Caste And Income Certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ!

January 31, 2026 | Siddesh
Caste And Income Certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ!
Share Now:

ಇಂದಿನ ಡಿಜಿಟಲ್ ಯುಗದಲ್ಲಿ ಸರ್ಕಾರಿ ಸೇವೆಗಳು ಜನರ ಮನೆಬಾಗಿಲಿಗೆ ತಲುಪುತ್ತಿವೆ. ಒಂದು ಕಾಲದಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ (Caste and Income Certificate) ಪಡೆಯಲು ತಹಶೀಲ್ದಾರ್ ಕಚೇರಿಗಳಿಗೆ ಅಲೆದಾಡಬೇಕಿತ್ತು. ಆದರೆ ಈಗ ಕರ್ನಾಟಕ ಸರ್ಕಾರದ 'ಸೇವಾ ಸಿಂಧು' (Seva Sindhu) ಮತ್ತು 'ನಾಡಕಚೇರಿ"(Nadakacheri) ಪೋರ್ಟಲ್ ಮೂಲಕ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಈ ಅಂಕಣದಲ್ಲಿ ಸಾರ್ವಜನಿಕರು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳು ಯಾವುವು? ಜಾತಿ ಮತ್ತು ಆದಾಯ ಪ್ರಮಾಣಪತ್ರ ಏಕೆ ಅವಶ್ಯಕ? ಎನ್ನುವ ಮಾಹಿತಿ ಸೇರಿದಂತೆ ಇನ್ನಿತರೆ ಅಗತ್ಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Fellowship Application-ಸಿಇಟಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕೆ ಅರ್ಜಿ!

Caste and Income Certificate Importance-ಜಾತಿ ಮತ್ತು ಆದಾಯ ಪ್ರಮಾಣಪತ್ರ ಏಕೆ ಅವಶ್ಯಕ?

ಈ ದಾಖಲೆಗಳು ಕೇವಲ ಕಾಗದದ ತುಣುಕುಗಳಲ್ಲ; ಇವು ನಿಮ್ಮ ಶೈಕ್ಷಣಿಕ ಮತ್ತು ವೃತ್ತಿಜೀವನದ ಬೆಳವಣಿಗೆಗೆ ಪೂರಕವಾದ ಪ್ರಮುಖ ದಾಖಲೆಗಳು.

ಶೈಕ್ಷಣಿಕ ಸೌಲಭ್ಯ: ಶಾಲಾ-ಕಾಲೇಜುಗಳ ಪ್ರವೇಶಾತಿ ಸಮಯದಲ್ಲಿ ಮೀಸಲಾತಿ ಪಡೆಯಲು ಇದು ಅತ್ಯಗತ್ಯ.

ಶಿಷ್ಯವೇತನ (Scholarship): ಸರ್ಕಾರ ನೀಡುವ ವಿವಿಧ ಸ್ಕಾಲರ್‌ಶಿಪ್‌ಗಳನ್ನು ಪಡೆಯಲು ಆದಾಯ ಪ್ರಮಾಣಪತ್ರ ಮುಖ್ಯ ಭೂಮಿಕೆ ವಹಿಸುತ್ತದೆ.

ಇದನ್ನೂ ಓದಿ: Adarsha Vidyalaya Admission-ಆದರ್ಶ ವಿದ್ಯಾನಿಯಲಗಳ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ!

ಸರ್ಕಾರಿ ಉದ್ಯೋಗ: ಸರ್ಕಾರಿ ಕೆಲಸಗಳಲ್ಲಿ ವಯೋಮಿತಿ ಸಡಿಲಿಕೆ ಮತ್ತು ಹುದ್ದೆಗಳ ಮೀಸಲಾತಿ ಪಡೆಯಲು ಜಾತಿ ಪ್ರಮಾಣಪತ್ರ ಬೇಕು.

ಸರ್ಕಾರಿ ಯೋಜನೆಗಳು: ಪಡಿತರ ಚೀಟಿ, ವಸತಿ ಯೋಜನೆಗಳು ಮತ್ತು ಕೃಷಿ ಸಬ್ಸಿಡಿಗಳನ್ನು ಪಡೆಯಲು ಈ ದಾಖಲೆಗಳು ಪೂರಕವಾಗಿವೆ.

ಶುಲ್ಕ ವಿನಾಯಿತಿ: ಪರೀಕ್ಷಾ ಶುಲ್ಕ ಅಥವಾ ಬೋಧನಾ ಶುಲ್ಕಗಳಲ್ಲಿ ರಿಯಾಯಿತಿ ಪಡೆಯಲು ಇದು ಸಹಕಾರಿ.

ಇದನ್ನೂ ಓದಿ: Tarpaulin Subsidy 2026-ಕೃಷಿ ಇಲಾಖೆಯಿಂದ ಶೇ 90% ರಿಯಾಯಿತಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

Caste And Income Certificate Online Application-ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಸಾರ್ವಜನಿಕರು ಮನೆಯಲ್ಲಿ ಇದ್ದುಕೊಂಡು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ಅಧಿಕೃತ ನಾಡಕಚೇರಿ(Nadakacheri) ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕವೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Step-1: ಮೊದಲ ಹಂತದಲ್ಲಿ ಇಲ್ಲಿ ಕ್ಲಿಕ್ Apply Now ಮಾಡಿ ಕಂದಾಯ ಇಲಾಕೆಯ ಅಧಿಕೃತ nadakacheri.karnataka.gov.in ವೆಬ್‌ಸೈಟ್‌ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Pouthi Khatha-ಪೌತಿ ಖಾತೆ ಪ್ರಕ್ರಿಯೆ ಇನ್ಮುಂದೆ ಮತ್ತಷ್ಟು ಸರಳ: ಸಚಿವ ಕೃಷ್ಣ ಬೈರೇಗೌಡ!

Caste And Income Certificate Online Application

ಇದನ್ನೂ ಓದಿ: Maternity Benefit-ತಾಯಿ ಲಕ್ಷ್ಮೀ ಬಾಂಡ್ ಯೋಜನೆಯಡಿ ಮಹಿಳಾ ಕಾರ್ಮಿಕರಿಗೆ 50,000 ರೂ. ಹೆರಿಗೆ ಸಹಾಯಧನ!

Step-2: ತದನಂತರ ಈ ಪೇಜ್ ನಲ್ಲಿ ಮೇಲೆ ಕಾಣಿಸುವ "Online Application" ಬಟನ್ ಮೇಲೆ ಕ್ಲಿಕ್ ಮಾಡಿ Apply Online ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ "ಒಟಿಪಿ ಪಡೆಯಿರಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ ಲಾಗಿನ್ ಅಗಬೇಕು.

Step-3: ಲಾಗಿನ್ ಆದ ನಂತರ 'New Request' ಮೆನು ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು 'Caste Certificate' ಅಥವಾ 'Income Certificate' ಅಥವಾ ಎರಡನ್ನೂ ಒಳಗೊಂಡ 'Caste & Income Certificate' ಆಯ್ಕೆಯನ್ನು ಆರಿಸಿಕೊಳ್ಳಿ.

Step-4: ಬಳಿಕ ಈ ಪುಟದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿ, ನಿಮ್ಮ ಹೆಸರು, ಆಧಾರ್ ಸಂಖ್ಯೆ ಮತ್ತು ರೇಷನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿ, ನಿಮ್ಮ ಕುಟುಂಬದ ವಾರ್ಷಿಕ ಆದಾಯ ಮತ್ತು ಜಾತಿ ವಿವರಗಳನ್ನು ಸರಿಯಾಗಿ ನಮೂದಿಸಿ.

Step-5: ಸೂಚಿಸಿದ ಗಾತ್ರದಲ್ಲಿ (Size) ನಿಮ್ಮ ಆಧಾರ್, ರೇಷನ್ ಕಾರ್ಡ್ ಮತ್ತು ಫೋಟೋಗಳನ್ನು ಅಪ್‌ಲೋಡ್ ಮಾಡಿ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅಲ್ಪ ಮೊತ್ತದ ಶುಲ್ಕವನ್ನು (ಸಾಮಾನ್ಯವಾಗಿ ₹40 ರಿಂದ ₹50) ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಅಥವಾ UPI ಮೂಲಕ ಪಾವತಿಸಿ. ಯಶಸ್ವಿಯಾಗಿ ಹಣ ಪಾವತಿಸಿದ ನಂತರ ನಿಮಗೆ ಒಂದು 'GSC Number' ಅಥವಾ ಅಪ್ಲಿಕೇಶನ್ ನಂಬರ್ ದೊರೆಯುತ್ತದೆ. ಇದನ್ನು ಪ್ರಿಂಟ್ ತೆಗೆದುಕೊಳ್ಳಿ ಅಥವಾ ಸೇವ್ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: Diploma Scholorship-ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಬಿಜಿಎಂ ಫೌಂಡೇಶನ್ ವತಿಯಿಂದ ₹36,000 ವಿದ್ಯಾರ್ಥಿವೇತನ!

Documents Required For Caste And Income Certificate-ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಶ್ಯವಿರುವ ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

  • ಅರ್ಜಿದಾರರ ಆಧಾರ್ ಕಾರ್ಡ/Aadhar Card
  • ವೋಟರ್/ರೇಶನ್ ಕಾರ್ಡ/Ration Card
  • ಪೋಟೋ/Photo
  • ಶೈಕ್ಷಣಿಕ ದಾಖಲೆ: ಶಾಲಾ ವರ್ಗಾವಣೆ ಪತ್ರ (TC) ಅಥವಾ ಅಂಕಪಟ್ಟಿ (ಜಾತಿ ನಮೂದಾಗಿರಬೇಕು)
  • ಇತರ ಅಗತ್ಯ ದಾಖಲೆಗಳು.

ಇದನ್ನೂ ಓದಿ: Samudaya Bhavana Grant-ಗ್ರಾಮ ಮಟ್ಟದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ಆರ್ಥಿಕ ನೆರವು!

Caste And Income Certificate Application Process-ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?

ಅರ್ಜಿ ಸಲ್ಲಿಸಿದ ನಂತರ ನಿಮ್ಮ ಗ್ರಾಮ ಲೆಕ್ಕಿಗರು (Village Accountant) ಮತ್ತು ಕಂದಾಯ ನಿರೀಕ್ಷಕರು (Revenue Inspector) ಅರ್ಜಿ ಪರಿಶೀಲನೆ ನಡೆಸುತ್ತಾರೆ. ಬಳಿಕ ಅಗತ್ಯ ವಿವರ ಮತ್ತು ದಾಖಲೆಗಳು ಸರಿಯಾಗಿರುವ ಅರ್ಜಿಯನ್ನು ಡಿಜಿಟಲ್ ಸಹಿ ಹಾಕಿ ಅನುಮೋದನೆ ನೀಡುತ್ತಾರೆ. ಬಳಿಕ ಸಾರ್ವಜನಿಕರು ಅಧಿಕೃತ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

Caste And Income Certificate Application Status-ಅರ್ಜಿಯ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

ಒಮ್ಮೆ ಸಾರ್ವಜನಿಕರು ಆನ್ಲೈನ್ ನಲ್ಲಿ ಅಗತ್ಯ ವಿವರವನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿದ ಬಳಿಕ ನಿಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ವಿವರವನ್ನು ತಿಳಿಯಲು ಈ ಕೆಳಗಿನ ವಿಧಾನವನ್ನು ಅನುಸರಿಸಿ.

Step-1: ಸಾರ್ವಜನಿಕರು ಮೊದಲಿಗೆ Caste And Income Certificate Application Status ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ನಾಡಕಚೇರಿ ವೆಬ್ಸೈತ್ ಅನ್ನು ಪ್ರವೇಶ ಮಾಡಬೇಕು.

Step-2: ಬಲಿಕ ಈ ಪೇಜ್ ನಲ್ಲಿ ಕಾಣುವ Online Application ಆಯ್ಕೆಯ ಮೇಲೆ ಕ್ಲಿಕ್ ಮಾಡಿ Application Status ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ನಂತರ ಅರ್ಜಿ ಸಲ್ಲಿಸುವಾಗ ನೀಡಿರುವ ಸ್ವೀಕೃತಿ ಸಂಖ್ಯೆಯನ್ನು/ಮೊಬೈಲ್ ನಂಬರ್ ಅನ್ನು ನಮೂದಿಸಿ ಪಕ್ಕದಲ್ಲಿರುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ ನಿಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ನಿಖರ ಮಾಹಿತಿಯನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: Aadhar App-ಇನ್ನುಂದೆ ನಿಮ್ಮ ಮೊಬೈಲ್ ನಲ್ಲಿ ಈ ಆ್ಯಪ್ ಇದ್ದರೆ! ಆಧಾರ್ ಕಾರ್ಡ ಬೇಕಿಲ್ಲ!

Caste And Income Certificate-ಪ್ರಮುಖ ಸೂಚನೆಗಳು

ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಅರ್ಜಿಯಲ್ಲಿರುವ ಹೆಸರು ಹೊಂದಾಣಿಕೆಯಾಗಬೇಕು.

ಸಾಮಾನ್ಯವಾಗಿ ಜಾತಿ ಪ್ರಮಾಣಪತ್ರವು ಜೀವಿತಾವಧಿಯವರೆಗೆ ಚಾಲ್ತಿಯಲ್ಲಿರುತ್ತದೆ (ಕೆಲವು ಮೀಸಲಾತಿ ವರ್ಗಗಳಿಗೆ ಹೊರತುಪಡಿಸಿ), ಆದರೆ ಆದಾಯ ಪ್ರಮಾಣಪತ್ರವು ಕೇವಲ 5 ವರ್ಷಗಳವರೆಗೆ ಮಾತ್ರ ಮಾನ್ಯತೆ ಹೊಂದಿರುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: