Cow Farming Subsidy-ಹಸು ಸಾಕುವ ರೈತರಿಗೆ ಗೋಕುಲ ಮಿಷನ್ ಯೋಜನೆಯಡಿ ಸಬ್ಸಿಡಿ! ವರ್ಷಕ್ಕೆ ₹21,500 ಆದಾಯ!

January 5, 2026 | Siddesh
Cow Farming Subsidy-ಹಸು ಸಾಕುವ ರೈತರಿಗೆ ಗೋಕುಲ ಮಿಷನ್ ಯೋಜನೆಯಡಿ ಸಬ್ಸಿಡಿ! ವರ್ಷಕ್ಕೆ ₹21,500 ಆದಾಯ!
Share Now:

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ(Rashtriya Gokul Mission) ವತಿಯಿಂದ ರಾಷ್ಟ್ರೀಯ ಗೋಕುಲ ಮಿಷನ್ ಯೋಜನೆಯ ಅಡಿಯಲ್ಲಿ ಹಸು ಸಾಕುವ ರೈತರಿಗೆ ದೇಶಿ ತಳಿಗಳ ಅಭಿವೃದ್ಧಿ ಮತ್ತು ಹೈನುಗಾರಿಕೆಗೆ ಸಹಾಯಧನವನ್ನು ನೀಡಲಾಗಿದ್ದು, ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಹಾಗೆಯೇ IVF ಗರ್ಭಧಾರಣೆ ಮತ್ತು ಬೀಜದ ಕರಡುಗಳ (Sex Sorted Semen) ಖರೀದಿಗೂ ಸಹ ಸಹಾಯಧನವನ್ನು ನೀಡಲಾಗಿದ್ದು ಬ್ರೀಡ್ ಮಲ್ಟಿಪ್ಲಿಕೇಶನ್ ಫಾರ್ಮ್ ಸ್ಥಾಪಿಸಲು ನೆರವು ಮಾಡಿಕೊಡಲಾಗುತ್ತದೆ ಹಾಗೆಯೇ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮೇಲಿನ ಬಡ್ಡಿ(Gokul Mission Scheme) ರಿಯಾಯಿತಿಗಳನ್ನು ಸಹ ಒಳಗೊಂಡಿದೆ. ಈ ಯೋಜನೆಗಳ ಮೂಲಕ ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Online Land Records-ರೈತರು ಇನ್ಮುಂದೆ ತಮ್ಮ ಜಮೀನಿನ ದಾಖಲೆ ಪಡೆಯುವುದು ಭಾರೀ ಸುಲಭ!

ರೈತ ಮಿತ್ರರೇ ಹಸು ಮತ್ತು ಎಮ್ಮೆ ಸಾಕಾಣಿಕೆ(Livestock Development Scheme) ಇದು ಕೇವಲ ಪರಂಪರೆಯಿಂದ ಬಂದ ಉದ್ಯೋಗ ಮಾತ್ರವಲ್ಲ, ಆಧುನಿಕ ತಂತ್ರಜ್ಞಾನದಿಂದ ಲಾಭದಾಯಕ ಉದ್ಯಮವಾಗುವ ಹಂತಕ್ಕೆ ತಲುಪಿದ್ದು, ಹಾಲಿನ ಉತ್ಪಾದನೆ ಹೆಚ್ಚಿಸುವುದು, ಸ್ಥಳೀಯ ಹಸು–ಎಮ್ಮೆ ತಳಿಗಳನ್ನು ಸಂರಕ್ಷಿಸುವುದು ಮತ್ತು ರೈತರ ಆದಾಯವನ್ನು ಹೆಚ್ಚಿಸುವುದೇ ಸರ್ಕಾರದ ಗುರಿಯಾಗಿದೆ.

ಇಲ್ಲಿ ನಾವು ಗೋಕುಲ ಮಿಷನ್ ಯೋಜನೆ ಎಂದರೇನು? ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಈ ಯೋಜನೆಯಿಂದಾಗುವ ರೈತರ ಲಾಭಗಳೇನು? ಇನ್ನಿತರ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Kuri Sakanike Tarabeti-ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ!

Rashtriya Gokul Mission-ಗೋಕುಲ ಮಿಷನ್ ಯೋಜನೆ ಎಂದರೇನು?

ಗೋಕುಲ ಮಿಷನ್ ಯೋಜನೆ 2014 ರಲ್ಲಿ ಆರಂಭಗೊಂಡಿದ್ದು, ಪ್ರಸ್ತುತ ರಾಷ್ಟ್ರೀಯ ಪಶುಧನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಯಾವುದೇ ಜಾತಿ ಅಥವಾ ವರ್ಗದ ಭೇದವಿಲ್ಲದೆ ಹಸು, ಎಮ್ಮೆ ಸಾಕಾಣಿಕೆ ಮಾಡುವ ಎಲ್ಲಾ ರೈತರು, ಹಾಲು ಉತ್ಪಾದಕರು ಹಾಗೂ ಮಹಿಳಾ ಪಶುಪಾಲಕರು ಈ ಯೋಜನೆಯ ಲಾಭ ಪಡೆಯಬಹುದು.

ದೇಶದ ಸ್ಥಳೀಯ ಹಸು ಹಾಗೂ ಎಮ್ಮೆ ತಳಿಗಳನ್ನು ಸಂರಕ್ಷಿಸಿ, ಅವುಗಳ ಗುಣಮಟ್ಟ ಮತ್ತು ಹಾಲಿನ ಉತ್ಪಾದಕತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಕೆ ಆರಂಭ!

Purpose of this Scheme-ಈ ಯೋಜನೆಯ ಪ್ರಮುಖ ಉದ್ದೇಶಗಳಾವುವು?

1) ಸ್ಥಳೀಯ ಹಸು-ಎಮ್ಮೆ ತಳಿಗಳ ಸಂರಕ್ಷಣೆ:
ಭಾರತದ ಮೂಲಭೂತ ಹಾಗೂ ದೈಹಿಕವಾಗಿ ಬಲಿಷ್ಠವಾದ ಸ್ಥಳೀಯ ಗೋತಳಿಗಳನ್ನು ವೈಜ್ಞಾನಿಕ ವಿಧಾನಗಳ ಮೂಲಕ ಸಂರಕ್ಷಿಸಿ ಮುಂದಿನ ತಲೆಮಾರಿಗೆ ಉಳಿಸುವುದು.

2) ತಳಿ ಗುಣಮಟ್ಟದ ಸುಧಾರಣೆ:
ಉತ್ತಮ ಜನುಮೂಲ ಹೊಂದಿರುವ ಹೋರಿಗಳನ್ನು ಆಯ್ಕೆ ಮಾಡಿ, ಹಸು ಮತ್ತು ಎಮ್ಮೆ ತಳಿಗಳ ಗುಣಮಟ್ಟವನ್ನು ಕ್ರಮಬದ್ಧವಾಗಿ ಅಭಿವೃದ್ಧಿಪಡಿಸುವುದು.

3) ಹಾಲಿನ ಉತ್ಪಾದಕತೆ ಹೆಚ್ಚಿಸುವುದು:
ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪಶುಪಾಲನಾ ಕ್ರಮಗಳನ್ನು ಬಳಸುವ ಮೂಲಕ ಹಾಲಿನ ಉತ್ಪಾದನಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವುದು.

4) ಕೃತಕ ಗರ್ಭಧಾರಣೆ ಸೇವೆಗಳ ವಿಸ್ತರಣೆ:
ಗುಣಮಟ್ಟದ ಕೃತಕ ಗರ್ಭಧಾರಣೆ (Artificial Insemination) ಸೇವೆಗಳನ್ನು ರೈತರಿಗೆ ಅವರ ಮನೆ ಬಾಗಿಲಿನಲ್ಲೇ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು.

5) ರೈತರ ಆರ್ಥಿಕ ಸಬಲೀಕರಣ:
ಉತ್ತಮ ತಳಿಯ ಹಸು–ಎಮ್ಮೆಗಳ ಮೂಲಕ ಹಾಲಿನ ಉತ್ಪಾದನೆ ಹೆಚ್ಚಿಸಿ, ರೈತರ ಆದಾಯವನ್ನು ದೀರ್ಘಕಾಲಿಕವಾಗಿ ವೃದ್ಧಿಸುವುದು.

ಇದನ್ನೂ ಓದಿ: Poultry Shed Subsidy-ಕುಕ್ಕುಟ ಸಂಜೀವಿನಿ ಯೋಜನೆಯಡಿ ಉಚಿತ ಕೋಳಿಮರಿ, ಶೆಡ್ ಸಹಾಯಧನ ಪಡೆಯಲು ಅರ್ಜಿ!

Uses OF this Scheme-ಈ ಯೋಜನೆಯಿಂದ ರೈತರಿಗೆ ದೊರೆಯುವ ಲಾಭಗಳು?

✔️ ರೈತರ ಆದಾಯ ಹೆಚ್ಚಳ:
ರಾಷ್ಟ್ರೀಯ ಗೋಕುಲ ಮಿಷನ್ ಯೋಜನೆಯ ಅಡಿಯಲ್ಲಿ ಹಸು–ಎಮ್ಮೆ ಸಾಕಾಣಿಕೆ ಮಾಡುವ ರೈತರಿಗೆ ಮೂರು ವರ್ಷಗಳಲ್ಲಿ ವರ್ಷಕ್ಕೆ ಗರಿಷ್ಠ ₹21,500 ವರೆಗೆ ಹೆಚ್ಚುವರಿ ಆದಾಯ ದೊರೆಯುವ ಸಾಧ್ಯತೆಯನ್ನು ನೋಡಬಹುದು.

✔️ IVF ತಂತ್ರಜ್ಞಾನ ಲಾಭ:
ಗೋಕುಲ ಮಿಷನ್ IVF ತಂತ್ರಜ್ಞಾನ ಬಳಸಿದ ರೈತರಿಗೆ ₹60,000 ವರೆಗೆ ಹೆಚ್ಚುವರಿ ಆದಾಯ ಪಡೆಯುವ ಅವಕಾಶವಿರುತ್ತದೆ.

✔️ ಎಲ್ಲಾ ರೈತರಿಗೆ ಅನ್ವಯ:
ಈ ಕೇಂದ್ರ ಸರ್ಕಾರದ ಹಸು ಸಾಕಾಣಿಕೆ ಯೋಜನೆ ಯಾವುದೇ ಜಾತಿ, ವರ್ಗ ಅಥವಾ ಲಿಂಗದ ಭೇದವಿಲ್ಲದೆ ಎಲ್ಲಾ ಪಶುಪಾಲಕರಿಗೆ ಅನ್ವಯವಾಗುತ್ತದೆ.

ಇದನ್ನೂ ಓದಿ: LPG Cylinder Price Hike-ಗ್ಯಾಸ್ ಸಿಲಿಂಡರ್ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ದರ ವಿವರ!

Subsidy Information-ರೈತರಿಗೆ ಒದಗುವ ಸಹಾಯಧನದ ವಿವರ:

ಯೋಜನೆಗಳು ಸಬ್ಸಿಡಿ
ಹೆಫರ್ ಸಾಕಾಣಿಕೆ ಕೇಂದ್ರಗಳು35% ಸಹಾಯಧನ
ತಳಿ ವರ್ಧನಾ ಫಾರ್ಮ್50% ಬಂಡವಾಳಸಬ್ಸಿಡಿ (Max ₹2 ಕೋಟಿ)
IVF ಗರ್ಭಧಾರಣೆ₹5,000 ಪ್ರತಿ ಗರ್ಭಧಾರಣೆಗೆ ಪ್ರೋತ್ಸಾಹಧನ
ಲಿಂಗ-ವಿಂಗಡಿತ ವೀರ್ಯವೆಚ್ಚದ 50% ರವರೆಗೆ ಸಬ್ಸಿಡಿ
ಬ್ಯಾಂಕ್ ಸಾಲ – ಬಡ್ಡಿ ರಿಯಾಯಿತಿ3% ಬಡ್ಡಿ ಕನಿಷ್ಠ ಸಬ್ಸಿಡಿ

ಇದನ್ನೂ ಓದಿ: Online Mutation-ಉಚಿತವಾಗಿ ಮ್ಯುಟೇಷನ್ ಪಡೆಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

ಇದನ್ನೂ ಓದಿ: LPG Cylinder Price Hike-ಗ್ಯಾಸ್ ಸಿಲಿಂಡರ್ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ದರ ವಿವರ!

How To APply-ಅರ್ಜಿ ಸಲ್ಲಿಸುವುದು ಹೇಗೆ?

ರಾಷ್ಟ್ರೀಯ ಗೋಕುಲ ಮಿಷನ್ ಯೋಜನೆಯ ಅಡಿಯಲ್ಲಿ ಸೌಲಭ್ಯವನ್ನು ಪಡೆಯಲು ಆಸಕ್ತಿ ಇರುವ ಅರ್ಹ ರೈತರು ಪಶುಸಂಗೋಪನಾ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಯಾರ ಹೆಸರಿನಲ್ಲಿ ಸಹಾಯಧನವನ್ನು ಪಡೆಯುತ್ತಿರಾ ಅವರ ಹೆಸರಿನಲ್ಲಿ ನೋಂದಣಿಯನ್ನು ಮಾಡಿ ಲಾಗಿನ್ ಮಾಡಿದ ನಂತರ ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Documents required-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

  • ರೈತರ ಆಧಾರ್ ಕಾರ್ಡ್.
  • ವಾಸಸ್ಥಳದ ಪುರಾವೆ.
  • ಆದಾಯ ಪ್ರಮಾಣಪತ್ರ.
  • ಬ್ಯಾಂಕ್ ಖಾತೆ ಪುಸ್ತಕ.
  • ಯೋಜನಾ ವರದಿ.

ಇದನ್ನೂ ಓದಿ: Grama One-ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ!

ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Read More
Application Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: