Danta Bhagya-ರಾಜ್ಯಾದ್ಯಂತ ದಂತ ಭಾಗ್ಯ ಯೋಜನೆ ಜಾರಿ! ಯಾವೆಲ್ಲ ಸೌಲಭ್ಯ ಪಡೆಯಬಹುದು?

April 15, 2026 | Siddesh
Danta Bhagya-ರಾಜ್ಯಾದ್ಯಂತ ದಂತ ಭಾಗ್ಯ ಯೋಜನೆ ಜಾರಿ! ಯಾವೆಲ್ಲ ಸೌಲಭ್ಯ ಪಡೆಯಬಹುದು?
Share Now:

ರಾಜ್ಯದ ಅನೇಕ ಜನರಿಗೆ ಈ ಯೋಜನೆಯ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದೇ ಇರುವ ಕಾರಣ ಇಂದಿನ ಲೇಖನದಲ್ಲಿ ದಂತ ಭಾಗ್ಯ ಯೋಜನೆಯಡಿ ಅರ್ಹ ನಾಗರಿಕರು ಸೌಲಭ್ಯವನ್ನು ಪಡೆಯಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಹಾಗೂ ಈ ಯೋಜನೆಯ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ 'ದಂತ ಭಾಗ್ಯ' ಯೋಜನೆಯು ರಾಜ್ಯಾದ್ಯಂತ ಯಶಸ್ವಿಯಾಗಿ ಜಾರಿಯಲ್ಲಿದೆ. ವಯಸ್ಸಾದಂತೆ ಹಲ್ಲುಗಳ ಸಮಸ್ಯೆಯಿಂದ ಬಳಲುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಹಿರಿಯ ನಾಗರಿಕರಿಗೆ ಮರುಜೀವ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಹಲ್ಲುಗಳ ಸವೆತ ಅಥವಾ ಹಲ್ಲುಗಳಿಲ್ಲದೆ ಆಹಾರ ಸೇವಿಸಲು ಕಷ್ಟಪಡುತ್ತಿರುವ ಹಿರಿಯರಿಗೆ ಉಚಿತವಾಗಿ ಕೃತಕ ಹಲ್ಲುಗಳನ್ನು ಅಳವಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: Bapuji Seva Kendra-ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ನೂತನ ವ್ಯವಸ್ಥೆ ಜಾರಿ!

ಈ ಯೋಜನೆಯಡಿ ಸೌಲಭ್ಯ ಪಡೆಯಲು ಫಲಾನುಭವಿಗಳು ಕನಿಷ್ಠ 45 ವರ್ಷ ಮೇಲ್ಪಟ್ಟವರಾಗಿರಬೇಕು. ಅಷ್ಟೇ ಅಲ್ಲದೆ, ಅರ್ಜಿದಾರರು ಬಿಪಿಎಲ್ (BPL) ಪಡಿತರ ಚೀಟಿಯನ್ನು ಹೊಂದಿರಬೇಕು. ಸದ್ಯ ರಾಜ್ಯಾದ್ಯಂತ ಇರುವ ಎಲ್ಲಾ ಜಿಲ್ಲಾಸ್ಪತ್ರೆಗಳು ಹಾಗೂ ಸರ್ಕಾರ ಗುರುತಿಸಿರುವ 44 ದಂತ ವೈದ್ಯಕೀಯ ಕಾಲೇಜುಗಳಲ್ಲಿ ಈ ಸೇವೆಯು ಲಭ್ಯವಿದ್ದು, ಅರ್ಹ ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ದಂತ ಚಿಕಿತ್ಸೆಯು ಇಂದು ಅತ್ಯಂತ ದುಬಾರಿಯಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ಆದರೆ ಸರ್ಕಾರದ ಈ ಯೋಜನೆಯಿಂದಾಗಿ ಈಗಾಗಲೇ ರಾಜ್ಯದ 41,000ಕ್ಕೂ ಹೆಚ್ಚು ಹಿರಿಯ ನಾಗರಿಕರು ಉಚಿತವಾಗಿ ಚಿಕಿತ್ಸೆ ಪಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗುಣಮಟ್ಟದ ಚಿಕಿತ್ಸೆ ಮತ್ತು ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಈ ಪ್ರಕ್ರಿಯೆ ನಡೆಯುತ್ತಿರುವುದು ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: Free School Admission-ಗವಿಸಿದ್ದೇಶ್ವರ ವಸತಿ ಶಾಲೆಯಲ್ಲಿ ಉಚಿತ ಪ್ರವೇಶ ಪಡೆಯಲು ಅರ್ಜಿ ಅಹ್ವಾನ!

Danta Bhagya Scheme Benefits-ಈ ಯೋಜನೆಯಿಂದ ಸಾರ್ವಜನಿಕರಿಗೆ ಯಾವೆಲ್ಲ ಪ್ರಯೋಜನಗಳಿವೆ?

ಉಚಿತ ದಂತ ತಪಾಸಣೆ ಮತ್ತು ಕೃತಕ ಹಲ್ಲುಗಳ ಜೋಡಣೆ ಸೌಲಭ್ಯವನ್ನು ಈ ಯೋಜನೆಯಡಿ ಪಡೆಯಲು ಅವಕಾಶವಿರುತ್ತದೆ.

How To Apply For Danta Bhagya -ಯೋಜನೆಯ ಸೌಲಭ್ಯ ಪಡೆಯುವುದು ಹೇಗೆ?

ದಂತ ಭಾಗ್ಯ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಅರ್ಹರಿರುವ ನಾಗರಿಕರು ಅಗತ್ಯ ದಾಖಲೆಗಳ ಸಮೇತ ಜಿಲ್ಲಾ ಕೇಂದ್ರಗಳ ಆಸ್ಪತ್ರೆ ಹಾಗೂ ನಿಗದಿಪಡಿಸಿದ ದಂತ ಕಾಲೇಜುಗಳಲ್ಲಿ ನೇರವಾಗಿ ಭೇಟಿ ನೀಡಿ ಇದರ ಸೌಲಭ್ಯವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: PUC Marks Card-ಪಿಯುಸಿ ಅಂಕಪಟ್ಟಿಯನ್ನು ಮೊಬೈಲ್‌ನಲ್ಲೇ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ!

Danta Bhagya Application

Documents For Danatha Bhagya-ಅವಶ್ಯಕ ದಾಖಲಾತಿಗಳು ಯಾವುವು?

ದಂತಭಾಗ್ಯ ಯೋಜನೆ ಅಡಿಯಲ್ಲಿ ಪ್ರಯೋಜನವನ್ನು ಪಡೆಯಲು ನಾಗರಿಕರು ಅವಶ್ಯವಾಗಿ ಒದಗಿಸಬೇಕಾದ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

  • ಅರ್ಜಿದಾರರ ಆಧಾರ್ ಕಾರ್ಡ
  • ಬಿಪಿಎಲ್ ಪಡಿತರ ಚೀಟಿ
  • ಪೋಟೋ
  • ಮೊಬೈಲ್ ನಂಬರ್

Who Can Apply For Danta Bhagya Yojana-ಯಾರೆಲ್ಲ ಸೌಲಭ್ಯ ಪಡೆಯಲು ಅರ್ಹರು:

45 ವರ್ಷ ಮೇಲ್ಪಟ್ಟ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಸದಸ್ಯರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಹಾಗೂ ಅರ್ಜಿದಾರರು ಕರ್ನಾಟಕ ರಾಜ್ಯ ಖಾಯಂ ನಿವಾಸಿಯಾಗಿದ್ದು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.

ಇದನ್ನೂ ಓದಿ: BPL Card-14 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದತಿ ಕಾರ್ಯ ಚುರುಕು! ಇಲ್ಲಿದೆ ರದ್ದಾದ ಕಾರ್ಡ ಪಟ್ಟಿ!

"ಹಲ್ಲುಗಳಿಲ್ಲದೆ ಸರಿಯಾಗಿ ಊಟ ಮಾಡಲು ಆಗುತ್ತಿರಲಿಲ್ಲ, ಮುಖವೂ ಕಳೆಗುಂದಿದಂತೆ ಕಾಣುತ್ತಿತ್ತು. ಖಾಸಗಿಯಲ್ಲಿ ಹಲ್ಲು ಹಾಕಿಸಲು ಬಹಳ ಹಣ ಬೇಕಿತ್ತು. ದಂತ ಭಾಗ್ಯ ಯೋಜನೆಯ ಬಗ್ಗೆ ತಿಳಿದು ಜಿಲ್ಲಾಸ್ಪತ್ರೆಗೆ ಹೋದಾಗ, ಅಲ್ಲಿನ ವೈದ್ಯರು ಬಹಳ ಅಚ್ಚುಕಟ್ಟಾಗಿ ಪರೀಕ್ಷಿಸಿ ಉಚಿತವಾಗಿ ಹೊಸ ಹಲ್ಲುಗಳನ್ನು ಹಾಕಿಕೊಟ್ಟರು. ಈಗ ಮೊದಲಿಗಿಂತಲೂ ಚೆನ್ನಾಗಿ ಊಟ ಮಾಡಬಲ್ಲೆ, ಸರ್ಕಾರಕ್ಕೆ ನನ್ನ ಧನ್ಯವಾದಗಳು."
— ಬಸಪ್ಪ, ಯೋಜನೆಯ ಫಲಾನುಭವಿ.

"ದಂತ ಭಾಗ್ಯ ಯೋಜನೆಯು ಸಮಾಜದ ಕಟ್ಟಕಡೆಯ ಹಿರಿಯ ನಾಗರಿಕರಿಗೂ ಉತ್ತಮ ದಂತ ಆರೋಗ್ಯ ಒದಗಿಸುವ ಗುರಿ ಹೊಂದಿದೆ. ಜಿಲ್ಲಾ ಕೇಂದ್ರಗಳ ಆಸ್ಪತ್ರೆ ಹಾಗೂ ನಿಗದಿಪಡಿಸಿದ ದಂತ ಕಾಲೇಜುಗಳಲ್ಲಿ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ. ಅರ್ಹ ಬಿಪಿಎಲ್ ಕಾರ್ಡ್ ಹೊಂದಿರುವ ಹಿರಿಯರು ತಡಮಾಡದೆ ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಈ ಉಚಿತ ಯೋಜನೆಯ ಲಾಭ ಪಡೆಯಬೇಕೆಂದು ಈ ಮೂಲಕ ವಿನಂತಿಸುತ್ತೇವೆ."
— ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: