FFE Scholarship-ಫೌಂಡೇಶನ್ ಫಾರ್ ಎಕ್ಸಲೆನ್ಸ್ ಸ್ಕಾಲರ್‌ಶಿಪ್ ಅಡಿಯಲ್ಲಿ ₹50,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ!

November 25, 2025 | Siddesh
FFE Scholarship-ಫೌಂಡೇಶನ್ ಫಾರ್ ಎಕ್ಸಲೆನ್ಸ್ ಸ್ಕಾಲರ್‌ಶಿಪ್ ಅಡಿಯಲ್ಲಿ ₹50,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ!
Share Now:

2025 ನೇ ಸಾಲಿನ ಫೌಂಡೇಶನ್ ಫಾರ್ ಎಕ್ಸಲೆನ್ಸ್ ಸ್ಕಾಲರ್‌ಶಿಪ್ ಅಡಿಯಲ್ಲಿ(FFE Scholarship) ಎಂಜಿನಿಯರಿಂಗ್, ಇಂಟಿಗ್ರೇಟೆಡ್ ಎಂ.ಟೆಕ್, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ₹50,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ವಿದ್ಯಾರ್ಥಿವೇತನವು ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ(FFE India Scholarship) ಫೌಂಡೇಶನ್ ಫಾರ್ ಎಕ್ಸಲೆನ್ಸ್ ಸ್ಕಾಲರ್‌ಶಿಪ್ ವತಿಯಿಂದ ಭಾರತದಾದ್ಯಂತ ವಿದ್ಯಾರ್ಥಿತಿಗಳು ವಿದ್ಯಾರ್ಥಿವೇತನವನ್ನು ಪಡೆದು ಅವರ ಮುಂದಿನ ಶಿಕ್ಷಣವನ್ನು ಪೂರ್ಣಗೊಳಿಸಲು ಆರ್ಥಿಕವಾಗಿ ಸಹಾಯ ಮಾಡಲು ಈ ಕಾರ್ಯಕ್ರಮವು ಸಹಾಯಕಾರಿಯಾಗಿದೆ.

ಇದನ್ನೂ ಓದಿ: PMEGP Application-ಸ್ವಂತ ಉದ್ದಿಮೆಗೆ ಈ ಯೋಜನೆಯಡಿ ಸಿಗುತ್ತದೆ 35% ಸಬ್ಸಿಡಿ! ಇಲ್ಲಿದೆ ಸಂಪೂರ್ಣ ವಿವರ!

ಪ್ರಸ್ತುತ ಇಂದಿನ ಈ ಲೇಖನದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಯಾರ‍ೆಲ್ಲ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ? ಈ ಕಾರ್ಯಕ್ರಮದ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಬಹುದು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿಗೆ ಸಂಭದಿಸಿದ ಅಗತ್ಯ ದಾಖಲಾತಿಗಳಾವುವು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Scholorship Amount-ಈ ಸ್ಕಾಲರ್ಶಿಪ್ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಬಹುದು?

ಫೌಂಡೇಶನ್ ಫಾರ್ ಎಕ್ಸಲೆನ್ಸ್ ಸ್ಕಾಲರ್‌ಶಿಪ್ ಅಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೋರ್ಸ್‌ನ ಅವಧಿಗೆ ₹50,000 ವಿದ್ಯಾರ್ಥಿವೇತನದ ಜೊತೆಗೆ ರಚನಾತ್ಮಕ ಕೌಶಲ್ಯ ಹಾಗೂ ಉದ್ಯೋಗಕ್ಕೆ ಸಿದ್ಧರನ್ನಾಗಿ ಮಾಡಲು ಮಾರ್ಗದರ್ಶನವನ್ನು ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ: ವಿದ್ಯಾರ್ಥಿಗಳು ತೃಪ್ತಿದಾಯಕ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳುವುದು ಮತ್ತು ಪ್ರತಿ ವರ್ಷ ವಿದ್ಯಾರ್ಥಿವೇತನ ನವೀಕರಣಕ್ಕಾಗಿ ಎಲ್ಲಾ ವರದಿ ಮಾಡುವಿಕೆ ಮತ್ತು ಭಾಗವಹಿಸುವಿಕೆಯ ಬಾಧ್ಯತೆಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ವಿದ್ಯಾರ್ಥಿವೇತನ ನಿಧಿಯನ್ನು ಬೋಧನಾ ಶುಲ್ಕಗಳು, ಊಟದ ವೆಚ್ಚಗಳು, ಹಾಸ್ಟೆಲ್ ಶುಲ್ಕಗಳು ಇತ್ಯಾದಿ ಸೇರಿದಂತೆ ಅಗತ್ಯ ಶೈಕ್ಷಣಿಕ ವೆಚ್ಚಗಳಿಗೆ ಮಾತ್ರ ಬಳಸಬೇಕು.

ಇದನ್ನೂ ಓದಿ: Uchita Meenu Mari-ಮೀನುಗಾರಿಕೆ ಇಲಾಕೆಯಿಂದ ಉಚಿತ ಮೀನು ಮರಿ ಪಡೆಯಲು ಅರ್ಜಿ ಆಹ್ವಾನ!

Last date to apply scholorship-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 31 2025

Who can apply this scholorship-ಅರ್ಜಿಯನ್ನು ಸಲ್ಲಿಸಲು ಯಾರ‍ೆಲ್ಲ ಅರ್ಹರು?

ಅರ್ಜಿದಾರ ವಿದ್ಯಾರ್ಥಿನಿಯು ಭಾರತರ ಖಾಯಂ ನಿವಾಸಿಯಾಗಿರಬೇಕು.

ವಿದ್ಯಾರ್ಥಿಯು 2025-26 ನೇ ಶೈಕ್ಷಣಿಕ ವರ್ಷದಲ್ಲಿ ಬಿಇ/ಬಿ.ಟೆಕ್‌ನ 1 ನೇ ವರ್ಷ, 5 ವರ್ಷಗಳ ಇಂಟಿಗ್ರೇಟೆಡ್ ಎಂ.ಟೆಕ್, MBBS, ಅಥವಾ 5 ವರ್ಷಗಳ ಕಾನೂನು ಕಾರ್ಯಕ್ರಮಕ್ಕೆ ದಾಖಲಾಗಿರುವ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಿರುತ್ತಾರೆ.

ವಿದ್ಯಾರ್ಥಿಯು ದ್ವಿತೀಯ ವರ್ಷದಲ್ಲಿ ಕನಿಷ್ಠ 70% ಅಂಕಗಳನ್ನು ಪಡೆದಿರಬೇಕು

ವಿದ್ಯಾರ್ಥಿಯು ರಾಜ್ಯ/ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ಅಥವಾ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಸಾಮಾನ್ಯ/ಮುಕ್ತ ಮೆರಿಟ್ ಶ್ರೇಣಿಯ ಮೂಲಕ ವೃತ್ತಿಪರ ಪದವಿ ಕಾರ್ಯಕ್ರಮಕ್ಕೆ ಪ್ರವೇಶ ಪಡೆದಿರಬೇಕು.

ವಿದ್ಯಾರ್ಥಿಯ ವಾರ್ಷಿಕ ಕುಟುಂಬದ ಆದಾಯವು 3,00,000 ಒಳಗಿರಬೇಕು.

ಇದನ್ನೂ ಓದಿ: Poultry Scheme-ಉಚಿತ ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ!

What are the documents required-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

ಮೊದಲ ಹಂತದಲ್ಲಿ:

ಆಧಾರ್ ಕಾರ್ಡ/Aadhar Card

ದ್ವಿತೀಯ ಪಿಯುಸಿ ಅಂಕಪಟ್ಟಿ/PU Marks card

ಪ್ರವೇಶ ಪರೀಕ್ಷೆಯ ಅಂಕಪಟ್ಟಿ/Entrance Exam Marksheet

ಕೌನ್ಸೆಲಿಂಗ್ ಪತ್ರ/Counseling Letter

ಆದಾಯ ಪ್ರಮಾಣಪತ್ರ/Income Certificate

ಶುಲ್ಕ ರಶೀದಿಗಳು/Fees Receipt

ಇದನ್ನೂ ಓದಿ: Engineering scholarship-ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹75,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಆಹ್ವಾನ!

FFE Scholarship

ಇದನ್ನೂ ಓದಿ: Fisheries-ಮೀನುಗಾರಿಕೆ ಇಲಾಖೆ ಪರಿಹಾರ ನಿಧಿಯಡಿ ಪರಿಹಾರ ಮೊತ್ತ 10.00 ಲಕ್ಷರೂ.ಗಳಿಗೆ ಏರಿಕೆ- ಸಿದ್ದರಾಮಯ್ಯ

ದ್ವಿತೀಯ ಹಂತದಲ್ಲಿ:

ಕಾಲೇಜಿನಿಂದ ಬೋನಾಫೈಡ್ ಪ್ರಮಾಣಪತ್ರ/Bonafide Certificate from College

ವೆಚ್ಚಗಳ ಪತ್ರ/Letter of Expenses

ಬ್ಯಾಂಕ್ ಪಾಸ್‌ಬುಕ್ ಪ್ರತಿ/Bank Passbook

Online Application Process-ಅರ್ಜಿಯನ್ನು ಸಲ್ಲಿಸುವ ವಿಧಾನ:

Step-1: ವಿದ್ಯಾರ್ಥಿಗಳು ಮೊದಲಿಗೆ ಈ ಲಿಂಕ್ "Online Application" ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಮಾಡಿದ ನಂತರ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ. ವೆಬ್‌ಸೈಟ್‌ಗೆ ಮೊದಲ ಬಾರಿಗೆ ಭೇಟಿ ನೀಡುತ್ತಿರುವ ವಿದ್ಯಾರ್ಥಿಗಳು “Create an Account” ಆಯ್ಕೆ ಮಾಡಿ ಹೊಸ ಖಾತೆಯನ್ನು ಸೃಜಿಸಿಕೊಳ್ಳಬೇಕು.

ಇದನ್ನೂ ಓದಿ: Revenue Site Khata-ರೆವಿನ್ಯೂ ಸೈಟ್ ಗೂ ಇನ್ಮುಂದೆ ಸಿಗಲಿದೆ ಇ-ಖಾತಾ!

Step-3: ನಂತರ “Login” ಬಟನ್‌ ಮೂಲಕ ಅಗತ್ಯ ವಿವರಗಳನ್ನು ನಮೂದಿಸಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-4: ತದನಂತರ ಅಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಅದಕ್ಕೆ ಸಂಭದಿಸಿದ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ. ನಂತರ “Submit” ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: