- Advertisment -
HomeGovt Schemese-swathu andolana-ಇ-ಸ್ವತ್ತು ಮಾಡಿಕೊಳ್ಳದವರಿಗೆ ಸಿಹಿ ಸುದ್ದಿ! ಇ-ಸ್ವತ್ತು ವಿತರಣಾ ಆಂದೋಲನ!

e-swathu andolana-ಇ-ಸ್ವತ್ತು ಮಾಡಿಕೊಳ್ಳದವರಿಗೆ ಸಿಹಿ ಸುದ್ದಿ! ಇ-ಸ್ವತ್ತು ವಿತರಣಾ ಆಂದೋಲನ!

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ನೆಲೆಸಿರುವ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಇಲ್ಲಿಯವರೆಗೆ ಇ-ಸ್ವತ್ತು(e-swathu andolana) ಮಾಡಿಕೊಳ್ಳದಿದ್ದಲ್ಲಿ ಇಂತಹ ಆಸ್ತಿ ಮಾಲೀಕರಿಗೆ ರಾಜ್ಯ ಸರಕಾರದಿಂದ ಸಿಹಿ ಸುದ್ದಿ ದೊರೆತ್ತಿದ್ದು, ಇ-ಸ್ವತ್ತು ವಿತರಣಾ ಆಂದೋಲನವನ್ನು ಆರಂಭಿಸಿದೆ.

ಸರಕಾರದ ಮಾರ್ಗಸೂಚಿ ಪ್ರಕಾರ ಆಸ್ತಿಯನ್ನು ಹೊಂದಿರುವ ನಗರ ಮತ್ತು ಗ್ರಾಮೀಣ ಭಾಗದ ಜನರು ತಮ್ಮ ತಮ್ಮ ಆಸ್ತಿಯ ಮಾಲೀಕತ್ವವನ್ನು ಕಾನೂನಾತ್ಮಕ ಸಾಬೀತುಪಡಿಸಲು ಇ-ಸ್ವತ್ತು(e-swathu ) ಪ್ರಮಾಣ ಪತ್ರವನ್ನು ಪಡೆಯುವುದು ಕಡ್ದಾಯವಾಗಿರುತ್ತದೆ.

ಪ್ರಸ್ತುತ ಇಲ್ಲಿಯವರೆಗೆ ಬಹು ದೊಡ್ಡ ಸಂಖ್ಯೆಯ ಆಸ್ತಿಯ ಮಾಲೀಕರು ಇ-ಸ್ವತ್ತು ದಾಖಲೆಯನ್ನು ಪಡೆದಿರುವುದಿಲ್ಲ ಸದರಿ ಕಾರಣದಿಂದ ಸರಕಾರಕ್ಕೆ ದೊಡ್ಡ ಮೊತ್ತದ ತೆರಿಗೆ ನಷ್ಟವಾಗುತ್ತಿದ್ದು ಇದಲ್ಲದೇ ಆಸ್ತಿಯ ಮಾಲೀಕರಿಗೂ ಸಹ ಅಧಿಕೃತ ದಾಖಲೆದಂತೆ ಅಗಿರುತ್ತದೆ ಈ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಪರಿಹಾರಿಸಲು ಸರಕಾರದಿಂದ ಇ-ಸ್ವತ್ತು ವಿತರಣಾ ಆಂದೋಲನವನ್ನು ಆರಂಭಿಸಿದ್ದು ಇದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Ration-ಇಲಾಖೆಯ ನಿಯಮದನ್ವಯ ಈ ಕೆಲಸ ಮಾಡದಿದ್ದಲ್ಲಿ ಫೆಬ್ರವರಿ 15ರಿಂದ ಪಡಿತರ ವಿತರಣೆ ರದ್ದು!

e-swathu andolana-ಮೊದಲ ಹಂತದಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಇ-ಸ್ವತ್ತು ವಿತರಣಾ ಆಂದೋಲನ:

ಬೆಂಗಳೂರು ನಗರದ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಎಲ್ಲಾ ಗ್ರಾಮ ಪಂಚಾಯತಿಗಳ ಮೂಲಕ ಜನವರಿ 28 ರಿಂದ ಫೆಬ್ರವರಿ 27 ರವರೆಗೆ ಇ-ಸ್ವತ್ತು ವಿತರಣಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.

ಇನ್ನು ಸಹ ಈ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಶೇ 40% ಕ್ಕೂ ಹೆಚ್ಚಿನ ಆಸ್ತಿಗಳಿಗೆ ಇ-ಸ್ವತ್ತು ಅಗಿಲ್ಲದೆ ಇರುವುದರಿಂದ ತೆರಿಗೆ ಸಂಗ್ರಹಣೆಗೆ ಭಾರೀ ಹಿನ್ನಡೆ ಅಗಿರುವುದರಿಂದ ಶೀಘ್ರದಲ್ಲಿ ಆಂದೋಲನ ಮಾದರಿಯಲ್ಲಿ ಇ-ಸ್ವತ್ತು ದಾಖಲೆಯನ್ನು ಆಸ್ತಿ ಮಾಲೀಕರಿಗೆ ವಿತರಣೆಯನ್ನು ಮಾಡಲು ಈ ಕ್ರಮವನ್ನು ಸರಕಾರದಿಂದ ಜಾರಿಗೆ ತರಲಾಗಿದೆ.

ಸಾರ್ವಜನಿಕರಲ್ಲಿ ಆಸ್ತಿಗಳಿಗೆ ಇ-ಸ್ವತ್ತು ದಾಖಲೆಯನ್ನು ಪಡೆಯುವುದರಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು? ಇತ್ಯಾದಿ ಮಾಹಿತಿಯನ್ನು ತಿಳಿಸಲು ಗ್ರಾಮೀಣ ಮಟ್ಟದಲ್ಲಿ ಈ ಆಂದೋಲನದ ಮೂಲಕ ಮನೆ-ಮನೆಗೆ ಭೇಟಿ ಮಾಡಿ ಪ್ರತಿ ಕುಟುಂಬಕ್ಕೆ ಕರಪತ್ರ ವಿತರಣೆ ಮಾಡುವುದು, ಬೀದಿನಾಟಕ ಹಾಗೂ ಗ್ರಾಮವಾರು ಸಭೆಯನ್ನು ನಡೆಸುವುದರ ಮೂಲಕ ಈ ಕುರಿತು ಅರಿವು ಮೂಡಿಸಿರುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Microfinance-ಮೈಕ್ರೋ ಫೈನಾನ್ಸ್ ಹಾವಳಿಗೆ ರಾಜ್ಯ ಸರಕಾರದಿಂದ ನೂತನ ನಿಯಮ ಜಾರಿ!

E-Swathu

e-swathu Benefits-ಏನಿದು ಇ-ಸ್ವತ್ತು ದಾಖಲೆ? ಇದರ ಪ್ರಯೋಜನಗಳೇನು?

ಇ-ಸ್ವತ್ತು ಎಂದರೆ ಒಂದು ಆಸ್ತಿಯ ಮಾಲೀಕರ ವಿವರ ಮತ್ತು ಆ ಸ್ಥಳದ ವಿಸ್ತೀರ್ಣ ಮತ್ತು ಜಾಗದ ಗುರುತನ್ನು ನಿಖರವಾಗಿ ಗುರುತಿಸುವ ದಾಖಲೆಯಾಗಿದೆ.

ಆಸ್ತಿಯ ಮಾಲೀಕರು ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಅಥವಾ ಆ ಆಸ್ತಿಯ ಮೇಲೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಇ-ಸ್ವತ್ತು ದಾಖಲೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ. ಇದಲ್ಲದೇ ನಿಮ್ಮ ಆಸ್ತಿಯ ಮಾಲೀಕತ್ವವನ್ನು ಅಧಿಕೃತವಾಗಿ ಸಾಬೀತುಪಡಿಸುವ ದಾಖಲೆ ಎಂದು ಸಹ ಹೇಳಬಹುದು.

ಇದನ್ನೂ ಓದಿ: Gruhalakshmi Amount-ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ!

Who Can Apply For e-swathu-ಇ-ಸ್ವತ್ತು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಗ್ರಾಮ ಠಾಣಾ ಪ್ರದೇಶದಲ್ಲಿ ಒಳಪಡುವ ನಿವೇಶನಗಳು, ಖಾಲಿ ಜಾಗ, ಕಟ್ಟಡಗಳು, 94(ಸಿಸಿ) ಕಾಯ್ದೆಯಡಿ ನಿರ್ಮಿಸಿ ಕೊಂಡಿರುವ ಮನೆಗಳು, ಪಹಣಿಯನ್ನು ಹೊಂದಿದ್ದು ಕೃಷಿ ಭೂಮಿಯಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡಿರುವವರು ಇ-ಸ್ವತ್ತು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Marriage Registration-ಮದುವೆ ನೋಂದಣಿ ಮಾಡಿಕೊಳ್ಳಲು ಈ ದಾಖಲೆ ಕಡ್ಡಾಯ!

e-swathu Application-ಇ-ಸ್ವತ್ತು ಪಡೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ಈ ದಾಖಲೆಯನ್ನು ಪಡೆಯಬಹುದು.

Documents For e-swathu-ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
2) ಸ್ಥಳದ ಪೋಟೋ ಆಸ್ತಿಯ ಮಾಲೀಕರೊಂದಿಗೆ
3) ವಂಶವೃಕ್ಷ
4) ವಿದ್ಯುತ್ ಬಿಲ್
5) ತೆರಿಗೆ ಪಾವತಿ ರಶೀದಿ
6) ವಂಶವೃಕ್ಷದಲ್ಲಿರುವ ಎಲ್ಲಾ ಸದಸ್ಯರ ಆಧಾರ್ ಕಾರ್ಡ ಮತ್ತು ಪೋಟೋ
7) ಕೈ ಬರಹದ ಅರ್ಜಿ
8) ಮೊಬೈಲ್ ನಂಬರ್

ಇ-ಸ್ವತ್ತು ದಾಖಲೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಗ್ರಾಮ ಪಂಚಾಯತಿಯನ್ನು ಭೇಟಿ ಮಾಡಿ.

ಇ-ಸ್ವತ್ತು ಅಧಿಕೃತ ವೆಬ್ಸೈಟ್ ಲಿಂಕ್- Click here

- Advertisment -
LATEST ARTICLES

Related Articles

- Advertisment -

Most Popular

- Advertisment -