Bele Parihara Amount-ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರದ ಹಣ ರೈತರ ಖಾತೆಗೆ!

January 7, 2026 | Siddesh
Bele Parihara Amount-ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರದ ಹಣ ರೈತರ ಖಾತೆಗೆ!
Share Now:

ರೈತರ ಖಾತೆಗೆ 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾನಿಗೆ ಒಳಗಾದ ಬೆಳೆಗೆ NDRF ಮತ್ತು ಬೆಳೆ ವಿಮಾ ಯೋಜನೆಯಡಿ ಬಹುತೇಕ ಜಿಲ್ಲೆಗಳಲ್ಲಿ ಬೆಳೆ ವಿಮೆ(Bele Vime Yojane) ಮತ್ತು ಬೆಳೆ ಹಾನಿ ಪರಿಹಾರವನ್ನು(Bele Parihara Yojane) ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದ್ದು, ಇದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಅನೇಕ ರೈತರಿಗೆ ಬೆಳೆ ಹಾನಿ(Crop Loss) ಮತ್ತು ಬೆಳೆ ವಿಮೆ(Crop Insurance) ಪರಿಹಾರದ ಹಣ ಜಮಾ ಅಗಿರುವ ವಿವರವನ್ನು ಹೇಗೆ ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳುವುದು ಎನ್ನುವ ಮಾಹಿತಿ ಇರುವುದಿಲ್ಲ ಇದರ ಕುರಿತು ಸಹ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Whatsapp Banking-ಗ್ರಾಹಕರಿಗೆ ಸಿಹಿ ಸುದ್ದಿ: ಈಗ ವಾಟ್ಸಾಪ್ ನಲ್ಲೇ ಬ್ಯಾಂಕಿಂಗ್ ಸೇವೆ ಲಭ್ಯ!

ಪ್ರಸ್ತುತ ಅಂಕಣದಲ್ಲಿ ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಪರಿಹಾರಕ್ಕೆ(Parihara Amount) ಇರುವ ವ್ಯತ್ಯಾಸವೇನು? ಮೊಬೈಲ್ ನಲ್ಲೇ ಬೆಳೆ ಪರಿಹಾರದ ಹಣ ಜಮಾ ವಿವರವನ್ನು ರೈತರು ತಮ್ಮ ಹೇಗೆ ಚೆಕ್ ಮಾಡಬವುದು ಎನ್ನುವ ಮಾಹಿತಿ ಸೇರಿದಂತೆ ಇನ್ನಿತರೆ ಅವಶ್ಯಕ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Crop Insurance Scheme-ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಎರಡು ಬೇರೆ ಬೇರೆ ಯೋಜನೆ:

ಹಲವು ರೈತರಿಗೆ ಈ ಮಾಹಿತಿ ತಿಳಿದಿರುವುದಿಲ್ಲ ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಯೋಜನೆಯಡಿ ಒದಗಿಸುವ ಪರಿಹಾರವು ಎರಡು ಬೇರೆ ಬೇರೆಯಾಗಿದ್ದು ಕೇಂದ್ರ ಮತ್ತು ರಾಜ್ಯ ಸರಕಾರವು NDRF ಮಾರ್ಗಸೂಚಿಯನ್ವಯ ಬೆಳೆ ಹಾನಿ ಪರಿಹಾರವನ್ನು ಒದಗಿಸಲಾಗುತ್ತದೆ, ರೈತರು ಬೆಳೆ ಹಾನಿ ಅದ ಸಮಯದಲ್ಲಿ ನಿಮ್ಮ ಗ್ರಾಮದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಯನ್ನು ನೇರವಾಗಿ ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಿ ಈ ಯೋಜನೆಯಡಿ ಬೆಳೆ ಹಾನಿಗೆ ಪರಿಹಾರವನ್ನು ಪಡೆಯಬಹುದು.

