರಿಗೆ ಮಾತ್ರ ಪ್ರತಿ ತಿಂಗಳು ಪಿಂಚಣಿ ಜಮಾ ಅಗುತ್ತದೆ.

Most Popular

Latest Articles

Related Articles