Drone Pilot Training-ಉಚಿತ ಡ್ರೋನ್ ಪೈಲೆಟ್ ತರಬೇತಿಗೆ ಅರ್ಜಿ ಆಹ್ವಾನ!

August 28, 2025 | Siddesh
Drone Pilot Training-ಉಚಿತ ಡ್ರೋನ್ ಪೈಲೆಟ್ ತರಬೇತಿಗೆ ಅರ್ಜಿ ಆಹ್ವಾನ!
Share Now:

ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಿಂದ, 2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಡ್ರೋನ್ ಉಪಕರಣ(Drone Pilot Training) ಬಳಸುವ ಕುರಿತು 15 ದಿನಗಳ ವಸತಿ ಸಹಿತ ಉಚಿತ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಕುರಿತು ಸಂಪೂರ್ಣ ವಿವರವನ್ನು ಇಲ್ಲಿ ಪ್ರಕಟಿಸಲಾಗಿದೆ.

ಪ್ರಸ್ತುತ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಡ್ರೋನ್ ಉಪಕರಣಗಳನ್ನು(Drone Pilot Training Application) ಬಳಕೆ ಮಾಡಲಾಗುತ್ತಿದ್ದು ಕೃಷಿ,ಜಮೀನಿನ ಸರ್ವೆ,ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಡ್ರೋನ್ ಅನ್ನು ಬಳಕೆ ಮಾಡಲಾಗುತ್ತಿದೆ ಈ ನಿಟ್ಟಿನಲ್ಲಿ ಡ್ರೋನ್ ಚಾಲನೆಯನ್ನು ಕಲಿತಿರುವ ಡ್ರೋನ್ ಪೈಲೆಟ್ ಗಳಿಗೂ ಉತ್ತಮ ಬೇಡಿಕೆ ಇದ್ದು ಆಸಕ್ತ ಅಭ್ಯರ್ಥಿಗಳು ಈ ಲೇಖನದಲ್ಲಿ ವಿವರಿಸಿರುವ ಸಂಪೂರ್ಣ ಮಾಹಿತಿಯನ್ನು ತಿಳಿದು ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Vamshavruksha Certificate-ವಂಶವೃಕ್ಷ ದೃಢೀಕರಣ ಪತ್ರ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಈ ಅಂಕಣದಲ್ಲಿ ಉಚಿತ ಡ್ರೋನ್ ಪೈಲೆಟ್(Drone Pilot) ತರಬೇತಿ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Drone Pilot Training Eligibility-ಅರ್ಜಿ ಸಲ್ಲಿಸಲು ಅರ್ಹರು:

  • ಅರ್ಜಿದಾರ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ರಿಂದ ಗರಿಷ್ಠ 45 ವರ್ಷದ ಒಳಗಿರಬೇಕು.
  • ಅರ್ಜಿದಾರ ಅಭ್ಯರ್ಥಿಯು ಕನಿಷ್ಠ 10ನೇ ತರಗತಿ ಪಾಸಾಗಿರಬೇಕು.
  • ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 5.0 ಲಕ್ಷದ ಒಳಗಿರಬೇಕು.
  • ಅರ್ಜಿದಾರ ಅಭ್ಯರ್ಥಿಯು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಸೆಪ್ಟೆಂಬರ್ 2025

ಇತರೆ ವರ್ಗದವರು ಡ್ರೋನ್ ಪೈಲೆಟ್ ತರಬೇತಿಯನ್ನು ಪಡೆಯಲು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ-Click Here

ಇದನ್ನೂ ಓದಿ: Scholarship Application-TVS ಪೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ!

Drone Pilot Training

ಇದನ್ನೂ ಓದಿ: Cotton MSP Price-ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಗೆ 8,110/- ರಂತೆ ಹತ್ತಿ ಖರೀದಿಗೆ ರೈತರ ನೋಂದಣಿ ಆರಂಭ!

How To Apply For Drone Pilot Training-ಅರ್ಜಿ ಸಲ್ಲಿಸುವುದು ಹೇಗೆ?

ಉಚಿತ ಡ್ರೋನ್ ಪೈಲೆಟ್ ತರಬೇತಿಯನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ತಮ್ಮ ಹತ್ತಿರ ಗ್ರಾಮ ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನೇರವಾಗಿ ತಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.

Drone Pilot Online Application link-ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿದಾರರು ಕೆಳಗೆ ತಿಳಿಸಿರುವ ಹಂತವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಉಚಿತ ಡ್ರೋನ್ ಪೈಲೆಟ್ ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದು.

ಹಂತ-1: ಮೊದಲಿಗೆ "Drone Pilot Online Application" ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಹಂತ-2: ಬಳಿಕ ಈ ಪೇಜ್ ನಲ್ಲಿ "ಅರ್ಜಿ ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ 12 ಅಂಕಿಯ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಜೊತೆಗೆ ಆಧಾರ್ ನಲ್ಲಿರುವಂತೆ ನಿಮ್ಮ ಹೆಸರು ಮತ್ತು ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Procced" ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ-3: "Procced" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಇಲ್ಲಿ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Free Tailoring Course-ಉಚಿತ ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ! ಸಬ್ಸಿಡಿಯಲ್ಲಿ ಹೋಲಿಗೆ ಯಂತ್ರ!

Agriculture Drone

ಇದನ್ನೂ ಓದಿ: Free Beautician Course-ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

Documents For Drone Pilot Training-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ.
  • ಪೋಟೋ.
  • ಬ್ಯಾಂಕ್ ಪಾಸ್ ಬುಕ್.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ಮೊಬೈಲ್ ನಂಬರ್.

Drone Pilot Training Helpline-ತರಬೇತಿ ಕುರಿತು ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಉಪಯುಕ್ತ ಲಿಂಕ್ ಗಳು:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್- Apply Now
ಅಧಿಕೃತ ವೆಬ್ಸೈಟ್- Click Here
ಸಹಾಯವಾಣಿ ಸಂಖ್ಯೆ- 9482300400

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: