Arecanut News-ಅಡಿಕೆ ಕಳಂಕ ಮುಕ್ತಕ್ಕೆ ಸರ್ಕಾರದ ಹೆಜ್ಜೆ: ಸಂಶೋಧನಾ ವರದಿ ಬಳಿಕ ಅಂತಿಮ ತೀರ್ಮಾನ!

March 19, 2026 | Siddesh
Arecanut News-ಅಡಿಕೆ ಕಳಂಕ ಮುಕ್ತಕ್ಕೆ ಸರ್ಕಾರದ ಹೆಜ್ಜೆ: ಸಂಶೋಧನಾ ವರದಿ ಬಳಿಕ ಅಂತಿಮ ತೀರ್ಮಾನ!
Share Now:

ಅಡಿಕೆ ಬೆಳೆಗಾರರ ದಶಕಗಳ ಆತಂಕಕ್ಕೆ ಶೀಘ್ರದಲ್ಲೇ ವೈಜ್ಞಾನಿಕ ಪರಿಹಾರ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಅಡಿಕೆ(Arecanut Health Impact) ಆರೋಗ್ಯಕ್ಕೆ ಹಾನಿಕಾರಕ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಲು ರಾಜ್ಯ ಸರ್ಕಾರವು ಗಂಭೀರ ಸಂಶೋಧನೆಗೆ ಮುಂದಾಗಿದ್ದು, ಈ ವರದಿಯ ಆಧಾರದ ಮೇಲೆ ಅಡಿಕೆಯ ಪರವಾಗಿ ದೊಡ್ಡ ಮಟ್ಟದ ಪ್ರಚಾರಾಂದೋಲನ ಕೈಗೊಳ್ಳಲು ಸಜ್ಜಾಗಿದೆ. ವಿಧಾನ ಪರಿಷತ್ ಅಧಿವೇಶನದಲ್ಲಿ ಇಂದು ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು, ಅಡಿಕೆಯ ನೈಜ ಗುಣಲಕ್ಷಣಗಳನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ವೈಜ್ಞಾನಿಕ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ತೋಟಗಾರಿಕೆ ಇಲಾಖೆಯ ವತಿಯಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯಕ್ಕೆ ಅಡಿಕೆಯ(M.S. Ramaiah University Arecanut Study) ಆರೋಗ್ಯದ ಮೇಲಿನ ಪರಿಣಾಮಗಳ ಕುರಿತು ಅಧ್ಯಯನ ನಡೆಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಅಂದಾಜು 31.80 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಡೆಯುತ್ತಿರುವ ಈ ಸಂಶೋಧನೆಯ ಪ್ರಾಥಮಿಕ ವರದಿಗಳು ಆಶಾದಾಯಕವಾಗಿವೆ.

ಇದನ್ನೂ ಓದಿ: e-Swathu Karnataka-ಕೃಷಿ ಭೂಮಿಯಲ್ಲಿರುವ ಮನೆಗಳಿಗೂ ಅಧಿಕೃತ ಇ-ಸ್ವತ್ತು ನೀಡಲು ಸರ್ಕಾರ ಹಸಿರು ನಿಶಾನೆ!

ತಂಬಾಕು ರಹಿತವಾಗಿ, ಅಲ್ಪ ಪ್ರಮಾಣದಲ್ಲಿ ಅಡಿಕೆಯನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ಅಂಶವು ಈ ಅಧ್ಯಯನದಿಂದ(Arecanut Research Report) ತಿಳಿದುಬಂದಿದೆ. ಇದು ಅಡಿಕೆಯನ್ನು ಕೇವಲ ವ್ಯಸನಕಾರಿ ವಸ್ತುವಾಗಿ ನೋಡುವ ದೃಷ್ಟಿಕೋನವನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ನಡೆಯುತ್ತಿರುವ ಈ ಸಂಶೋಧನೆಯು ಕೇವಲ ಸೇವನೆಗೆ ಮಾತ್ರ ಸೀಮಿತವಾಗಿಲ್ಲ. ಅಡಿಕೆ ಸಾರವು ನೆನಪಿನ ಶಕ್ತಿ ಮತ್ತು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂಬ ಕುತೂಹಲಕಾರಿ ಅಂಶಗಳು ಪ್ರಾಥಮಿಕ ನರಜೈವಿಕ ಅಧ್ಯಯನಗಳಲ್ಲಿ ಕಂಡುಬಂದಿವೆ. ಅಲ್ಲದೆ, ಅಡಿಕೆ(Arecanut) ಹಾಳೆ ತಟ್ಟೆಗಳ ಬಳಕೆಯು ಪರಿಸರ ಸ್ನೇಹಿ ಮಾತ್ರವಲ್ಲದೆ, ಆರೋಗ್ಯಕ್ಕೂ ಅತ್ಯಂತ ಸುರಕ್ಷಿತ ಎಂಬುದು ಸಾಬೀತಾಗಿದೆ. ಈ ಎಲ್ಲಾ ಅಂಶಗಳನ್ನು ಒಳಗೊಂಡ ಅಂತಿಮ ಸಂಶೋಧನಾ ವರದಿ ಬಂದ ಕೂಡಲೇ, ಅಡಿಕೆ ಹಾನಿಕಾರಕವಲ್ಲ ಎಂಬ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

ಇದನ್ನೂ ಓದಿ: Free Fast-Food Training-ಉಚಿತ ಫಾಸ್ಟ್ ಫುಡ್‌ ತಯಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ!

M.S. Ramaiah University arecanut study

ಇದನ್ನೂ ಓದಿ: Gruhalakshmi Amount-2026: ಗೃಹಲಕ್ಷ್ಮಿ ಯೋಜನೆ 27ನೇ ಕಂತಿನ ಹಣ ಫಲಾನುಭವಿ ಖಾತೆಗೆ ಬಿಡುಗಡೆ!

M.S. Ramaiah University Arecanut Study-ಅಡಿಕೆ ಉತ್ಪನ್ನಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ವ್ಯಾಪಕ ಸಂಶೋಧನೆ:

ಅಡಿಕೆ ಉತ್ಪನ್ನಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ವ್ಯಾಪಕ ಸಂಶೋಧನೆ ಕೈಗೊಂಡಿದ್ದು, ಸಂಶೋಧನೆಯ ಅಂತಿಮ ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ವಿಧಾನ ಪರಿಷತ್‍ನ ಅಧಿವೇಶನದಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಪ್ರತಾಪ್ ಸಿಂಹ ನಾಯಕ್ ಅವರ ಪ್ರಶ್ನೆಗೆ ತೋಟಗಾರಿಕಾ ಸಚಿವರ ಪರವಾಗಿ ಉತ್ತರ ನೀಡಿದ ಸಚಿವರು ಅಡಿಕೆಗೆ ಅಂಟಿದ ಕಳಂಕವನ್ನು ತೊಡೆದುಹಾಕಲು "ಅಡಿಕೆ ಬಳಕೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು" ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಲು ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯ, ಬೆಂಗಳೂರು, ಸಂಸ್ಥೆಗೆ ತೋಟಗಾರಿಕೆ ಇಲಾಖೆಯಿಂದ ವಹಿಸಲಾಗಿದೆ ಎಂದರು.

ಇದನ್ನೂ ಓದಿ: Podi Nakshe-ಇನ್ಮುಂದೆ ಮೊಬೈಲ್‌ನಲ್ಲೇ ಪಡೆಯಿರಿ ಪೋಡಿ ನಕ್ಷೆ! ಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್!

Arecanut Research Report Details-ವರದಿಯ ಮುಖ್ಯಾಂಶಗಳು:

ವೈಜ್ಞಾನಿಕ ಅಧ್ಯಯನ:

15,885 ಅಭ್ಯರ್ಥಿಗಳನ್ನು ಒಳಗೊಂಡ ಬೃಹತ್ ಸಮೂಹ ಜನಸಂಖ್ಯಾ ಆಧಾರಿತ ಅಧ್ಯಯನ ಪ್ರಗತಿಯಲ್ಲಿದೆ.

ಧನಾತ್ಮಕ ಅಂಶ:

ಅಡಿಕೆ ಸಾರವು ಜ್ಞಾಪಕ ಶಕ್ತಿಯನ್ನು(Memory power) ವೃದ್ಧಿಸುವ ಸಾಧ್ಯತೆಯ ಬಗ್ಗೆ ಸಂಶೋಧನೆ ನಡೆಯುತ್ತಿದೆ.

ಇದನ್ನೂ ಓದಿ: Akka Cafe Subsidy-ಅಕ್ಕ ಕೆಫೆ ಆರಂಭಿಸಲು 15 ಲಕ್ಷ ಆರ್ಥಿಕ ನೆರವು! ಅರ್ಜಿ ಸಲ್ಲಿಸುವುದು ಹೇಗೆ?

ಸುರಕ್ಷಿತ ಬಳಕೆ:

ತಂಬಾಕು ರಹಿತ ಅಡಿಕೆ ಸೇವನೆ ಹಾನಿಕಾರಕವಲ್ಲ ಎಂದು ಎಂ.ಎಸ್. ರಾಮಯ್ಯ ವಿವಿ ವರದಿ ನೀಡಿದೆ.

ಪರಿಸರ ಸ್ನೇಹಿ ಉತ್ಪನ್ನ:

ಅಡಿಕೆ ತಟ್ಟೆಗಳಲ್ಲಿ ಆಲ್ಕಲಾಯ್ಡ್ ಮಟ್ಟ ಅತ್ಯಂತ ಕಡಿಮೆ ಇದ್ದು, ಬಳಕೆಗೆ ಯೋಗ್ಯವಾಗಿದೆ.

ಮುಂದಿನ ನಡೆ:

ಸಂಶೋಧನೆಯ ಅಂತಿಮ ವರದಿ ಲಭ್ಯವಾದ ತಕ್ಷಣ, ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬ ಬಗ್ಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನಡೆಸಲು ತೋಟಗಾರಿಕೆ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸಲಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: