Free Hostel Admission-ಉಚಿತ ಹಾಸ್ಟೆಲ್ ಪ್ರವೇಶ ಪಡೆಯಲು ಅರ್ಜಿ ಆಹ್ವಾನ!

August 19, 2025 | Siddesh
Free Hostel Admission-ಉಚಿತ ಹಾಸ್ಟೆಲ್ ಪ್ರವೇಶ ಪಡೆಯಲು ಅರ್ಜಿ ಆಹ್ವಾನ!
Share Now:

ರಾಜ್ಯದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ(Karnataka Free Hostel Admission) ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇಂದಿನ ಅಂಕಣದಲ್ಲಿ ಉಚಿತ ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಇಲಾಖೆಯಿಂದ(Free Hostel Application) ಯಾವೆಲ್ಲ ನಿಯಮಗಳನ್ನು ಜಾರಿಗೆ ತರಲಾಗಿದೆ? ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳೇನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ,ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?ಸೇರಿದಂತೆ ಸಂಪೂರ್ಣ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Car Subsidy Scheme-ಸ್ವಾವಲಂಬಿ ಸಾರಥಿ ಯೋಜನೆಯಡಿ ಕಾರು ಖರೀದಿಗೆ ₹4.00 ಲಕ್ಷ ಸಹಾಯಧನಕ್ಕೆ ಅರ್ಜಿ!

ಹಳ್ಳಿಯಿಂದ ಪಟ್ಟಣ ಪ್ರದೇಶದಲ್ಲಿರುವ ಕಾಲೇಜುಗಳಿಗೆ ದಿನನಿತ್ಯ ಪ್ರಯಾಣ ಮಾಡಿ ಶಿಕ್ಷಣವನ್ನು(Free Hostel Online Application) ಪಡೆಯಲು ತೊಂದರೆಯನ್ನು ಅನುಭವಿಸುತ್ತಿರುವ ಅರ್ಹ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯುವುದರ ಮೂಲಕ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡುವ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಮಾಹಿತಿ ತಲುಪಿಸಲು ಸಹಕರಿಸಲು ಕೋರಿದೆ.

ಇದನ್ನೂ ಓದಿ: Whatsapp Chatbot-ನಾಗರಿಕರಿಗೆ ಗ್ರಾಮ ಪಂಚಾಯತಿ ಯೋಜನೆಗಳನ್ನು ತಲುಪಿಸಲು ಇನ್ಮುಂದೆ ವಾಟ್ಸಾಪ್ ಚಾಟ್‌ಬಾಟ್‌ ಬಳಕೆ!

Free Hostel Admission Eligibility-ಅರ್ಜಿ ಸಲ್ಲಿಸಲು ಅರ್ಹರು?

ಉಚಿತ ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳ ಪಟ್ಟಿ ಈ ಕೆಳಗಿನಂತಿದೆ:

ವಿದ್ಯಾರ್ಥಿಯು ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗಕ್ಕೆ ಸೇರಿ ಪಿಯುಸಿ.ಪದವಿ ಕೋರ್ಸಿನಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ: ಪ್ರವರ್ಗ-1, ಎಸ್.ಸಿ & ಎಸ್.ಟಿ ಗಳಿಗೆ ರೂ ₹2.50 ಲಕ್ಷ, ಪ್ರವರ್ಗ-2ಎ, 2ಬಿ,3ಎ, 3ಬಿ ಇತರೆ ಹಿಂದುಳಿದ ವರ್ಗ ಹಾಗೂ ಇತರೆ ವರ್ಗಕ್ಕೆ ರೂ ₹1.0 ಲಕ್ಷ ನಿಗದಿಪಡಿಸಲಾಗಿದೆ.

ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರು ಅಂದರೆ ಪಿಯುಸಿ,ಪದವಿ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Borewell Subsidy-ಬೋರ್ವೆಲ್ ಕೊರೆಸಲು ₹4.25 ಲಕ್ಷ ಸಹಾಯಧನಕ್ಕೆ ಅರ್ಜಿ ಅಹ್ವಾನ!

Last Date For Free Hostel Application-ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 25 ಆಗಸ್ಟ್ 2025

Free Hostel Admission Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಹಂತ-1: ವಿದ್ಯಾರ್ಥಿಗಳು ಮೊದಲಿಗೆ ಇಲ್ಲಿ ಕ್ಲಿಕ್ "Free Hostel Admission Online Application" ಮಾಡಿ ಅಧಿಕೃತ ರಾಜ್ಯ ಸರಕಾರದ ವಿದ್ಯಾರ್ಥಿವೇತನ ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

ಹಂತ-2: ನಂತರ ಈ ಪೇಜ್ ನಲ್ಲಿ "Post Matric" ಆಯ್ಕೆ ವಿಭಾಗದ ಕೆಳಗೆ ಕಾಣುವ "Apply" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: UPSC Free Coaching-ಉಚಿತ UPSC ಮತ್ತು KAS ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಅರ್ಜಿ ಆಹ್ವಾನ!

ಹಂತ-3: ಬಳಿಕ ಈ ಪೇಜ್ ನಲ್ಲಿ State Scholarship Account ರಚನೆ ಮಾಡಿಕೊಂಡಿದ್ದಿರಾ? ಎಂದು ಪ್ರಶ್ನೆ ಕೇಳುತ್ತದೆ ಈ ಖಾತೆ ಹೊಂದಿದ್ದರೆ "Yes" ಎಂದು ಸೆಲೆಕ್ಟ್ ಮಾಡಿಕೊಂಡು ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಅಗಬೇಕು ಒಂದೊಮ್ಮೆ ನೀವು ಖಾತೆ ರಚನೆ ಮಾಡಿಕೊಳ್ಳದೇ ಇದ್ದರೆ "No" ಎಂದು ಸೆಲೆಕ್ಟ್ ಮಾಡಿಕೊಂಡು ನಿಮ್ಮ ಆಧಾರ್ ನಂಬರ್ ಮತ್ತು ಇತರೆ ವಿವರವನ್ನು ಹಾಕಿ ಖಾತೆಯನ್ನು ರಚನೆ ಮಾಡಿಕೊಂಡು ಲಾಗಿನ್ ಅಗಬೇಕು.

ಹಂತ-4: ಲಾಗಿನ್ ಅದ ಬಳಿಕ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Hero Scholarship-ಹೀರೋ ಕಂಪನಿ ವತಿಯಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Documents For Free Hostel-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳೇನು?

ಉಚಿತ ವಿದ್ಯಾರ್ಥಿನಿಲಯ ಪ್ರವೇಶಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

  • ವಿದ್ಯಾರ್ಥಿಯ ಆಧಾರ್ ಕಾರ್ಡ್/Aadhar Card
  • ವಿದ್ಯಾರ್ಥಿಯ ಐಡಿ ನಂಬರ್/SSP Student ID
  • ಮೊಬೈಲ್ ಸಂಖ್ಯೆ/Mobile Number
  • ಜಾತಿ ಪ್ರಮಾಣ ಪತ್ರ/Caste RD Number
  • ಪೋಷಕರ ಆದಾಯ ಪ್ರಮಾಣ ಪತ್ರ/Income RD Number
  • ಕಾಲೇಜು ಪ್ರವೇಶ ಪತ್ರ/University Registration Number
  • ಕಾಲೇಜು ವ್ಯಾಸಂಗ ಪ್ರಮಾಣ ಪತ್ರ/College Study Certificate
  • ವಿದ್ಯಾರ್ಥಿಯ ಅಂಕ ಪಟ್ಟಿ/Marks Card

ಇದನ್ನೂ ಓದಿ: Free Phenyl Soap Making Training-ಉಚಿತ ಫಿನಾಯಿಲ್,ಸೋಪ್ ಗೃಹ ಬಳಕೆ ವಸ್ತು ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ!

More Details-ಹೆಚ್ಚಿನ ಮಾಹಿತಿಗಾಗಿ:

Official Website-ಇಲಾಖೆಯ ವೆಬ್ಸೈಟ್-Click Here
Helpline-ಸಹಾಯವಾಣಿ ಸಂಖ್ಯೆ: 8050770004 ಅಥವಾ
8050770005
Email-ಇ-ಮೇಲ್: [email protected]

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: