HomeNew postsBele vime- ಇಲ್ಲಿದೆ ನಿಮ್ಮ ಮೊಬೈಲ್ ನಂಬರ್ ಹಾಕಿ ನಿಮಗೆ ಎಷ್ಟು ಬೆಳೆ ವಿಮೆ ಬರಲಿದೆ...

Bele vime- ಇಲ್ಲಿದೆ ನಿಮ್ಮ ಮೊಬೈಲ್ ನಂಬರ್ ಹಾಕಿ ನಿಮಗೆ ಎಷ್ಟು ಬೆಳೆ ವಿಮೆ ಬರಲಿದೆ ಎಂದು ತಿಳಿಯುವ ವಿಧಾನ!

ಇಂದು ಈ ಲೇಖನದಲ್ಲಿ ಬೆಳೆ ವಿಮೆಯ(Bele vime) ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಅರ್ಜಿದಾರ ರೈತರ ಮೊಬೈಲ್ ನಂಬರ್  ಹಾಕಿ ಎಷ್ಟು ಬೆಳೆ ವಿಮೆ ಬರಲಿದೆ ಎಂದು ಹೇಗೆ ತಿಳಿದುಕೊಳ್ಳಬಹುದು ಎಂದು ವಿವರಿಸಲಾಗಿದೆ.

ಈ ಹಿಂದಿನ ಎರಡು ಅಂಕಣಗಳಲ್ಲಿ ಸರ್ವೆ ನಂಬರ್ ಮತ್ತು ಅರ್ಜಿ ಸಂಖ್ಯೆಯನ್ನು ಹಾಕಿ ಬೆಳೆ ವಿಮೆ ಅರ್ಜಿ ವಿವರ ಹೇಗೆ ತಿಳಿದುಕೊಳ್ಳಬಹುದು ಎಂದು ವಿವರಿಸಲಾಗಿತ್ತು ಇಂದು ಈ ಲೇಖನದಲ್ಲಿ ಬೆಳೆ ವಿಮೆ ಅರ್ಜಿ ಸಲ್ಲಿಸುವಾಗ ರೈತರು ನೀಡಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ ಯಾವೆಲ್ಲ ವಿಧಾನ ಅನುಸರಿಸಿ ಬೆಳೆ ವಿಮೆ ಎಷ್ಟು ಬರಲಿದೆ ಎಂದು ತಿಳಿಯಬಹುದು ಎಂದು ವಿವರಿಸಲಾಗಿದೆ.

ಬೆಳೆ ವಿಮೆ ಅರ್ಜಿ ವಿಲೇವಾರಿಗೆ ರಚಿಸಿರುವ ಸರಕಾರದ ಅಧಿಕೃತ samrakshane ಪೋರ್ಟಲ್ ಅನ್ನು ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಬೆಳೆ ವಿಮೆ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: Bele vime Claim enquiry- ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿ ಕುರಿತು ಯಾರಲ್ಲಿ ವಿಚಾರಿಸಬೇಕು?

Crop insurance-2024: ನಿಮ್ಮ ಮೊಬೈಲ್ ನಂಬರ್ ಹಾಕಿ ನಿಮಗೆ ಎಷ್ಟು ಬೆಳೆ ವಿಮೆ ಬರಲಿದೆ ಎಂದು ತಿಳಿಯುವ ವಿಧಾನ

ರೈತರು ತಾವು ಬೆಳೆ ವಿಮೆ ಅರ್ಜಿ ಸಲ್ಲಿಸವಾಗ ನೀಡಿರುವ ಮೊಬೈಲ್ ನಂಬರ್ ಅನ್ನು ಬಳಕೆ ಮಾಡಿಕೊಂಡು ಮಾತ್ರ ಈ ಕೆಳಗಿನ ವಿಧಾನ ಅನುಸರಿಸಿ ನೀವು ಬೆಳೆದಿರುವ ಬೆಳೆ ನಷ್ಟುವಾದಲ್ಲಿ ಮಾರ್ಗಸೂಚಿ ಪ್ರಕಾರದ ನೀವು ಬೆಳೆ ವಿಮೆ ಪಡೆಯಲು ಅರ್ಹರಿದ್ದಲ್ಲಿ ನಿಮಗೆ ಬೆಳೆ ವಿಮೆ ಪರಿಹಾರದ ಹಣ ಎಷ್ಟು ಬರಲಿದೆ ಎನ್ನುವ ಮಾಹಿತಿಯನ್ನು ಪಡೆಯಬಹುದು.

Step-1: ಪ್ರಥಮದಲ್ಲಿ ಈ Crop insurance amount ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸಂರಕ್ಷಣೆ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು. ಇದಾದ ಬಳಿಕ ಈ ಪೇಜ್ ನಲ್ಲಿ “Select Insurance Year” ಆಯ್ಕೆಯಲ್ಲಿ “2023-24” ಮತ್ತು Select Insurance Season “Kharif” ಎಂದು ಆಯ್ಕೆ ಮಾಡಿಕೊಂಡು “ಮುಂದೆ/Go” ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Bele vime status-2024: ಇಲ್ಲಿದೆ ಸರ್ವೆ ನಂಬರ್ ಹಾಕಿ ಎಷ್ಟು? ಬೆಳೆ ವಿಮೆ ಬಂದಿದೆ ಎಂದು ಚೆಕ್ ಮಾಡುವ ವಿಧಾನ! 

Step-2: ತದನಂತರ ಇಲ್ಲಿ ಈ ಪುಟದಲ್ಲಿ ಕೆಳಗಡೆ “Farmers” ಕಾಲಂ ನಲ್ಲಿ ಕಾಣುವ “Check Status” ಬಟನ್ ಮೇಲೆ ಕ್ಲಿಕ್ ಮಾಡಿ “check status by type” ಆಯ್ಕೆಯಲ್ಲಿ “Mobile no” ಅನ್ನು ಆಯ್ಕೆ ಮಾಡಿಕೊಂಡು ಕೆಳಗಡೆ ಮೊಬೈಲ್ ನಂಬರ್(Mobile no) ಮತ್ತು ಕ್ಯಾಪ್ಚ್ ಕೋಡ್(Captcha) ಅನ್ನು ನಮೂದಿಸಿ ಪಕ್ಕದಲ್ಲಿ ಕಾಣುವ “Search” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಅಗ ಈ ಕೆಳಗಿನ ಫೋಟೊದಲ್ಲಿ ತೋರಿಸಿದ ರೀತಿಯಲ್ಲಿ ಬೆಳೆ ವಿಮೆ ಅರ್ಜಿ ಸಂಖ್ಯೆಯ ವಿವರಗಳು ಗೋಚರಿಸುತ್ತದೆ.

Step-3: ಬಳಿಕ ಅರ್ಜಿ ಸಂಖ್ಯೆಯ ಮುಂದೆ ಕೊನೆಯಲ್ಲಿ ಕಾಣುವ “Select” ಬಟನ್ ಮೇಲೆ ಕ್ಲಿಕ್ ಮಾಡಿ ಬಳಿಕ “View details” ಮಾಡಿಕೊಂಡು ಈ ಪೇಜ್ ನಲ್ಲಿ ಕೊನೆಯಲ್ಲಿ ತೋರಿಸುವ “Survey No. and Crop Details” ಈ ಆಯ್ಕೆಯ ಕೊನೆಯ ಕಾಲಂ ನಲ್ಲಿ “Sum Assured/ಬೆಳೆ ವಿಮೆ ಪರಿಹಾರದ” ಒಟ್ಟು ಮೊತ್ತದ ವಿವರ ತೋರಿಸುತ್ತದೆ.

ಇದನ್ನೂ ಓದಿ: Crop insurance amount-2024: ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ.

ಬೆಳೆ ವಿಮೆ ಯೋಜನೆಯ ಕುರಿತು ನಮ್ಮ ಪುಟದ ಇತರೆ ಉಪಯುಕ್ತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: Click here

Most Popular

Latest Articles

Related Articles