ಬೆಳೆ ವಿಮಾ ಯೋಜನೆಯಡಿ ಪರಿಹಾರವನ್ನು ಪಡೆಯಲು ರೈತರು ನಿಗದಿತ ಪ್ರಿಮೀಯಂ ಅನ್ನು ಪಾವತಿ ಮಾಡಿ ಮುಂಗಾರು/ಹಿಂಗಾರು/ಬೇಸಿಗೆ ಹಂಗಾಮಿನ ಪ್ರಾರಂಭದಲ್ಲಿ ತಮ್ಮ ಬೆಳೆಗಳಿಗೆ ವಿಮೆಯನ್ನು ಮಾಡಿಸಬೇಕು ಪ್ರಕೃತಿ ವಿಕೋಪ/ಅತೀಯಾದ ಮಳೆ/ಮಳೆ ಕೊರತೆಯಿಂದ ನಿಮ್ಮ ಜಮೀನಿನ ಬೆಳೆ ಹಾನಿ ಅದರೆ ಬೆಳೆ ವಿಮಾ ಕಂಪನಿಯು ನಿಮಗೆ ಬೆಳೆ ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ: Cow Farming Subsidy-ಹಸು ಸಾಕುವ ರೈತರಿಗೆ ಗೋಕುಲ ಮಿಷನ್ ಯೋಜನೆಯಡಿ ಸಬ್ಸಿಡಿ! ವರ್ಷಕ್ಕೆ ₹21,500 ಆದಾಯ!

Bele Parihara Arji-ಅರ್ಜಿ ಸಲ್ಲಿಸುವ ವಿಧಾನ ಹೇಗೆ?

Bele Hani Parihara-ಬೆಳೆ ಪರಿಹಾರ ಯೋಜನೆ:

ರೈತರು ತಮ್ಮ ಜಮೀನಿನಲ್ಲಿ ಬೆಳೆಯದ ಬೆಳೆಯು ಅತೀಯಾದ ಮಳೆ/ಮಳೆ ಕೊರತೆಯಿಂದಾಗಿ ಬೆಳೆ ಹಾನಿಯಾದರೆ ಕೂಡಲೇ ನಿಮ್ಮ ಹಳ್ಳಿ ವ್ಯಾಪ್ತಿಯ ಕೃಷಿ/ತೋಟಗಾರಿಕೆ/ಕಂದಾಯ ಇಲಾಖೆಯ ಅಧಿಕಾರಿ ಕಚೇರಿಯನ್ನು ಭೇಟಿ ಮಾಡಿ ಅಗತ್ಯ ದಾಖಲೆ ಮತ್ತು ಹಾನಿಯಾದ ಜಮೀನಿನ ಪೋಟೋ ಸಹಿತಿ ಅರ್ಜಿಯನ್ನು ಸಲ್ಲಿಸಿ ಹಾನಿ ಪ್ರಮಾಣವನ್ನು ಆಧರಿಸಿ ಬೆಳೆ ಪರಿಹಾರ ಯೋಜನೆಯಡಿ ರೈತರ ಖಾತೆಗೆ ನೇರವಾಗಿ DBT ಮೂಲಕ ಪರಿಹಾರದ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

Bele Vime-ಬೆಳೆ ವಿಮೆ ಯೋಜನೆ:

ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು ಮಾಡಿಸಲು ಅವಕಾಶವಿದ್ದು ಇದಕ್ಕಾಗಿ ರೈತರು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ಭೇಟಿ ಮಾಡಿ ಪ್ರತಿ ಹಂಗಾಮಿ ಬೆಳೆ ಆರಂಭಿಕ ಹಂತದಲ್ಲಿ ಉದಾಹರಣೆಗೆ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಬೇಕಾದರೆ ಜೂನ್-ಜುಲೈ ನಲ್ಲಿ ಮೆಕ್ಕೆಜೋಳ ಇನ್ನಿತರೆ ಬೆಳೆಗಳಲ್ಲಿಗೆ ಬೆಳೆ ವಿಮೆ ಪ್ರಿಮಿಯಂ ಅನ್ನು ಪಾವತಿ ಮಾಡಿ ಬೆಳೆ ವಿಮೆಯನ್ನು ಮಾಡಿಸಬಹುದು ಇದೇ ಮಾದರಿಯಲ್ಲಿ ಪ್ರದೇಶವಾರು ಬೆಳೆಯುವ ಬೆಳೆಯ ಅನುಗುಣವಾಗಿ ಹಿಂಗಾರು/ಬೇಸಿಗೆ ಸಮಯದಲ್ಲಿಯು ಸಹ ಬೆಳೆ ವಿಮೆಯನ್ನು ಮಾಡಿಸಲು ರೈತರಿಗೆ ಅವಕಾಶವಿರುತ್ತದೆ.

ಇದನ್ನೂ ಓದಿ: Online Land Records-ರೈತರು ಇನ್ಮುಂದೆ ತಮ್ಮ ಜಮೀನಿನ ದಾಖಲೆ ಪಡೆಯುವುದು ಭಾರೀ ಸುಲಭ!

bele vime

Bele Parihara Amount-ಪ್ರತಿ 2.5 ಎಕರೆಗೆ ಎಷ್ಟು ಬೆಳೆ ಪರಿಹಾರ ನೀಡಲಾಗುತ್ತದೆ?

ಬೆಳೆ ಪರಿಹಾರ ಯೋಜನೆಯಡಿ ಬೆಳೆ ಹಾನಿಯಾಗಿರುವ ಕ್ಷೇತ್ರಕ್ಕೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ NDRF ಮತ್ತು SDRF ಯೋಜನೆಯಡಿ ಪರಿಹಾರದ ಹಣವನ್ನು ರೈತರ ಖಾತೆಗೆ ನೇರವಾಗಿ ಯಾವುದೇ ಮಧ್ಯವರ್ತಿಗೆ ಅವಕಾಶ ನೀಡದೆ ಪರಿಹಾರದ ಹಣವನ್ನು ಜಮಾ ಮಾಡಲಾಗುತ್ತದೆ, ಪ್ರಸ್ತುತ ವಿತರಣೆ ಮಾಡುವ ಬೆಳೆ ಹಾನಿ ಪರಿಹಾರದ ಮೊತ್ತದ ವಿವರ ಈ ಹೀಗಿದೆ:

  • ಮಳೆಯಾಶ್ರಿತ ಬೆಳೆಗಳಿಗೆ- ₹17,000 ರೂ
  • ನೀರಾವರಿ ಬೆಳೆಗೆ- ₹25,500 ರೂ
  • ಬಹು ವಾರ್ಷಿಕ ಬೆಳೆಗಳಿಗೆ- ₹25,500 ರೂ

Bele Parihara-2025: ಈ ಬಾರಿಯ ಮುಂಗಾರು ಹಂಗಾಮಿನ ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರದ ಹಣ ರೈತರ ಖಾತೆ:

ಪ್ರಸ್ತುತ 2025-26ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಅತೀಯಾದ ಮಳೆಯಿಂದಾಗಿ ಹಾನಿಗೆ ಒಳಗಾದ ಬೆಳೆಗೆ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಯೋಜನೆಯ ಹಣವನ್ನು ರೈತರ ಖಾತೆಗೆ ಈಗಾಗಲೇ ವರ್ಗಾವಣೆ ಮಾಡಲಾಗುತ್ತಿದ್ದು ರೈತರು ಈ ಕೆಳಗಿನ ವಿಧಾನವನ್ನು ಅನುಸರಿಸಿ ಈ ಎರಡು ಯೋಜನೆಯಡಿ ಹಣ ಜಮಾ ಅಗಿರುವ ವಿವರವನ್ನು ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Kuri Sakanike Tarabeti-ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ!

1) Crop Loss Status-ಬೆಳೆ ಪರಿಹಾರದ ವಿವರವನ್ನು ತಿಳಿಯುವ ವಿಧಾನ:

ರೈತರು ಮೊಬೈಲ್ ಮೂಲಕ ಕಂದಾಯ ಇಲಾಖೆಯ ಅಧಿಕೃತ Parihara ತಂತ್ರಾಂಶವನ್ನು ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಬೆಳೆ ಪರಿಹಾರದ ಹಣ ಜಮಾ ವಿವರವನ್ನು ತಿಳಿಯಬಹುದು.

Step-1: ಕೃಷಿಕರು ಮೊದಲಿಗೆ "Crop Loss Status Check" ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ ವರ್ಷ, ಹಂಗಾಮು, ವಿಪತ್ತಿನ ವಿಧ, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿಕೊಂಡು "ವರದಿ ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಪರಿಹಾರ ಜಮಾ ಅಗಿದೆ ಎನ್ನುವ ಪಟ್ಟಿ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ: Poultry Shed Subsidy-ಕುಕ್ಕುಟ ಸಂಜೀವಿನಿ ಯೋಜನೆಯಡಿ ಉಚಿತ ಕೋಳಿಮರಿ, ಶೆಡ್ ಸಹಾಯಧನ ಪಡೆಯಲು ಅರ್ಜಿ!

2) Crop Insurance Status-ಬೆಳೆ ವಿಮೆ ಹಣ ಜಮಾ ವಿವರವನ್ನು ತಿಳಿಯುವ ವಿಧಾನ:

ಬೆಳೆ ವಿಮಾ ಯೋಜನೆಯಡಿ ಪರಿಹಾರ ಜಮಾ ಅಗಿರುವ ವಿವರ ಮತ್ತು ಅರ್ಜಿ ಸ್ಥಿತಿಯನ್ನು ಚೆಕ್ ಮಾಡಲು ಈ ಕೆಳಗಿನ ವಿಧಾನವನ್ನು ಅನುಸರಿಸಿ samrakshane ಪೋರ್ಟಲ್ ಅನ್ನು ಪ್ರವೇಶ ಮಾಡಿ ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ ಲಿಂಕ್ Crop Insurance Status Check ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ.

Step-2: ಇದಾದ ಬಳಿಕ ಈ ಪೇಜ್ ನಲ್ಲಿ ನೀವು ಯಾವ ಸಾಲಿನ ಬೆಳೆ ವಿಮಾ ಹಣ ಜಮಾ ಚೆಕ್ ಮಾಡಬೇಕು ಎಂದುಕೊಂಡಿರುವಿರೋ ಈ ವರ್ಷ ಮತ್ತು ಹಂಗಾಮನ್ನು ಆಯ್ಕೆ ಮಾಡಿಕೊಂಡು ಮುಂದಿನ ಪೇಜ್ ಅನ್ನು ಪ್ರವೇಶ ಮಾಡಿ.

Step-3: ಇದಾದ ನಂತರ ಈ ಪುಟದಲ್ಲಿ ಕೆಳಗೆ ಗೋಚರಿಸುವ "Farmers" ಕಾಲಂ ನಲ್ಲಿ "Check Status" ಬಟನ್ ಮೇಲೆ ಕ್ಲಿಕ್ ಮಾಡಿ "Mobile No" ಆಯ್ಕೆಯ ಮೇಲೆ ಒತ್ತಿ ನೀವು ಅರ್ಜಿ ಸಲ್ಲಿಸುವಾಗಿ ನೀಡಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ ಪಕ್ಕದಲ್ಲಿರುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ವಿವರವನ್ನು ಇಲ್ಲಿ ನೀವು ನೋಡಬಹುದು.

Step-4: ಈ ಪುಟದ ಕೊನೆಯಲ್ಲಿ ಕಾಣುವ "Select" ಬಟನ್ ಮೇಲೆ ಕ್ಲಿಕ್ ಮಾಡಿದರೆ "UTR Details" ಕಾಲಂ ನಲ್ಲಿ ನಿಮಗೆ ಬೆಳೆ ವಿಮೆ ಪರಿಹಾರದ ಹಣ ಜಮಾ ಅಗಿರುವುದರ ವಿವರವನ್ನು ನೋಡಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: