Poultry Shed Subsidy-ಕುಕ್ಕುಟ ಸಂಜೀವಿನಿ ಯೋಜನೆಯಡಿ ಉಚಿತ ಕೋಳಿಮರಿ, ಶೆಡ್ ಸಹಾಯಧನ ಪಡೆಯಲು ಅರ್ಜಿ!

January 3, 2026 | Siddesh
Poultry Shed Subsidy-ಕುಕ್ಕುಟ ಸಂಜೀವಿನಿ ಯೋಜನೆಯಡಿ ಉಚಿತ ಕೋಳಿಮರಿ, ಶೆಡ್ ಸಹಾಯಧನ ಪಡೆಯಲು ಅರ್ಜಿ!
Share Now:

ನರೇಗಾ ಯೋಜನೆಯ ಅಡಿಯಲ್ಲಿ ಕುಕ್ಕುಟ ಸಂಜೀವಿನಿ ಯೋಜನೆಯ ವತಿಯಿಂದ ಗ್ರಾಮೀಣ ಕರ್ನಾಟಕದ ಮಹಿಳೆಯರಿಗೆ(Poultry Shed Subsidy) ಆರ್ಥಿಕ ಭದ್ರತೆ, ಸ್ವಾವಲ್ಂಬನೆ ಹಾಗೂ ಉದ್ಯೋಗವಕಾಶವನ್ನು ನೀಡುವುದರ ಉದ್ದೇಶದಿಂದ ಉಚಿತ ಕೋಳಿ ಮರಿ ಶೆಡ್ ನಿರ್ಮಾಣ ಮಾಡಲು ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕೃಷಿಯನ್ನೆ ಅವಲಂಬನೆಯನ್ನಾದ ಈ ದೇಶದಲ್ಲಿ ಕೃಷಿಯ ಜೊತೆಗೆ ಪೂರಕ ಆದಾಯವನ್ನು ಮಾಡಲು(Free Poultry Chicks Karnataka) ಹೋರಾಡುತ್ತಿರುವ ಗ್ರಾಮೀಣ ಮಹಿಳೆಯರು ಮನೆಯಲ್ಲಿಯೇ ಕೋಳಿ ಸಾಕಾಣಿಕೆ ಮಾಡಿ, ಪ್ರತಿ ತಿಂಗಳು ಆದಾಯ ಗಳಿಸುವ ಅವಕಾಶ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ.

ಇದನ್ನೂ ಓದಿ: Online Mutation-ಉಚಿತವಾಗಿ ಮ್ಯುಟೇಷನ್ ಪಡೆಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

ಈ ಯೋಜನೆಯ ಅಡಿಯಲ್ಲಿ ಉಚಿತ ಕೋಳಿ ಮರಿಯನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬೇಕು?(Poultry Farming Subsidy Karnataka) ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು? ಈ ಯೋಜನೆಯ ಅಡಿಯಲ್ಲಿ ಯಾವೆಲ್ಲ ಪ್ರಯೋಜನವನ್ನು ಪಡೆಯಬಹುದು? ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು? ಇದರ ಅಡಿಯಲ್ಲಿ ಎಷ್ಟು ಸಹಾಯಧನವನನ್ನು ನೀಡಲಾಗುತ್ತದೆ? ಇತರ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Kukkuta Sanjeevini Scheme-ಏನಿದು ಕುಕ್ಕುಟ ಸಂಜೀವಿನಿ ಯೋಜನೆ?

ಕರ್ನಾಟಕ ಸರ್ಕಾರದ ಸಹಾಯ ಯೋಜನೆಯಲ್ಲಿ ಕುಕ್ಕುಟ ಸಂಜೀವಿನಿ ಯೋಜನೆಯು ಒಂದಾಗಿದೆ. ಈ ಯೋಜನೆ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮನೆಯಲ್ಲಿಯೇ ಕೆಲಸ ಮಾಡಿ ಹಣವನ್ನು ಸಂಪಾದನೆ ಮಾಡಲು ಸಹಾಯಕಾರಿಯಾಗಿದೆ. ವಿಶೇಷವಾಗಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಈ ಯೋಜನೆಯಿಂದ ಲಾಭ ಪಡೆಯಬಹುದು.

ಈ ಯೋಜನೆಯಡಿ ಸರ್ಕಾರದಿಂದ ಉಚಿತವಾಗಿ ಕೋಳಿಮರಿಗಳನ್ನು ನೀಡಲಾಗುತ್ತದೆ. ಕೋಳಿ ಸಾಕಾಣಿಕೆ ಮಾಡಲು ಶೆಡ್ ನಿರ್ಮಾಣಕ್ಕೆ ಸಹಾಯಧನ ಮತ್ತು ತರಬೇತಿಯೂ ಸಿಗುತ್ತದೆ. ಮಹಿಳೆಯರು ಕೋಳಿ ಸಾಕಿ ಮೊಟ್ಟೆ ಮತ್ತು ಕೋಳಿ ಮಾರಾಟ ಮಾಡಿ ಆದಾಯ ಗಳಿಸಬಹುದು.

ಈ ಯೋಜನೆಯ ಮತ್ತೊಂದು ಲಾಭವೆಂದರೆ ಮೊಟ್ಟೆಗಳಿಗೆ ಸರ್ಕಾರವೇ ಮಾರುಕಟ್ಟೆ ಒದಗಿಸುತ್ತದೆ. ಶಾಲೆಗಳ ಮಧ್ಯಾಹ್ನ ಊಟ ಮತ್ತು ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆ ಮಾಡುವ ಅವಕಾಶ ಇದೆ. ಇದರಿಂದ ಮಹಿಳೆಯರಿಗೆ ಮಾರಾಟದ ತೊಂದರೆ ಇಲ್ಲದೆ ನಿಯಮಿತ ಆದಾಯ ಸಿಗುತ್ತದೆ.

ಇದನ್ನೂ ಓದಿ: LPG Cylinder Price Hike-ಗ್ಯಾಸ್ ಸಿಲಿಂಡರ್ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ದರ ವಿವರ!

free poulrty training

ಇದನ್ನೂ ಓದಿ: Kuvempu Felloship-ಕುವೆಂಪು ಫೆಲೋಷಿಪ್‍ ಪಡೆಯಲು ಅರ್ಜಿ ಆಹ್ವಾನ! ಫೆಲೋಷಿಪ್ ಮೊತ್ತ ರೂ 3 ಲಕ್ಷ!

Uses Of This Scheme-ಈ ಯೋಜನೆ ಅಡಿ ಒದಗುವ ಸೌಲಭ್ಯಗಳು?

ಉಚಿತ ನಾಟಿ ಕೋಳಿಮರಿಗಳು:

ಆಸಕ್ತಿ ಇರುವ ಅರ್ಹ ಮಹಿಳಾ ಸ್ವಸಹಾಯ ಸಂಘಗಳಿಗೆ ಪಶುಸಂಗೋಪನಾ ಇಲಾಖೆಯಿಂದ ಸುಮಾರು ಆರು ವಾರ ವಯಸ್ಸಿನ ಉತ್ತಮ ಗುಣಮಟ್ಟದ ನಾಟಿ ಕೋಳಿಮರಿಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ.

ಶೆಡ್ ನಿರ್ಮಾಣಕ್ಕೆ ಸಹಾಯಧನ:

MGNREGA ಯೋಜನೆಯಡಿ ಕೋಳಿ ಶೆಡ್ ನಿರ್ಮಾಣಕ್ಕೆ ಸರ್ಕಾರದಿಂದ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.
500 ಕೋಳಿಗಳ ಶೆಡ್‌ ನಿರ್ಮಾಣಕ್ಕೆ ₹4.5 ಲಕ್ಷವರೆಗೆ
1,000 ಕೋಳಿಗಳ ಶೆಡ್‌ ನಿರ್ಮಾಣಕ್ಕೆ ₹7.5 ಲಕ್ಷವರೆಗೆ ಸಹಾಯಧನವನ್ನು ನೀಡಲಾಗುತ್ತದೆ.

ಮೊದಲ ಹಂತದ ಸಹಾಯಧನ:

ಈ ಯೋಜನೆಯ ಅಡಿ ಉದ್ಯೋಗವನ್ನು ಪ್ರಾರಂಭ ಮಾಡಲು ಪ್ರತಿ ಮಹಿಳಾ ಸ್ವಸಹಾಯ ಸಂಘಕ್ಕೆ ₹25,000 ಮೊತ್ತದ ಪ್ರೋತ್ಸಾಹಧನವನ್ನು ಸರ್ಕಾರವು ನೀಡಲಾಗುತ್ತದೆ.

ಇದನ್ನೂ ಓದಿ: Forgot UAN Number-ನಿಮ್ಮ UAN ಸಂಖ್ಯೆ ಮರೆತಿದ್ದೀರಾ? ಇಲ್ಲಿದೆ ನೋಡಿ ಮರುಪಡೆಯಲು ಸಿಂಪಲ್ ಸ್ಟೆಪ್ಸ್!

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಕುಕ್ಕುಟ ಸಂಜೀವಿನಿ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆದು ಉದ್ಯೋಗವನ್ನು ಆರಂಭಿಸಲು ಆಸಕ್ತಿ ಇರುವ ಅರ್ಹ ಮಹಿಳಾ ಅಭ್ಯರ್ಥಿಗಳು ನಿಮ್ಮ ಹತ್ತಿರದ ಪಶು ಸಂಗೋಪನಾ ಇಲಾಖೆ ಅಥವಾ ಸ್ಥಳೀಯ ಪಶು ಆಸ್ಪತ್ರೆಗೆ (ತಹಶೀಲ್ದಾರ್ ಕಚೇರಿ) ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Eligibility Critiria under this scheme-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಕುಕ್ಕುಟ ಸಂಜೀವಿನಿ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಈ ಕೆಳಗೆ ನೀಡಿರುವ ಅರ್ಹತೆಗಳನ್ನು ಹೊಂದಿರಬೇಕು:

ಅರ್ಜಿದಾರರು ಮಹಿಳಾ ಸ್ವಸಹಾಯ ಸಂಘದಲ್ಲಿ (SHG) ಸದ್ಯಸತ್ವವನ್ನು ಹೊಂದಿರಬೇಕು.

ಸಂಘದಲ್ಲಿ ಒಟ್ಟು 5-10 ಸದಸ್ಯರನ್ನು ಹೊಂದಿರಬೇಕು.

ಸಹಾಯಧನವನ್ನು ಪಡೆಯಲು ಸಂಘವು ಗ್ರಾಮ ಪಂಚಾಯತ್ ಮಟ್ಟಕ್ಕೆ ಒಳಪಟ್ಟಿರಬೇಕು.

ಕೋಳಿ ಸಾಕಾಣಿಕೆ ಮಾಡಲು ಆಸಕ್ತಿ ಅಥವಾ ಅನುಭವವನ್ನು ಹೊಂದಿರಬೇಕು.

ಇದನ್ನೂ ಓದಿ: Grama One-ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ!

free chik

ಇದನ್ನೂ ಓದಿ: Milk Payment Status-ನಿಮ್ಮ ಹಾಲಿನ ಲೆಕ್ಕ ಈಗ ನಿಮ್ಮ ಬೆರಳ ತುದಿಯಲ್ಲಿ! ಇಲ್ಲಿದೆ ಮೊಬೈಲ್ ಅಪ್ಲಿಕೇಶನ್!

What are the documents required-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

✔️ ಆಧಾರ್ ಕಾರ್ಡ್ ಪ್ರತಿ/Aadhar Card

✔️ ಬ್ಯಾಂಕ್ ಪಾಸ್‌ಬುಕ್/Bank Passbook

✔️ ಫೋಟೋ/Photocopy

✔️ ಸಂಘದ ಜಮೀನಿನ ಪಹಣಿ (ಶೆಡ್ ನಿರ್ಮಾಣಕ್ಕೆ)/RTC

✔️ ಮೊಬೈಲ್ ನಂಬರ್/Mobile NUmber

ಇದನ್ನೂ ಓದಿ: Survey Number-ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ಮಾಹಿತಿ ತಿಳಿಯುವುದು ಹೇಗೆ?

For More Information-ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಮ್ಮ ಹತ್ತಿರದ ಪಶು ಸಂಗೋಪನೆ ಇಲಾಖೆಗೆ ನೇರವಾಗಿ ಭೇಟಿ ಮಾಡಿ

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: