Free Computer Training-ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿಗೆ ಅರ್ಜಿ ಆಹ್ವಾನ!

July 14, 2025 | Siddesh
Free Computer Training-ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿಗೆ ಅರ್ಜಿ ಆಹ್ವಾನ!
Share Now:

ಉಚಿತವಾಗಿ ಕಂಪ್ಯೂಟರ್ ಟ್ಯಾಲಿ(Free Computer Training) ಸೇರಿದಂತೆ ಇತರೆ ಪೂರಕ ಕೌಶಲ್ಯಗಳ ಕುರಿತು ತರಬೇತಿಯನ್ನು ನೀಡಲು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ(Computer Training Course) ಕೆಲಸವನ್ನು ಗಿಟ್ಟಿಸಿಕೊಳ್ಳಲು ಕಂಪ್ಯೂಟರ್ ಕಲಿಕೆಯು ಅತ್ಯವಶ್ಯಕವಾಗಿದ್ದು ಆಸಕ್ತ ಅಭ್ಯರ್ಥಿಗಳು ಉಚಿತವಾಗಿ ಈ ಕೌಶಲ್ಯವನ್ನು ಪಡೆಯಲು ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: PM Kisan Updates-ಪಿಎಂ ಕಿಸಾನ್ 20ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

ಪ್ರಸ್ತುತ ಈ ಲೇಖನದಲ್ಲಿ ಈ ಉಚಿತ ತರಬೇತಿಯನ್ನು(Computer Training Application) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳೇನು? ತರಬೇತಿ ಕುರಿತು ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Free Computer Training-ತರಬೇತಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅರ್ಹತಾ ಮಾನದಂಡಗಳು:

ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ತರಬೇತಿಯಲ್ಲಿ ಭಾಗವಹಿಸಲು ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು. 

ಅಭ್ಯರ್ಥಿಗೆ ಕನ್ನಡ ಬಾಷೆಯನ್ನು ಓದಲು ಮತ್ತು ಬರೆಯಲು ಬರುವುದು ಕಡ್ಡಾಯವಾಗಿರುತ್ತದೆ. 

ಅರ್ಜಿದಾರ ಅಭ್ಯರ್ಥಿಯು ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಬಿ.ಪಿ.ಎಲ್ ಕಾರ್ಡ ಹೊಂದಿರುವ ಅರ್ಜಿದಾರರಿಗೆ ತರಬೇತಿಯಲ್ಲಿ ಪಾಲ್ಗೊಳಲು ಪ್ರಥಮ ಅದ್ಯತೆಯನ್ನು ನೀಡಲಾಗುತ್ತದೆ ಎಂದು ತರಬೇತಿ ನೀಡುವ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಲಾಗಿದೆ..

ಅಭ್ಯರ್ಥಿಯು ತರಬೇತಿ ಪೂರ್ಣಗೊಳಿಸಿದ ಬಳಿಕ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.

ಇದನ್ನೂ ಓದಿ: RTC Crop Name-ಇನ್ನು ಮುಂದೆ ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಿಸುವುದು ಬಾರಿ ಸುಲಭ!

Computer Training-ಉಚಿತ ಊಟ ಮತ್ತು ವಸತಿ ವ್ಯವಸ್ಥೆ:

ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಕೇಂದ್ರದಿಂದ ಕಂಪ್ಯೂಟರ್ ಟ್ಯಾಲಿ ತರಬೇತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಉಚಿತವಾಗಿ ವಸತಿ ಮತ್ತು ಊಟದ ವ್ಯವಸ್ಥೆಯನ್ನು ತರಬೇತಿ ಕೇಂದ್ರದಿಂದಲೇ ಒದಗಿಸಲಾಗುತ್ತದೆ ಮತ್ತು ತರಬೇತಿಯನ್ನು ಪಡೆಯಲು ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.

Free Computer Training Application-ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಆಸಕ್ತ ಅಭ್ಯರ್ಥಿಗಳು ಉಚಿತ ಕಂಪ್ಯೂಟರ್ ತರಬೇತಿಯನ್ನು ಪಡೆಯಲು ನೇರವಾಗಿ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ತರಬೇತಿ ಕೇಂದ್ರವನ್ನು ಭೇಟಿ ಮಾಡಿ ತರಬೇತಿಯಲ್ಲಿ ಭಾಗವಹಿಸಬಹುದು ಅಥವಾ ಮುಂಚಿತವಾಗಿ ಈ ಕೆಳಗೆ ನೀಡಿರುವ ಗೂಗಲ್ ಪಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ತರಬೇತಿಯಲ್ಲಿ ಭಾಗವಹಿಸಬಹುದು.

ಮುಂಚಿತವಾಗಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಈ ಮೊಬೈಲ್ 9449860007, 9538281989, 9916783825, 888044612 ಸಂಖ್ಯೆಗಳಿಗೆ ಸಂಪರ್ಕಿಸಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.

ಇದನ್ನೂ ಓದಿ: Weed Mat Subsidy-ತೋಟಗಾರಿಕೆ ಇಲಾಖೆಯಿಂದ ವೀಡ್ ಮ್ಯಾಟ್ ಖರೀದಿಸಲು 1 ಲಕ್ಷ ಸಹಾಯಧನ!

Free Computer Training

Free Computer Training Duration-ತರಬೇತಿ ಅವಧಿ:

ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿಯು ದಿನಾಂಕ: 28 ಜುಲೈ 2025 ರಿಂದ ಆರಂಭವಾಗಿ ದಿನಾಂಕ: 03 ಸೆಪ್ಟೆಂಬರ್ 2025ಕ್ಕೆ ಮುಗಿಯಲಿದ್ದು, ಒಟ್ಟು 38 ದಿನಗಳ ತರಬೇತಿಯು ಇದಾಗಿರುತ್ತದೆ.

Required documents for Training - ಅರ್ಜಿ ಸಲ್ಲಿಸಲು ದಾಖಲೆಗಳು:

ಆಸಕ್ತ ಅಭ್ಯರ್ಥಿಗಳು ಉಚಿತ ಕಂಪ್ಯೂಟರ್ ತರಬೇತಿಯಲ್ಲಿ ಭಾಗವಹಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.

ಅರ್ಜಿದಾರರ ಅಧಾರ್ ಕಾರ್ಡ ಪ್ರತಿ.

ಬ್ಯಾಂಕ್ ಪಾಸ್ ಬುಕ್ ಪ್ರತಿ.

ರೇಶನ್ ಕಾರ್ಡ ಪ್ರತಿ.

ಅಭ್ಯರ್ಥಿಯ ಪೋಟೋ-4

ಮೊಬೈಲ್ ಸಂಖ್ಯೆ.

ಇದನ್ನೂ ಓದಿ: Post Office Franchise-ಪೋಸ್ಟ್ ಆಫೀಸ್ ಫ್ರಾಂಚೈಸಿ ಪಡೆಯಲು ಅವಕಾಶ! ತಿಂಗಳಿಗೆ 50,000 ಆದಾಯ!

Free Computer Training Details-ಈ ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ತಿಳಿಸಲಾಗುತ್ತದೆ?

ಉಚಿತ ಕಂಪ್ಯೂಟರ್ ತರಬೇತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ GST,TDS,Payroll,Tally ERP 9 ಮತ್ತು ಬೇಸಿಕ್ ಕಂಪ್ಯೂಟರ್ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ.

Computer Training Center Address-ತರಬೇತಿ ಕೇಂದ್ರದ ವಿಳಾಸ:

ಉಚಿತ ಕಂಪ್ಯೂಟರ್ ತರಬೇತಿಯು ನಡೆಯುವ ಕೇಂದ್ರ ವಿಳಾಸ ಹೀಗಿದೆ: "ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ-581343"

ಇದನ್ನೂ ಓದಿ: Free Mobile Repair Training-1 ತಿಂಗಳ ಉಚಿತ ಮೊಬೈಲ್ ರಿಪೇರಿ ತರಬೇತಿ! ಬ್ಯಾಂಕಿನಿಂದ ಸಾಲ ಸೌಲಭ್ಯ!

Online Application Link For Computer Training-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಕೇಂದ್ರದಿಂದ ನಡೆಸುವ ವಿವಿಧ ಬಗ್ಗೆಯ ಉಚಿತ ತರಬೇತಿಗಳಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ಈ ಲಿಂಕ್ "APPLY NOW" ಮೇಲೆ ಕ್ಲಿಕ್ ಮಾಡಿ ತಮ್ಮ ಮೊಬೈಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು ಈ ಗೂಗಲ್ ಪಾರ್ಮ್ ಲಿಂಕ್ ಅನ್ನು ಒಪನ್ ಮಾಡಿಕೊಂಡು ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

More Information-ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳು: 9449860007, 9538281989, 9916783825, 888044612

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: