HomeNew postsBele parihara amount- ಈ ತಪ್ಪು ಮಾಡಿದರೆ ನಿಮ್ಮ ಖಾತೆಗೆ ಬರುವುದಿಲ್ಲ ಬರ ಪರಿಹಾರ! ಇಲ್ಲಿದೆ...

Bele parihara amount- ಈ ತಪ್ಪು ಮಾಡಿದರೆ ನಿಮ್ಮ ಖಾತೆಗೆ ಬರುವುದಿಲ್ಲ ಬರ ಪರಿಹಾರ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಎಲ್ಲಾ ರೈತರಿಗೂ ಈಗಾಗಲೇ ತಿಳಿದಿರುವ ಹಾಗೆಯೇ ಕೇಂದ್ರದಿಂದ ಈ ವಾರ ರಾಜ್ಯಕ್ಕೆ ಬರ ಪರಿಹಾರವನ್ನು(Bele parihara amount) ಬಿಡುಗಡೆ ಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ಅರ್ಹ ಫಲಾನುಭವಿ ರೈತರ ಖಾತೆಗೆ ಪರಿಹಾರದ ಹಣವನ್ನು ಜಮಾ ಮಾಡಲಾಗುತ್ತದೆ.

ಅನೇಕ ಜನರು ಪ್ರಸ್ತುತ ಲೋಕಸಭಾ ಚುನಾವಣೆಯಿರುವ ಕಾರಣ ಚುನಾವಣೆ ಮುಗಿದ ಬಳಿಕ ಪರಿಹಾರದ ಹಣವನ್ನು ಹಾಕಲಾಗುತ್ತದೆಯೇ ಎಂದು ಪ್ರಶ್ನೆ ಮಾಡಿದ್ದು ಇದಕ್ಕೆ ಉತ್ತರ ಈ ರೀತಿ ಇದೆ ಚುನಾವಣಾ ಆಯೋಗವೂ ರೈತರ ಖಾತೆಗೆ ಬರ ಪರಿಹಾರದ ಹಣವನ್ನು ವರ್ಗಾವಣೆ ಮಾಡಲು ಒಪ್ಪಿಗೆ ಸೂಚಿಸಿರುವುದರಿಂದ ಲೋಕಸಭಾ ಚುನಾವಣೆ ಈ ಕಾರ್ಯಕ್ಕೆ ಅಡ್ಡಿಯಾಗುವುದಿಲ್ಲ.

ಇದಲ್ಲದೇ ರೈತರು ಸಹ ಸರಿಯಾದ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ಮತ್ತು ನಿಮ್ಮ ಅರ್ಜಿಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದೇ ಇರುವ ಹಾಗೇ ಪರಿಶೀಲಿಸಿಕೊಳ್ಳುವುದರ ಮೂಲಕ ಪರಿಹಾರದ ಹಣ ಸರಾಗವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ವರ್ಗಾವಣೆ ಅಗುತ್ತದೆ.

ಇದನ್ನೂ ಓದಿ: Parihara amount-2024: ಕೇಂದ್ರದಿಂದ 3498 ಕೋಟಿ ಬರ ಪರಿಹಾರ ಬಿಡುಗಡೆ! ಈ ಪಟ್ಟಿಯಲ್ಲಿರುವ ರೈತರಿಗೆ ಸಿಗಲಿದೆ ಪರಿಹಾರದ ಹಣ!

Bele parihara amount-2024: ಈ ತಪ್ಪು ಮಾಡಿದರೆ ನಿಮ್ಮ ಖಾತೆಗೆ ಬರುವುದಿಲ್ಲ ಬರ ಪರಿಹಾರ!

ಹೌದು ರೈತ ಮಿತ್ರರೇ ಈ ಕೆಳಗೆ ವಿವರಿಸಿರುವ ಅಂಶಗಳನ್ನು ಒಮ್ಮೆ ಸರಿಯಾಗಿ ಗಮನಿಸಿ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ಖಾತೆ ವಿವರ ಹಾಗೂ ಜಮೀನಿನ ವಿವರ ಎಲ್ಲವೂ ಸಂಬಂಧಪಟ್ಟ ತಂತ್ರಾಂಶದಲ್ಲಿ ಸರಿಯಾಗಿದಿಯೇ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ.

1) ಅರ್ಜಿದಾರ ರೈತರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್(bank-aadhar link/NPCI mapping) ಇರುವುದು ಕಡ್ಡಾಯ.

2) ಕೃಷಿ ಇಲಾಖೆಯ ಪ್ರೂಟ್ಸ್ ತಂತ್ರಾಂಶದಲ್ಲಿ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಸರ್ವೆ ನಂಬರ್ ಗಳು FID ಅಲ್ಲಿ ದಾಖಲಾಗಿರಬೇಕು ಒಂದೆರಡು ಸರ್ವೆ ನಂಬರ್ ಸೇರ್ಪಡೆಯಾಗಿ ಬಾಕಿ ಜಮೀನಿನ ಸರ್ವೆ ನಂಬರ್ ಬಿಟ್ಟು ಹೋಗಿದ್ದರೆ ನಿಮಗೆ ಆ ಜಮೀನಿನ ಪರಿಹಾರದ ಹಣ ಜಮಾ ಅಗುವುದಿಲ್ಲ. 

ಇದಕ್ಕಾಗಿ ಒಮ್ಮೆ ನಿಮ್ಮ FID ನಂಬರ್ ನಲ್ಲಿ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಇವೆಯೇ ಎಂದು ಖಚಿತಪಡಿಸಿಕೊಳ್ಳುವುದು.

ಇದನ್ನೂ ಓದಿ: Bara parihara list-2024: ಬರ ಪರಿಹಾರ ಹಣ ಬಿಡುಗಡೆಯಾದ ರೈತರ ಪಟ್ಟಿ ಬಿಡುಗಡೆ!

3) ನಿಮ್ಮ ವೈಯಕ್ತಿಕ ವಿವರ ಮತ್ತು ಜಮೀನಿನ ವಿವರ ತಾಳೆ ಅಗದಿದ್ದರೆ ಮತ್ತು ಆಧಾರ್ ಕಾರ್ಡ ನಲ್ಲಿ ಹೆಸರು ತಿದ್ದುಪಡಿ ಮಾಡಿದ್ದರೆ ಅಂತಹ ಸಂದರ್ಭದಲ್ಲಿಯೂ ನಿಮಗೆ ಪರಿಹಾರ ಜಮಾ ಮಾಡಲು ತಾಂತ್ರಿಕ ಸಮಸ್ಯೆ ಬರಬವುದು.

ವಿಶೇಷ ಸೂಚನೆ: ರಾಜ್ಯ ಸರಕಾರದಿಂದ ಈಗಾಗಲೇ ಮೊದಲನೇ ಕಂತಿನ ರೂ 2,000 ಬರ ಪರಿಹಾರ ಪಡೆದ ರೈತರು ಯಾವುದೇ ಅತಂಕ ಪಡುವ ಅವಶ್ಯಕತೆಯಿರುವುದಿಲ್ಲ ಏಕೆಂದರೆ ಈ ರೈತರ ವಿವರವು ಸರಿಯಾಗಿ ಇದ್ದು ಇಂತಹ ರೈತರಿಗೆ 2ನೇ ಕಂತಿನ ಹಣ ಯಾವುದೇ ತಾಂತ್ರಿಕ ಸಮಸ್ಯೆಯಿಲ್ಲದೆ ಸರಾಗವಾಗಿ ವರ್ಗಾವಣೆ ಅಗಲಿದೆ.

Usefull links- ಉಪಯುಕ್ತ ಲಿಂಕ್ ಗಳು:

> ತಾಂತ್ರಿಕ ಸಮಸ್ಯೆಯಿಂದ ಬರ ಪರಿಹಾರದ ಹಣ ಜಮಾ ಅಗದ ನಿಮ್ಮ ಹಳ್ಳಿಯ ರೈತರ ಪಟ್ಟಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ: Click here

> 1 ನೇ ಕಂತಿನ ಬರ ಪರಿಹಾರ ಜಮಾ ಅಗಿರುವ ರೈತರ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ: Click here

ಇದನ್ನೂ ಓದಿ: DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

Bara parihara court case- ರಾಜ್ಯ ಸರ್ಕಾರದಿಂದ ತಕರಾರು ಅರ್ಜಿ ಸಲ್ಲಿಕೆ:

ಕೇಂದ್ರ ಸರಕಾರದಿಂದ ರಾಜ್ಯಕ್ಕೆ 3,454 ಕೋಟಿ ಬರ ಪರಿಹಾರ ಬಿಡುಗಡೆ ಮಾಡಲಾಗಿದ್ದು ಇದು ನಾವು ಕೇಳಿದ ಪರಿಹಾರದ ಹಣಕ್ಕೂ ಈಗ ಬಿಡುಗಡೆ ಮಾಡಿರುವುದಕ್ಕೂ ತುಂಬಾ ವ್ಯತ್ಯಾಸ ಇದ್ದು ಕೇಂದ್ರವು ರಾಜ್ಯಕ್ಕೆ ಕಡಿಮೆ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದೆ ಎಂದು ರಾಜ್ಯ ಸರಕಾರದಿಂದ ಪುನಃ ಸುಪ್ರೀಂ ಕೋರ್ಟ್ ನಲ್ಲಿ ತಕರಾರು ಸಲ್ಲಿಸಿದೆ ಮುಂದೆ ಈ ಪ್ರಕರಣ ಯಾವ ರೀತಿ ಇತ್ಯರ್ಥಗೊಳ್ಳಲಿದೆ ಎಂದು ಕಾದು ನೋಡಬೇಕಿದೆ. 

Most Popular

Latest Articles

Related Articles