Dasara Holidays For Schools-ಬ್ರ‍ೇಕಿಂಗ್ ನ್ಯೂಸ್ ದಸರಾ ರಜೆ ಅ.18 ರವರೆಗೆ ವಿಸ್ತರಣೆ ಮಾಡಿದ ರಾಜ್ಯ ಸರಕಾರ!

October 7, 2025 | Siddesh
Dasara Holidays For Schools-ಬ್ರ‍ೇಕಿಂಗ್ ನ್ಯೂಸ್ ದಸರಾ ರಜೆ ಅ.18 ರವರೆಗೆ ವಿಸ್ತರಣೆ ಮಾಡಿದ ರಾಜ್ಯ ಸರಕಾರ!
Share Now:

ರಾಜ್ಯ ಸರಕಾರದಿಂದ ಕರ್ನಾಟಕದಲ್ಲಿರುವ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗೆ ದಸರಾ ರಜೆ(Dasara Holiday) ಅವದಿಯನ್ನು ಹೆಚ್ಚುವರಿಯಾಗಿ 10 ದಿನದ ವರೆಗೆ ವಿಸ್ತರಣೆ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಈ ಕುರಿತು ಸುದ್ದಿಗೊಷ್ಠಿಯನ್ನು ನಡೆಸಿ ಅಧಿಕೃತ ಮಾಹಿತಿಯನ್ನು ಪ್ರಕಟಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ಅವರು ರಾಜ್ಯದಲ್ಲಿ ಕಳೆದ 2 ವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ಜಾತಿ ಗಣತಿಯು ಪೂರ್ಣವಾಗದ ಹಿನ್ನೆಲೆಯಲ್ಲಿ ಈ ಸಮೀಕ್ಷೆಗಾಗಿ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆ ದಸರಾ ರಜೆಯನ್ನು(Dasara Holidays In Karnataka) ವಿಸ್ತರಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೊಷ್ಠಿಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Scholarship Application-ವಿದ್ಯಾಸಿರಿ ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿ ಯೋಜನೆಯಡಿ ಅರ್ಜಿ ಆಹ್ವಾನ!

ಶಾಲಾ ಶಿಕ್ಷಣ ಇಲಾಖೆಯ(Education Department) ಆದೇಶದ ಅನ್ವಯ ಈ ಹಿಂದೆ ದಸರಾ ರಜೆಯನ್ನು 08 ಅಕ್ಟೋಬರ್ 2025 ರ ವರೆಗೆ ನೀಡಲಾಗಿತ್ತು ಅದರೆ ಈ ಅವಧಿಯನ್ನು ಪ್ರಸ್ತುತ ವಿಸ್ತರಣೆ ಮಾಡಿ ರಾಜ್ಯ ಸರಕಾರವು ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ.

Dasara Holidays Extended In Karnataka-ಅಕ್ಟೋಬರ್ 18 ರ ವರೆಗೆ ದಸರಾ ರಜೆ ಘೋಷಣೆ:

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಆದೇಶದನ್ವಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಾಲಾ ಶಿಕ್ಷಕರ ಮೂಲಕ ಮನೆ ಮನೆ ತೆರಳಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ಜಾತಿ ಗಣತಿಯನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ದಸರಾ ರಜೆಯನ್ನು 18 ಅಕ್ಟೋಬರ್ 2025 ರ ವರೆಗೆ ನೀಡಲಾಗಿದೆ ಎಂದು ಮಾಧ್ಯಮ ಸುದ್ದಿಗೊಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

Caste Survey In Karnataka-ಸಮೀಕ್ಷೆ ಸಮಯದಲ್ಲಿ ಮೃತಪಟ್ಟರೆ ₹ 20 ಲಕ್ಷ ಪರಿಹಾರ:

ಹಿಂದುಳಿತ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ರಾಜ್ಯದ್ಯಂತ ಶಾಲಾ ಶಿಕ್ಷಕರು ಮನೆ ಮನೆ ತೆರಳಿ ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು ಈ ಸಮಯದಲ್ಲಿ ರಾಜ್ಯದಲ್ಲಿ ಅಕಾಲಿಕ ಕಾರಣದಿಂದ ಒಟ್ಟು ಮೂರು ಜನ ಸಮೀಕ್ಷಾದಾರ ಶಿಕ್ಷಕರು ಮೃತಪಟ್ಟಿದ್ದು ತಲಾ 20 ಲಕ್ಷ ಪರಿಹಾರವನ್ನು ನೀಡಲಾಗುವುದು ಎಂದು ಸುದ್ದಿಗೊಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: Bike Repair Training-ನಿರುದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ! 30 ದಿನದ ಉಚಿತ ಬೈಕ್ ರಿಪೇರಿ ತರಬೇತಿ!

Caste Survey Salary

ಇದನ್ನೂ ಓದಿ: Crop Loss Amount-ಬೆಳೆಹಾನಿ ಸಮೀಕ್ಷೆ ಬಳಿಕ ಪರಿಹಾರ ವಿತರಣೆ ಎಕರೆಗೆ ರೂ 17,000/- ಪರಿಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ!

Caste Survey-ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಾಲ್ಲ:

ಸಾರ್ವಜನಿಕರು ಹಿಂದುಳಿತ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ರಾಜ್ಯಾದ್ಯಂತ ನಡೆಸುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ತಮ್ಮ ಮನೆ ಸದಸ್ಯರ ಮಾಹಿತಿಯನ್ನು ನೀಡುವುದು ಕಡ್ಡಾಯವಾಲ್ಲ ನಿಮಗೆ ಇಷ್ಟವಿದ್ದರೆ ಮಾತ್ರ ಮಾಹಿತಿ ನೀಡಬಹುದು ಇಷ್ಟವಿಲ್ಲದೆ ಇದ್ದಲ್ಲಿ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಪತ್ರ ಸಲ್ಲಿಸಬಹುದು.

Caste Survey Salary-ಸಮೀಕ್ಷಾದಾರರಿಗೆ 20,000 ಗೌರವಧನ:

ರಾಜ್ಯಾದ್ಯಂತ ಮನೆ ಮನೆ ತೆರಳಿ ಸಮೀಕ್ಷೆಯನ್ನು ಮಾಡುವ ಶಾಲಾ ಶಿಕ್ಷಕರಿಗೆ ಹಿಂದುಳಿತ ವರ್ಗಗಳ ಕಲ್ಯಾಣ ಇಲಾಖೆಯಿಂದ ಒಟ್ಟು 20,000/- ಗೌರವಧನವನ್ನು ನಿಗದಿಪಡಿಸಲಾಗಿದೆ. ಒಬ್ಬ ಶಿಕ್ಷಕ 150 ಮನೆ ಸಮೀಕ್ಷೆಯನ್ನು ಮಾಡಬೇಕು ಒಂದು ಮನೆಗೆ 150/- ರಂತೆ ಒಟ್ಟು 15,000/- ಜೊತೆಗೆ ಹೆಚ್ಚುವರಿಯಾಗಿ 5,000/- ಸೇರಿ ಒಟ್ಟೂ 20,000/- ಗೌರವಧನವನ್ನು ನೀಡಲು ರಾಜ್ಯ ಸರಕಾರದಿಂದ ಎಲ್ಲಾ ಜಿಲ್ಲೆಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸಮೀಕ್ಷೆಯನ್ನು ಮೇಲ್ವಿಚಾರಣೆ ಮಾಡುವ ಮೇಲ್ವಿಚಾರಕರಿಗೆ ರೂ 10,000/- ಗೌರವಧನವನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Millet Processing Training-ಬೆಂಗಳೂರು ಕೃಷಿ ವಿವಿಯಿಂದ ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ತರಬೇತಿ!

Caste Survey Webiste Link-ಮೊಬೈಲ್ ನಲ್ಲೇ ಸಮೀಕ್ಷೆ ಮಾಡಲು ಅವಕಾಶ:

ಸಾರ್ವಜನಿಕರು ಸ್ವಂತ ತಮ್ಮ ಮೊಬೈಲ್ ನಲ್ಲೇ ಈ ಕೆಳಗೆ ನೀಡಿರುವ ಹಿಂದುಳಿತ ವರ್ಗಗಳ ಕಲ್ಯಾಣ ಇಲಾಖೆ ಅಧಿಕೃತ ಸಮೀಕ್ಷೆಯ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ತಾವೇ ಸ್ವಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ಜಾತಿ ಗಣತಿಯ ವಿವರವನ್ನು ಭರ್ತಿ ಮಾಡಿ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಸಮೀಕ್ಷೆಯನ್ನು ಕೈಗೊಳ್ಳಲು ಅಧಿಕೃತ ವೆಬ್ಸೈತ್ ಲಿಂಕ್- Click Here
ನಿಮ್ಮ ಮೊಬೈಲ್ ನಲ್ಲಿ ಸಮೀಕ್ಷೆಯನ್ನು ಹೇಗೆ ಮಾಡುವುದು ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ-Click Here

Karnataka Samikshe Details-ಅಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್:

ಮುಖ್ಯಮಂತ್ರಿ ಅವರು ಇಂದು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿ, ಚರ್ಚಿಸಿ ಸಭೆಯಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕೆಳಗಿನಂತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ:

ವಿಧಾನ‌ ಪರಿಷತ್ ಸದಸ್ಯ ಪುಟ್ಟಣ್ಣ ಮತ್ತು ಶಿಕ್ಷಕರ ಸಂಘ ಹೆಚ್ಚುವರಿಯಾಗಿ 10 ದಿನಗಳ‌ ಕಾಲಾವಕಾಶ ಕೇಳಿ ಮನವಿ ಮಾಡಿದ್ದಾರೆ. ಈ ಮನವಿ ಪುರಸ್ಕರಿಸಿ ಅಕ್ಟೋಬರ್ 18ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ ಘೋಷಿಸಿದ್ದೇವೆ. 8 ಕೆಲಸದ ದಿನಗಳ ರಜೆ ವಿಸ್ತರಿಸಲಾಗಿದೆ.

ಇದೇ 12ನೇ ತಾರೀಕಿನಿಂದ ದ್ವಿತೀಯ ಪಿ.ಯು ಮಧ್ಯಂತರ ಪರೀಕ್ಷೆ ನಡೆಯುತ್ತಿರುವುದರಿಂದ ಸಮೀಕ್ಷೆ ಕಾರ್ಯದಿಂದ ಪಿಯುಸಿ ಉಪನ್ಯಾಸಕರಿಗೆ ವಿನಾಯ್ತಿ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ 6,700 ಜನ ಶಿಕ್ಷಕರು ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 46 ಲಕ್ಷ ಮನೆಗಳಿವೆ. ದಿನಕ್ಕೆ 10-15 ಮನೆಗಳ ಸಮೀಕ್ಷೆ ನಡೆಸುವ ಗುರಿ ನೀಡಲಾಗಿದೆ. ಬೆಂಗಳೂರಿನಲ್ಲಿ ನರಕ ಚತುರ್ದಷಿ ಒಳಗೆ ಸಮೀಕ್ಷೆ ಮುಗಿಸಲು ಸೂಚಿಸಲಾಗಿದೆ. ಶಿಕ್ಷಕರು ಕೂಡ ಇಷ್ಟರೊಳಗೆ ಸಮೀಕ್ಷೆ ಮುಗಿಸುವ ಭರವಸೆ ನೀಡಿದ್ದಾರೆ.

ಸಮೀಕ್ಷೆ ನಡೆಯುವಾಗ ಮೂವರು ಶಿಕ್ಷಕರು ಮೃತಪಟ್ಟಿದ್ದಾರೆ. ಇವರಿಗೆ ತಲಾ 20 ಲಕ್ಷ ಪರಿಹಾರ ನೀಡಲಾಗುವುದು. ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಲು ಒಪ್ಪದ, ಹಿಂದೇಟು ಹಾಕುವವರ ವಿರುದ್ಧ ಸರ್ಕಾರ ಶಿಸ್ತಿನ ಕ್ರಮ ಕೈಗೊಳ್ಳಲಿದೆ.

ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ಆಯೋಗದ ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: