HomeGovt SchemesAtal Pension Yojana-2024: ಅಟಲ್ ಪಿಂಚಣಿ ಯೋಜನೆ ಪ್ರತಿ ತಿಂಗಳಿಗೆ ರೂ 5,000 ಪಿಂಚಣಿ ಪಡೆಯಲು...

Atal Pension Yojana-2024: ಅಟಲ್ ಪಿಂಚಣಿ ಯೋಜನೆ ಪ್ರತಿ ತಿಂಗಳಿಗೆ ರೂ 5,000 ಪಿಂಚಣಿ ಪಡೆಯಲು ಅರ್ಜಿ!

ಕೇಂದ್ರ ಸರಕಾರದ ಅಟಲ್ ಪಿಂಚಣಿ ಯೋಜನೆ (APY)ಯಡಿ ಪ್ರತಿ ತಿಂಗಳಿಗೆ ರೂ 5,000 ಪಿಂಚಣಿಯನ್ನು ಪಡೆಯಲು ಅರ್ಹ ಅರ್ಜಿದಾರರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ APY ಭಾರತ ಸರ್ಕಾರದ ಖಾತ್ರಿ ಪಡಿಸಿದ 60 ವರ್ಷದ ನಂತರ ಮಾಸಿಕ ರೂ. 1000, ರೂ. 2000, ರೂ 3000, ರೂ 4000, ರೂ. 5000 ರೂ ಗಳ ಕನಿಷ್ಠ ಪಿಂಚಣಿ ಆಯ್ಕೆಯನ್ನು ನೀಡಲಾಗುತ್ತದೆ.

ಅಟಲ್ ಪಿಂಚಣಿ ಯೋಜನೆಯಡಿ(Atal Pension Yojana) ಪಿಂಚಣಿ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ:  Airport Jobs 2024 – ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ 208 ಹುದ್ದೆಗಳು ಖಾಲಿ!

How can apply for Atal Pension Yojana-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

1) APY ಖಾತೆಯನ್ನು ತೆರೆಯಲು ಬಯಸುವ ಸದಸ್ಯರು ಭಾರತದ ನಾಗರಿಕರಾಗಿರಬೇಕು. 
2) ಸದಸ್ಯರ ವಯಸ್ಸು, 18 ಮತ್ತು 40 ವರ್ಷಗಳ ನಡುವೆ ಇರಬೇಕು.
3) 01 ಅಕ್ಟೋಬರ್ 2022 ರಿಂದ, ಆದಾಯ ತೆರಿಗೆ ಪಾವತಿದಾರರು APY ಯೋಜನೆಗೆ ಸೇರಲು ಅರ್ಹರಾಗಿರುವುದಿಲ್ಲ.

Atal Pension Yojana application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ಸದಸ್ಯರು ಬ್ಯಾಂಕ್ ಶಾಖೆ/ಪೋಸ್ಟ್ ಆಫೀಸ್ ಮೂಲಕ ಅಥವಾ ಬ್ಯಾಂಕ್‌ಗಳು ಒದಗಿಸಿದ ಡಿಜಿಟಲ್ ಆನ್‌ಬೋರ್ಡಿಂಗ್ ಪ್ಲಾಟ್ ಫಾರ್ಮ್ ಮೂಲಕ ಅಟಲ್ ಪಿಂಚಣಿ ಯೋಜನೆಯಡಿ(Atal Pension Yojana) ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 5 ಸಾವಿರ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

APY ಖಾತೆಯನ್ನು ತೆರೆಯುವಾಗ ನಾಮಿನಿ ಮತ್ತು ಸಂಗಾತಿಯ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದೆ.

ಬ್ಯಾಂಕ್ ಖಾತೆಯಿಂದ ಆಟೋ ಡೆಬಿಟ್ ಸೌಲಭ್ಯದ ಮೂಲಕ ಮಾಸಿಕ ಅಥವಾ ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಆಧಾರದ ಮೇಲೆ ಕಾಂಟ್ರಿಬ್ಯೂಷನ್ ಗಳನ್ನು ಮಾಡಬಹುದು.

Atal Pension Yojana benefits-ಅಟಲ್ ಪಿಂಚಣಿ ಯೋಜನೆ (APY) ಪ್ರಯೋಜನಗಳು:

60 ವರ್ಷಕ್ಕಿಂತ ಹೆಚ್ಚು ಮೇಲ್ಪಟ್ಟ ವಯಸ್ಸಿನವರಿಗೆ ಅಟಲ್ ಪಿಂಚಣಿ ಯೋಜನೆ (APY) ಯ ತ್ರಿವಳಿ ಪ್ರಯೋಜನಗಳು.

ಸದಸ್ಯರಿಗೆ ರೂ. 1000 ರಿಂದ ರೂ. 5000 ರವರೆಗೆ ಜೀವಮಾನದ ಕನಿಷ್ಠ ಖಾತರಿ ಪಿಂಚಣಿ.

ಸದಸ್ಯರ ಮರಣದ ನಂತರ ಜೀವನಪರ್ಯಂತ ಅದೇ ಪಿಂಚಣಿಯನ್ನು ಸಂಗಾತಿಗೆ ಪಾವತಿಸಲಾಗುತ್ತದೆ.

ಒಂದು ವೇಳೆ ಸದಸ್ಯರು ಮತ್ತು ಸಂಗಾತಿಯ ಮರಣದ ಸಂಭವಿಸಿದರೆ ನಾಮಿನಿಗೆ 60 ವರ್ಷ ವಯಸ್ಸಿನವರೆಗೆ ಸಂಗ್ರಹಗೊಂಡ ಪಿಂಚಣಿ ಮೊತ್ತವನ್ನು ನೀಡಲಾಗುತ್ತದೆ.

ಇದನ್ನೂ ಓದಿ: PM awas scheme-ಸ್ವಂತ ಮನೆ ಕಟ್ಟುವವರಿಗೆ PM Awas ಯೋಜನೆಯಡಿ1.2 ಲಕ್ಷ ಸಬ್ಸಿಡಿ!

Required documents for Atal Pension Yojana-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
2) ಅರ್ಜಿದಾರರ ಪೋಟೋ.
3) ರೇಶನ್ ಕಾರ್ಡ ಪ್ರತಿ. 
4) ಪಾನ್ ಕಾರ್ಡ ಪ್ರತಿ.

ಎಷ್ಟು ಮೊತ್ತ ಪಾವತಿ ಮಾಡಬೇಕು?

ಪಿಂಚಣಿಯನ್ನು ಪಡೆಯಲು ಅರ್ಜಿದಾರರು 18ನೇ ವಯಸ್ಸಿನಲ್ಲಿ ಪ್ರತಿ ತಿಂಗಳು ಕೇವಲ ರೂ 210/- ಹೊಡಿಕೆ ಮಾಡಿದರೆ 60 ವಯಸ್ಸಿನ ನಂತರ ರೂ 5,000/- ಪಿಂಚಣಿ ಪಡೆಯಬಹುದು.

Helpline number-ಸಹಾಯವಾಣಿ: 1800 110 069
website link- ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್: Apply Now

Most Popular

Latest Articles

Related Articles