Cotton MSP-ಹತ್ತಿ ಬೆಳೆಗಾರರಿಗೆ ಸಿಹಿ ಸುದ್ದಿ: ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಗೆ ನೋಂದಣಿ ಪ್ರಾರಂಭ!

October 21, 2025 | Siddesh
Cotton MSP-ಹತ್ತಿ ಬೆಳೆಗಾರರಿಗೆ ಸಿಹಿ ಸುದ್ದಿ: ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಗೆ ನೋಂದಣಿ ಪ್ರಾರಂಭ!
Share Now:

2025-26 ನೇ ಸಾಲಿನಲ್ಲಿ, ರಾಜ್ಯದ ಹತ್ತಿ ಬೆಳೆಗಾರರಿಂದ ಭಾರತೀಯ ಹತ್ತಿ ನಿಗಮ ನಿಯಮಿತ (CCI) ವತಿಯಿಂದ ಬೆಂಬಲ ಬೆಲೆ (MSP) ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಹತ್ತಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ರೈತರಿಂದ ಯಾವುದೇ ಮಧ್ಯವರ್ತಿಗೆ ಅವಕಾಶವಿಲ್ಲದೇ ನೇರವಾಗಿ ಉತ್ತಮ ಗುಣಮಟ್ಟದ ಹತ್ತಿಯನ್ನು ಬೆಂಬಲ ಬೆಲೆಯಲ್ಲಿ(Cotton Crop MSP) ಖರೀದಿ ಮಾಡಲು ಭಾರತೀಯ ಹತ್ತಿ ನಿಗಮವು ಮುಂಚಿತವಾಗಿ ರೈತರ ನೋಂದಣಿಯನ್ನು ಆರಂಭಿಸಿದ್ದು ಇದಕ್ಕಾಗಿ ರೈತರು ಈ ಲೇಖನದಲ್ಲಿ ವಿವರಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ನೋಂದಣಿಯನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: Parihara Farmers List-ಕಳೆದ ಸಾಲಿನಲ್ಲಿ ಬೆಳೆ ಪರಿಹಾರ ಪಡೆದ ರೈತರ ಪಟ್ಟಿ ಬಿಡುಗಡೆ!

ಹತ್ತಿ ಬೆಳೆಗಾರರಿಗೆ(Cotton) ಸರಕಾರದಿಂದ ಎಷ್ಟು ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗಿದೆ? ಹತ್ತಿ ಬೆಳೆಗಾರರು ಬೆಂಬಲ ಬೆಲೆಯಲ್ಲಿ ಹತ್ತಿಯನ್ನು ಮಾರಾಟ ಮಾಡಲು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವುದು ಹೇಗೆ? ನೋಂದಣಿಯನ್ನು ಮಾಡಿಕೊಳ್ಳಲು ಅನುಸರಿಸಬೇಕಾದ ಕ್ರಮ ಮತ್ತು ಅಗತ್ಯ ದಾಖಲಾತಿ ಸೇರಿದಂತೆ ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Cotton Crop MSP Price 2025-ಹತ್ತಿ ಬೆಳೆಗೆ ನಿಗದಿಪಡಿಸಿರುವ ಬೆಂಬಲ ಬೆಲೆ:

1) ಮಧ್ಯಮ ಎಳೆ- ರೂ 7,710/- ಪ್ರತಿ ಕ್ವಿಂಟಾಲ್ ಗೆ
2) ಉದ್ದನೆಯ ಎಳೆ- ರೂ 8,110/- ಪ್ರತಿ ಕ್ವಿಂಟಾಲ್ ಗೆ

ಇದನ್ನೂ ಓದಿ: SBI Scholarship Application-ಎಸ್.ಬಿ.ಐ ಫೌಂಡೇಶನ್ ವತಿಯಿಂದ ₹75,000/- ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ!

How to Register For Cotton Crop MSP Sell-ನೋಂದಣಿ ಮಾಡುವುದು ಹೇಗೆ?

ರೈತರು ಬೆಂಬಲ ಬೆಲೆಯಲ್ಲಿ ಹತ್ತಿಯನ್ನು ಮಾರಾಟ ಮಾಡಲು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿಯನ್ನು ಮಾಡಿಕೊಳ್ಳಬೇಕು, ಇದಕ್ಕಾಗಿ ಗೂಗಲ್ ಪ್ಲೈ ಸ್ಟೋರ್ ನಲ್ಲಿ "ಕಪಾಸ್ ಕಿಸಾನ್" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅಗತ್ಯ ವಿವರವನ್ನು ಭರ್ತಿ ಮಾಡಿ ನೋಂದಣಿಯನ್ನು ಮಾಡಬೇಕು.

Important Dates For Cotton MSP Registration-ನೋಂದಣಿ ಅವಧಿ:

ಹತ್ತಿಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಪ್ರಮುಖ ದಿನಾಂಕಗಳು.

  • ನೋಂದಣಿ ಪ್ರಾರಂಭ ದಿನಾಂಕ: 31 ಸೆಪ್ಟೆಂಬರ್ 2025
  • ನೋಂದಣಿ ಮಾಡಿಕೊಳ್ಳಲು ಅಂತಿಮ ದಿನಾಂಕ: 31 ಅಕ್ಟೋಬರ್ 2025

ಇದನ್ನೂ ಓದಿ: Gas Subsidy 2025-ನಿಮ್ಮ ಬ್ಯಾಂಕ್ ಖಾತೆಗೆ ಗ್ಯಾಸ್ ಸಬ್ಸಿಡಿ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

Cotton Msp Price

ಇದನ್ನೂ ಓದಿ: Ragi Kharidi Kendra 2025-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ನೋಂದಣಿ ಆರಂಭ! ಪ್ರತಿ ಕ್ವಿಂಟಾಲ್ ಗೆ 4886/- ರೂ ನಿಗದಿ!

Cotton MSP Online Registration-ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಣಿ ಮಾಡುವ ವಿಧಾನ:

ರೈತರು ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ "ಕಪಾಸ್ ಕಿಸಾನ್/Kapas Kisan" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಳ್ಳಬಹುದು.

Step-1: ಮೊದಲಿಗೆ "Cotton MSP Registration" ಇಲ್ಲಿ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಬೇಕು ಬಳಿಕ ಇಲ್ಲಿ "ಕಪಾಸ್ ಕಿಸಾನ್" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಬಳಿಕ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ವಿವರವನ್ನು ಭರ್ತಿ ಮಾಡಿ ಬಳಕೆದಾರ ಐಡಿ ಅನ್ನು ರಚನೆ ಮಾಡಿಕೊಂಡು ಲಾಗಿನ್ ಅಗಬೇಕು ಲಾಗಿನ್ ಅದ ನಂತರ ಹತ್ತಿ ಬೆಳೆದ ಜಮೀನಿನ ವಿವರ ಇನ್ನಿತರೆ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬೇಕು.

ಇದನ್ನೂ ಓದಿ: Bussiness Loan Subsidy-ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯಡಿ ₹1.0 ಲಕ್ಷ ನೆರವು ಪಡೆಯಲು ಅರ್ಜಿ ಆಹ್ವಾನ!

Documents For Cotton MSP Registration-ನೋಂದಣಿ ಮಾಡಿಕೊಳ್ಳಲು ಅವಶ್ಯಕ ದಾಖಲೆಗಳು:

1) ಅಭ್ಯರ್ಥಿಯ ಆಧಾರ್ ಕಾರ್ಡ
2) ಕಂದಾಯ ಪ್ರಾಧಿಕಾರದಿಂದ ಪ್ರಮಾಣೀಕರಿಸಲ್ಪಟ್ಟ ಹತ್ತಿ ಬೆಳೆಯ ದಾಖಲೆಗಳು.
3) ಜಮೀನಿನ ಪಹಣಿ/RTC/ಊತಾರ್
4) ರೈತರ ಪೋಟೋ

Helpline-ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ- 080-22867369

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: