HomeNew postsBara Parihara status- ಮೊದಲ ಕಂತಿನ ಬರ ಪರಿಹಾರ ನಿಮಗೆ ಬಂದಿಲ್ಲವೇ? ಇಲ್ಲಿದೆ ಸೂಕ್ತ ಪರಿಹಾರ...

Bara Parihara status- ಮೊದಲ ಕಂತಿನ ಬರ ಪರಿಹಾರ ನಿಮಗೆ ಬಂದಿಲ್ಲವೇ? ಇಲ್ಲಿದೆ ಸೂಕ್ತ ಪರಿಹಾರ ಕ್ರಮ!

2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ರೈತ ಬೆಳೆ ನಷ್ಟವಾಗಿತ್ತು ಇದಕ್ಕೆ ರಾಜ್ಯ ಸರಕಾರದಿಂದ NDRF ಮಾರ್ಗಸೂಚಿಯನ್ವಯ ಮೊದಲ ಕಂತಿನ ಬರ ಪರಿಹಾರವನ್ನು(Bara Parihara) ಈಗಾಗಲೇ ಶೇ 90 ಕ್ಕಿಂತ ಹೆಚ್ಚಿನ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ.

ಕೆಲವು ರೈತರಿಗೆ ತಮ್ಮ ಮೊಬೈಲ್ ಗೆ ಪರಿಹಾರದ ಹಣ ನಿಮಗೆ ಸಂದಾಯ ಮಾಡಲಾಗಿದೆ ಎಂದು ಸಂದೇಶ ಬಂದಿದ್ದರು ಅವರ ಬ್ಯಾಂಕ್ ಖಾತೆಗೆ ಮೊದಲ ಕಂತಿನ  ರೂ 2,000 ಜಮಾ ಅಗಿರುವುದಿಲ್ಲ ಅಂತಹ ರೈತರು ಈ ತಾಂತ್ರಿಕ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂದು ಈ ಲೇಖನದಲ್ಲಿ ವಿವರಿಸುವ ಪ್ರಯತ್ನವನ್ನು ಮಾಡಿದ್ದೇವೆ.

ಇದನ್ನೂ ಓದಿ: How to link rtc to aadhar- ಮೊಬೈಲ್ ನಲ್ಲೇ ಪಹಣಿಗೆ ಆಧಾರ್ ಕಾರ್ಡ ಜೋಡಣೆ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

Bara Parihara – ರೈತರ ಮೊಬೈಲ್ ಗೆ ಸಂದೇಶ ಬಂದರು ಪರಿಹಾರದ ಹಣ ಜಮಾ ಅಗದಿರಲು ಕೃಷಿ ಇಲಾಖೆಯಿಂದ ತಿಳಿಸಿರುವ ಸೂಕ್ರ ಕಾರಣಗಳ ಪಟ್ಟಿ ಈ ಕೆಳಗಿನಂತಿವೆ:

1) ಪ್ರೂಟ್ಸ್ ಐಡಿಯಲ್ಲಿ ಸರ್ವೇ ನಂಬರ್ ದಾಖಲಾಗದೇ ಇರುವುದು.
2) ರೈತರ ಜಮೀನಿನ ಸರ್ವೇ ನಂಬರ್ ಮೇಲೆ FID ನಂಬರ್ ರಚನೆ ಅಗದಿರುವುದು.
3) ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್(NPCI mapping) ಅಗದಿರುವುದು.
4) ಆಧಾರ್ ಕಾರ್ಡ ಲಿಂಖ್ ಅಗಿರುವ ಬ್ಯಾಂಕ್ ಅಕೌಂಟ್ ಸ್ಥಗಿತವಾಗಿರುವುದು.
5) ಪ್ರೂಟ್ಸ್ ತಂತ್ರಾಂಶದಲ್ಲಿ ದಾಖಲಾಗಿರುವ ಹೆಸರು ಮತ್ತು ಆಧಾರ್ ಕಾರ್ಡನಲ್ಲಿರುವ ಹೆಸರು ತಾಳೆ ಅಗದಿರುವುದು.

ಈ ಮೇಲೆ ತಿಳಿಸಿರುವ ಕಾರಣಗಳಿಂದ ಅನೇಕ ರೈತರಿಗೆ ರೂ 2,000 ಬರ ಪರಿಹಾರದ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಅಗಿರುವುದಿಲ್ಲ ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವುದರ ಮೂಲಕ ರೈತರು ಪರಿಹಾರದ ಹಣವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: PM-Surya Ghar yojana- ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನದ ವಿವರ.

Bara Parihara list- ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವ ವಿಧಾನದ ಮಾಹಿತಿ:

ಇಲ್ಲಿಯವರೆಗೆ ಬರ ಪರಿಹಾರದ ಮೊದಲ ಕಂತಿನ ಹಣವನ್ನು ಪಡೆಯದ ರೈತರು ಒಮ್ಮೆ ನಿಮ್ಮ ತಾಲ್ಲೂಕಿನ ಕೃಷಿ ಇಲಾಖೆ ಕಚೇರಿಯನ್ನು ಅಥವಾ ನಿಮ್ಮ ತಾಲ್ಲೂಕಿನ ಕಂದಾಯ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ ಮೊದಲ ಕಂತಿನ ಬೆಳೆ ನಷ್ಟ ಪರಿಹಾರ ಪಡೆಯದವರ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯಾ ಎಂದು ಚೆಕ್ ಮಾಡಿಕೊಂಡು ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದಲ್ಲಿ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳ ಬಳಿ ಮಾಹಿತಿ ಪಡೆದು ನಿಮ್ಮ ಅರ್ಜಿಯನ್ನು ಸರಿಪಡಿಸಿಕೊಂಡು ಬರ ಪರಿಹಾರವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: RTC adhar link- ಪಹಣಿ/RTC ಮತ್ತು ಆಧಾರ್ ಜೋಡಣೆಗೆ ಕಂದಾಯ ಇಲಾಖೆಯಿಂದ ನೂತನ ಕ್ರಮ: ಸಚಿವ ಕೃಷ್ಣಬೈರೇಗೌಡ.

Parihara DBT status- ಬರ ಪರಿಹಾರದ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ:

ರೈತರು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಆಧಾರ್ ಕಾರ್ಡ ವಿವರವನ್ನು ಹಾಕಿ “ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ ನಿಮಗೆ ರೂ 2,000 ಬರ ಪರಿಹಾರ ಜಮಾ ಅಗಿರುವುದನ್ನು ಚೆಕ್ ಮಾಡಿಕೊಳ್ಳವುದು.

ಇದನ್ನೂ ಓದಿ: Agriculture officer recruitment-2024: ಕೃಷಿ ಇಲಾಖೆಯಲ್ಲಿ ಖಾಲಿ ಇರುವ 750 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

ಉಪಯುಕ್ತ ಲಿಂಕ್ ಗಳು:

ಬರ ಪರಿಹಾರದ ಕುರಿತು ನಮ್ಮ ಪುಟನ ಇತರೆ ಉಪಯುಕ್ತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: Click here
DBT Karnataka ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಲಿಂಕ್: Download Now

Most Popular

Latest Articles

Related Articles