HomeNew postsDiploma agriculture-ಕೃಷಿ ಡಿಪ್ಲೋಮಾ ಕೋರ್ಸ್‍ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

Diploma agriculture-ಕೃಷಿ ಡಿಪ್ಲೋಮಾ ಕೋರ್ಸ್‍ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದೂಡಿಕೆ!

2024-25ನೇ ಶೈಕ್ಷಣಿಕ ವರ್ಷದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ಡಿಪ್ಲೋಮಾ ಕೋರ್ಸ್‍ಗೆ(Diploma agriculture) ಪ್ರವೇಶಾತಿ ಅರ್ಜಿ ಆಹ್ವಾನಿಸಲಾಗಿದ್ದು, ಡಿಪ್ಲೋಮಾ ಕೃಷಿ ದಾಖಲಾತಿಗೆ ಈ ಹಿಂದೆ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 14 ರವರೆಗೆ  ನಿಗಧಿಪಡಿಸಲಾಗಿತ್ತು. ಅರ್ಜಿ ಸಲ್ಲಿಸುವ ಅವಧಿಯನ್ನು  ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 30 ರ ವರೆಗೆ ವಿಸ್ತರಿಸಲಾಗಿದೆ.

ಅರ್ಜಿಯನ್ನು www.uahs.edu.in ವೈಬ್‍ಸೈಟ್‍ನಲ್ಲಿ ಎಲ್ಲಾ ಅಧಿಸೂಚನೆಗಳು ಶೀರ್ಷಿಕೆ ಅಡಿಯಲ್ಲಿ ಡೌನ್ ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಗಳನ್ನು 30 ಸೆಪ್ಟೆಂಬರ್ 2024 ರ ಒಳಗೆ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Surya ghar yojana- ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ, ಸಹಾಯಧನ ಎಷ್ಟು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಸಂಪೂರ್ಣ ವಿವರ

How can apply for Diploma agriculture course-ಅರ್ಜಿ ಸಲ್ಲಿಸಲು ಅರ್ಹರು:

1) ಅರ್ಜಿ ಸಲ್ಲಿಸಲು ಆಸಕ್ತಿಯಿರುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಕನ್ನಡದಲ್ಲಿ ಅಭ್ಯಸಿಸಿ ಕನಿಷ್ಠ ಶೇ 45% ಅಂಕಗಳೊಂದಿಗೆ ಉತೀರ್ಣರಾಗಿರಬೇಕು. ಪ.ಜಾ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳು ಕನಿಷ್ಠ ಶೇ 40% ಅಂಕಗಳೊಂದಿಗೆ ಉತೀರ್ಣರಾಗಿರಬೇಕು.

2) ದಿನಾಂಕ: 29-08-2024 ಕ್ಕೆ ಅರ್ಜಿದಾರ ಅಭ್ಯರ್ಥಿಯ ವಯಸ್ಸು 19 ವರ್ಷ ಮೀರಿರಬಾರದು.

3) ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ 50ರಷ್ಟು ಸೀಟುಗಳನ್ನು ಮೀಸಲಿಡಲಾಗುತ್ತದೆ.

Application process-ಅರ್ಜಿ ಸಲ್ಲಿಸುವ ವಿಧಾನ:

Application Download Now ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕೃಷಿ ವಿ,ವಿಯ ಜಾಲತಾಣವನ್ನು ಪ್ರವೇಶ ಮಾಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಮತ್ತು ಅರ್ಜಿ ಶುಲ್ಕವನ್ನು ಡಿ.ಡಿಯನ್ನು ತೆಗೆದುಕೊಂಡು ಅದನ್ನು ಮತ್ತು ಅಗತ್ಯ ದಾಖಲಾತಿ ಇತರೆ ವಿವರವನ್ನು ಭರ್ತಿ ಮಾಡಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ “ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577412” ಈ ವಿಳಾಸಕ್ಕೆ ಅರ್ಜಿಯನ್ನು ಪೋಸ್ಟ್ ಅಥವಾ ಖುದ್ದು ಭೇಟಿ ಮಾಡಿ ಸಲ್ಲಿಸಬೇಕು.

Application link:- Download Now

ಇದನ್ನೂ ಓದಿ: Student scholarship-  ವಿದ್ಯಾರ್ಥಿ ವೇತನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Application fee-ಅರ್ಜಿ ಶುಲ್ಕ:

A) ಸಾಮಾನ್ಯ ವರ್ಗದವರಿಗೆ:- ರೂ 500/-
B) ಪ.ಜಾ/ಪ.ಪಂ/ಪ್ರವರ್ಗ-1:- ರೂ 250/-

ಮೇಲೆ ತಿಳಿಸಿರುವ ಅರ್ಜಿ ಶುಲ್ಕವನ್ನು ರಾಷ್ಟ್ರೀಕೃತ ಬ್ಯಾಂಕ್ ಗಳ(Nationalised bank) ಶಾಖೆಯನ್ನು ಭೇಟಿ ಮಾಡಿ Comptroller, KSNUAHS, Shivamogga-577412 ಈ ಹೆಸರಿಗೆ ಡಿ.ಡಿಯನ್ನು ತೆಗೆದು ಅರ್ಜಿಯೊಂದಿಗೆ ಸಲ್ಲಿಸಬೇಕು.

ಇದನ್ನೂ ಓದಿ: Mahila nigama yojanegalu-ಮಹಿಳಾ ನಿಗಮದ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ!

Diploma agriculture course details-ಈ ಕೋರ್ಸ್ ನಲ್ಲಿ ಯಾವೆಲ್ಲ ವಿಷಯಗಳ ಕುರಿತು ತಿಳಿಸಿಕೊಡಲಾಗುತ್ತದೆ?

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ, ಕನಿಷ್ಠ ಶೇ.45% (ಕನಿಷ್ಠ ಶೇ. 40% ಪ.ಜಾ. ಮತ್ತು ಪ.ಪಂ./ಪ್ರವರ್ಗ-1) ಅಂಕಗಳೊಂದಿಗೆ ಉತ್ತೀರ್ಣರಾದ, 19 ವರ್ಷ ವಯಸ್ಸು ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ. 50% ರಷ್ಟು ಮೀಸಲಾತಿ ಇರುತ್ತದೆ. ಈ ಎರಡು ವರ್ಷದ ಡಿಪ್ಲೋಮಾ ಕೋರ್ಸ್‍ನಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಹೈನುವಿಜ್ಞಾನ, ರೇಷ್ಮೆ ಕೃಷಿ, ಜೇನು ಕೃಷಿ ಹೀಗೆ ಕೃಷಿಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ನುರಿತ ವಿಜ್ಞಾನಿಗಳಿಂದ ಭೋದನೆ ಇರುತ್ತದೆ. ಹಾಗೂ ಕೃಷಿ ರಂಗದ ಪ್ರಾಯೋಗಿಕ ಪರಿಚಯ/ಅನುಭವ ಆಧಾರಿತ ಕಲಿಕೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಇದನ್ನೂ ಓದಿ: Village Administrative Officer – 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಅರ್ಜಿ ಸಲ್ಲಿಕೆ ಮತ್ತೆ ಆರಂಭ!

For more information-ಇನ್ನು ಹೆಚ್ಚಿನ ಮಾಹಿತಿ ಪಡೆಯಲು:

ಇ-ಮೇಲ್: [email protected] ಹಾಗೂ ಜಾಲತಾಣ : www.uahs.edu.in, ಅಥವಾ ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ, ಕರ್ನಾಟಕ ಹಾಗೂ ಕಾಲೇಜು ಮತ್ತು ವಿಳಾಸ: ಪ್ರಾಂಶುಪಾಲರು, ಡಿಪ್ಲೋಮಾ  ಕೃಷಿ ಮಹಾವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ – 576213, ಉಡುಪಿ ಜಿಲ್ಲೆ ಪ್ರಾಂಶುಪಾಲರು: 9480838208, ಕಛೇರಿ : 9108241342, 9686405090 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Most Popular

Latest Articles

Related Articles