HomeGovt SchemesPinchani status-2023:ಈ ಪಟ್ಟಿಯಲ್ಲಿರುವವರಿಗೆ ಡಿಸೆಂಬರ್ ಪಿಂಚಣಿ ಹಣ ವರ್ಗಾವಣೆ!

Pinchani status-2023:ಈ ಪಟ್ಟಿಯಲ್ಲಿರುವವರಿಗೆ ಡಿಸೆಂಬರ್ ಪಿಂಚಣಿ ಹಣ ವರ್ಗಾವಣೆ!

ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಯೋಜನೆಗಳನ್ನು ನಿರ್ದೇಶನಾಲಯದಿಂದ ರಾಜ್ಯದ ಒಟ್ಟು 77,63,513 ನಾಗರಿಕರಿಗೆ ಡಿಸೆಂಬರ್ ತಿಂಗಳ ಪಿಂಚಣಿ ಹಣವನ್ನು(Pinchani Amount) ಜಮಾ ಮಾಡಲಾಗಿದೆ. ಈ ಅಂಕಣದಲ್ಲಿ ವಿವರಿಸಿದ ವಿಧಾನವನ್ನುಅನುಸರಿಸಿ ನಿಮಗೆ ಪಿಂಚಣಿ ಹಣ ಜಮಾ ಅಗಿದಿಯೋ? ಇಲ್ಲವೋ? ಎಂದು ಚೆಕ್ ಮಾಡಿಕೊಳ್ಳಬವುದು.

ಯಾವೆಲ್ಲ ಯೋಜನೆಯಡಿ ಪಿಂಚಣಿ ಪಡೆಯಬವುದು? ಯಾವ ಯೋಜನೆಯಡಿ ಎಷ್ಟು ಹಣ ಬರುತ್ತದೆ? ಇತ್ಯಾದಿ ಸಂಪೂರ್ಣ ಮಾಹಿತಿ ಈ ಕೆಳಗೆ ತಿಳಿಸಲಾಗಿದ್ದು ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

Bara parihara-2023: ರಾಜ್ಯ ಸರಕಾರದಿಂದ ಬರ ಪರಿಹಾರದ ಮೊತ್ತ ನಿಗದಿ! ಒಂದು ಎಕರೆಗೆ ಎಷ್ಟು ಸಿಗಲಿದೆ?

ಯಾವೆಲ್ಲ ಯೋಜನೆಯಡಿ ಪಿಂಚಣಿ ಬಿಡುಗಡೆ ಮಾಡಲಾಗಿದೆ:

1)ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ- Rs. 1,200 
2)ವಿಧವಾ ಪಿಂಚಣಿ ಯೋಜನೆ- Rs. 800
3)ಅಂಗವಿಕಲ ಪಿಂಚಣಿ- Rs. 1400 ರಿಂದ Rs. 2000 ರವರೆಗೆ.
4)ಸಂಧ್ಯಾ ಸುರಕ್ಷಾ ಯೋಜನ- Rs. 1200
5)ಮನಸ್ವಿನಿ ಯೋಜನೆ- Rs. 800
6)ಮೈತ್ರಿ ಯೋಜನೆ- Rs. 800
7)ಸಾಲದ ಭಾದೆಯಿಂದ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ – Rs. 800
8)ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ- Rs. 10,000
9)ಎಂಡೋಸಲ್ಫಾನ್‌ ಸಂತ್ರಸ್ಥರಿಗೆ ಮಾಸಿಕ ಪಿಂಚಣಿ- Rs. 2000 ರಿಂದ Rs. 4000 ರವರೆಗೆ.

ಇದನ್ನೂ ಓದಿ: Interim Crop Insurance- ಈ ಜಿಲ್ಲೆಗಳಲ್ಲಿ 50.298 ಕೋಟಿ ಮಧ್ಯಂತರ ಬೆಳೆ ವಿಮೆ ಬಿಡುಗಡೆ!

ನಿಮ್ಮ ಮೊಬೈಲ್ ನಲ್ಲಿ ಪಿಂಚಣಿ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ:

ನಾಗರಿಕರು ರಾಜ್ಯ ಸರಕಾರದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಯೋಜನೆಗಳನ್ನು ನಿರ್ದೇಶನಾಲಯದ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಪಿಂಚಣಿ ಯೋಜನೆಯಡಿ ಹಣ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳಬವುದು.

ಪಿಂಚಣಿ ಯೋಜನೆಯಡಿ ಹಣ ವರ್ಗಾವಣೆ ಸ್ಥಿತಿ ತಿಳಿಯಲು ಪಿಂಚಣಿದಾರರ Beneficiary ID ಬೇಕಾಗುತ್ತದೆ ಮೊದಲು ಈ ಐಡಿಯನ್ನು ತೆಗೆದುಕೊಂಡು ನಂತರ ಈ ಐಡಿ ಹಾಕಿ ಹೇಗೆ ಪರಿಶೀಲಿಸಬೇಕು ಅದ ಕಾರಣ ಈ ಕೆಳಗೆ ಮೊದಲು ಪಿಂಚಣಿ ಐಡಿ ತೆಗೆದುಕೊಳ್ಳುವುದು ಹೇಗೆ ಎಂದು ತಿಳಿಸಿ ನಂತರ ಹಣ ಜಮಾ ಅಗಿರುವುದು ಹೇಗೆ ಚೆಕ್ ಮಾಡಬೇಕು ಎಂದು ತಿಳಿಸಲಾಗಿದೆ.

ವಿಶೇಷ ಸೂಚನೆ: ಮೊಬೈಲ್ ನಲ್ಲಿ ಈ ವೆಬ್ಸೈಟ್ ಭೇಟಿ ಮಾಡುವವರು ಮೊದಲಿಗೆ ಕ್ರೋಮ್ ಭೇಟಿ ಮಾಡಿದಾಗ “Desktop view” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಈ ವೆಬ್ಸೈಟ್ ನೋಡಬೇಕು.

Step-1: ಇಲ್ಲಿ ಕ್ಲಿಕ್ ಮಾಡಿ Pension Beneficiary ID ಮೇಲೆ ಕ್ಲಿಕ್ ಮಾಡಿ ಪಿಂಚಣಿ ಪಡೆಯುತ್ತಿರುವ ನಾಗರಿಕರ ಜಿಲ್ಲೆ, ತಾಲ್ಲೂಕು, ಗ್ರಾಮೀಣ/ನಗರ, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು ಇದೆ ಪೇಜ್ ನಲ್ಲಿ ಕಾಣುವ ಕ್ಯಾಪ್ಚರ್ ಕೋಡ್ ಅನ್ನು ನಮೂದಿಸಿ “Search” ಅಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: ತದನಂತರ ಇಲ್ಲಿ ನೀವು ಆಯ್ಕೆ ಮಾಡಿದ ಗ್ರಾಮದ ಪಿಂಚಣಿದಾರರ ಐಡಿ ಹೆಸರು ಇತ್ಯಾದಿ ವಿವರ ಗೋಚರಿಸುತ್ತದೆ ಇದರಲ್ಲಿ ನಿಮ್ಮ ಹೆಸರು ಇರುವ ಕಾಲಂ ನ ಪಿಂಚಣಿದಾರರ Beneficiary ID ಅನ್ನು ಒಂದು ಕಡೆ ನಮೂದಿಸಿಕೊಳ್ಳಬೇಕು. ಈ ವಿಧಾನ ಅನುಸರಿಸಿ ಪ್ರಥಮದಲ್ಲಿ Beneficiary ID ಪಡೆಯಬೇಕಾಗುತ್ತದೆ.

ಪಿಂಚಣಿ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ:

ಈ ಮೇಲೆ ವಿಧಾನವನ್ನು ಅನುಸರಿಸಿ ನಿಮ್ಮ ಪಿಂಚಣಿ ಐಡಿ ಅನ್ನು ತಿಳಿದುಕೊಂಡ ನಂತರಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮಗೆ  ಪಿಂಚಣಿ ಹಣ ಜಮಾ ಅಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಬವುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ ಅಧಿಕೃಯ ವೆಬ್ಸೈಟ್ ಭೇಟಿ ಮಾಡಬೇಕು Pinchani status check ತದನಂತರ ನಿಮ್ಮ ಪಿಂಚಣಿಯ Beneficiary ID ಯನ್ನು ಇಲ್ಲಿ ನಮೂದಿಸಿ ಪಕ್ಕದಲ್ಲಿ ಕಾಣುವ ಕ್ಯಾಪ್ಚರ್ ಕೋಡ್ ಹಾಕಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ಈ ಪುಟದಲ್ಲಿ ನಿಮಗೆ ಎಷ್ಟು ಹಣ ಜಮಾ ಅಗಿದೆ, ಯಾವ ದಿನದಂದು ಹಣ ವರ್ಗಾವಣೆ ಅಗಿದೆ, UTR ನಂಬರ್, ಬ್ಯಾಂಕ್ ಖಾತೆಯ ಮೊದಲ ಸಂಖ್ಯೆ, ಕೊನೆಯಲ್ಲಿ ಪಾವತಿ ಸ್ಥಿತಿ/Payment status- “Success” ಎಂದು ತೋರಿಸುತ್ತದೆ.

ಇದನ್ನೂ ಓದಿ: Crop information- ಈ ತಂತ್ರಾಶದಲ್ಲಿ ತಾವು ಬೆಳೆದ ಬೆಳೆ ವಿವರ ಇದ್ದಲ್ಲಿ ಮಾತ್ರ ಬೆಳೆ ವಿಮೆ ಪರಿಹಾರ!

ಪಿಂಚಣಿ ಜಮಾ ಅಗದಿದ್ದರೆ ಏನು ಮಾಡಬೇಕು?

ಈ ಮೇಲಿನ ವಿಧಾನವನ್ನು ಅನುಸರಿಸಿ ನಿಮ್ಮ ಪಿಂಚಣಿ ಅರ್ಜಿಯ ಹಣ ವರ್ಗಾವಣೆ ಸ್ಥಿತಿಯನ್ನು ಚೆಕ್ ಮಾಡಿದಾಗ ನಿಮಗೆ ಹಣ ಜಮಾ ಅಗಿರದಿದ್ದಲ್ಲಿ ಆಧಾರ್ ಕಾರ್ಡ ಮತ್ತು ಬ್ಯಾಂಕ್ ಪಾಸ್ ಬುಕ್ ಸಮೇತ ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿ ಮಾಡಿ ನಿಮ್ಮ ಅರ್ಜಿ ಸ್ಥಿತಿಯನ್ನು ಒಮ್ಮೆ ಚೆಕ್ ಮಾಡಿಕೊಳ್ಳಿ.

ಆಧಾರ್ ಲಿಂಕ್ ಸಮಸ್ಯೆಯಿಂದ ಪಿಂಚಣಿ ಸ್ಥಗಿತ:

ಅನೇಕ ಪಿಂಚಣಿ ಫಲಾನುಭವಿಗಳಿಗೆ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್(NPCI Mapping) ಅಗಿರದ ಕಾರಣ ಪ್ರತಿ ತಿಂಗಳು ಪಿಂಚಣಿ ಹಣ ಜಮಾ ಅಗುತ್ತಿರುವುದು ಸ್ಥಗಿತವಾಗಿದ್ದು, ಅದ ಕಾರಣ ಅಂತಹ ಫಲಾನುಭವಿಗಳು ತಕ್ಷಣ  ತಮ್ಮ ಬ್ಯಾಂಕ್ ಅಕೌಂಟ್ ಇರುವ ಬ್ಯಾಂಕ್ ಶಾಖೆಗೆ ಭೇಟಿ ಮಾಡಿ.
 
ಬ್ಯಾಂಕ್ ನಲ್ಲಿ ಆಧಾರ್ ಲಿಂಕ್ ಅರ್ಜಿ ನಮೂನೆ ಪಡೆದು ಅಗತ್ಯ ಮಾಹಿತಿ ಭರ್ತಿ ಮಾಡಿ ಜೊತೆಗೆ ನಿಮ್ಮ ಆಧಾರ್ ಕಾರ್ಡ, ಮೊಬೈಲ್ ನಂಬರ್ ಹಾಕಿ ಸಹಿ ಹಾಕಿ ಆಧಾರ್ ಲಿಂಕ್ ಮಾಡಲು ಅರ್ಜಿ ಸಲ್ಲಿಸಬೇಕು.

Most Popular

Latest Articles

Related Articles