Diploma agriculture admission-2025: ರಾಯಚೂರು ಕೃಷಿ ವಿವಿಯಿಂದ ಕೃಷಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

June 29, 2025 | Siddesh
Diploma agriculture admission-2025: ರಾಯಚೂರು ಕೃಷಿ ವಿವಿಯಿಂದ ಕೃಷಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!
Share Now:

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2025-25ನೇ ಸಾಲಿಗೆ ಡಿಪ್ಲೊಮಾ ಕೋರ್ಸ(Diploma in Agriculture) ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇದರ ಕುರಿತು ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಕೃಷಿ ಡಿಪ್ಲೊಮಾ ಕೋರ್ಸ್‌ ಪ್ರವೇಶವನ್ನು(Agriculture Diplom Admission-2025) ಪಡೆಯಲು ರಾಯಚೂರು ಕೃಷಿ ವಿಜ್ನಾನಗಳ ವಿಶ್ವವಿದ್ಯಾಲಯದಿಂದ ನಿಗದಿಪಡಿಸಿದ ಮಾನದಂಡಗಳೇನು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ಅವಶ್ಯಕ ದಾಖಲಾತಿಗಳು ಯಾವುವು? ಅರ್ಜಿ ನಮೂನೆ ಡೌನ್ಲೊಡ್ ಲಿಂಕ್ ಹಾಗೂ ಅರ್ಜಿ ಸಲ್ಲಿಸಲು ಬೇಕಾಗಿರುವ ಅವಶ್ಯಕ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Scholarship Application-2025: ಎಸ್ ಎಸ್ ಟ್ರಸ್ಟ್ ನಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Diploma Agriculture Admission Eligibility Criteria-ಪ್ರವೇಶ ಪಡೆಯಲು ನಿಗದಿಪಡಿಸಿದ ಅರ್ಹತಾ ಮಾನದಂಡಗಳು:

ಕೃಷಿ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶಕ್ಕೆ ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ತಿಳಿಸಿರುವ ಅರ್ಹತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.

1) ಡಿಪ್ಲೊಮಾ (ಕೃಷಿ) ಕೋರ್ಸ್‌ಗೆ ಪ್ರವೇಶ ಕೋರುವ ಅಭ್ಯರ್ಥಿಗಳು ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಕನ್ನಡ ಪಠ್ಯವನ್ನು ಭಾಷೆಯಾಗಿ ಅಭ್ಯಸಿಸಿ ಕನಿಷ್ಠ ಶೇ. 45 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. (ಪ.ಜಾ./ ಪ.ಪಂ./ಪ್ರವರ್ಗ-1ರವರುಗಳಿಗೆ ಕನಿಷ್ಟ ಶೇ. 40 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು)

2) ಪ್ರವೇಶ ಬಯಸುವ ವಿದ್ಯಾರ್ಥಿಯು ದಿನಾಂಕ: 28-07-2025 ರಂದು ಅರ್ಜಿದಾರ ಅಭ್ಯರ್ಥಿಯ ವಯಸ್ಸು 19 ವರ್ಷಗಳನ್ನು ಮೀರಿರಬಾರದು.

ಇದನ್ನೂ ಓದಿ: Home Construction-ಕಟ್ಟಡ ನಕ್ಷೆ ಮಂಜೂರಾತಿಯಿಲ್ಲದೆ ಮನೆ ಕಟ್ಟವಂತಿಲ್ಲ: ಸುಪ್ರೀಂ ಕೋರ್ಟ್

Diploma Agriculture-ರೈತರ ಮಕ್ಕಳಿಗೆ ಮೀಸಲಾತಿ:

ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ. 50ರಷ್ಟು ಸೀಟುಗಳನ್ನು ಡಿಪ್ಲೊಮಾ (ಕೃಷಿ) ಪ್ರವೇಶಾತಿಗೆ ಮೀಸಲಿಡಲಾಗಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Diploma Agriculture Admission Last Date-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 28 ಜೂನ್ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 28 ಜುಲೈ 2025
  • ಡಿ.ಡಿ ತೆಗೆಯಲು ಕೊನೆಯ ದಿನಾಂಕ- 28 ಜುಲೈ 2025

ಇದನ್ನೂ ಓದಿ: NLM Scheme-ಜಾನುವಾರು ಮಿಷನ್ ಯೋಜನೆಯಡಿ ಕುರಿ ಮೇಕೆ ಕೋಳಿ ಸಾಕಾಣಿಕೆಗೆ ₹ 25.00 ಲಕ್ಷ ಸಬ್ಸಿಡಿ!

Application link-ಕೃಷಿ ಡಿಪ್ಲೊಮಾ ಅರ್ಜಿ ನಮೂನೆಯನ್ನು ಡೌನ್ಲೋಡ್ ಲಿಂಕ್-Download Now

diploma agri

Application Fee Pay Method-ಅರ್ಜಿ ಶುಲ್ಕ ಪಾವತಿ ವಿಧಾನ:

ವಿದ್ಯಾರ್ಥಿಗಳು ಅರ್ಜಿ ಶುಲ್ಕವನ್ನು ಡಿ.ಡಿ ಮೂಲಕ ಪಾವತಿ ಮಾಡಬೇಕಾಗುತ್ತದೆ ಇದಕ್ಕಾಗಿ ಡಿ.ಡಿ ತೆಗೆಯುವ ವಿಳಾಸದ ವಿವರ: "The Comptroller, UAS Raichur" ವಿದ್ಯಾರ್ಥಿಗಳು ಡಿ,ಡಿಯನ್ನು ಕಡ್ಡಾಯವಾಗಿ ಯಾವುದೇ SBI ಶಾಖೆಯಲಿ ತೆಗೆಯುವಂತೆ ಸೂಚನೆ ನೀಡಲಾಗಿದೆ.

How to Apply-ಅರ್ಜಿ ಸಲ್ಲಿಸುವ ವಿಧಾನ:

ಕೃಷಿ ಡಿಪ್ಲೊಮಾ ಪ್ರವೇಶ ಪಡೆಯಲು ಅಸಕ್ತಿಯನ್ನು ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಡಿಡಿಯನ್ನು ಲಗತ್ತಿಸಿ "ಕುಲಸಚಿವರು, ಕೃಷಿ ಇಜ್ನಾನಗಳ ವಿಶ್ವವಿದ್ಯಾಲಯ ಲಿಂಗಸೂರು ರಸ್ತೆ ರಾಯಚೂರು-584104 ಇಲ್ಲಿಗೆ ದಿನಾಂಕ: 28-07-2025 (ಸಂಜೆ 04.00 ಗಂಟೆ) ಒಳಗೆ ತಲುಪುವಂತೆ ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿಯನ್ನು ಕಳುಹಿಸಬೇಕು.

ಇದನ್ನೂ ಓದಿ: Kharif Crop Survey-2025: ಮುಂಗಾರು ಬೆಳೆ ಸಮೀಕ್ಷೆ ರೈತರ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

Application Fee-ಪ್ರವೇಶ ಪಡೆಯಲು ಅರ್ಜಿ ಶುಲ್ಕದ ವಿವರ ಹೀಗಿದೆ:

ಸಾಮಾನ್ಯ ವರ್ಗದ ವಿದ್ಯಾರ್ಥಿಗೆ- ರೂ. 500/-
ಪ.ಜಾ./ಪ.ಪಂ./ಪ್ರವರ್ಗದ ವಿದ್ಯಾರ್ಥಿಗೆ- ರೂ. 250/-

Required Documents-ಅರ್ಜಿ ಸಲ್ಲಿಸಲು ದಾಖಲೆಗಳು:

  • ವಿದ್ಯಾರ್ಥಿಯ ಆಧಾರ್ ಕಾರ್ಡ
  • ಅರ್ಜಿದಾರ ವಿದ್ಯಾರ್ಥಿಯು ರೈತರ ಕುಟುಂಬಕ್ಕೆ ಸೇರಿದರೆ ವ್ಯವಸಾಯ ಪ್ರಮಾಣ ಪತ್ರ
  • ವಿದ್ಯಾರ್ಥಿಯ ಪೋಟೋ
  • SSLC ಅಂಕಪಟ್ಟಿ ಪ್ರತಿ
  • ಕನ್ನಡ ಮತ್ತು ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ

Diploma Agriculture Selection Process-ಕೃಷಿ ಡಿಪ್ಲೋಮಾ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ವಿಧಾನ:

ಇದರ ಕುರಿತು ಅಧಿಕೃತ ಪ್ರಕಟಣೆಯಲ್ಲಿ ಸರ್ಕಾರದ ಆದೇಶಗಳ ಅನ್ವಯ ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಉಲ್ಲೇಖಿಸಲಾಗಿದ್ದು ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ದತಿಯನ್ನು ಅಳಪಡಿಸಿ, ಪ್ರವೇಶಕ್ಕೆ ಆಯ್ಕೆ ಮಾಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಹಾಗೂ ಇನ್ನಿತರೆ ಮಾಹಿತಿಯನ್ನು ವೆಬ್‌ಸೈಟ್ ಮುಖಾಂತರ ತಿಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Nigama Yojanegalu-ರಾಜ್ಯದ 11 ನಿಗಮಗಳಲ್ಲಿ ವಿವಿಧ ಯೋಜನೆಯಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ!

For More Information-ಕೃಷಿ ಡಿಪ್ಲೊಮಾ ಪ್ರವೇಶದ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಉಪಯುಕ್ತ ವೆಬ್ಸೈಟ್ ಲಿಂಕ್:

ರಾಯಚೂರು ಕೃಷಿ ವಿವಿಯಿಂದ ವೆಬ್ಸೈಟ್- Click Here
ಕೃಷಿ ಡಿಪ್ಲೊಮಾ ಕೋರ್ಸ್‌ ಪ್ರವೇಶಕ್ಕೆ ಹೊರಡಿಸಿರುವ ಅಧಿಕೃತ ಪ್ರಕಟಣೆ ಪ್ರತಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ-Download Now

WhatsApp Group Join Now
Telegram Group Join Now
Share Now: