HomeNew postsCentral budget 2024: ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಎಷ್ಟು ಅನುದಾನ? ಇಲ್ಲಿದೆ ಪಿ...

Central budget 2024: ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಎಷ್ಟು ಅನುದಾನ? ಇಲ್ಲಿದೆ ಪಿ ಎಂ ಕಿಸಾನ್ ಹಣ ಹೆಚ್ಚಳದ ಅಧಿಕೃತ ಮಾಹಿತಿ!

ಕೇಂದ್ರ ಸರಕಾರದ 2024 ನೇ ಸಾಲಿನ ಮೊದಲ ಬಜೆಟ್ ನಲ್ಲಿ(Central budget 2024) ಕೃಷಿ ಕ್ಷೇತ್ರಕ್ಕೆ ಎಷ್ಟು ಅನುದಾನ ಮೀಸಲಿಡಲಾಗಿದೆ? ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರಸ್ತುತ ವಾರ್ಷಿಕ  ರೈತರಿಗೆ ನೀಡುತ್ತಿರುವ ಅರ್ಥಿಕ ನೆರವಿನಲ್ಲಿ ಹೆಚ್ಚಳ ಮಾಡಲಾಗಿದಿಯೇ? ಇಲ್ಲವೇ ಎನ್ನುವುದರ ಕುರಿತು ಅಧಿಕೃತ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2024-25 ಅನ್ನು ಮಂಡನೆ ಮಾಡಿದ್ದು ಈ ಬಜೆಟ್ ನಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.

ಇದನ್ನೂ ಓದಿ: adhar rtc link-2024: ರೈತರು ಇನ್ನೂ 7 ದಿನದ ಒಳಗಾಗಿ ಈ ಕೆಲಸ ಮಾಡದಿದ್ದಲ್ಲಿ ಸರಕಾರಿ ಯೋಜನೆಗಳ ಸೌಲಭ್ಯ ಸಿಗುವುದಿಲ್ಲ!

Central budget highlights-2024: ಕೇಂದ್ರ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಎಷ್ಟು ಅನುದಾನ? 

ಈ ವರ್ಷದ ಬಜೆಟ್ ನಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

32 ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಹೊಸ 109 ಹೆಚ್ಚು ಇಳುವರಿ ಮತ್ತು ಹವಾಮಾನ-ನಿರೋಧಕ ತಳಿಗಳನ್ನು ರೈತರ ಕೃಷಿಗಾಗಿ ಬಿಡುಗಡೆ ಮಾಡಲಾಗುತ್ತದೆ.

ಮುಂದಿನ 2 ವರ್ಷಗಳಲ್ಲಿ ಪ್ರಮಾಣೀಕರಣ ಮತ್ತು ಬ್ರ್ಯಾಂಡಿಂಗ್‌ ನೊಂದಿಗೆ ದೇಶಾದ್ಯಂತ 1 ಕೋಟಿ ರೈತರನ್ನು ಸಹಜ ಕೃಷಿ ಆರಂಭಿಸಲು ಪ್ರೋತ್ಸಾಹಿಸಲಾಗುವುದು.
ಹಾಗೂ ಸಹಜ ಕೃಷಿಗಾಗಿ 10,000 ಅಗತ್ಯ ಆಧಾರಿತ ಬಯೋ- ಇನ್‌ಪುಟ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಈ ಬಜೆಟ್ ನಲ್ಲಿ ಘೊಷಣೆ ಮಾಡಲಾಗಿದೆ.

ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಅನ್ನು 3 ವರ್ಷಗಳಲ್ಲಿ ರೈತರು ಮತ್ತು ಅವರ ಜಮೀನುಗಳನ್ನು ಒಳಗೊಳ್ಳಲು ಅಳವಡಿಸಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: NTPC Recruitment 2024 – ಇಂಧನ ಇಲಾಖೆಯಲ್ಲಿ ಸರ್ವೇಯರ್ ಹುದ್ದೆಗಳ ನೇಮಕಾತಿ

PM-kisan latest news-ಪಿ ಎಂ ಕಿಸಾನ್ ಯೋಜನೆಯ ಹಣ ಹೆಚ್ಚಳ ಮಾಡಲಾಗಿದಿಯೇ? ಇಲ್ಲವೇ?

ಪ್ರಸ್ತುತ್ತ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ತಲಾ ನಾಲ್ಕು ತಿಂಗಳಿಗೆ ಒಮ್ಮೆ ರೂ 2,000 ಹಣದಂತೆ ವರ್ಷಕ್ಕೆ ಒಟ್ಟು 6,000 ಹಣವನ್ನು ನೇರ ನಗದು ವರ್ಗಾವಣೆಯ ಮೂಲಕ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದ್ದು ಈ ಬಜೆಟ್ ನಲ್ಲಿ ಹೆಚ್ಚುವರಿಯಾಗಿ ರೂ 2,000 ಹೆಚ್ಚಳ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು 

ಅದರೆ ಪ್ರಸ್ತುತ ಬಜೆಟ್ ನಲ್ಲಿ ಪಿ ಎಂ ಕಿಸಾನ್ ಯೋಜನೆಯಡಿ ನೀಡುತ್ತಿದ್ದ ಹಣದಲ್ಲಿ ಯಾವುದೇ ಏರಿಕೆ ಮಾಡಿರುವುದಿಲ್ಲ. ಅರ್ಥಿಕ ನೆರವು ಹೆಚ್ಚಳದ ಕುರಿತು ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿರುವುದಿಲ್ಲ.

ಕೇಂದ್ರ ವಾರ್ತಾ ಇಲಾಖೆಯ ಬಜೆಟ್ ನ ಅಧಿಕೃತ ಪತ್ರಿಕಾ ಪ್ರಕಟಣೆಯ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

pm kisan official website: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ:

ಅಧಿಕೃತ ವೆಬ್ಸೈಟ್: Click here
ಸಹಾಯವಾಣಿ: Click here
ಟ್ವಿಟರ್ ಖಾತೆ: Click here

ಇದನ್ನೂ ಓದಿ: free Hostel Application-2024: ಉಚಿತ ಹಾಸ್ಟೆಲ್ ಪ್ರವೇಶಾತಿಗೆ ಅರ್ಜಿ! ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸುವ ಲಿಂಕ್ ಬಿಡುಗಡೆ!

Most Popular

Latest Articles

Related Articles