Dairy Shed Subsidy-ಗ್ರಾಮ ಪಂಚಾಯಿತಿಯಿಂದ ದನದ ಶೆಡ್ ನಿರ್ಮಾಣಕ್ಕೆ ರೂ 57,000 ಪಡೆಯುವುದು ಹೇಗೆ!

January 11, 2026 | Siddesh
Dairy Shed Subsidy-ಗ್ರಾಮ ಪಂಚಾಯಿತಿಯಿಂದ ದನದ ಶೆಡ್ ನಿರ್ಮಾಣಕ್ಕೆ ರೂ 57,000 ಪಡೆಯುವುದು ಹೇಗೆ!
Share Now:

ಕೃಷಿಕರು ಪ್ರಸ್ತುತ ದಿನಗಳಲ್ಲಿ ಬದಲಾಗುತ್ತಿರುವ ಹವಾಮಾನಕ್ಕೆ ಅನುಗುಣವಾಗಿ ಕೃಷಿಯಿಂದ(Dairy Farming) ಸ್ಥಿರ ಆದಾಯವನ್ನು ಪಡೆಯಲು ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಪಶುಸಂಗೋಪನೆಯನ್ನು ಸಹ ಮಾಡಿಕೊಂಡ ಹೋಗಬೇಕಾಗುತ್ತದೆ ಈ ನಿಟ್ಟಿನಲ್ಲಿ ಹಸು/ಎಮ್ಮೆಯನ್ನು ಸಾಕಾಣಿಕೆ ಮಾಡಲು ಅವಶ್ಯವಿರುವ ಶೆಡ್ ಅನ್ನು ನಿರ್ಮಾಣ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಡಿ ರೂ 57,000 ಆರ್ಥಿಕ ನೆರವನ್ನು ಪಡೆಯಲು ಅವಕಾಶವಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಈಗಾಗಲೇ ಹಸು ಸಾಕಾಣಿಕೆಯನ್ನು(Narega Dairy Shed Subsidy)ಮಾಡುತ್ತಿರುವವರು ಹಾಗೂ ಹೊಸದಾಗಿ ಸಾಕಾಣಿಕೆಯನ್ನು ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿರುವವರು ನರೇಗಾ ಯೋಜನೆಯಡಿ ಅರ್ಜಿ ಸಲ್ಲಿಸಿ ಸಾಕಾಣಿಕೆಗೆ ಅವಶ್ಯವಿರುವ ಶೆಡ್ ಅನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನವನ್ನು ಪಡೆಯಬಹುದು ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲಾತಿಗಳೇನು? ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ? ಎನ್ನುವ ನಿಖರವಾದ ಮಾಹಿತಿಯನ್ನು ಹಂಚಿಕೊಳ್ಳವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಇದನ್ನೂ ಓದಿ: Free Pumpset Repair-ಉಚಿತ 30 ದಿನದ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

ಬಹುತೇಕ ನಮ್ಮ ರಾಜ್ಯದ ಗ್ರಾಮೀಣ ಭಾಗದಲ್ಲಿ ಕೃಷಿಕರು ಹಸು/ಎಮ್ಮೆ ಸಾಕಾಣಿಕೆಯನ್ನು(Dairy Shed Subsidy) ಮಾಡಲಾಗುತ್ತಿದೆ ಇದರಿಂದ ದಿನನಿತ್ಯ ಹಾಲು ಪಡೆಯುವುದರ ಜೊತೆಗೆ ಬೆಳೆಗಳನ್ನು ಬೆಳೆಯಲು ಅವಶ್ಯವಿರುವ ಕೊಟ್ಟಿಗೆ ಗೊಬ್ಬರವನ್ನು ಸಹ ಪಡೆಯಲು ರೈತರಿಗೆ ಹೈನುಗಾರಿಕೆ ನೆರವಾಗುತ್ತದೆ ಅನೇಕ ರೈತರು ನರೇಗಾ ಯೋಜನೆಯಡಿ ಹೈನುಗಾರಿಕೆಯನ್ನು ಮಾಡಲು ಶೆಡ್ ನಿರ್ಮಾಣಕ್ಕೆ ಸಹಾಯಧನ ಪಡೆಯುವುದು ಹೇಗೆ ಎನ್ನುವ ಬಗ್ಗೆ ನಿಖರ ಮಾಹಿತಿ ಇಲ್ಲದೇ ಇರುವುದರಿಂದ ಈ ಬಗ್ಗೆ ಒಂದಿಷ್ಟು ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

Who Can Apply For Dairy Shed Subsidy-ಹೈನುಗಾರಿಕೆಗೆ ಶೆಡ್ ನಿರ್ಮಾಣಕ್ಕೆ ಸಬ್ಸಿಡಿ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹಸು ಸಾಕಾಣಿಕೆಗೆ ಆರ್ಥಿಕ ನೆರವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ವಿವರ ಈ ಕೆಳಗಿನಂತಿದೆ:

ಅರ್ಜಿದಾರ ರೈತರು ಗ್ರಾಮೀಣ ಪ್ರದೇಶದ ವಾಸಿಯಾಗಿರಬೇಕು.
ಬಿಪಿಎಲ್ ರೇಶನ್ ಕಾರ್ಡ ಅನ್ನು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು.
ಗ್ರಾಮ ಪಂಚಾಯತಿಯಲ್ಲಿ ನೋಂದಣಿಯನ್ನು ಮಾಡಿಕೊಂಡು ಜಾಬ್ ಕಾರ್ಡ ಅನ್ನು ಹೊಂದಿರುವುದು ಕಡ್ಡಾಯವಾಗಿದೆ.
ದನದ ಶೆಡ್ ನಿರ್ಮಾಣ ಮಾಡಿಕೊಳ್ಳಲು ಅವಶ್ಯವಿರುವ ಜಾಗವನ್ನು ಹೊಂದಿರಬೇಕು.

ಇದನ್ನೂ ಓದಿ: Gruhalakshmi Amount-ಗೃಹಲಕ್ಷ್ಮಿ 2 ತಿಂಗಳ ಬಾಕಿ ಹಣ ಬಿಡುಗಡೆ ನೂತನ ಮಾಹಿತಿ ಪ್ರಕಟ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Dairy Shed Subsidy Amount-ಎಷ್ಟು ಸಬ್ಸಿಡಿ ಪಡೆಯಬಹುದು?

ನರೇಗಾ ಯೋಜನೆಯಡಿ ಹಸು ಸಾಕಾಣಿಕೆಯನ್ನು ಮಾಡಲು ಅವಶ್ಯವಿರುವ ಕೊಟ್ಟಿಗೆ/ಶೆಡ್ ಅನ್ನು ನಿರ್ಮಾಣ ಮಾಡಿಕೊಳ್ಳಲು ಕೂಲಿ ವೆಚ್ಚ ಮತ್ತು ಸಮಾಗ್ರಿ ವೆಚ್ಚ ಸೇರಿ ಒಟ್ಟು ರೂ 57,000 ಸಹಾಯಧನವನ್ನು ಈ ಯೋಜನೆಯಡಿ ಪಡೆಯಲು ಅವಕಾಶವಿರುತ್ತದೆ.

How To Apply For Narega Dairy Shed-ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ದನದ ಶೆಡ್ ನಿರ್ಮಾಣಕ್ಕೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹಳ್ಳಿಯು ಯಾವ? ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆಯೋ ಪಂಚಾಯಿತಿ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಕ್ರಿಯಾ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರ್ಪಡೆ ಮಾಡಲು ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: Sheep Farming Scheme-ಕುರಿ ಮೇಕೆ ಸಾಕಾಣಿಗೆಕೆ 43,750 ರೂ ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ?

Dairy Shed Subsidy

ಇದನ್ನೂ ಓದಿ: Kuri Shed Subsidy-ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಾಣಕ್ಕೆ ರೂ 70,000 ಪಡೆಯುವುದು ಹೇಗೆ!

Required Documents ForDairy Shed Subsidy Application-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

ನರೇಗಾ ಯೋಜನೆಯಡಿ ದನದ ಶೆಡ್ ಅನ್ನು ನಿರ್ಮಾಣ ಮಾಡಿಕೊಳ್ಳಲು ಬೇಕಾಗುವ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ:

  • ಅರ್ಜಿದಾರರ ಆಧಾರ್ ಕಾರ್ಡ
  • ನರೇಗಾ ಜಾಬ್ ಕಾರ್ಡ
  • ಅಭ್ಯರ್ಥಿಯ ಪೋಟೋ
  • ಆಧಾರ್ ಲಿಂಕ್ ಅಗಿರುವ ಬ್ಯಾಂಕ್ ಪಾಸ್ ಬುಕ್
  • ಕುಟುಂಬದ ರೇಶನ್ ಕಾರ್ಡ
  • ಪಹಣಿ/ಉತಾರ್/RTC
  • ಪಶು ವೈದ್ಯಾಧಿಕಾರಿಯಿಂದ ಹಸು ಸಾಕಾಣಿಕೆ ಮಾಡುವ ಬಗ್ಗೆ ದೃಡೀಕರಣ ಪ್ರಮಾಣ ಪತ್ರ(ಕ್ರಿಯಾ ಯೋಜನೆಯ ಅನುಮೋದನೆ ಬಳಿಕ)

ಇದನ್ನೂ ಓದಿ: A-Khata-ನಗರ ಪ್ರದೇಶದ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ವಿತರಣೆಗೆ ಸಚಿವ ಸಂಪುಟದಲ್ಲಿ ನಿರ್ಣಯ!

Dairy Shed Subsidy Applicaion Process-ಅರ್ಜಿ ವಿಲೇವಾರಿ ಪ್ರಕ್ರಿಯೆ:

ಅರ್ಜಿದಾರರು ಗ್ರಾಮ ಪಂಚಾಯಿತಿ ಕಚೇರಿಯನ್ನು ಭೇಟಿ ಮಾಡಿ ಕ್ರಿಯಾ ಯೋಜನೆಯಲ್ಲಿ ಹೆಸರನ್ನು ಸೇರ್ಪಡೆ ಮಾಡಲು ಕೈ ಬರಹದ ಅರ್ಜಿಯನ್ನು ಸಲ್ಲಿಸಿದ ನಂತರ ಮುಂದಿನ ಆರ್ಥಿಕ ವಾರ್ಷಿಕ ವರ್ಷದ ಕ್ರಿಯಾ ಯೋಜನೆಯಲ್ಲಿ ಅರ್ಜಿದಾರರ/ನಿಮ್ಮ ಹೆಸರನ್ನು ಸೇರಿಸಿ ಅನುಮೋದನೆ ನೀಡಲಾಗುತ್ತದೆ, ಕ್ರಿಯಾ ಯೋಜನೆಯು ಅನುಮೋದನೆ ಅದ ಬಳಿಕ ಗ್ರಾಮ ಪಂಚಾಯಿತಿಯಿಂದ ಶೆಡ್ ನಿರ್ಮಾಣ ಮಾಡಿಕೊಳ್ಳಲು ಕಾಮಗಾರಿ ಪ್ರಾರಂಭಿಸಲು ಮಂಜೂರಿ ಆದೇಶವನ್ನು/Work Order ನೀಡಲಾಗುತ್ತದೆ. ನಂತರ ನೀವು ದನದ ಶೆಡ್ ನಿರ್ಮಾಣವನ್ನು ಮಾಡಿಕೊಳ್ಳಲು ಪ್ರಾರಂಭಿಸಬೇಕು.

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಂತ ಹಂತವಾಗಿ ಕಾಮಗಾರಿ ನಡೆಯುವ ಸ್ಥಳವನ್ನು ಭೇಟಿ ಮಾಡಿ ಕಾಮಗಾರಿಯ ಜಿಪಿಎಸ್ ಪೋಟೋ ವನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಅಪ್ಲೋಡ್ ಮಾಡಿ ಕೊನೆಗೆ ಕಾಮಗಾರಿ ಪೂರ್ಣಗೊಳಿಸಿದ ಬಗ್ಗೆ ಅನುಮೋದನೆ ಫಲಾನುಭವಿಯ ಬ್ಯಾಂಕ್ ಖಾತೆಗೆ ಮತ್ತು ಜಾಬ್ ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಮಾರ್ಗಸೂಚಿಯನ್ವ ನಿಗದಿಪಡಿಸಿರುವ ಸಹಾಯಧನ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ಇದನ್ನೂ ಓದಿ: SIM Card-ಹೊಸ ಸಿಮ್ ಕಾರ್ಡ ಖರೀದಿಗೆ ಈ ನಿಯಮ ಪಾಲಿಸುವುದು ಕಡ್ದಾಯ!

Dairy Shed Subsidy Amount-ಸಹಾಯಧನದ ಹಣ ಹೇಗೆ ಬಿಡುಗಡೆ ಮಾಡಲಾಗುತ್ತದೆ?

ಹೈನುಗಾರಿಕೆಯನ್ನು ಮಾಡಲು ನರೇಗಾ ಯೋಜನೆ ಅಡಿಯಲ್ಲಿ ಶೆಡ್ ನಿರ್ಮಾಣಕ್ಕಾಗಿ ಸಹಾಯಧನವನ್ನು ಪಡೆಯಲು ಅರ್ಹ ರೈತರು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ ಕ್ರಿಯಾ ಯೋಜನೆಯಲ್ಲಿ ಹೆಸರನ್ನು ಸೇರ್ಪಡೆ ಮಾಡಿಕೊಂಡು ಶೆಡ್ ನಿರ್ಮಾಣಕ್ಕೆ ಅಧಿಕೃತ ಆದೇಶವನ್ನು ಪಡೆದುಕೊಂಡು ಕೊಟ್ಟಿಗೆಯನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಮಾಡಿಕೊಂಡ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರೀಶಿಲನೆ ಮಾಡಿ ಜಿಪಿಎಸ್ ಪೋಟೋ ವನ್ನು ತೆಗೆದು ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ದೃಡೀಕರಣ ನೀಡಿದ ಬಳಿಕ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಸಹಾಯಧನದ ಹಣವು ವರ್ಗಾವಣೆ ಅಗುತ್ತದೆ.

For More Information-ಹೆಚ್ಚಿನ ಮಾಹಿತಿಗಾಗಿ:

Helpline-ಸಹಾಯವಾಣಿ ಸಂಖ್ಯೆ- 8277506000
Website-ನರೇಗಾ ಯೋಜನೆ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: