Free Sewing Training-ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೊಲಿಗೆ ತರಬೇತಿಗೆ ಅರ್ಜಿ!

February 25, 2026 | Siddesh
Free Sewing Training-ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೊಲಿಗೆ ತರಬೇತಿಗೆ ಅರ್ಜಿ!
Share Now:

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗುವುದು ಅತ್ಯಗತ್ಯ. ಇದನ್ನೇ ಗುರಿಯಾಗಿಟ್ಟುಕೊಂಡು, ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಕೆನರಾ ಬ್ಯಾಂಕ್(Canara Bank) ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (RSETI) ಮಹಿಳೆಯರಿಗಾಗಿ ಒಂದು ತಿಂಗಳ ವಿಶೇಷ ಉಚಿತ ಹೊಲಿಗೆ ತರಬೇತಿ(Uchitha Holige Tarabeti) ಶಿಬಿರವನ್ನು ಆಯೋಜಿಸಿದ್ದು. ಕೌಶಲ್ಯದ ಕೊರತೆಯಿಂದ ಮನೆಯಲ್ಲೇ ಉಳಿದಿರುವ ಪ್ರತಿಭಾವಂತ ಮಹಿಳೆಯರಿಗೆ ಇದು ಹೊಸ ಅವಕಾಶವಿದ್ದು ಇದಕ್ಕಾಗಿ ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಈ ಲೇಖನದಲ್ಲಿ ನಾವು ಈ ತರಬೇತಿಯ ವಿಶೇಷತೆಗಳು, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ಬೇಕಾಗುವ ಅಗತ್ಯ ದಾಖಲೆಗಳು ಮತ್ತು ಈ ತರಬೇತಿಯಿಂದ ಮಹಿಳೆಯರು ಹೇಗೆ ಸ್ವಂತ ಉದ್ಯೋಗ(Free Sewing Training Applicaion) ಆರಂಭಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ. ಸಮಾಜದ ಮುಖ್ಯವಾಹಿನಿಗೆ ಬರಲು ಬಯಸುವ ಗ್ರಾಮೀಣ ಭಾಗದ ಮಹಿಳೆಯರಿಗೆ ಇದು ಒಂದು ಉತ್ತಮ ವೇದಿಕೆಯಾಗಿದೆ.

ಇದನ್ನೂ ಓದಿ: Agniveer Recruitment-2026ರ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ!ಇಂದೇ ನೋಂದಣಿ ಮಾಡಿ!

ಈ ತರಬೇತಿಯಲ್ಲಿ ಕೇವಲ ಹೊಲಿಗೆ(Uchitha Holige Tarabeti Arji) ಕಲಿಯುವುದಷ್ಟೇ ಅಲ್ಲದೆ, ತರಬೇತಿಯ ನಂತರ ಅಭ್ಯರ್ಥಿಗಳಿಗೆ ಬ್ಯಾಂಕ್ ಸಾಲ ಸೌಲಭ್ಯಗಳು ಮತ್ತು ಸರ್ಕಾರಿ ಯೋಜನೆಗಳ ಮೂಲಕ ಹೇಗೆ ಸಬ್ಸಿಡಿ ದರದಲ್ಲಿ ಹೊಲಿಗೆ ಯಂತ್ರಗಳನ್ನು ಪಡೆದು ಸ್ವಂತ ಉದ್ದಿಮೆ ಆರಂಭಿಸಬಹುದು ಎಂಬ ಮಾರ್ಗದರ್ಶನವನ್ನೂ ಇಲ್ಲಿ ನೀಡಲಾಗುತ್ತದೆ. ತರಬೇತಿ ಕುರಿತು ಹೆಚ್ಚಿನ ವಿವರಗಳು ಕೆಳಗಿನಂತಿವೆ:

Free Sewing Training Benefits-ಮಹಿಳೆಯರಿಗೆ ಹೊಲಿಗೆ ತರಬೇತಿ ಪ್ರಯೋಜನಗಳು:

ನುರಿತ ತರಬೇತಿ: ಪರಿಣಿತರಿಂದ ಅತ್ಯಾಧುನಿಕ ಹೊಲಿಗೆ ತಂತ್ರಗಳ ಕಲಿಕೆ.

ಉಚಿತ ವಸತಿ ಮತ್ತು ಊಟ: 31 ದಿನಗಳ ಕಾಲ ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ.

ಪ್ರಮಾಣಪತ್ರ: ತರಬೇತಿ ಯಶಸ್ವಿಯಾಗಿ ಮುಗಿಸಿದವರಿಗೆ ಅಧಿಕೃತ ಪ್ರಮಾಣಪತ್ರ ನೀಡಲಾಗುತ್ತದೆ.

ಸ್ವಾವಲಂಬನೆ: ಮನೆಯಲ್ಲೇ ಕುಳಿತು ಸ್ವಂತ ಉದ್ಯೋಗ ಮಾಡುವ ಕೌಶಲ್ಯ ಲಭ್ಯವಾಗುತ್ತದೆ.

ಇದನ್ನೂ ಓದಿ: Ration Card Correction-ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ! ಯಾವೆಲ್ಲ ತಿದ್ದುಪಡಿ ಮಾಡಿಸಬಹುದು?

Who Can Apply For Free Sewing Training-ಉಚಿತ ಹೊಲಿಗೆ ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?

ಉಚಿತ ಹೊಲಿಗೆ ತರಬೇತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳಿಗೆ 18 ರಿಂದ 45 ವರ್ಷದ ಒಳಗಿರಬೇಕು.

ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

ಗ್ರಾಮೀಣ ಭಾಗದ BPL ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಅರ್ಜಿದಾರರು ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಹೊಂದಿರಬೇಕು.

ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Tata Scholarship-ಟಾಟಾ ಕ್ಯಾಪಿಟಲ್ ಲಿಮಿಟೆಡ್‌ ವತಿಯಿಂದ 1.0 ಲಕ್ಷ ವಿದ್ಯಾರ್ಥಿವೇತನ! ಕೇವಲ 5 ದಿನ ಬಾಕಿ!

Uchitha Holige Tarabeti

ಇದನ್ನೂ ಓದಿ: Property Registration-ಕಾವೇರಿ 2.0 ತಂತ್ರಾಂಶ ಬಿಡುಗಡೆ! ಇನ್ಮುಂದೆ ಆಸ್ತಿ ನೋಂದಣಿ ಸಂಪೂರ್ಣ ಕಾಗದ ರಹಿತ!

Free Sewing Training Date-ಯಾವಾಗಿನಿಂದ ತರಬೇತಿ ಪ್ರಾರಂಭವಾಗುತ್ತದೆ?

ತರಬೇತಿ ಪ್ರಾರಂಭ: 03 ಮಾರ್ಚ್ 2026 ರಿಂದ

ತರಬೇತಿ ಮುಕ್ತಾಯ: 02 ಎಪ್ರಿಲ್ 2026 ರ ವರೆಗೆ

ಅವಧಿ: ಒಟ್ಟು 31 ದಿನಗಳು.

ಸಮಯ: ಪ್ರತಿದಿನ ಬೆಳಿಗ್ಗೆ 9:30 ರಿಂದ ಸಂಜೆ 5:30 ರ ವರೆಗೆ.

Free Sewing Training Center-ತರಬೇತಿ ನಡೆಯುವ ಸ್ಥಳ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (RSETI),
ಇಂಡಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ,
ಉತ್ತರ ಕನ್ನಡ ಜಿಲ್ಲೆ - 581343.

ಇದನ್ನೂ ಓದಿ: Senior Citizen Card-ನಿಮ್ಮ ವಯಸ್ಸು 60 ವರ್ಷ ದಾಟಿದೆಯೇ? ಹಾಗಾದರೆ ಈ ಸವಲತ್ತುಗಳನ್ನು ಪಡೆಯಿರಿ!

Free Sewing Training Registration-ನೋಂದಣಿ ಮಾಡಿಕೊಳ್ಳುವ ವಿಧಾನ ಹೇಗೆ?

ಉಚಿತ ಹೊಲಿಗೆ ಯಂತ್ರ ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಲು 9449860007, 9538281989, 9916783825. ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಣಿ ಮಾಡಿಸಬಹುದು ಅಥವಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಗೂಗಲ್ ಪಾರ್ಮ್ ಅನ್ನು ಭೇಟಿ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ನೋಂದಣಿ ಮಾಡಿಕೊಳ್ಳಬಹುದು.

ನೋಂದಣಿ ಮಾಡಿಕೊಳ್ಳಲು ಲಿಂಕ್- Register Now

ಇದನ್ನೂ ಓದಿ: Anganawadi Worker-ಮಹಿಳೆಯರಿಗೆ ಸುವರ್ಣಾವಕಾಶ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಗೆ ಅರ್ಜಿ ಆಹ್ವಾನ!

Required Documents For Free Sewing Training-ಅಗತ್ಯವಿರುವ ದಾಖಲೆಗಳು:

ತರಬೇತಿಯಲ್ಲಿ ಭಾಗವಹಿಸಲು ಈ ಕೆಳಗಿನ ದಾಖಲೆಗಳ ಝೆರಾಕ್ಸ್ ಪ್ರತಿಗಳನ್ನು ತರಬೇಕು:

  • ನಾಲ್ಕು ಪಾಸ್‌ಪೋರ್ಟ್ ಸೈಜ್ ಫೋಟೋಗಳು.
  • ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ರೇಷನ್ ಕಾರ್ಡ್ (BPL).
  • ಆಧಾರ್ ಕಾರ್ಡ್.
  • ಪಾನ್ ಕಾರ್ಡ್.

ಇದನ್ನೂ ಓದಿ: Farmer ID-ರೈತರ ಗಮನಕ್ಕೆ: ಕೃಷಿ ಇಲಾಖೆ ಸೌಲಭ್ಯ ಪಡೆಯಲು FID ಅಪ್‌ಡೇಟ್ ಕಡ್ಡಾಯ – ತಪ್ಪಿದರೆ ಸಬ್ಸಿಡಿ ಕಟ್!

Sewing Machine Subsidy Yojana-ಹೊಲಿಗೆ ಯಂತ್ರಕ್ಕೆ ಸಬ್ಸಿಡಿ ಯೋಜನೆಗಳು:

ತರಬೇತಿ ಮುಗಿಸಿದ ನಂತರ ಅಭ್ಯರ್ಥಿಗಳು ಈ ಕೆಳಗಿನ ಯೋಜನೆಗಳಡಿ ಸಬ್ಸಿಡಿ ಪಡೆಯಲು ಪ್ರಯತ್ನಿಸಬಹುದು:

ವಿವಿಧ ನಿಗಮಗಳಿಂದ: ರಾಜ್ಯದಲ್ಲಿರುವ ಲಿಂಗಾಯತ, ಹಿಂದುಳಿದ,ಒಕ್ಕಲಿಗ,ಮರಾಠ ಇನ್ನಿತರೆ ಅಬಿವೃದ್ದಿ ನಿಗಮಗಳಿಂದ ಹೊಲಿಗೆ ಯಂತ್ರಕ್ಕೆ ಸಹಾಯಧನ ಪಡೆಯಬಹುದು.

ಮುದ್ರಾ ಯೋಜನೆ: ಸಣ್ಣ ಉದ್ದಿಮೆ ಆರಂಭಿಸಲು ಬ್ಯಾಂಕ್ ಮೂಲಕ ಸಾಲ ಸೌಲಭ್ಯ.

ಜಿಲ್ಲಾ ಕೈಗಾರಿಕಾ ಕೇಂದ್ರ (DIC): ವಿವಿಧ ಸರ್ಕಾರಿ ಯೋಜನೆಗಳಡಿ ಸಬ್ಸಿಡಿ ಸಹಿತ ಹೊಲಿಗೆ ಯಂತ್ರ ಪಡೆಯಲು ಅವಕಾಶವಿರುತ್ತದೆ.

ಇದು ಉಚಿತ ತರಬೇತಿಯಾಗಿದ್ದು, ಸೀಮಿತ ಸೀಟುಗಳು ಲಭ್ಯವಿರುತ್ತವೆ. ಕೂಡಲೇ ನೋಂದಣಿ ಮಾಡಿಕೊಳ್ಳಿ!

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: