HomeNew postsBele parihara-2024: ಇಲ್ಲಿದೆ ಬೆಳೆ ಪರಿಹಾರದ ಹಣ ಜಮಾ ಅಗದ ರೈತರ ಪಟ್ಟಿ!

Bele parihara-2024: ಇಲ್ಲಿದೆ ಬೆಳೆ ಪರಿಹಾರದ ಹಣ ಜಮಾ ಅಗದ ರೈತರ ಪಟ್ಟಿ!

ಕಂದಾಯ ಇಲಾಖೆಯ ಆಧಿಕೃತ parihara ವೆಬ್ಸೈಟ್ ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಬೆಳೆ ಪರಿಹಾರ ಜಮಾ ಅಗದ ಹಳ್ಳಿವಾರು ರೈತರ ಪಟ್ಟಿಯನ್ನು(Parihara Payment list) ಬಿಡುಗಡೆ ಮಾಡಲಾಗಿದೆ. ರೈತರು ಈ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ನೋಡುವುದು ಮತ್ತು ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಪರಿಹಾರದ ಹಣವನ್ನು ಪಡೆಯಲು ಏನು ಮಾಡಬೇಕು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

2023 ರ ಮುಂಗಾರು ಹಂಗಾಮಿನಲ್ಲಿ ಉಂಟಾದ ಮಳೆ ಕೊರತೆಯಿಂದ ಅದ ಬೆಳೆ ನಷ್ಟಕ್ಕೆ ರೈತರಿಗೆ ಬರ ಪರಿಹಾರದ ಹಣವನ್ನು ವರ್ಗಾವಣೆ ಮಾಡಲು ಕಂದಾಯ ಇಲಾಖೆಯಿಂದ parihara ತಂತ್ರಾಂಶವನ್ನು ಬಳಕೆ ಮಾಡಲಾಗುತ್ತದೆ. ರೈತರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಪರಿಹಾರ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಪರಿಹಾರದ ಹಣ ಜಮಾ ಅಗದ ರೈತರ ಪಟ್ಟಿ ಅನ್ನು ನೋಡಬಹುದು.

ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಏನು ಮಾಡಬೇಕು? ಮತ್ತು ಬರ ಪರಿಹಾರದ ಹಣ ತಾಂತ್ರಿಕ ಸಮಸ್ಯೆಯಿಂದ ನಿಮಗೆ ಜಮಾ ಅಗದ್ದಿದರೆ ಯಾವ ಕ್ರಮ ಅನುಸರಿಸಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Bara parihara list-2024: ಬರ ಪರಿಹಾರ ಹಣ ಬಿಡುಗಡೆಯಾದ ರೈತರ ಪಟ್ಟಿ ಬಿಡುಗಡೆ!

Parihara Payment Stoped Farmers list-ಇಲ್ಲಿದೆ ಬೆಳೆ ಪರಿಹಾರದ ಹಣ ಜಮಾ ಅಗದ ರೈತರ ಪಟ್ಟಿ:

Step-1: ಮೊದಲಿಗೆ ಈ Parihara Payment Stoped Farmers list ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ parihara ಜಾಲತಾಣವನ್ನು ಪ್ರವೇಶ ಮಾಡಬೇಕು. ಇದಾದ ಬಳಿಕ “Village Wise List” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ನಂತರ “ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Parihara Payment Report” ಎನ್ನುವ ಕಾಲಂ ತೆರೆದುಕೊಳ್ಳುತ್ತದೆ ಇಲ್ಲಿ Select year/ವರ್ಷ ಆಯ್ಕೆಮಾಡಿ- 2023-24, “Select season/ಋತು ಆಯ್ಕೆಮಾಡಿ – ಮುಂಗಾರು”, Calamity Type/ವಿಪತ್ತಿನ ವಿಧ, ನಂತರ ನಿಮ್ಮ District/ಜಿಲ್ಲೆ, Taluk/ತಾಲ್ಲೂಕು, Hobli/ಹೋಬಳಿ, Village/ಗ್ರಾಮ ಆಯ್ಕೆ ಮಾಡಿಕೊಂಡು “Get Report/ವರದಿ ಪಡೆಯಿರಿ” ಬಟನ್ ಕೆಳಗೆ ತೋರಿಸುವ “Payment Failed Cases/ಪಾವತಿ ವಿಫಲ ಪ್ರಕರಣಗಳು” ಮೇಲೆ ಕ್ಲಿಕ್ ಮಾಡಿ ತದನಂತರ “Get Report/ವರದಿ ಪಡೆಯಿರಿ” ಬಟನ್  ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

Step-3: ಮೇಲಿನ ವಿಧಾನವನ್ನು ಅನುಸರಿಸಿದ ಬಳಿಕ ಇಲ್ಲಿ ತಾಂತ್ರಿಕ ಸಮಸ್ಯೆಯಿಂದ ಬರ ಪರಿಹಾರದ ಹಣ ಜಮಾ ಅಗದ ನಿಮ್ಮ ಹಳ್ಳಿಯ ಪಟ್ಟಿ ತೋರಿಸುತ್ತದೆ.

Parihara Payment Status- ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಏನು ಮಾಡಬೇಕು?

ಒಂದೊಮ್ಮೆ ಮೇಲಿನ ವಿಧಾನವನ್ನು ಅನುಸರಿಸಿ ಪಟ್ಟಿಯನ್ನು ಪಡೆದ ನಂತರ ಪರಿಹಾರ ಜಮಾ ಅಗದ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಅರ್ಜಿದಾರರ ಅಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಜಮೀನಿನ ಪಹಣಿಯನ್ನು ತೆಗೆದುಕೊಂಡು ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯನ್ನು(Village accountant) ಭೇಟಿ ಮಾಡಿ ಯಾವ ತ್ರಾಂತ್ರಿಕ ಸಮಸ್ಯೆಯಿಂದ ನಿಮಗೆ ಪರಿಹಾರದ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿರುವುದಿಲ್ಲ ಎಂದು ಮಾಹಿತಿಯನ್ನು ಪಡೆದುಕೊಂಡು ಅದನ್ನು ಸರಿಪಡಿಸಿಕೊಳ್ಳಬೇಕು.

ಇದನ್ನೂ ಓದಿ: Annabhagya Payment- ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

ಬೆಳೆ ಪರಿಹಾರದ ಹಣ ಜಮಾ ಅಗದ ರೈತರ ಪಟ್ಟಿ ನೋಡಲು ಲಿಂಕ್: Click here

Most Popular

Latest Articles

Related Articles