Drone Pilot Training-ಇಲ್ಲಿದೆ ಡ್ರೋನ್ ಪೈಲಟ್ ಆಗುವ ಸುವರ್ಣಾವಕಾಶ! ಇಂದೇ ಅರ್ಜಿ ಸಲ್ಲಿಸಿ!

January 14, 2026 | Siddesh
Drone Pilot Training-ಇಲ್ಲಿದೆ ಡ್ರೋನ್ ಪೈಲಟ್ ಆಗುವ ಸುವರ್ಣಾವಕಾಶ! ಇಂದೇ ಅರ್ಜಿ ಸಲ್ಲಿಸಿ!
Share Now:

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರದ ವತಿಯಿಂದ ಆಸಕ್ತ ಯುವಕರಿಗೆ ಉಚಿತ ಸುಧಾರಿತ ಡ್ರೋನ್ ಪೈಲಟ್ ತರಬೇತಿಯನ್ನು(Free Drone Pilot Training) ಆಯೋಜನೆ ಮಾಡಲಾಗಿದ್ದು ಅರ್ಹ ಅಭ್ಯರ್ಥಿಗಳು ಈ ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಪ್ರಸ್ತುತ ದಿನಗಳಲ್ಲಿ ಕೃಷಿಯಿಂದ ಹಿಡಿದು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಡ್ರೋನ್ ಬಳಕೆಯ(Drone Pilot Training Application) ಹೆಚ್ಚುತ್ತಿದ್ದು ಸದರಿ ಕಾರಣದಿಂದಾಗಿ ಡ್ರೋನ್ ಪೈಲಟ್ ಉದ್ಯೋಗಕ್ಕೆ ಉತ್ತಮ ಅವಕಾಶಗಳಿದ್ದು ಈ ಕ್ಷೇತ್ರದಲ್ಲಿ ಉದ್ಯೋಗವನ್ನು ಮಾಡಲು ಆಸಕ್ತಿಯನ್ನು ಹೊಂದಿರುವ ಈ ಉಚಿತ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: KSRTC Ticket Booking-ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ಪಡೆಯುವುದು ಇನ್ನು ಭಾರೀ ಸುಲಭ!

ಈ ಅಂಕಣದಲ್ಲಿ ಉಚಿತ ಡ್ರೋನ್ ಪೈಲಟ್(Drone Pilot) ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಡ್ರೋನ್ ಪೈಲಟ್ ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತದೆ? ಎನ್ನುವ ಮಾಹಿತಿ ಸೇರಿದಂತೆ ಇನ್ನಿತರೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Who Can Apply For Drone Pilot Training-ಡ್ರೋನ್ ಪೈಲಟ್ ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರದ ವತಿಯಿಂದ ಪ್ರಸ್ತುತ ಆಯೋಜನೆ ಮಾಡಿರುವ ಉಚಿತ ಡ್ರೋನ್ ಪೈಲಟ್ ತರಬೇತಿಯಲ್ಲಿ ಭಾಗವಹಿಸಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ಮಾಹಿತಿ ಈ ಕೆಳಗಿನಂತಿದೆ:

ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಪರಿಶಿಷ್ಠ ಜಾತಿಯ(SC) ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದೊಳಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆದಿರಬೇಕು.

ಅರ್ಜಿದಾರ ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು.

ಅರ್ಜಿದಾರ ಕುಟುಂಬದ ವಾರ್ಷಿಕ ಆದಾಯು 8.0 ಲಕ್ಷದ ಒಳಗಿರಬೇಕು.

ಇದನ್ನೂ ಓದಿ: Azeem Premji Scholarship-ಅಜೀಂ ಪ್ರೇಮ್‌ಜಿ ವತಿಯಿಂದ 30,000 ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

Last Date For Drone Pilot Training Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸುಧಾರಿತ ಡ್ರೋನ್ ಪೈಲಟ್ ತರಬೇತಿಯನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 31 ಮಾರ್ಚ್ 2026 ಕೊನೆಯ ದಿನಾಂಕವಾಗಿದೆ.

Drone Pilot Training Details-ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಬಗ್ಗೆ ಮಾಹಿತಿ ತಿಳಿಸಲಾಗುತ್ತದೆ?

ಉಚಿತ ಸುಧಾರಿತ ಡ್ರೋನ್ ಪೈಲಟ್ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಬಗ್ಗೆ ಮಾಹಿತಿ ತಿಳಿಸಲಾಗುತ್ತದೆ ಎನ್ನುವ ವಿವರ ಹೀಗಿದೆ:

  • ಡ್ರೋನ್ ಕುರಿತು ಪ್ರಾಥಮಿಕ ಮಾಹಿತಿ.
  • ಎಲ್ಲಾ ಬಗ್ಗೆಯ ಸುಧಾರಿತ ಡ್ರೋನ್ ಬಗ್ಗೆ ಮಾಹಿತಿ.
  • ಪ್ರಾಯೋಗಿಕವಾಗಿ ಡ್ರೋನ್ ಅನ್ನು ಚಲಾವಣೆ ಮಾಡುವ ಬಗ್ಗೆ ವಿವರಣೆ.
  • ಡ್ರೋನ್ ಉಪಕರಣವನ್ನು ಹೇಗೆ ನಿರ್ವಹಣೆ ಮಾಡಬೇಕು ಎನ್ನುವ ಮಾಹಿತಿ ಇನ್ನಿತರೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಅಭ್ಯರ್ಥಿಗಳು ಈ ತರಬೇತಿಯಲ್ಲಿ ತಿಳಿಯಬಹುದು.

ಇದನ್ನೂ ಓದಿ: Poultry Shed Subsidy-ಕೋಳಿ ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ₹60,000 ಸಹಾಯಧನ!

Drone Pilot Training

ಇದನ್ನೂ ಓದಿ: PM Kisan Amount-ಪಿಎಂ ಕಿಸಾನ್ ಆರ್ಥಿಕ ನೆರವು ಏರಿಕೆ ನಿರೀಕ್ಷೆ!

Online Application For Drone Pilot Training-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರದ ವತಿಯಿಂದ ಆಯೋಜನೆ ಮಾಡಿರುವ ಉಚಿತ ಸುಧಾರಿತ ಡ್ರೋನ್ ಪೈಲಟ್ ತರಬೇತಿಯಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಅಭ್ಯರ್ಥಿಗಳು ಪ್ರಥಮ ಹಂತದಲ್ಲಿ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: New Ration Card-ಹೊಸ ರೇಶನ್ ಕಾರ್ಡ ವಿತರಣೆ ಕುರಿತು ಮಹತ್ವದ ಮಾಹಿತಿ ಪ್ರಕಟ!

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಕಾಣುವ Apply ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರ ಅಭ್ಯರ್ಥಿಯ ಆಧಾರ್ ಕಾರ್ಡ ಮತ್ತು ಆಧಾರ್ ನಲ್ಲಿರುವಂತೆ ಹೆಸರನ್ನು ನಮೂದಿಸಿ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ Procced ಬಟನ್ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ಭೇಟಿ ಮಾಡಬೇಕು.

Step-3: ನಂತರ ಇಲ್ಲಿ ಅಧಿಕೃತ ಪೇಜ್ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ವಿವರ ಮತ್ತು ದಾಖಲೆಗಳನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Required Documents For Application-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಅಭ್ಯರ್ಥಿಯ ಆಧಾರ್ ಕಾರ್ಡ
ಪಾನ್ ಕಾರ್ಡ
ಬ್ಯಾಂಕ್ ಪಾಸ್ ಬುಕ್
ಅಭ್ಯರ್ಥಿ ಪೋಟೋ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಮೊಬೈಲ್ ನಂಬರ್

Helpline-ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ- 080-22207784/ 9480843235

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: